ಜುಲೈ 15ರಂದು ಅನಾವರಣಗೊಳ್ಳಲಿದೆ ನಿಸ್ಸಾನ್ ಆರಿಯಾ ಎಲೆಕ್ಟ್ರಿಕ್ ಎಸ್‌ಯುವಿ

ನಿಸ್ಸಾನ್ ಕಂಪನಿಯ ಬಹುನೀರಿಕ್ಷಿತ ಆರಿಯಾ ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಹಲವಾರು ವಿಶೇಷತೆಗಳೊಂದಿಗೆ ಬಿಡುಗಡೆಯಾಗುತ್ತಿದ್ದು, ಇದೇ ತಿಂಗಳು 15ಕ್ಕೆ ಹೊಸ ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಉತ್ಪಾದನಾ ಆವೃತ್ತಿಯು ಅನಾವರಣಗೊಳ್ಳಲಿದೆ.

ಜುಲೈ 15ರಂದು ಅನಾವರಣಗೊಳ್ಳಲಿದೆ ನಿಸ್ಸಾನ್ ಆರಿಯಾ ಇವಿ

2020ರ ಲಾಸ್‌ವೆಗಾಸ್ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಆರಿಯಾ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯು ಇದೀಗ ಉತ್ಪಾದನಾ ಆವೃತ್ತಿಯನ್ನು ಪಡೆದುಕೊಂಡಿದ್ದು, ಉತ್ಪಾದನಾ ಆವೃತ್ತಿಯ ಅನಾವರಣಕ್ಕೂ ಮುನ್ನ ಕಳೆದ ವಾರವಷ್ಟೇ ಹೊಸ ಕಾರಿನ ಟೀಸರ್ ಚಿತ್ರಗಳನ್ನು ಬಹಿರಂಗಪಡಿಸಲಾಗಿತ್ತು. ಟೀಸರ್ ಚಿತ್ರಗಳಲ್ಲಿರುವಂತೆ ಇದೀಗ ಉತ್ಪಾದನಾ ಆವೃತ್ತಿಯು ಕೂಡಾ ಅಭಿವೃದ್ದಿಗೊಂಡಿದ್ದು, ಹೊಸ ಕಾರು ಟೆಸ್ಲಾ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

ಜುಲೈ 15ರಂದು ಅನಾವರಣಗೊಳ್ಳಲಿದೆ ನಿಸ್ಸಾನ್ ಆರಿಯಾ ಇವಿ

ಆರಿಯಾ ಕಾರು ನಿಸ್ಸಾನ್ ನಿರ್ಮಾಣದ ಎರಡನೇ ಎಲೆಕ್ಟ್ರಿಕ್ ಕಾರು ಮಾದರಿಯಾಗಿದ್ದು, ಲೀಫ್ ಕ್ರಾಸ್ ಓವರ್ ಕಾರಿಗಿಂತಲೂ ಹೆಚ್ಚಿನ ಮಟ್ಟದ ತಂತ್ರಜ್ಞಾನ ಸೌಲಭ್ಯಗಳೊಂದಿಗೆ ಆರಿಯಾ ಕಾರು ಮಾರುಕಟ್ಟೆ ಪ್ರವೇಶಿಸಲಿದೆ.

ಜುಲೈ 15ರಂದು ಅನಾವರಣಗೊಳ್ಳಲಿದೆ ನಿಸ್ಸಾನ್ ಆರಿಯಾ ಇವಿ

ಹೊಸ ಆರಿಯಾ ಎಲೆಕ್ಟ್ರಿಕ್ ಎಸ್‌ಯುವಿಯ ಬಿಡುಗಡೆಗೂ ಮುನ್ನ ಉತ್ಪಾದನಾ ಆವೃತ್ತಿಯನ್ನು ಪ್ರದರ್ಶನ ಮಾಡಲಿರುವ ನಿಸ್ಸಾನ್ ಕಂಪನಿಯು 2021ರ ಆರಂಭದಲ್ಲಿ ಅಧಿಕೃತವಾಗಿ ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಲಿದೆ.

