ಕಾರಿನ ಮೈಲೇಜ್ ಬಗ್ಗೆ ಸುಳ್ಳು ಹೇಳಿದ ಟಾಟಾ ಮೋಟಾರ್ಸ್‍‍ಗೆ ಬಿತ್ತು ದಂಡ

ಆನೇಕರು ಜಾಹಿರಾತುಗಳನ್ನು ನೋಡಿ ಮರಳಾಗಿ ಹೊಸ ಕಾರುಗಳನ್ನು ಖರೀದಿಸುತ್ತಾರೆ. ಅದೇ ರೀತಿ ಕೋಲ್ಕತ್ತಾದ ವ್ಯಕ್ತಿಯೊಬ್ಬರು ಕಾರಿನ ಜಾಹಿರಾತಿಗೆ ಮರಳಾಗಿ ಹೊಸ ಕಾರನ್ನು ಖರೀದಿಸಿ, ಮೋಸ ಹೋದ ನಂತರ ನ್ಯಾಯಾಲಯದ ಮೊರೆಹೋಗಿದ್ದಾರೆ.

ಕಾರಿನ ಮೈಲೇಜ್ ಬಗ್ಗೆ ಸುಳ್ಳು ಹೇಳಿದ ಟಾಟಾ ಮೋಟಾರ್ಸ್‍‍ಗೆ ಬಿತ್ತು ದಂಡ

ಕೋಲ್ಕತ್ತಾದ ಪ್ರದೀಪ್ತಾ ಕುಂದು ಅವರು 2011ರಲ್ಲಿ ಟಾಟಾ ಇಂಡಿಗೋ ಕಾರನ್ನು ಖರೀದಿಸಿದ್ದರು. ಟಾಟಾ ಮೋಟಾರ್ಸ್‍‍ನವರು ಜಾಹೀರಾತಿನಲ್ಲಿ ಈ ಕಾರು ಪ್ರತಿ ಲೀಟರಿಗೆ 25 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಹೇಳಿದ್ದರು. ಈ ಜಾಹೀರಾತನ್ನು ನೋಡಿ ಪ್ರದೀಪ್ತಾ ಅವರು ಇಂಡಿಗೋ ಕಾರನ್ನು ಖರೀದಿಸುತ್ತಾರೆ. ಕಂಪನಿಯು ಜಾಹೀರಾತಿನಲ್ಲಿ ಇಂಡಿಗೋ ದೇಶದ ಅತ್ಯಂತ ದಕ್ಷತೆಯ ಕಾರು ಮತ್ತು ಆಫರ್ ಸೀಮತ ಅವಧಿಗೆ ಮಾತ್ರ ಎಂದು ಹೇಳಿದ್ದರು. ಪ್ರದೀಪ್ತಾ ಅವರು ಕಾರು ಖರೀದಿಸಿದ ಬಳಿಕ ಕಂಪನಿಯು ಹೇಳಿದ ಮೈಲೇಜ್ ಲಭಿಸುವುದಿಲ್ಲ.

ಕಾರಿನ ಮೈಲೇಜ್ ಬಗ್ಗೆ ಸುಳ್ಳು ಹೇಳಿದ ಟಾಟಾ ಮೋಟಾರ್ಸ್‍‍ಗೆ ಬಿತ್ತು ದಂಡ

ಹಲವು ಬಾರಿ ಇದನ್ನು ಟೆಸ್ಟ್ ಮಾಡಿದರು ಕಾರು ಕಂಪನಿಯು ಹೇಳಿದ ಮೈಲೇಜ್ ನೀಡುವುದಿಲ್ಲ. ಇದರಿಂದ ನಿರಾಶೆಗೊಂಡ ಪ್ರದೀಪ್ತಾ ಕುಂದು ನಂತರ ಕಾರನ್ನು ಬದಲಿಸಲು ಕಂಪನಿಯನ್ನು ಸಂಪರ್ಕಿಸಿದರು. ಆದರೆ ಕಂಪನಿಯು ಅದನ್ನು ನಿರಾಕರಿಸುತ್ತಾರೆ. ಪ್ರದೀಪಾಗೆ ಕಾನೂನುನಿನ ಮೊರೆ ಹೋಗುವುದು ಬಿಟ್ಟು ಬೇರೆ ದಾರಿ ಇರಲಿಲ್ಲ.

ಕಾರಿನ ಮೈಲೇಜ್ ಬಗ್ಗೆ ಸುಳ್ಳು ಹೇಳಿದ ಟಾಟಾ ಮೋಟಾರ್ಸ್‍‍ಗೆ ಬಿತ್ತು ದಂಡ

ಇವರು ಇದಕ್ಕಾಗಿ ಗ್ರಾಹಕರ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ಈ ಘಟನೆಯ ಬಗ್ಗೆ ನ್ಯಾಯಲಯವು ವಿಚಾರಣೆ ನಡೆಸುತ್ತಿರುವ ವೇಳೆ ಗ್ರಾಹಕನಿಗೆ ಕಂಪನಿಯು ಮೋಸ ಮಾಡಿರುವುದು ತಿಳಿದು ಬರುತ್ತದೆ.

