ಲಾಕ್‌ಡೌನ್ ಸಂಕಷ್ಟ: 1,400 ಉದ್ಯೋಗಿಗಳಿಗೆ ಗೇಟ್‌ಪಾಸ್ ನೀಡಲು ಮುಂದಾದ ಓಲಾ

ಕರೋನಾ ವೈರಸ್‌ನಿಂದಾಗಿ ಇಡೀ ವಿಶ್ವವೇ ಆತಂಕದಲ್ಲಿದ್ದು, ವಾಣಿಜ್ಯ ಚಟುವಟಿಕೆಗಳು ಕುಂಠಿತಗೊಂಡಿರುವುದರಿಂದ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿ ತಲುಪಿದೆ. ಹೀಗಿರುವಾಗ ಆರ್ಥಿಕ ನಷ್ಟದಿಂದ ಪಾರಾಗಲು ಕಠಿಣ ಕ್ರಮಕ್ಕೆ ಮುಂದಾಗಿರುವ ಖಾಸಗಿ ಕಂಪನಿಗಳು ಉದ್ಯೋಗ ಕಡಿತಕ್ಕೆ ಸಿದ್ದವಾಗುತ್ತಿವೆ.

1,400 ಉದ್ಯೋಗಿಗಳಿಗೆ ಗೇಟ್‌ಪಾಸ್ ನೀಡಲು ಮುಂದಾದ ಓಲಾ

ಭಾರತದಲ್ಲೂ ಕೂಡಾ ಕರೋನಾ ವೈರಸ್‌ನಿಂದಾಗಿ ಭಾರೀ ಪ್ರಮಾಣದ ಆರ್ಥಿಕ ಸಂಕಷ್ಟ ಶುರುವಾಗಿದ್ದು, ಮಾರ್ಚ್ ಮಧ್ಯಂತರದಲ್ಲೇ ಲಾಕ್‌ಡೌನ್ ವಿಧಿಸಿರುವ ಕೇಂದ್ರ ಸರ್ಕಾರವು ಇನ್ನು ಕೂಡಾ ಪರಿಸ್ಥಿತಿಗೆ ಅನುಗುಣವಾಗಿ ಮುಂದುವರಿಸಿದೆ. ಹೀಗಿರುವಾಗ ಕಳೆದ ಎರಡು ತಿಂಗಳಿನಿಂದ ಯಾವುದೇ ಆದಾಯವಿಲ್ಲದ ಲಕ್ಷಾಂತರ ಖಾಸಗಿ ಕಂಪನಿಗಳು ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದ್ದು, ಉದ್ಯೋಗ ಕಡಿತ ಮಾಡುತ್ತಿವೆ.

1,400 ಉದ್ಯೋಗಿಗಳಿಗೆ ಗೇಟ್‌ಪಾಸ್ ನೀಡಲು ಮುಂದಾದ ಓಲಾ

ಕ್ಯಾಬ್ ಸೇವೆಗಳಲ್ಲಿ ಮುಂಚೂಣಿಯಲ್ಲಿರುವ ಓಲಾ ಕೂಡಾ ಇದೀಗ 1,400 ಉದ್ಯೋಗಿಗಳನ್ನು ಮನೆಗೆ ಕಳುಹಿಸುವ ಸಿದ್ದತೆ ನಡೆಸಿದ್ದು, ಲಾಕ್‌ಡೌನ್ ಪರಿಣಾಮ ಈ ಕ್ರಮ ಅನಿವಾರ್ಯವಾಗಿದೆ ಓಲಾ ಸಿಇಓ ಭವಿಶ್‌ ಅಗರವಾಲ್ ಸ್ಪಷ್ಟಪಡಿಸಿದ್ದಾರೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

1,400 ಉದ್ಯೋಗಿಗಳಿಗೆ ಗೇಟ್‌ಪಾಸ್ ನೀಡಲು ಮುಂದಾದ ಓಲಾ

ಓಲಾ ಕಂಪನಿಯು ಹಣಕಾಸು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳನ್ನು ತೆಗೆದುಹಾಕಲು ನಿರ್ಧರಿಸಿದ್ದು, ಕಂಪನಿಯು ಕಾನೂನು ಪ್ರಕಾರ ಮೂರು ತಿಂಗಳ ಮುಂಗಡ ವೇತನ ಪರಿಹಾರ ನೀಡುವುದಾಗಿ ಭರವಸೆ ನೀಡಿದೆ.