ಜುಲೈ 15ರಂದು ಅನಾವರಣಗೊಳ್ಳಲಿದೆ ನಿಸ್ಸಾನ್ ಆರಿಯಾ ಇವಿ

ಟೀಸರ್ ಚಿತ್ರಗಳಲ್ಲಿ ಹೊಸ ಕಾರಿನ ಬಗೆಗೆ ಯಾವುದೇ ಹೆಚ್ಚಿನ ಮಟ್ಟದ ತಾಂತ್ರಿಕ ಅಂಶಗಳನ್ನು ಬಿಟ್ಟುಕೊಡದ ನಿಸ್ಸಾನ್ ಕಂಪನಿಯು ಉತ್ಪಾದನಾ ಮಾದರಿಯ ಪ್ರದರ್ಶನದಲ್ಲಿ ಹೆಚ್ಚಿನ ಮಾಹಿತಿ ಬಿಡುಗಡೆ ಮಾಡಲಿದ್ದು, ಹೊಸ ಕಾರು ಪ್ರತಿ ಚಾರ್ಜ್‌ಗೆ ಗರಿಷ್ಠ 480 ಕಿ.ಮೀ ಮೈಲೇಜ್ ನೀಡಲಿದೆ.

MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

ಜುಲೈ 15ರಂದು ಅನಾವರಣಗೊಳ್ಳಲಿದೆ ನಿಸ್ಸಾನ್ ಆರಿಯಾ ಇವಿ

ಆರಿಯಾ ಕಾರಿನಲ್ಲಿ ಟೆಸ್ಲಾ ಕಾರುಗಳಿಗೆ ಪೈಪೋಟಿಯಾಗಿ ಪ್ರೋ ಪೈಲೆಟ್ 2.0 ತಂತ್ರಜ್ಞಾನ ಬಳಕೆ ಮಾಡಲು ನಿರ್ಧರಿಸಲಾಗಿದ್ದು, ಹೊಸ ತಂತ್ರಜ್ಞಾನದಿಂದಾಗಿ ಅಪಘಾತದ ಸಂದರ್ಭಗಳನ್ನು ಸಮರ್ಥವಾಗಿ ನಿಭಾಯಿಸುವ ಗುಣಲಕ್ಷಣಗಳು ಹೊಸ ತಂತ್ರಜ್ಞಾನದಲ್ಲಿವೆ.

ಜುಲೈ 15ರಂದು ಅನಾವರಣಗೊಳ್ಳಲಿದೆ ನಿಸ್ಸಾನ್ ಆರಿಯಾ ಇವಿ

ಸದ್ಯಕ್ಕೆ ಹೊಸ ಕಾರು ಯುಎಸ್ಎ ಮತ್ತು ಯುರೋಪಿನ ಕೆಲವೇ ರಾಷ್ಟ್ರಗಳಲ್ಲಿ ಮಾತ್ರವೇ ಬಿಡುಗಡೆಯಾಗಲಿದ್ದು, ಭಾರತದಲ್ಲಿ ಈ ಕಾರನ್ನು ಸದ್ಯಕ್ಕೆ ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಿಲ್ಲ. ಆರಿಯಾ ಕಾರು ಬಿಡುಗಡೆಗೂ ಮುನ್ನ ಭಾರತದಲ್ಲಿ ನಿಸ್ಸಾನ್ ನಿರ್ಮಾಣದ ಲೀಫ್ ಎಲೆಕ್ಟ್ರಿಕ್ ಕಾರು ಬಿಡುಗಡೆಯ ಪಟ್ಟಿಯಲ್ಲಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಜುಲೈ 15ರಂದು ಅನಾವರಣಗೊಳ್ಳಲಿದೆ ನಿಸ್ಸಾನ್ ಆರಿಯಾ ಇವಿ

ಹೀಗಾಗಿ ಹೊಸ ಆರಿಯಾ ಕಾರು ಭಾರತದಲ್ಲಿ 2022ರ ನಂತರಷ್ಟೇ ಬಿಡುಗಡೆಯಾಗಬಹುದಾದ ಸಾಧ್ಯತೆಗಳಿದ್ದು, ಹೊಸ ಕಾರಿನ ಮತ್ತಷ್ಟು ತಾಂತ್ರಿಕ ಅಂಶಗಳು ಶೀಘ್ರದಲ್ಲೇ ಬಹಿರಂಗವಾಗಲಿವೆ.

Most Read Articles

Kannada
English summary
Nissan Ariya Electric Vehicle To Be Globally Unveiled On 15 July. Read in Kannada.
Story first published: Thursday, July 2, 2020, 20:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X