ಹೊಸ ಸ್ಕೋಡಾ ರ‍್ಯಾಪಿಡ್ ರೈಡರ್ ಪ್ಲಸ್ ರೂಪಾಂತರ ಬಿಡುಗಡೆ

ಸ್ಕೋಡಾ ಆಟೋ ಕಂಪನಿಯು ಹೊಸ ರ‍್ಯಾಪಿಡ್ 1.0-ಲೀಟರ್ ಟಿಎಸ್ಐ ಸೆಡಾನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಇದೀಗ ಈ ರ‍್ಯಾಪಿಡ್ 1.0-ಲೀಟರ್ ಟಿಎಸ್ಐ ಸೆಡಾನ್‌ನ ಹೊಸ ರೂಪಾಂತರವಾದ ರೈಡರ್ ಪ್ಲಸ್ ಅನ್ನು ಬಿಡುಗಡೆಗೊಳಿಸಿದೆ.

ಹೊಸ ಸ್ಕೋಡಾ ರ‍್ಯಾಪಿಡ್ ರೈಡರ್ ಪ್ಲಸ್ ರೂಪಾಂತರ ಬಿಡುಗಡೆ

ಈ ಹೊಸ ಸ್ಕೋಡಾ ರ‍್ಯಾಪಿಡ್ ರೈಡರ್ ಪ್ಲಸ್ ರೂಪಾಂತರದ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.7.99 ಲಕ್ಷಗಳಾಗಿದೆ. ಈ ಹೊಸ ರೈಡರ್ ಪ್ಲಸ್ ರೂಪಾಂತರವನ್ನು ರ‍್ಯಾಪಿಡ್ ಬೇಸ್ ಸ್ಪೆಕ್‌ಗೆ ಹೋಲಿಸಿದರೆ ಹಲವಾರು ಹೆಚ್ಚುವರಿ ಫೀಚರುಗಳನ್ನು ಹೊಂದಿದೆ. ಈ ಹೊಸ ಸ್ಕೋಡಾ ರ‍್ಯಾಪಿಡ್ ರೈಡರ್ ಪ್ಲಸ್ ರೂಪಾಂತರ ಕ್ಯಾಂಡಿ ವೈಟ್, ಕಾರ್ಬನ್ ಸ್ಟೀಲ್, ಬ್ರಿಲಿಯಂಟ್ ಸಿಲ್ವರ್ ಮತ್ತು ಟೋಫಿ ಬ್ರೌನ್ ಎಂಬ ನಾಲ್ಕು ಬಣ್ಣಗಳಲ್ಲಿ ಲಭ್ಯವಿರಲಿದೆ.

ಹೊಸ ಸ್ಕೋಡಾ ರ‍್ಯಾಪಿಡ್ ರೈಡರ್ ಪ್ಲಸ್ ರೂಪಾಂತರ ಬಿಡುಗಡೆ

ಹೊಸ ಸ್ಕೋಡಾ ರ‍್ಯಾಪಿಡ್ ರೈಡರ್ ಪ್ಲಸ್ ರೂಪಾಂತರದಲ್ಲಿ ಕಾಸ್ಮೆಟಿಕ್ ಅಪ್‌ಡೇಟ್‌ ಮಾಡಲಾಗಿದೆ. ಈ ರೂಪಾಂತರದಲ್ಲಿ ಸಿಗ್ನೇಚರ್ ಬ್ಲ್ಯಾಕ್ ಗ್ರಿಲ್, ನವೀಕರಿಸಿದ ಸೈಡ್ ಫಾಯಿಲ್, ಬ್ಲ್ಯಾಕ್ ಔಟ್ ಬಿ-ಪಿಲ್ಲರ್ ಮತ್ತು ವಿಂಡೋ-ಲೈನ್ ಸುತ್ತಲೂ ಪ್ರೀಮಿಯಂ ಕ್ರೋಮ್ ಅನ್ನು ಅಳವಡಿಸಿದೆ.

MOST READ: ಸ್ಥಗಿತಗೊಂಡಿಲ್ಲ ಫೋಕ್ಸ್‌ವ್ಯಾಗನ್ ಕಾರಿನ ಈ ಮಾದರಿಗಳು

ಹೊಸ ಸ್ಕೋಡಾ ರ‍್ಯಾಪಿಡ್ ರೈಡರ್ ಪ್ಲಸ್ ರೂಪಾಂತರ ಬಿಡುಗಡೆ

ಸ್ಕೋಡಾ ರ‍್ಯಾಪಿಡ್ ರೈಡರ್ ಪ್ಲಸ್ ರೂಪಾಂತರದ ಇಂಟಿರಿಯರ್ ನಲ್ಲಿ 6.5-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂನೊಂದಿಗೆ ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಸ್ಮಾರ್ಟ್-ಲಿಂಕ್ ಕನೆಕ್ಟಿವಿಟಿಯನ್ನು ಹೊಂದಿದೆ.