ಕಾರಿನ ಮೈಲೇಜ್ ಬಗ್ಗೆ ಸುಳ್ಳು ಹೇಳಿದ ಟಾಟಾ ಮೋಟಾರ್ಸ್‍‍ಗೆ ಬಿತ್ತು ದಂಡ

ಇದರಿಂದಾಗಿ ಗ್ರಾಹಕರ ನ್ಯಾಯಲಯವು ವಾಹನದ ವೆಚ್ಚ ರೂ.4.8 ಲಕ್ಷ ಮತ್ತು ರೂ.2 ಲಕ್ಷ ಪರಿಹಾರವನ್ನು ನೀಡಲು ಟಾಟಾ ಮೋಟಾರ್ಸ್ ಕಂಪನಿಗೆ ಆದೇಶ ನೀಡಿದೆ. ಭಾರತದಲ್ಲಿ ಹಲವಾರು ವಾಹನ ಉತ್ಪಾದನಾ ಕಂಪನಿಗಳು ತಮ್ಮ ಸರಣಿಯಲ್ಲಿರುವ ಕಾರುಗಳು ಇಂತಿಷ್ಟು ಮೈಲೇಜ್ ನೀಡುತ್ತದೆ ಎಂದು ಅವರು ಹೇಳುತ್ತಾರೆ.

ಕಾರಿನ ಮೈಲೇಜ್ ಬಗ್ಗೆ ಸುಳ್ಳು ಹೇಳಿದ ಟಾಟಾ ಮೋಟಾರ್ಸ್‍‍ಗೆ ಬಿತ್ತು ದಂಡ

ಆದರೆ ವಾಸ್ತವಾಗಿ ಗ್ರಾಹಕರು ಕಾರು ಖರೀದಿಸಿ ಚಲಾಯಿಸುವಾಗ ಅಷ್ಟು ಮೈಲೇಜ್ ಲಭಿಸುವುದಿಲ್ಲ. ಆದರೆ ಅಷ್ಟು ಮೈಲೇಜ್ ಲಭಿಸಲು ಕೆಲವು ಷರತ್ತುಗಳಿರುತ್ತವೆ. ವಾಹನ ಉತ್ಪಾದನಾ ಕಂಪನಿಯು ವಾಸ್ತವ ಮೈಲೇಜ್ ಮತ್ತು ಅಷ್ಟು ಮೈಲೇಜ್ ಲಭಿಸಲು ಇರುವ ಷರತ್ತುಗಳನ್ನು ಗ್ರಾಹಕರಿಗೆ ಸ್ಪಷ್ಟವಾಗಿ ತಿಳಿಸುವುದು ಉತ್ತಮವಾಗಿದೆ.

ಕಾರಿನ ಮೈಲೇಜ್ ಬಗ್ಗೆ ಸುಳ್ಳು ಹೇಳಿದ ಟಾಟಾ ಮೋಟಾರ್ಸ್‍‍ಗೆ ಬಿತ್ತು ದಂಡ

ಅಲ್ಲದೇ ಗ್ರಾಹಕರನ್ನು ಸೆಳೆಯಲು ಸುಳ್ಳುಗಳನ್ನು ಹೇಳಿದರೆ ಕಂಪನಿಯು ಗ್ರಾಹಕರ ನಂಬಿಕೆಯನ್ನು ಕಳೆದುಕೊಳ್ಳುತ್ತದೆ. ಮೊದಲ ತಲೆಮಾರಿನ ಟಾಟಾ ಇಂಡಿಗೋ ಕಾರನ್ನು 2002ರಲ್ಲಿ ಮೊದಲ ಭಾರಿಗೆ ಭಾರತದಲ್ಲಿ ಬಿಡುಗಡೆಗೊಳಿಸಿದ್ದರು. ಈ ಇಂಡಿಗೋ ಕಾರು 2006ರಲ್ಲಿ ಮೊದಲ ಪ್ರಮುಖ ನವೀಕರಣವನ್ನು ಹೊಂದಿತ್ತು. 2008ರಲ್ಲಿ ಇಂಡಿಗೋ ಇ‍‍ಸಿ‍ಎಸ್ ಮಾದರಿಯನ್ನು ಆರಂಭಿಸಲಾಯಿತು.

ಕಾರಿನ ಮೈಲೇಜ್ ಬಗ್ಗೆ ಸುಳ್ಳು ಹೇಳಿದ ಟಾಟಾ ಮೋಟಾರ್ಸ್‍‍ಗೆ ಬಿತ್ತು ದಂಡ

2010ರ ಟಾಟಾ ಇಂಡಿಗೋ ಕಾರಿನಲ್ಲಿ 1.4 ಲೀಟರ್ ಸಿ‍ಆರ್ 4 ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 70 ಬಿ‍ಹೆಚ್‍ಪಿ ಪವರ್ ಮತ್ತು 140 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ.

ಕಾರಿನ ಮೈಲೇಜ್ ಬಗ್ಗೆ ಸುಳ್ಳು ಹೇಳಿದ ಟಾಟಾ ಮೋಟಾರ್ಸ್‍‍ಗೆ ಬಿತ್ತು ದಂಡ

ಟಾಟಾ ಇಂಡಿಗೋ ಕಾರಿನ ಮಾರಾಟದಲ್ಲಿ ಇಳಿಕೆಯಾದ ನಂತರ ಟಿಯಾಗೋ ಮತ್ತು ಟಿಗೊರ್ ಕಾರುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿತ್ತು. ಈ ಎಲ್ಲಾ ಕಾರಣಕ್ಕೆ 2018ರಲ್ಲಿ ಭಾರತದಲ್ಲಿ ಇಂಡಿಕಾ ಮತ್ತು ಇಂಡಿಗೋ ಇಸಿ‍ಎಸ್ ಮಾದರಿಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದರು.

Most Read Articles

Kannada
English summary
Tata Motors ordered to pay Rs 3.5 L to customer over false mileage claim. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X