ಹ್ಯಾರಿಯರ್ ಎಸ್‍ಯುವಿಯ ಹೊಸ ಟಿವಿಸಿ ಬಿಡುಗಡೆಗೊಳಿಸಿದ ಟಾಟಾ

ಟಾಟಾ ಹ್ಯಾರಿಯರ್ ಭಾರತೀಯ ಮಾರುಕಟ್ಟೆಯ ಎಸ್‍ಯುವಿಗಳ ವಿಭಾಗದಲ್ಲಿ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ. ಟಾಟಾ ಕಂಪನಿಯು ಹೂಸ ಹ್ಯಾರಿಯರ್ ಎಸ್‍ಯುವಿಯ ಆಕರ್ಷಕ ಟಿವಿಸಿಯನ್ನು ಬಿಡುಗಡೆಗೊಳಿಸಿದೆ.

ಹ್ಯಾರಿಯರ್ ಎಸ್‍ಯುವಿಯ ಹೊಸ ಟಿವಿಸಿ ಬಿಡುಗಡೆಗೊಳಿಸಿದ ಟಾಟಾ

ಟಾಟಾ ಮೋಟಾರ್ಸ್ ಕಂಪನಿಯು ಕಳೆದ ವರ್ಷ ಒಮೆಗಾ-ಎಆರ್ಸಿ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಹ್ಯಾರಿಯರ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿದ್ದರು. ಈ ಹೊಸ ಎಸ್‍ಯುವಿಯನ್ನು ಈ ವರ್ಷದ ಆರಂಭದಲ್ಲಿ ಹೆಚ್ಚು ಪವರ್ ಫುಲ್ ಎಂಜಿನ್‌ನೊಂದಿಗೆ ನವೀಕರಿಸಲಾಗಿತ್ತು. ಮಾರಾಟ ಪಟ್ಟೆಯಲ್ಲಿ ದಾಖಲೆಯ ಮಟ್ಟದಲ್ಲಿ ಮಾರಾಟವಾಗದಿದ್ದರೂ ಈ ಎಸ್‍ಯುವಿಯು ಬಹಳಷ್ಟು ಗ್ರಾಹಕರನ್ನು ಆಕರ್ಷಸಿತು. ಇತ್ತೀಚೆಗೆ ಹ್ಯಾರಿಯರ್ ಎಸ್‍ಯುವಿಯ ಎಕ್ಸ್‌ಟಿ ಪ್ಲಸ್ ಎನ್ನುವ ವೆರಿಯೆಂಟ್‌ವೊಂದನ್ನು ಬಿಡುಗಡೆಗೊಳಿಸಿತು.

ಹ್ಯಾರಿಯರ್ ಎಸ್‍ಯುವಿಯ ಹೊಸ ಟಿವಿಸಿ ಬಿಡುಗಡೆಗೊಳಿಸಿದ ಟಾಟಾ

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಹೊಸ ಹ್ಯಾರಿಯರ್ ಎಕ್ಸ್‌ಟಿ ಪ್ಲಸ್ ಎಸ್‍ಯುವಿಯ ಟಿವಿಸಿಯನ್ನು ಹಂಚಿಕೊಂಡಿದೆ. ಈ ಎಕ್ಸ್‌ಟಿ ಪ್ಲಸ್ ವೆರಿಯೆಂಟ್ ನಲ್ಲಿ ಪನೋರಮಿಕ್ ಸನ್‌ರೂಫ್ ಫೀಚರ್ ಅನ್ನು ಪಡೆದುಕೊಂಡಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹ್ಯಾರಿಯರ್ ಎಸ್‍ಯುವಿಯ ಹೊಸ ಟಿವಿಸಿ ಬಿಡುಗಡೆಗೊಳಿಸಿದ ಟಾಟಾ

ಟಿವಿಸಿ ವೀಡಿಯೋದಲ್ಲಿ ಹ್ಯಾರಿಯರ್ ಎಕ್ಸ್‌ಟಿ ಪ್ಲಸ್ ಎಸ್‍ಯುವಿಯನ್ನು ರಾತ್ರಿ ವೇಳೆ ಮಹಿಳೆಯೊಬ್ಬಳು ಪಟ್ಟಣದ ಸಮೀಪವಿರುವ ಬೆಟ್ಟದ ಮೇಲ್ಭಾಗದಲ್ಲಿ ನಿಲ್ಲಿಸುತ್ತಾರೆ. ಅಲ್ಲಿಂದ ಪಟ್ಟಣದ ಸೊಬಗಿನ ನಡುವೆ ಎಸ್‍ಯುವಿಯ ಸನ್‌ರೂಫ್ ಅನ್ನು ತೆರೆಯುತ್ತಾರೆ.

