ಮತ್ತೆ ರಸ್ತೆಗಿಳಿಯಲಿವೆ ಡಬಲ್ ಡೆಕ್ಕರ್ ಬಸ್ಸುಗಳು

ಮುಂಬೈ ನಗರದ ಸಾರ್ವಜನಿಕ ಸಾರಿಗೆ ಸಂಸ್ಥೆಯಾದ ಬೃಹನ್ಮುಂಬಯಿ ಎಲೆಕ್ಟ್ರಿಕ್ ಸಪ್ಲೈ ಅಂಡ್ ಟ್ರಾನ್ಸ್ ಪೋರ್ಟ್ (ಬೆಸ್ಟ್) 50 ಹೊಸ ಡಬಲ್ ಡೆಕ್ಕರ್ ಬಸ್ಸುಗಳನ್ನು ಖರೀದಿಸಲು ಮುಂದಾಗಿದೆ. ಬೆಸ್ಟ್ 14 ವರ್ಷ ಹಳೆಯದಾದ ಬಸ್ಸುಗಳನ್ನು ಹಂತ ಹಂತವಾಗಿ ಹಿಂದಕ್ಕೆ ಪಡೆಯಲಿದೆ.

ಮತ್ತೆ ರಸ್ತೆಗಿಳಿಯಲಿವೆ ಡಬಲ್ ಡೆಕ್ಕರ್ ಬಸ್ಸುಗಳು

ಬೆಸ್ಟ್ 2020ರ ಜೂನ್‍‍ನಿಂದ 2021ರ ಮಾರ್ಚ್ ನಡುವಿನ ಅವಧಿಯಲ್ಲಿ 14 ವರ್ಷಗಳಷ್ಟು ಹಳೆಯದಾದ 70 ಬಸ್ಸುಗಳನ್ನು ಹಿಂದಕ್ಕೆ ಪಡೆಯಲಿದೆ. ಬೆಸ್ಟ್ ನಲ್ಲಿ 14 ವರ್ಷ ಹಳೆಯದಾದ ಒಟ್ಟು 120 ಬಸ್ಸುಗಳಿವೆ. ಡಬಲ್ ಡೆಕ್ಕರ್ ಬಸ್ಸುಗಳನ್ನು 1937ರಲ್ಲಿ ಮುಂಬೈನಲ್ಲಿ ಆರಂಭಿಸಲಾಯಿತು.

ಮತ್ತೆ ರಸ್ತೆಗಿಳಿಯಲಿವೆ ಡಬಲ್ ಡೆಕ್ಕರ್ ಬಸ್ಸುಗಳು

ಸುದೀರ್ಘ ಇತಿಹಾಸ ಹೊಂದಿರುವ ಹಾಗೂ ಮುಂಬೈನ ಸಾರ್ವಜನಿಕ ಸಾರಿಗೆಯ ಭಾಗವಾಗಿರುವ ಈ ಡಬಲ್ ಡೆಕ್ಕರ್ ಬಸ್ಸುಗಳ ಸುರಕ್ಷತೆಗೆ ಆದ್ಯತೆ ನೀಡುವಂತೆ ಹೆಚ್ಚಿನ ಜನರು ಬೆಸ್ಟ್ ಸಹಾಯವಾಣಿಗೆ ಕರೆಮಾಡಿ ತಿಳಿಸಿದ್ದರು.

ಮತ್ತೆ ರಸ್ತೆಗಿಳಿಯಲಿವೆ ಡಬಲ್ ಡೆಕ್ಕರ್ ಬಸ್ಸುಗಳು

ಬೆಸ್ಟ್ ನ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಈ ಡಬಲ್ ಡೆಕ್ಕರ್ ಬಸ್ಸುಗಳು ರೈಲ್ವೆ ನಿಲ್ದಾಣದಿಂದ ವಾಣಿಜ್ಯ ಪ್ರದೇಶಗಳಾದ ಸಿ‍ಎಸ್‍ಎಂಟಿ ನಾರಿಮನ್ ಪಾಯಿಂಟ್, ಬಾಂದ್ರಾ ಸ್ಟೇಷನ್, ಕುರ್ಲಾ ಸ್ಟೇಷನ್ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಗಳಿಗೆ ಒಂದು ಬಾರಿಗೆ 140 ಪ್ರಯಾಣಿಕರನ್ನು ಹೊತ್ತು ಸಾಗುತ್ತವೆ.

