ಹೊಸ ವಿನ್ಯಾಸದ ಫ್ರಂಟ್ ಗ್ರಿಲ್ ಪಡೆದುಕೊಳ್ಳಲಿದೆ ಟಾಟಾ ನೆಕ್ಸಾನ್

ಟಾಟಾ ಮೋಟಾರ್ಸ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರು ಮಾದರಿಗಳ ತಾಂತ್ರಿಕ ಅಂಶಗಳ ಸೌಲಭ್ಯದಲ್ಲಿ ನಿರಂತರವಾಗಿ ಬದಲಾವಣೆಗೊಳಿಸುತ್ತಿದ್ದು, 2020ರ ಹೊಸ ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲೂ ಇದೀಗ ಕೆಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ನೀಡಲು ಮುಂದಾಗಿದೆ.

ಹೊಸ ವಿನ್ಯಾಸದ ಫ್ರಂಟ್ ಗ್ರಿಲ್ ಪಡೆದುಕೊಳ್ಳಲಿದೆ ಟಾಟಾ ನೆಕ್ಸಾನ್

2020ರ ನೆಕ್ಸಾನ್ ಮಾದರಿಯ ಮುಂಭಾಗದ ಗ್ರಿಲ್ ವಿನ್ಯಾಸದಲ್ಲಿ ಪ್ರಮುಖ ಬದಲಾವಣೆ ತರುತ್ತಿರುವ ಟಾಟಾ ಕಂಪನಿಯು ಟ್ರಿ-ಆರೋವ್ ಬದಲಾಗಿ ಹೊಸದಾಗಿ ವಿನ್ಯಾಸಗೊಳಿಸಿದ ಬಿ-ಆರೋವ್ ವಿನ್ಯಾಸದ ಗ್ರಿಲ್ ವಿನ್ಯಾಸವನ್ನು ಜೋಡಣೆ ಮಾಡಲಿದ್ದು, ಶೀಘ್ರದಲ್ಲೇ ಟಾಟಾ ಕಂಪನಿಯು ಹೊಸ ಗ್ರಿಲ್ ಸೌಲಭ್ಯವನ್ನು ಹೊಂದಿರುವ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಮಾಹಿತಿಗಳ ಪ್ರಕಾರ ಗೊಸ ಗ್ರಿಲ್ ವಿನ್ಯಾಸವು ನೆಕ್ಸಾನ್ ಟಾಪ್ ಎಂಡ್ ಮಾದರಿಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿರಲಿದ್ದು, ಇನ್ನುಳಿದ ಮಾದರಿಗಳಲ್ಲಿ ಸ್ಟ್ಯಾಂಡರ್ಡ್ ಗ್ರಿಲ್ ವಿನ್ಯಾಸ ಹೊಂದಿರಲಿದೆ.

ಹೊಸ ವಿನ್ಯಾಸದ ಫ್ರಂಟ್ ಗ್ರಿಲ್ ಪಡೆದುಕೊಳ್ಳಲಿದೆ ಟಾಟಾ ನೆಕ್ಸಾನ್

ಟ್ರಿ-ಆರೋವ್ ವಿನ್ಯಾಸಕ್ಕಿಂತಲೂ ಭಿನ್ನವಾದ ವಿನ್ಯಾಸ ಹೊಂದಿರುವ ಬಿ-ಆರೋವ್ ಗ್ರಿಲ್ ವಿನ್ಯಾಸವು ನೆಕ್ಸಾನ್ ಟಾಪ್ ಎಂಡ್ ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಗಳಲ್ಲೂ ಖರೀದಿ ಲಭ್ಯವಿರಲಿದ್ದು, ಕಾರಿನ ಸ್ಪೋರ್ಟಿ ವಿನ್ಯಾಸವನ್ನು ಹೆಚ್ಚಿಸಲು ಹೊಸ ಗ್ರಿಲ್ ವಿನ್ಯಾಸವನ್ನು ನೀಡಲಾಗುತ್ತಿದೆ.

ಹೊಸ ವಿನ್ಯಾಸದ ಫ್ರಂಟ್ ಗ್ರಿಲ್ ಪಡೆದುಕೊಳ್ಳಲಿದೆ ಟಾಟಾ ನೆಕ್ಸಾನ್

ಇನ್ನು ಟಾಟಾ ಮೋಟಾರ್ಸ್ ಸರಣಿ ಕಾರು ಮಾದರಿಗಳ ಪಟ್ಟಿಯಲ್ಲಿ ನೆಕ್ಸಾನ್ ಕಂಪ್ಯಾಕ್ಟ್ ಎಸ್‍ಯುವಿಯು ಅಗ್ರಸ್ಥಾನದಲ್ಲಿದ್ದು, ಕಳೆದ ತಿಂಗಳ ಹಿಂದಷ್ಟೇ ನೆಕ್ಸಾನ್ ಮಾದರಿಯಲ್ಲಿ ಎಕ್ಸ್‌ಎಂ(ಎಸ್) ಎಂಬ ಹೊಸ ವೆರಿಯೆಂಟ್ ಅನ್ನು ಬಿಡುಗಡೆಗೊಳಿಸಿತ್ತು.

