ಆಟೋ ಎಕ್ಸ್‌ಪೋ 2020: ಎಲೆಕ್ಟ್ರಿಕ್ ರೂಪದಲ್ಲಿ ಅನಾವರಣವಾಯ್ತು ರೆನಾಲ್ಟ್ ಕ್ವಿಡ್
ರೆನಾಲ್ಟ್ ಸಂಸ್ಥೆಯು ತನ್ನ ಕ್ವಿಡ್ ಎಲೆಕ್ಟಿಕ್ ಆವೃತ್ತಿಯನ್ನು 2020ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದೆ . ರೆನಾಲ್ಟ್ ಇಂಡಿಯಾ ಅನಾವರಣಗೊಳಿಸಿರುವ ಎಲೆಕ್ಟ್ರಿಕ್ ಕ್ವಿಡ್ ಎಲೆಕ್ಟ್ರಿಕ್ ಹ್ಯಾಚ್‍ಬ್ಯಾಕ್ ಅಂತರರಾಷ್ಟ್ರೀಯ ಮಾರಕಟ್ಟೆಗಳಲ್ಲಿ ಮಾರಾಟವಾಗುವ ಕೆ-ಝಡ್‍ಇ ಮಾದರಿಯನ್ನು ಆಧರಿಸಿದೆ.

ಇತ್ತೀಚೆಗೆ ಬಿಡುಗಡೆಗೊಳಿಸಲಾದ ಎರಡನೇ ತಲೆಮಾರಿನ ಕ್ವಿಡ್ ಹ್ಯಾಚ್‍ಬ್ಯಾಕ್‍ಗೆ ಹೋಲಿಸಿದರೆ ಈಗ ಅನಾವರಣಗೊಂಡಿರುವ ಹೊಸ ರೆನಾಲ್ಟ್ ಕೆ-ಝಡ್ಇ ಹ್ಯಾಚ್‍ಬ್ಯಾಕ್ ಕಾರಿನಲ್ಲಿ ಹಲವಾರು ಹೊಸ ಫೀಚರ್ಸ್‍ಗಳಿವೆ. ಹೊಸ ರೆನಾಲ್ಟ್ ಕೆ-ಝಡ್‍ಇ(ಕ್ವಿಡ್ ಎಲೆಕ್ಟ್ರಿಕ್) ಕಾರಿನಲ್ಲಿ 26.8 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಎಲೆಕ್ಟ್ರಿಕ್ ಮೋಟಾರ್‍ನೊಂದಿಗೆ ಜೋಡಿಸಲಾಗಿದೆ. ಈ ಎಲೆಕ್ಟ್ರಿಕ್ ಮೋಟಾರ್ 44 ಬಿಹೆಚ್‍ಪಿ ಪವರ್ ಹಾಗೂ 125 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಕ್ವಿಡ್ ಎಲೆಕ್ಟ್ರಿಕ್ ಹ್ಯಾಚ್‍ಬ್ಯಾಕ್ ಅನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 271 ಕಿ.ಮೀಗಳವರೆಗೂ ಚಲಿಸುತ್ತದೆ. ರೆನಾಲ್ಟ್ ಕೆ-ಝಡ್ಇ ಹ್ಯಾಚ್‍ಬ್ಯಾಕ್ ಸ್ಟ್ಯಾಂಡರ್ಡ್ ಮತ್ತು ಫಾಸ್ಟ್ ಚಾರ್ಜಿಂಗ್ ಆಯ್ಕೆಗಳನ್ನು ಹೊಂದಿದೆ. ಸ್ಟ್ಯಾಂಡರ್ಡ್ ಎಸಿ ಚಾರ್ಜ್‍ರ್ ಬಳಸಿ ಚಾರ್ಜ್ ಮಾಡಿದರೆ ನಾಲ್ಕು ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ.

