Just In
- 49 min ago ಮಹೀಂದ್ರಾ ಬೊಲೆರೋ ನಿಯೋ ಪ್ಲಸ್ 9-ಸೀಟರ್ ಎಸ್ಯುವಿ ಬೆಲೆ, ವಿಶೇಷತೆಗಳು!
- 14 hrs ago ಪೆಟ್ರೋಲ್ ಎಂಜಿನ್ಗಳಲ್ಲಿ ಮಾತ್ರ ಬರಲಿದೆ ರೆನಾಲ್ಟ್ನ ಬ್ರಹ್ಮಾಸ್ತ್ರ ಡಸ್ಟರ್
- 15 hrs ago Nissan Magnite: ನಿಸ್ಸಾನ್ ಮ್ಯಾಗ್ನೆಟ್ನ ಈ ಮಾದರಿಗಳನ್ನು ಹಿಂಪಡೆಯಲು ನಿರ್ಧಾರ.. ಕಾರಣವೇನು?
- 16 hrs ago Maruti Suzuki: ಮಾರುತಿ ಸುಜುಕಿಯ ಸುರಕ್ಷಿತ ಕಾರುಗಳಿವು.. 8 ಲಕ್ಷ ಆರಂಭಿಕ ಬೆಲೆ
Don't Miss!
- News ಚುನಾವಣೆ ಹೊತ್ತಲ್ಲೇ ಎದುರಾಗಿದ್ದ ಸಂಕಷ್ಟದಿಂದ ಸಂಸದ ರಾಘವೇಂದ್ರಗೆ ಬಿಗ್ ರಿಲೀಫ್
- Technology ಅಧಿಕ ಬ್ಯಾಟರಿ ಇರುವ ಈ ಫೋನ್ ಬೆಲೆಯಲ್ಲಿ ಇಳಿಕೆ!..ಆಫರ್ ತಿಳಿದ್ರೆ, ವಾವ್ ಅಂತೀರಾ!
- Movies ದ್ವಾರಕೀಶ್ ನಿಧನಕ್ಕೆ ಪಿಎಂ ಮೋದಿ ಸಂತಾಪ.. ಶಿವಣ್ಣ ಅಂತಿಮ ದರ್ಶನ; ಇಲ್ಲಿದೆ 'ಪ್ರಚಂಡ ಕುಳ್ಳ'ನ ಅಂತ್ಯಕ್ರಿಯೆ ಡಿಟೈಲ್ಸ್
- Finance ರಿಲಯನ್ಸ್ ಪವರ್ ಕಂಪೆನಿಯಲ್ಲಿ ಅನಿಲ್ ಅಂಬಾನಿಯ ಜೆಎಸ್ಡಬ್ಲ್ಯುನಿಂದ 132 ಕೋಟಿ ರೂ.ಗಳ ಹೂಡಿಕೆ
- Sports ದಿನೇಶ್ ಕಾರ್ತಿಕ್ ಟಿ20 ವಿಶ್ವಕಪ್ಗೆ ಆಯ್ಕೆಯಾಗಬಾರದು; ಇರ್ಫಾನ್ ಪಠಾಣ್ ಹೀಗೆ ಹೇಳಿದ್ದೇಕೆ?
- Lifestyle ಹಾಲು ಜೇನಿನಂತಿರುವ ಸಂಬಂಧ ಹಾಳಾಗುತ್ತಿರುವ ಲಕ್ಷಣಗಳಿವು..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಾಲಕರಿಗೆ ನೆರವಾಗಲು ಡ್ರೈವರ್ ಫಂಡ್ ಶುರು ಮಾಡಿದ ಓಲಾ
ಕರೋನಾ ವೈರಸ್ನಿಂದಾಗಿ ದೇಶಾದ್ಯಂತ ಲಾಕ್ಡೌನ್ ಘೋಷಿಸಲಾಗಿದೆ. ಇದರಿಂದಾಗಿ ಎಲ್ಲಾ ರೀತಿಯ ಸಾರಿಗೆ ವ್ಯವಸ್ಥೆಯನ್ನು ಬಂದ್ ಮಾಡಲಾಗಿದೆ. ಇದರಲ್ಲಿ ಕ್ಯಾಬ್, ಟ್ಯಾಕ್ಸಿ ಗಳು ಸೇರಿವೆ. ಇದರಿಂದಾಗಿ ಕ್ಯಾಬ್, ಟ್ಯಾಕ್ಸಿ ಚಾಲಕರು ಅತಂತ್ರ ಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ತನ್ನ ಚಾಲಕರಿಗೆ ನೆರವಾಗುವ ಉದ್ದೇಶದಿಂದ ಓಲಾ ಕಂಪನಿಯು ಓಲಾ ಫೌಂಡೇಶನ್ ಅಡಿಯಲ್ಲಿ ಸಹಾಯ ಹಸ್ತ ಚಾಚಲು ಮುಂದಾಗಿದೆ. ಇದರನ್ವಯ ಓಲಾ ಫೌಂಡೇಶನ್ ಡ್ರೈವ್ ದಿ ಡ್ರೈವರ್ ಫಂಡ್ ಕಾರ್ಯಕ್ರಮವನ್ನು ಆರಂಭಿಸಿದೆ. ಈ ಅಭಿಯಾನದಡಿಯಲ್ಲಿ ಓಲಾ ಗ್ರೂಪ್ ಹಾಗೂ ಅದರಲ್ಲಿ ಹೂಡಿಕೆ ಮಾಡಿರುವವರು ಓಲಾದ ಆಟೋ ರಿಕ್ಷಾ, ಕ್ಯಾಬ್ ಚಾಲಕರಿಗೆ ಸಹಾಯ ಮಾಡಲಿದ್ದಾರೆ.