ಹೊಸ ವಿನ್ಯಾಸದ ಫ್ರಂಟ್ ಗ್ರಿಲ್ ಪಡೆದುಕೊಳ್ಳಲಿದೆ ಟಾಟಾ ನೆಕ್ಸಾನ್

ಮಧ್ಯಮ ಕ್ರಮಾಂಕದಲ್ಲಿ ಮಾರಾಟವಾಗಲಿರುವ ಎಕ್ಸ್‌ಎಂ(ಎಸ್) ವೆರಿಯೆಂಟ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುತ್ತಿದ್ದು, ಹೊಸ ನೆಕ್ಸಾನ್ ಎಕ್ಸ್‌ಎಂ(ಎಸ್) ಆರಂಭಿಕೆ ಬೆಲೆಯು ರೂ.8.36 ಲಕ್ಷಗಳಾಗಿದೆ. ನೆಕ್ಸಾನ್ ಹೊಸ ಎಕ್ಸ್‌ಎಂ(ಎಸ್) ವೆರಿಯೆಂಟ್ ನೆಕ್ಸಾನ್ ಸರಣಿಯ ಎಕ್ಸ್‌ಇ ಮತ್ತು ಎಕ್ಸ್‌ಎಂ ವೆರಿಯೆಂಟ್‌ಗಳಿಗಿಂತಲೂ ಉನ್ನತ ಮಾದರಿಯಾಗಿದ್ದು, ಎಕ್ಸ್‌ಎಂ(ಎಸ್) ವೆರಿಯೆಂಟ್‌ಗಳಲ್ಲಿ ಹೊಸದಾಗಿ ಎಲೆಕ್ಟ್ರಿಕ್ ಸನ್‌ರೂಫ್ ಸೌಲಭ್ಯ ನೀಡಲಾಗಿದೆ.

ಹೊಸ ವಿನ್ಯಾಸದ ಫ್ರಂಟ್ ಗ್ರಿಲ್ ಪಡೆದುಕೊಳ್ಳಲಿದೆ ಟಾಟಾ ನೆಕ್ಸಾನ್

ಎಲೆಕ್ಟ್ರಿಕ್ ಸನ್‌ರೂಫ್ ಸೇರ್ಪಡೆಯ ಹೊರತಾಗಿ ಹೊಸ ನೆಕ್ಸಾನ್ ಎಕ್ಸ್‌ಎಂ(ಎಸ್) ವರಿಯೆಂಟ್‌ನಲ್ಲಿ ಹಲವು ಪ್ರೀಮಿಯಂ ಫೀಚರ್ ಗಳನ್ನು ಹೊಂದಿದ್ದು, ಎಕ್ಸ್‌ಎಂ(ಎಸ್) ವೆರಿಯೆಂಟ್‌ನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್, ರೈನ್-ಸೆನ್ಸಿಂಗ್ ವೈಪರ್‌ಗಳು ಮತ್ತು ಸ್ಟೀಯರಿಂಗ್-ಮೌಂಟೆಡ್ ಕಂಟ್ರೋಲ್ ಗಳನ್ನು ಒಳಗೊಂಡಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಹೊಸ ವಿನ್ಯಾಸದ ಫ್ರಂಟ್ ಗ್ರಿಲ್ ಪಡೆದುಕೊಳ್ಳಲಿದೆ ಟಾಟಾ ನೆಕ್ಸಾನ್

ಬಿಎಸ್-6 ಎಮಿಷನ್ ನಂತರ ಹಲವಾರು ಬದಲಾವಣೆಗಳೊಂದಿಗೆ ಮಾರಾಟವಾಗುತ್ತಿರುವ ನೆಕ್ಸಾನ್ ಕಾರು ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 12.69 ಲಕ್ಷ ಬೆಲೆ ಹೊಂದಿದೆ.

ಹೊಸ ವಿನ್ಯಾಸದ ಫ್ರಂಟ್ ಗ್ರಿಲ್ ಪಡೆದುಕೊಳ್ಳಲಿದೆ ಟಾಟಾ ನೆಕ್ಸಾನ್

ವಿವಿಧ ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಬರೋಬ್ಬರಿ 36 ವೆರಿಯೆಂಟ್ಸ್ ಹೊಂದಿರುವ ನೆಕ್ಸಾನ್ ಕಾರು ಮಾದರಿಯು ಬಿಎಸ್-6 ಪ್ರೇರಣೆಯ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಂಡಿದ್ದು, ಬಹುತೇಕ ವೆರಿಯೆಂಟ್‌ಗಳಲ್ಲಿ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯ ಸೌಲಭ್ಯವನ್ನು ನೀಡಲಾಗಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಹೊಸ ವಿನ್ಯಾಸದ ಫ್ರಂಟ್ ಗ್ರಿಲ್ ಪಡೆದುಕೊಳ್ಳಲಿದೆ ಟಾಟಾ ನೆಕ್ಸಾನ್

1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮಾದರಿಯು 118-ಬಿಹೆಚ್‍ಪಿ ಮತ್ತು 170 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಿದ್ದಲ್ಲಿ 1.5-ಲೀಟರ್ ಡೀಸೆಲ್ ಎಂಜಿನ್ ಮಾದರಿಯು 108-ಬಿಹೆಚ್‍ಪಿ ಮತ್ತು 260-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

Most Read Articles

Kannada
English summary
Tata Nexon To Get New Grille Design Soon. Read in Kannada.
Story first published: Monday, September 28, 2020, 16:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X