ಹ್ಯಾರಿಯರ್ ಎಸ್‍ಯುವಿಯ ಹೊಸ ಟಿವಿಸಿ ಬಿಡುಗಡೆಗೊಳಿಸಿದ ಟಾಟಾ

ಒತ್ತಡ ಜೀವನದಲ್ಲಿ ಅವರು ಪಟ್ಟಣದ ಸೊಬಗನ್ನು ಹ್ಯಾರಿಯರ್ ಎಕ್ಸ್‌ಟಿ ಪ್ಲಸ್ ಎಸ್‍ಯುವಿಯ ಸನ್‌ರೂಫ್ ತೆರೆದು ಸವಿಯುತ್ತಾರೆ. ಈ ಟಿವಿಸಿಯಲ್ಲಿ ಓಪನ್ ಅಪ್ ಲೈಫ್ ಎಂಬ ಟೈಟಲ್ ಅನ್ನು ನೀಡಲಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಹ್ಯಾರಿಯರ್ ಎಸ್‍ಯುವಿಯ ಹೊಸ ಟಿವಿಸಿ ಬಿಡುಗಡೆಗೊಳಿಸಿದ ಟಾಟಾ

ಹ್ಯಾರಿಯರ್ ಎಸ್‍ಯುವಿಯ ಹೊರಭಾಗವು ಬೋಲ್ಡ್ ಲುಕ್ ಅನ್ನು ಹೊಂದಿದೆ. ಈ ಎಸ್‍ಯುವಿಯಲ್ಲಿ ಡ್ಯುಯಲ್ ಫಂಕ್ಷನ್ ಎಲ್ಇಡಿ ಡಿಆರ್ಎಲ್ಗಳು, ಬಂಪರ್ ನಲ್ಲಿ ಅಳವಡಿಸಲಾದ ಹೆಡ್ ಲ್ಯಾಂಪ್ ಮತ್ತು ಮಸ್ಕ್ಯುಲರ್ ಫ್ರಂಟ್ ಗ್ರಿಲ್ ಎಲ್ಲವೂ ಆಕರ್ಷಕ ಲುಕ್ ಅನ್ನು ನೀಡುತ್ತದೆ.

ಹ್ಯಾರಿಯರ್ ಎಸ್‍ಯುವಿಯ ಹೊಸ ಟಿವಿಸಿ ಬಿಡುಗಡೆಗೊಳಿಸಿದ ಟಾಟಾ

ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುವಾಗ ಈ ಎಸ್‍ಯುವಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಇದರಲ್ಲಿ ಮರುವಿನ್ಯಾಸಗೊಳಿಸಲಾದ ಒ‍ಆರ್‍‍ವಿ‍ಎಂ ಅನ್ನು ಹೊಂದಿದೆ. ಇನ್ನೊಂದು ಬದಲಾವಣೆಯೆಂದರೆ ಡ್ಯುಯಲ್ ಟೋನ್ ಡೈಮಂಡ್ ಕಟ್ ಅಲಾಯ್ ವ್ಹೀಲ್ ಗಳನ್ನು ಅಳವಡಿಸಿದೆ. ಇನ್ನು ಹೊಸದಾಗಿ ಪನೋರಮಿಕ್ ಸನ್‌ರೂಫ್ ಫೀಚರ್ ಅನ್ನು ಪಡೆದುಕೊಂಡಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಟಾಟಾ ಹ್ಯಾರಿಯರ್ ಎಸ್‍ಯುವಿಯು ಡೀಸೆಲ್ ಎಂಜಿನ್‌ನೊಂದಿಗೆ ಮಾತ್ರ ಲಭ್ಯವಿದೆ. ಟಾಟಾ ಹ್ಯಾರಿಯರ್ ಎಸ್‍ಯುವಿಯಲ್ಲಿ 2.0 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಹ್ಯಾರಿಯರ್ ಎಸ್‍ಯುವಿಯ ಹೊಸ ಟಿವಿಸಿ ಬಿಡುಗಡೆಗೊಳಿಸಿದ ಟಾಟಾ

ಈ ಎಂಜಿನ್ 170 ಬಿಹೆಚ್‍ಪಿ ಮತ್ತು 350 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇನ್ನು ಈ ಹ್ಯಾರಿಯರ್ ಎಸ್‍ಯುವಿಯಲ್ಲಿ ಹೊಸದಾಗಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ.

ಹ್ಯಾರಿಯರ್ ಎಸ್‍ಯುವಿಯ ಹೊಸ ಟಿವಿಸಿ ಬಿಡುಗಡೆಗೊಳಿಸಿದ ಟಾಟಾ

ಹ್ಯಾರಿಯರ್ ಎಸ್‌ಯುವಿಯಲ್ಲಿ ಸುರಕ್ಷತೆಗಾಗಿ ಏರ್‍‍ಬ್ಯಾಗ್‍ಗಳು, ಐಎಸ್ಒ ಚೈಲ್ಡ್ ಸೀಟ್ ಮೌಂಟ್ಸ್, ಹಿಲ್-ಹೋಲ್ಡ್, ಹಿಲ್ ಡಿಸ್ಸೆಂಟ್ ರೋಲ್-ಓವರ್, ಕಾರ್ನರಿಂಗ್ ಸ್ಟ್ಯಾಬಿಲಿಟಿ ಕಂಟ್ರೋಲ್ ಟ್ರಾಕ್ಷನ್, ಕಂಟ್ರೋಲ್ ಹೈಡ್ರಾಲಿಕ್ ಬ್ರೇಕ್ ಅಸಿಸ್ಟ್ ಗಳನ್ನು ಒಳಗೊಂಡಿದೆ.

Most Read Articles

Kannada
English summary
Tata Harrier New TVC released. Read In Kannada.
Story first published: Saturday, October 24, 2020, 14:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X