ಆರೋಗ್ಯ ಕಾರ್ಯಕರ್ತರಿಗೆ ಒಂದು ಲಕ್ಷ ಉಚಿತ ಟಿಕೆಟ್ ನೀಡಲಿದೆ ಈ ವಿಮಾನಯಾನ ಕಂಪನಿ

ಕರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಗಲ್ಫ್ ರಾಷ್ಟ್ರ ಕತಾರ್‌ನ ವಿಮಾನಯಾನ ಕಂಪನಿಯಾದ ಕತಾರ್ ಏರ್‌ವೇಸ್ ಒಂದು ಲಕ್ಷ ಕಾಂಪ್ಲಿಮೆಂಟರಿ ಟಿಕೆಟ್‌ಗಳನ್ನು ಪ್ರಕಟಿಸಿದೆ. ಕತಾರ್ ಏರ್‌ವೇಸ್, ವಿಶ್ವ ದಾದಿಯರ ದಿನಾಚರಣೆಯಂದು ಈ ಘೋಷಣೆ ಮಾಡಿದೆ. ಪ್ರತಿ ವರ್ಷ ಮೇ 12ರಂದು ವಿಶ್ವ ದಾದಿಯರ ದಿನವನ್ನು ಆಚರಿಸಲಾಗುತ್ತದೆ.

ಆರೋಗ್ಯ ಕಾರ್ಯಕರ್ತರಿಗೆ ಒಂದು ಲಕ್ಷ ಉಚಿತ ಟಿಕೆಟ್ ನೀಡಲಿದೆ ಈ ವಿಮಾನಯಾನ ಕಂಪನಿ

ಕರೋನಾ ವೈರಸ್ ವಿರುದ್ಧ ವಿಶ್ವದಾದ್ಯಂತ ಹೋರಾಡುತ್ತಿರುವ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ನಾವು ಆಭಾರಿಯಾಗಿದ್ದೇವೆ ಎಂದು ಕತಾರ್ ಏರ್‌ವೇಸ್ ಹೇಳಿದೆ. ಕರೋನಾ ವಾರಿಯರ್ಸ್ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕರೋನಾ ರೋಗಿಗಳ ಜೀವ ಉಳಿಸುತ್ತಿದ್ದಾರೆ. ದಯೆ, ಸಮರ್ಪಣೆಯಿಂದಾಗಿ ವೈದ್ಯರು ವಿಶ್ವಾದ್ಯಂತ ಲಕ್ಷಾಂತರ ಜೀವಗಳನ್ನು ಉಳಿಸಿದ್ದಾರೆ.

ಆರೋಗ್ಯ ಕಾರ್ಯಕರ್ತರಿಗೆ ಒಂದು ಲಕ್ಷ ಉಚಿತ ಟಿಕೆಟ್ ನೀಡಲಿದೆ ಈ ವಿಮಾನಯಾನ ಕಂಪನಿ

ವೈದ್ಯರು, ದಾದಿಯರು, ಲ್ಯಾಬ್ ತಂತ್ರಜ್ಞರು ಸೇರಿದಂತೆ ವಿಶ್ವದ ಪ್ರತಿಯೊಂದು ದೇಶದ ಆರೋಗ್ಯ ಕಾರ್ಯಕರ್ತರು ಈ ಟಿಕೆಟ್ ಪಡೆಯಲು ಅರ್ಹರಾಗಿದ್ದಾರೆ. ಟಿಕೆಟ್‌ಗಳನ್ನು ಪಾರದರ್ಶಕವಾಗಿ ವಿತರಿಸಲಾಗುವುದು. ಜನಸಂಖ್ಯೆಯ ಆಧಾರದ ಮೇಲೆ ಪ್ರತಿಯೊಂದು ದೇಶಕ್ಕೂ ಟಿಕೆಟ್‌ಗಳನ್ನು ನೀಡಲಾಗುವುದು.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಆರೋಗ್ಯ ಕಾರ್ಯಕರ್ತರಿಗೆ ಒಂದು ಲಕ್ಷ ಉಚಿತ ಟಿಕೆಟ್ ನೀಡಲಿದೆ ಈ ವಿಮಾನಯಾನ ಕಂಪನಿ

ಆಯ್ಕೆಯಾಗುವ ಆರೋಗ್ಯ ಕಾರ್ಯಕರ್ತರಿಗೆ ಎರಡು ರೌಂಡ್‌ಟ್ರಿಪ್ ಟಿಕೆಟ್‌ಗಳನ್ನು ಬುಕ್ಕಿಂಗ್ ಮಾಡಲು ಅವಕಾಶ ನೀಡಲಾಗುತ್ತದೆ. ಅವರು ಕತಾರ್ ಏರ್‌ವೇಸ್ ಹಾರಾಟ ನಡೆಸುವ ಯಾವುದೇ ಸ್ಥಳಕ್ಕೆ ಟಿಕೆಟ್ ಬುಕ್ಕಿಂಗ್ ಮಾಡಬಹುದು.