ಇನ್ನೂ ಡಿಸಿ ಫಾಸ್ಟ್ ಚಾರ್ಜರ್ ಬಳಸಿ ಚಾರ್ಜ್ ಮಾಡಿದರೆ ಕೇವಲ 30 ನಿಮಿಷದಲ್ಲಿ 30ರಿಂದ 80%ನಷ್ಟು ಚಾರ್ಜ್ ಆಗುತ್ತದೆ. ಹೊಸ ರೆನಾಲ್ಟ್ ಕ್ವಿಡ್ ಹ್ಯಾಚ್‍ಬ್ಯಾಕ್‍ನಲ್ಲಿ ಹಲವಾರು ಫೀಚರ್ಸ್‍ಗಳನ್ನು ಅಳವಡಿಸಲಾಗಿದೆ.

ಈ ಹೊಸ ರೆನಾಲ್ಟ್ ಕೆ-ಝಡ್ಇ ಹ್ಯಾಚ್‍ಬ್ಯಾಕ್ 14 ಇಂಚಿನ ಸ್ಟೀಲ್ ವ್ಹೀಲ್‍ಗಳನ್ನು ಹೊಂದಿದೆ. ಇದರ ಜೊತೆಗೆ ಎಲ್‍ಇಡಿ ಡೇ ಟೈಮ್ ರನ್ನಿಂಗ್ ಲ್ಯಾಂಪ್, ರೇರ್ ರೈನ್ ವೈಪರ್, ಟಿಎಫ್‍ಟಿ ಇನ್ಸ್ ಟ್ರೂಮೆಂಟ್ ಕನ್ಸೋಲ್, 8 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೇನ್‍ಮೆಂಟ್ ಸಿಸ್ಟಂ ಹಾಗೂ ಇಂಟಿಲಿಜೆಂಟ್ ಕನೆಕ್ಟಿವಿಟಿ ತಂತ್ರಜ್ಞಾನಗಳನ್ನು ಹೊಂದಿದೆ.

ರೆನಾಲ್ಟ್ ಕೆ-ಝಡ್ಇ ಹ್ಯಾಚ್‍ಬ್ಯಾಕ್ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದ್ದು, ಇಬಿಡಿ, ಏರ್‍ಬ್ಯಾಗ್, ಸೀಟ್ ಬೆಲ್ಟ್ ರಿಮೈಂಡರ್, ರಿವರ್ಸ್ ಪಾರ್ಕಿಂಗ್ ಹಾಗೂ ಮತ್ತಿತರ ಫೀಚರ್ಸ್‍ಗಳನ್ನು ಅಳವಡಿಸಲಾಗಿದೆ.

ಇವುಗಳ ಹೊರತಾಗಿ ಹೊಸ ರೆನಾಲ್ಟ್ ಕೆ-ಝಡ್ಇ ಹ್ಯಾಚ್‍ಬ್ಯಾಕ್ ಕಾರಿನ ಬೇರೆ ಮಾಹಿತಿಗಳು ಲಭ್ಯವಾಗಿಲ್ಲ. ರೆನಾಲ್ಟ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿನ ಬೇಡಿಕೆಯನ್ನು ಗಮನಿಸಿ ಶೀಘ್ರದಲ್ಲೇ ಈ ಹ್ಯಾಚ್‍ಬ್ಯಾಕ್ ಅನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಫ್ರೆಂಚ್ ಮೂಲದ ಕಾರು ತಯಾರಕ ಕಂಪನಿಯಾದ ರೆನಾಲ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಹ್ಯಾಚ್‍ಬ್ಯಾಕ್ ಬಿಡುಗಡೆ ಮಾಡುವ ಮೂಲಕ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ. ಹೊಸ ರೆನಾಲ್ಟ್ ಕೆ-ಝಡ್ ಕಾರು, ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಮಾರುತಿ ವ್ಯಾಗನ್‍ಆರ್ ಎಲೆಕ್ಟ್ರಿಕ್ ಕಾರಿಗೆ ಪೈಪೋಟಿ ನೀಡಲಿದೆ.


Click it and Unblock the Notifications








