ಮಾರುತಿ ಎರ್ಟಿಗಾ ಕಾರಿಗೆ ಪ್ರತಿಸ್ಪರ್ಧಿಯಾಗಲಿದೆ ಟಾಟಾ ಹೊಸ ಎಂಪಿವಿ

ಟಾಟಾ ಮೋಟಾರ್ಸ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಎಂಪಿವಿಯನ್ನು ಪರಿಚಯಿಸಲು ಸಜ್ಜಾಗುತ್ತಿದೆ. ಮಾರುತಿ ಸುಜುಕಿ ಎರ್ಟಿಗಾ ಎಂಪಿವಿಗೆ ಟಕ್ಕರ್ ನೀಡಲು ಹೊಸ ಎಂಪಿವಿಯ ಉತ್ಪಾದನೆಗೆ ಮುಂದಾಗಿದೆ ಟಾಟಾ ಮೋಟಾರ್ಸ್ ಕಂಪನಿ.

ಮಾರುತಿ ಎರ್ಟಿಗಾಗೆ ಟಕ್ಕರ್ ನೀಡಲು ಹೊಸ ಎಂಪಿವಿ ಉತ್ಪಾದನೆಗೆ ಮುಂದಾದ ಟಾಟಾ

ಟೀಂ ಬಿಹೆಚ್‍ಪಿ ವರದಿಯ ಪ್ರಕಾರ ಈ ಹೊಸ ಎಂಪಿವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ 2022ರಲ್ಲಿ ಬಿಡುಗಡೆಗೊಳಿಸಬಹುದು. ಈ ವರ್ಷದ ಹಬ್ಬದ ಸೀಸನ್ ನಲ್ಲಿ ಈ ಹೊಸ ಟಾಟಾ ಎಂಪಿವಿಯ ಸ್ಪಾಟ್ ಟೆಸ್ಟ್ ಅನ್ನು ಪ್ರಾರಂಭಿಸಬಹುದು. ಮುಂಬರುವ ಹಾರ್ನ್‌ಬಿಲ್ ಮೈಕ್ರೊ-ಎಸ್‌ಯುವಿಯ ಸ್ಪಾಟ್ ಟೆಸ್ಟ್ ಅನ್ನು ಕೂಡ ಇದೇ ವೇಳೆಯಲ್ಲಿ ಪ್ರಾರಂಭಿಸಬಹುದು ಎಂದು ನಿರೀಕ್ಷಿಸಬಹುದು.

ಮಾರುತಿ ಎರ್ಟಿಗಾಗೆ ಟಕ್ಕರ್ ನೀಡಲು ಹೊಸ ಎಂಪಿವಿ ಉತ್ಪಾದನೆಗೆ ಮುಂದಾದ ಟಾಟಾ

ಮುಂಬರುವ ಟಾಟಾ ಎಂಪಿವಿಯಲ್ಲಿ ಏಳು ಮತ್ತು ಎಂಟು ಸೀಟುಗಳ ಆಯ್ಕೆಯ ಎಂಪಿವಿಯಾಗಿರಬಹುದು. ಇನ್ನು ಈ ಎಂಪಿವಿಯಲ್ಲಿ ಬ್ರ್ಯಾಂಡ್‌ನ ಇಂಪ್ಯಾಕ್ಟ್ 2.0 ವಿನ್ಯಾಸವನ್ನು ಹೊಂದಿರುತ್ತದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಮಾರುತಿ ಎರ್ಟಿಗಾಗೆ ಟಕ್ಕರ್ ನೀಡಲು ಹೊಸ ಎಂಪಿವಿ ಉತ್ಪಾದನೆಗೆ ಮುಂದಾದ ಟಾಟಾ

ಇನ್ನು ಈ ಎಂಪಿವಿಯ ಇಂಟಿರಿಯರ್ ನಲ್ಲಿ ಬ್ರ್ಯಾಂಡ್‌ನ ಕನೆಕ್ಟಿವಿಟಿ ತಂತ್ರಜ್ಞಾನವನ್ನು ಅಳವಡಿಸಬಹುದು. ಈ ಎಂಪಿವಿಯ ಇಂಟಿರಿಯರ್ ನಲ್ಲಿ ಸ್ಮಾರ್ಟ್‌ಫೋನ್ ಕೆನೆಕ್ಟಿವಿಟಿ, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಜೊತೆ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿರಲಿದೆ.