ಹೊಸ ಸ್ಕೋಡಾ ರ‍್ಯಾಪಿಡ್ ರೈಡರ್ ಪ್ಲಸ್ ರೂಪಾಂತರ ಬಿಡುಗಡೆ

ಇದರೊಂದಿಗೆ ಇಂಟಿರಿಯರ್ ನಲ್ಲಿ ಡ್ಯುಯಲ್ ಟೋನ್ ಎಬೊನಿ ಸ್ಯಾಂಡ್ ಕ್ಯಾಬಿನ್, ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್, ಹೊಂದಾಣಿಕೆ ಮಾಡಬಹುದಾದ ಹೆಡ್‌ರೆಸ್ಟ್‌ಗಳು, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಕೆಲವು ಇತರ ಫೀಚರುಗಳನ್ನು ಒಳಗೊಂಡಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಹೊಸ ಸ್ಕೋಡಾ ರ‍್ಯಾಪಿಡ್ ರೈಡರ್ ಪ್ಲಸ್ ರೂಪಾಂತರ ಬಿಡುಗಡೆ

ಸ್ಕೋಡಾ ರ‍್ಯಾಪಿಡ್ ಸೆಡಾನ್‌ನ ಇತರ ರೂಪಾಂತರಗಳಲ್ಲಿ ಇರುವಂತೆ ಹೊಸ ‘ರೈಡರ್ ಪ್ಲಸ್' ನಲ್ಲಿ 1.0-ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 109 ಬಿಹೆಚ್‌ಪಿ ಪವರ್ ಮತ್ತು 175 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಹೊಸ ಸ್ಕೋಡಾ ರ‍್ಯಾಪಿಡ್ ರೈಡರ್ ಪ್ಲಸ್ ರೂಪಾಂತರ ಬಿಡುಗಡೆ

ಹೊಸ ಸ್ಕೋಡಾ ರ‍್ಯಾಪಿಡ್ ರೈಡರ್ ಪ್ಲಸ್ ರೂಪಾಂತರದ ಬಗ್ಗೆ ಸ್ಕೋಡಾ ಆಟೋ ಇಂಡಿಯಾದ ಬ್ರ್ಯಾಂಡ್ ಡೈರೆಕ್ಟರ್ ಝ್ಯಾಕ್ ಹೋಲಿಸ್ ಅವರು ಮಾತನಾಡಿ, ಇತ್ತೀಚೆಗೆ ಹೊಸ ರ‍್ಯಾಪಿಡ್ ಟಿಎಸ್ಐ ಮಾದರಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದೇವೆ.

MOST READ: ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ನಿಸ್ಸಾನ್ ಮ್ಯಾಗ್ನೆಟ್ ಎಸ್‍ಯುವಿ

ಹೊಸ ಸ್ಕೋಡಾ ರ‍್ಯಾಪಿಡ್ ರೈಡರ್ ಪ್ಲಸ್ ರೂಪಾಂತರ ಬಿಡುಗಡೆ

ಈ 1.0 ಟಿಎಸ್ಐ ಪೆಟ್ರೋಲ್ ಎಂಜಿನ್ ಅತ್ಯುತ್ತಮ ಇಂಧನ ದಕ್ಷತೆಯನ್ನು ಹೊಂದಿದೆ. ಇನ್ನು ಈ ಹೊಸ ರ‍್ಯಾಪಿಡ್ ರೈಡರ್ ಪ್ಲಸ್ ರೂಪಾಂತರ ಬ್ರ್ಯಾಂಡ್‌ನ ಭಾವನಾತ್ಮಕ ವಿನ್ಯಾಸ, ಸೊಗಸಾದ ಇಂಟಿರಿಯರ್ ಮತ್ತು ಆಕರ್ಷಕ ಫೀಚರುಗಳನ್ನು ಹೊಂದಿದೆ ಎಂದು ಹೇಳಿದರು.

ಹೊಸ ಸ್ಕೋಡಾ ರ‍್ಯಾಪಿಡ್ ರೈಡರ್ ಪ್ಲಸ್ ರೂಪಾಂತರ ಬಿಡುಗಡೆ

ಈ ಹೊಸ 'ರೈಡರ್ ಪ್ಲಸ್' ರ‍್ಯಾಪಿಡ್ 1.0-ಲೀಟರ್ ಟಿಎಸ್ಐ ಸೆಡಾನ್‌ನ ಹೊಸ ರೂಪಾಂತರವಾಗಿದೆ. ಸ್ಕೋಡಾ ರ‍್ಯಾಪಿಡ್ ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ವೆರ್ನಾ, ಫೋಕ್ಸ್‌ವ್ಯಾಗನ್ ವೆಂಟೊ ಮತ್ತು ಹೋಂಡಾ ಸಿಟಿ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
Read more on ಸ್ಕೋಡಾ skoda
English summary
New Skoda Rapid ‘Rider Plus’ Variant Launched In India. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X