1,400 ಉದ್ಯೋಗಿಗಳಿಗೆ ಗೇಟ್‌ಪಾಸ್ ನೀಡಲು ಮುಂದಾದ ಓಲಾ

ಆದರೂ ಕೂಡಾ ಸಂಕಷ್ಟದ ಸಮಯದಲ್ಲಿ ಉದ್ಯೋಗ ಕಡಿತ ಅನುಸರಿಸುತ್ತಿರುವ ಖಾಸಗಿ ಕಂಪನಿಗಳ ನಿರ್ಧಾರದಿಂದ ನಿರುದ್ಯೋಗಿ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗುತ್ತಿದ್ದು, ಮುಂಬರುವ ದಿನಗಳು ಮತ್ತಷ್ಟು ಕಠಿಣವಾಗಿರಲಿವೆ ಎನ್ನಲಾಗುತ್ತಿದೆ.

MOST READ: ಲಾಕ್‌ಡೌನ್ ತೆರವುಗೊಂಡ ನಂತರ ಬಿಡುಗಡೆಯಾಗಲಿರುವ ಟಾಪ್ 5 ಕಾರುಗಳು..

1,400 ಉದ್ಯೋಗಿಗಳಿಗೆ ಗೇಟ್‌ಪಾಸ್ ನೀಡಲು ಮುಂದಾದ ಓಲಾ

ಕೇಂದ್ರ ಸರ್ಕಾರವು ಒಂದು ಕಡೆಗೆ ಲಾಕ್‌‌ಡೌನ್ ಸಂದರ್ಭದಲ್ಲಿ ಉದ್ಯೋಗ ಕಡಿತ ಮಾಡಬೇಡಿ ಎಂಬ ಸೂಚನೆ ನೀಡಿದ್ದರೂ ಆರ್ಥಿಕ ಮುಗ್ಗಟ್ಟು ಇದೀಗ ದಿನದಿಂದಕ್ಕೆ ಹೆಚ್ಚಳವಾಗುತ್ತಿರುವುದರಿಂದ ಖಾಸಗಿ ಕಂಪನಿಗಳಿಗಳು ಭಾರೀ ಪ್ರಮಾಣದ ಆರ್ಥಿಕ ಹೊರೆ ಅನುಭವಿಸುತ್ತಿವೆ.

1,400 ಉದ್ಯೋಗಿಗಳಿಗೆ ಗೇಟ್‌ಪಾಸ್ ನೀಡಲು ಮುಂದಾದ ಓಲಾ

ಜೊತಗೆ ಟ್ಯಾಕ್ಸಿಗಳಿಂದ ಆದಾಯ ಕಂಡುಕೊಂಡಿದ್ದ ಲಕ್ಷಾಂತರ ಚಾಲಕರಿಗೂ ಕೂಡಾ ಭಾರೀ ಹೊಡೆತ ಬಿದ್ದಿದ್ದು, ಬಾಡಿಗೆಗಾಗಿ ಖರೀದಿಸಿದ ವಾಹನಗಳ ಸಾಲ ಮರುಪಾವತಿಗೂ ಇದೀಗ ಪರದಾಡುವ ಪರಿಸ್ಥಿತಿ ಎದುರಾಗಿದೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

1,400 ಉದ್ಯೋಗಿಗಳಿಗೆ ಗೇಟ್‌ಪಾಸ್ ನೀಡಲು ಮುಂದಾದ ಓಲಾ

ಸದ್ಯ ಪರಿಸ್ಥಿತಿಗೆ ಅನುಗುಣವಾಗಿ ಟ್ಯಾಕ್ಸಿ ಓಡಾಟಕ್ಕೂ ಅವಕಾಶ ನೀಡಲಾಗುತ್ತದೆಯಾದರೂ ಪ್ರಯಾಣಿಕರಿಲ್ಲದೆ ಪರದಾಟುವಂತಾಗಿದ್ದು, ವೈರಸ್ ಭೀತಿ ನಡುವೆಯೂ ಜೀವನಿರ್ವಹಣೆಗಾಗಿ ಸುರಕ್ಷಾ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಪ್ರಯಾಣಿಕರಿಗೆ ಸೇವೆ ನೀಡುತ್ತಿವೆ.

More from DriveSpark

Article Published On: Wednesday, May 20, 2020, 19:41 [IST]
English summary
Ola to layoff 1,400 employees due to coronavirus pandemic. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+