ಮಾರುತಿ ಎರ್ಟಿಗಾಗೆ ಟಕ್ಕರ್ ನೀಡಲು ಹೊಸ ಎಂಪಿವಿ ಉತ್ಪಾದನೆಗೆ ಮುಂದಾದ ಟಾಟಾ

ಹೊಸ ಟಾಟಾ ಎಂಪಿವಿಯನ್ನು ಡೀಸೆಲ್ ಎಂಜಿನ್ ನೊಂದಿಗೆ ಬಿಡುಗಡೆಗೊಳಿಸಬಹುದು. ಈ ಎಂಪಿವಿಯಲ್ಲಿ ನೆಕ್ಸಾನ್ ನಲ್ಲಿರುವ ಮಾದರಿಯ 1.5-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಬಹುದು. ಈ ಎಂಜಿನ್ 108 ಬಿಹೆಚ್‌ಪಿ ಮತ್ತು ಟಾರ್ಕ್ 260 ಎನ್ಎಂ ಉತ್ಪಾದಿಸುತ್ತದೆ.

MOST READ: ಅನಾವರಣವಾಯ್ತು ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಫೇಸ್‍‍ಲಿಫ್ಟ್ ಎಸ್‍ಯುವಿ

ಮಾರುತಿ ಎರ್ಟಿಗಾಗೆ ಟಕ್ಕರ್ ನೀಡಲು ಹೊಸ ಎಂಪಿವಿ ಉತ್ಪಾದನೆಗೆ ಮುಂದಾದ ಟಾಟಾ

ಈ ಎಂಪಿವಿಯಲ್ಲಿ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿರುವುದಿಲ್ಲ ಎಂದು ನಿರೀಕ್ಷಿಸುತ್ತೇವೆ. ಇನ್ನು ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ನೀಡಿದರೆ 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಬಹುದು.

ಮಾರುತಿ ಎರ್ಟಿಗಾಗೆ ಟಕ್ಕರ್ ನೀಡಲು ಹೊಸ ಎಂಪಿವಿ ಉತ್ಪಾದನೆಗೆ ಮುಂದಾದ ಟಾಟಾ

ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಟಾಟಾ ಎಂಪಿವಿ ನೇರವಾಗಿ ಮಾರುತಿ ಸುಜುಕಿ ಎರ್ಟಿಗಾ ಮತ್ತು ಮತ್ತು ಮಹೀಂದ್ರಾ ಮರಾಜೋಗೆ ಪೈಪೋಟಿಯನ್ನು ನೀಡುತ್ತದೆ. ಶೀಘ್ರದಲ್ಲೇ ಹ್ಯುಂಡೈ ಮತ್ತು ಕಿಯಾ ಕಂಪನಿಗಳು ಕೂಡ ಹೊಸ ಎಂಪಿವಿಗಳನ್ನು ಬಿಡುಗಡೆಗೊಳಿಸಲಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಮಾರುತಿ ಎರ್ಟಿಗಾಗೆ ಟಕ್ಕರ್ ನೀಡಲು ಹೊಸ ಎಂಪಿವಿ ಉತ್ಪಾದನೆಗೆ ಮುಂದಾದ ಟಾಟಾ

ಇನ್ನು ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಡಿಸಿಟಿ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಿದೆ. ಟಾಟಾ ಕಂಪನಿಯು ನೆಕ್ಸಾನ್ ಡಿಸಿಟಿ ಆವೃತ್ತಿಯನ್ನು ಭಾರತದಲ್ಲಿ ಇತ್ತೀಚೆಗೆ ಸ್ಪಾಟ್ ಟೆಸ್ಟ್ ನಡೆಸಲಾಗಿತ್ತು.

ಮಾರುತಿ ಎರ್ಟಿಗಾಗೆ ಟಕ್ಕರ್ ನೀಡಲು ಹೊಸ ಎಂಪಿವಿ ಉತ್ಪಾದನೆಗೆ ಮುಂದಾದ ಟಾಟಾ

ಮಾರುತಿ ಸುಜುಕಿ ಎರ್ಟಿಗಾ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಮಾದರಿಗಳಲ್ಲಿ ಒಂದಾಗಿದೆ. ಈ ಎಂಪಿವಿಗೆ ಭಾರತೀಯ ಮಾರುಕಟ್ಟೆಯಲ್ಲಿ ನೇರವಾದ ಪ್ರತಿಸ್ಪರ್ಧಿಯನ್ನು ಹೊಂದಿಲ್ಲ. ಆದರೆ ಟಾಟಾ ಮೋಟಾರ್ಸ್ ಕಂಪನಿಯು ಎರ್ಟಿಗಾ ಎಂಪಿಗೆ ನೇರ ಪೈಪೋಟಿಯನ್ನು ನೀಡಲು ಹೊಸ ಎಂಪಿವಿ ಉತ್ಪಾದಿಸಲು ಮುಂದಾಗಿದೆ

Most Read Articles

Kannada
English summary
Tata Motors To Introduce An MPV To Rival Maruti Suzuki Ertiga: Here Are All Details. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X