ಆರೋಗ್ಯ ಕಾರ್ಯಕರ್ತರಿಗೆ ಒಂದು ಲಕ್ಷ ಉಚಿತ ಟಿಕೆಟ್ ನೀಡಲಿದೆ ಈ ವಿಮಾನಯಾನ ಕಂಪನಿ

ಇದರ ಜೊತೆಗೆ ಕತಾರ್‌ನ ರಾಜಧಾನಿ ದೋಹಾದ ಹಮದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ರಿಟೇಲ್ ಮಾರಾಟ ಮಳಿಗೆಗಳಲ್ಲಿ 35% ರಿಯಾಯಿತಿ ನೀಡಲಾಗುವುದು. ಈ ಟಿಕೆಟ್‌ಗಳನ್ನು ನವೆಂಬರ್ 26ಕ್ಕೆ ಮುಂಚೆ ಕಾಯ್ದಿರಿಸಬೇಕು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಆರೋಗ್ಯ ಕಾರ್ಯಕರ್ತರಿಗೆ ಒಂದು ಲಕ್ಷ ಉಚಿತ ಟಿಕೆಟ್ ನೀಡಲಿದೆ ಈ ವಿಮಾನಯಾನ ಕಂಪನಿ

ಈ ಪ್ರಯಾಣವು 2020ರ ಡಿಸೆಂಬರ್ 10ರವರೆಗೆ ಮಾನ್ಯವಾಗಿರುತ್ತದೆ. ಈ ಕಾಂಪ್ಲಿಮೆಂಟರಿ ಟಿಕೆಟ್‌ಗಳನ್ನು ಮರು ನಿಗದಿಪಡಿಸಲು ಅಥವಾ ರದ್ದುಗೊಳಿಸಲು ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲವೆಂದು ಕತಾರ್ ಏರ್‌ವೇಸ್ ಹೇಳಿದೆ. ರದ್ದು ಪಡಿಸುವ ಟಿಕೆಟ್‌ಗಳನ್ನು ಮತ್ತೆ ಬುಕ್ಕಿಂಗ್ ಮಾಡಬಹುದು.

ಆರೋಗ್ಯ ಕಾರ್ಯಕರ್ತರಿಗೆ ಒಂದು ಲಕ್ಷ ಉಚಿತ ಟಿಕೆಟ್ ನೀಡಲಿದೆ ಈ ವಿಮಾನಯಾನ ಕಂಪನಿ

ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಭಾರತಕ್ಕೆ ಕರೆತರಲು ಭಾರತದ ವಿಮಾನಯಾನ ಕಂಪನಿಯಾದ ಏರ್ ಇಂಡಿಯಾ ವಂದೇ ಭಾರತ್ ಮಿಷನ್ ಅನ್ನು ಆರಂಭಿಸಿದೆ. ಈ ಮಿಷನ್ ಅಡಿಯಲ್ಲಿ ಮೇ 8ರಿಂದ ಮೇ 14ರವರೆಗೆ 64 ವಿಮಾನಗಳು ಕಾರ್ಯಾಚರಣೆ ನಡೆಸಲಿವೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಆರೋಗ್ಯ ಕಾರ್ಯಕರ್ತರಿಗೆ ಒಂದು ಲಕ್ಷ ಉಚಿತ ಟಿಕೆಟ್ ನೀಡಲಿದೆ ಈ ವಿಮಾನಯಾನ ಕಂಪನಿ

ಈ ಮಿಷನ್ ಅಡಿಯಲ್ಲಿ ಭಾರತಕ್ಕೆ ಮರಳುವ ಜನರು ಸಂಪೂರ್ಣ ಪ್ರಯಾಣ ವೆಚ್ಚದ ಜೊತೆಗೆ 14 ದಿನಗಳ ಆಸ್ಪತ್ರೆ ಅಥವಾ ಕ್ಯಾರೆಂಟೈನ್ ಸೌಲಭ್ಯದ ಹಣವನ್ನು ಪಾವತಿಸಬೇಕಾಗುತ್ತದೆ. ಈ ಕಾರ್ಯಾಚರಣೆಯಲ್ಲಿ, ಭಾರತೀಯ ನಾಗರಿಕರನ್ನು ಏರ್ ಇಂಡಿಯಾ ವಿಮಾನಗಳ ಜೊತೆಗೆ ಯುದ್ಧನೌಕೆಗಳಿಂದಲೂ ವಾಪಸ್ ಕರೆತರಲಾಗುವುದು.

Most Read Articles

Kannada
English summary
Qatar Airways offers One Lakh complementary Air tickets to Doctors and Health workers. Read in Kannada.
Story first published: Wednesday, May 13, 2020, 13:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X