ಮತ್ತೆ ರಸ್ತೆಗಿಳಿಯಲಿವೆ ಡಬಲ್ ಡೆಕ್ಕರ್ ಬಸ್ಸುಗಳು

ಸಂಬಂಧಪಟ್ಟವರು ಒಪ್ಪಿಗೆ ಸೂಚಿಸಿದರೆ, ಬೆಸ್ಟ್ ಮೊದಲ ಹಂತದಲ್ಲಿ 50 ಬಸ್ಸುಗಳನ್ನು ಖರೀದಿಸಿ, ಹಳೆಯ ಬಸ್ಸುಗಳನ್ನು ಹಿಂದಕ್ಕೆ ಪಡೆಯಲಿದೆ. ಗಮನಿಸಬೇಕಾದ ಅಂಶವೆಂದರೆ ಈ ಬಸ್ಸುಗಳಲ್ಲಿರುವ ಚಾಸೀಸ್‍‍ಗಳನ್ನು ಅಶೋಕ್ ಲೇಲ್ಯಾಂಡ್ ಕಂಪನಿಯು ತಯಾರಿಸಿದ್ದರೆ, ಬಸ್ಸುಗಳ ಬಾಡಿಗಳನ್ನು ಆಂಥೋಣಿ ಗ್ಯಾರೇಜ್ ತಯಾರಿಸಿದೆ.

ಮತ್ತೆ ರಸ್ತೆಗಿಳಿಯಲಿವೆ ಡಬಲ್ ಡೆಕ್ಕರ್ ಬಸ್ಸುಗಳು

ಡಬಲ್ ಡೆಕ್ಕರ್ ಬಸ್ಸುಗಳು ಕೇವಲ ಒಂದು ಡೋರ್ ಅನ್ನು ಮಾತ್ರ ಹೊಂದಿರುತ್ತವೆ. ಇದರಿಂದಾಗಿ ಅಪ್ಪರ್ ಹಾಗೂ ಲೋವರ್ ಡೆಕ್‍‍ಗಳಲ್ಲಿರುವ ಪ್ರಯಾಣಿಕರಿಗೆ ದೊಡ್ಡ ಸವಾಲು ಎದುರಾಗಲಿದೆ. ಸಿಂಗಲ್ ಡೆಕ್ ಬಸ್ಸುಗಳು ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ವಯಸ್ಸಾದವರಿಗೆ ಹೆಚ್ಚು ಆರಾಮದಾಯಕವಾಗಿವೆ.

ಮತ್ತೆ ರಸ್ತೆಗಿಳಿಯಲಿವೆ ಡಬಲ್ ಡೆಕ್ಕರ್ ಬಸ್ಸುಗಳು

ಹಿಂದಕ್ಕೆ ಪಡೆಯಲಾಗುವ ಬಸ್ಸುಗಳನ್ನು ಎನ್‍‍ಜಿ‍ಒಗಳಿಗೆ ನೀಡಲು ಬೆಸ್ಟ್ ಸಂಸ್ಥೆಯು ಬಯಸಿದೆ. ಅದರಲ್ಲೂ ಈ ಬಸ್ಸುಗಳನ್ನು ಮಹಿಳಾ ಎನ್‍‍ಜಿ‍ಒಗಳಿಗೆ ನೀಡಲು ಉದ್ದೇಶಿಸಿದೆ.

ಮತ್ತೆ ರಸ್ತೆಗಿಳಿಯಲಿವೆ ಡಬಲ್ ಡೆಕ್ಕರ್ ಬಸ್ಸುಗಳು

ಬೆಸ್ಟ್ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿ ಹಲವು ಸ್ವಯಂ ಸೇವಾ ಸಂಸ್ಥೆಗಳು ನಮ್ಮ ಇಲಾಖೆಯನ್ನು ಸಂಪರ್ಕಿಸಿ ಹಿಂದಕ್ಕೆ ಪಡೆಯಲಾಗುವ ಬಸ್ಸುಗಳನ್ನು ಖರೀದಿಸಲು ಬಯಸಿವೆ. ಆದ್ದರಿಂದ ಈ ಬಸ್ಸುಗಳನ್ನು ಮಾರಾಟ ಮಾಡುವ ಬದಲು ಎನ್‍‍ಜಿ‍ಒ‍‍ಗಳಿಗೆ ನೀಡಲಾಗುವುದು ಎಂದು ಹೇಳಿದರು.

Most Read Articles

Kannada
English summary
BEST will buy new double decker buses. Read in Kannada.
Story first published: Friday, January 10, 2020, 17:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X