ವರದಿಗಳ ಪ್ರಕಾರ, ಓಲಾ ಗ್ರೂಪ್ ಈ ನಿಧಿಗೆ ರೂ.20 ಕೋಟಿಗಳನ್ನು ನೀಡಲಿದೆ. ಓಲಾ ಕಂಪನಿಯ ಸಿಇಒ ಹಾಗೂ ಸಹ ಸಂಸ್ಥಾಪಕರಾದ ಭನಿಶ್ ಅಗರ್ವಾಲ್ ರವರು ಇದರ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಲಾಕ್ ಡೌನ್ ಮಾಡಲಾಗಿರುವ ಈ ಸಂದರ್ಭದಲ್ಲಿ ಲಕ್ಷಾಂತರ ಚಾಲಕರು ಯಾವುದೇ ಆದಾಯವಿಲ್ಲದೇ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಅವರಿಗೆ ಸಹಾಯ ಮಾಡುವ ಉದ್ದೇಶದಿಂದ ಡ್ರೈವ್ ದಿ ಡ್ರೈವರ್ ಫಂಡ್ ಆರಂಭಿಸಿದ್ದೇವೆ ಎಂದು ಹೇಳಿದರು.
ಇದರಲ್ಲಿ, ನನ್ನ ಮುಂದಿನ ವರ್ಷದ ಪೂರ್ತಿ ಸಂಬಳವನ್ನು ನೀಡುತ್ತಿದ್ದೇನೆ. ಒಟ್ಟು ರೂ.20 ಕೋಟಿ ನೀಡುತ್ತಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಲಾಕ್ಡೌನ್ ಸಮಯದಲ್ಲಿ, ಓಲಾ ಕಂಪನಿಯು ತನ್ನ ಚಾಲಕರಿಗೆ ಹೆಚ್ಚಿನ ಪ್ರಮಾಣದ ಸಹಾಯವನ್ನು ನೀಡಲು ಮುಂದಾಗಿದೆ.
MOST READ: ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್
ಈ ಬಗ್ಗೆ ಮಾತನಾಡಿರುವ ಓಲಾ ಗ್ರೂಪ್ ವಕ್ತಾರರಾದ ಆನಂದ್ ಸುಬ್ರಮಣಿಯನ್ ರವರು ಈ ಸಂಕಷ್ಟದ ಸಮಯದಲ್ಲಿ, ನಮ್ಮ ಸಾವಿರಾರು ಚಾಲರಿಗೆ ನೆರವಾಗುವ ಉದ್ದೇಶದಿಂದ ಓಲಾ ಗ್ರೂಪ್ ನಿಧಿಯನ್ನು ಸ್ಥಾಪಿಸಿದೆ. ಇದನ್ನು ರೂ.20 ಕೋಟಿಗಳಿಂದ ರೂ.50 ಕೋಟಿಗಳಿಗೆ ಏರಿಸಲಾಗುವುದು ಎಂದು ಹೇಳಿದರು.
MOST READ: ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?
ಈ ನಿಧಿಯನ್ನು ತಕ್ಷಣಕ್ಕೆ ನೆರವು ನೀಡಲು ಬಳಸಲಾಗುವುದು. ಕಂಪನಿಯ ಚಾಲಕರು ಹಾಗೂ ಅವರ ಕುಟುಂಬಗಳಿಗೆ ಉಚಿತ ವೈದ್ಯಕೀಯ ಸಮಾಲೋಚನೆಯನ್ನು ಸಹ ನೀಡಲಾಗುವುದು ಎಂದು ಸಹ ಹೇಳಿದರು.
MOST READ: ವಾಹನ ಉತ್ಪಾದನೆ ಸ್ಥಗಿತದಿಂದಾಗಿ ಸಾವಿರಾರು ಕೋಟಿ ನಷ್ಟ
ಕರೋನಾ ವೈರಸ್ ಪ್ರಕರಣಗಳು ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದುವರೆಗೂ ಭಾರತದಲ್ಲಿ ಈ ಮಾರಣಾಂತಿಕ ವೈರಸ್ ನಿಂದಾಗಿ 20ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 900ಕ್ಕೂ ಹೆಚ್ಚು ಜನರಿಗೆ ಈ ಸೋಂಕು ತಗುಲಿದೆ.