ರಾಷ್ಟ್ರಪತಿಗಳ ಗರುಡ ಕಾರಿನ ಮಾದರಿಯನ್ನು ವಿನ್ಯಾಸಗೊಳಿಸಿದ ವಿದ್ಯಾರ್ಥಿಗಳು

2020ರ ಆಟೋ ಎಕ್ಸ್ ಪೋದಲ್ಲಿ ಟಾಟಾ ಮೋಟಾರ್ಸ್, ಎಲೆಕ್ಟ್ರಿಕ್ ಮತ್ತು ಸಾಮಾನ್ಯ ಕಾರುಗಳನ್ನು ಪ್ರದರ್ಶಿಸಿತ್ತು. ಇದರೊಂದಿಗೆ ಟಾಟಾ ಮೋಟಾರ್ಸ್ ಒಂದೆರಡು ಕಾನ್ಸೆಪ್ಟ್ ವಾಹನಗಳನ್ನು ಪ್ರದರ್ಶಿಸಿತ್ತು. ಆದರೆ ಇದರಲ್ಲಿ ಹೆಚ್ಚಿನ ಜನರ ಗಮನಸೆಳೆದಿದ್ದು ರಾಷ್ಟ್ರಪತಿಗಳು ಬಳಸುವ ಗರುಡ ಮಾದರಿಯ ಕಾರು.

ರಾಷ್ಟ್ರಪತಿಗಳ ಗರುಡ ಕಾರಿನ ಮಾದರಿಯನ್ನು ವಿನ್ಯಾಸಗೊಳಿಸಿದ ವಿದ್ಯಾರ್ಥಿಗಳು

2020ರ ಆಟೋ ಎಕ್ಸ್ ಪೋದಲ್ಲಿ ಟಾಟಾ ಮೋಟಾರ್ಸ್‍ನ ಸ್ಟಾಲ್‍‍ನಲ್ಲಿ ರಾಷ್ಟ್ರಪತಿಯವರು ಬಳಸುವ ಗರುಡ ಮಾದರಿಯ ಕಾರನ್ನು ಕಂಡು ಎಲ್ಲರಿಗೂ ಅಚ್ಚರಿಯಾಗಿತ್ತು. ರಾಷ್ಟ್ರಪತಿಯವರು ಬಳಸುವ ಕಾರನ್ನು ಹೆಚ್ಚಿನ ಜನರು ನೋಡಿರಲಿಲ್ಲ. ಆದರೆ ಆಟೋ ಎಕ್ಸ್ ಪೋದಲ್ಲಿ ಗರುಡ ಕಾರಿನ ಕಾನ್ಸೆಪ್ಟ್ ಕಂಡು ಬೆರಗಾದರು. ಇನ್ನೊಂದು ಅಚ್ಚರಿಯ ವಿಷಯವೆಂದರೆ ಗರುಡ ಕಾರನ್ನು ಎಲ್ಲರಿಗೂ ನೋಡಲು ಅವಕಾಶ ಸಿಕ್ಕಿರುವುದು ಪ್ರೀಮಿಯರ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್‍‍ನ (ಎನ್‌ಐಡಿ) ಪ್ರತಿಭಾವಂತ ವಿದ್ಯಾರ್ಥಿಗಳಿಂದ.

ರಾಷ್ಟ್ರಪತಿಗಳ ಗರುಡ ಕಾರಿನ ಮಾದರಿಯನ್ನು ವಿನ್ಯಾಸಗೊಳಿಸಿದ ವಿದ್ಯಾರ್ಥಿಗಳು

ಹೌದು, ಅದು ಹೇಗೆ ಅಂದರೆ ಜಗತ್ತಿನ ವಿವಿಧ ದೇಶಗಳ ಅಧ್ಯಕ್ಷರಿಗೆ ಮೀಸಲಾಗಿರುವ ಗರುಡ ಕಾರಿನ ಕಾನ್ಸೆಪ್ಟ್ ಕಾರಿನ ವಿನ್ಯಾಸವನ್ನು ಎನ್‍ಐಡಿ ವಿದ್ಯಾರ್ಥಿಗಳು ಅಭಿವೃದ್ದಿಪಡಿಸಿದ್ದಾರೆ. ಎನ್‍ಐಡಿ ವಿದ್ಯಾರ್ಥಿಗಳು ವಿನ್ಯಾಸಗೊಳಿಸಿದ ಮಾದರಿಯಲ್ಲಿ ಈ ಗರುಡ ಕಾನ್ಸೆಪ್ಟ್ ಕಾರನ್ನು ತಯಾರಿಸಲಾಗಿದೆ.

ರಾಷ್ಟ್ರಪತಿಗಳ ಗರುಡ ಕಾರಿನ ಮಾದರಿಯನ್ನು ವಿನ್ಯಾಸಗೊಳಿಸಿದ ವಿದ್ಯಾರ್ಥಿಗಳು

ಪ್ರಸ್ತುತ ಟಾಟಾ ಮೋಟಾರ್ಸ್‍‍ನ ಉಪಾಧ್ಯಕ್ಷರಾಗಿರುವ ಪ್ರತಾಪ್ ಬೋಸ್‍‍ರವರು ಎನ್‍ಐ‍ಡಿಯ ಹಳೆಯ ವಿದ್ಯಾರ್ಥಿ ಎಂಬುದನ್ನು ಗಮನಿಸಬೇಕು. ಟೈಮ್ಸ್ ನೌ ಪ್ರಕಾರ, ವಿದ್ಯಾರ್ಥಿಗಳು ಗರುಡ ಕಾನ್ಸೆಪ್ಟ್ ಸ್ಕೇಲ್ ಮಾದರಿಯ ಲಿಮೋಸಿನ್ ಕಾರಿನ ಮಾದರಿಯಲ್ಲಿ ವಿನ್ಯಾಸಗೊಳಿಸಿದ್ದಾರೆ.

ರಾಷ್ಟ್ರಪತಿಗಳ ಗರುಡ ಕಾರಿನ ಮಾದರಿಯನ್ನು ವಿನ್ಯಾಸಗೊಳಿಸಿದ ವಿದ್ಯಾರ್ಥಿಗಳು

ಈ ಕಾರು ಟಾಟಾದ ಇತ್ತೀಚಿನ ಇಂಪ್ಯಾಕ್ಟ್ ವಿನ್ಯಾಸವನ್ನು ಆಧರಿಸಿದೆ. ಟಾಟಾ ಮೋಟಾರ್ಸ್‍ನ ಸಿಯೆರಾ ಮತ್ತು ಹೆಚ್‍‍ಬಿಎಕ್ಸ್ ಸೇರಿದಂತೆ ನೂತನ ಕಾರುಗಳು ಇದೇ ವಿನ್ಯಾಸವನ್ನು ಹೊಂದಿವೆ. ಸ್ಕೇಲ್ ಮಾದರಿಯ ಗರುಡ ಮಾದರಿಯ ಕಾರು ಸ್ಲಿಕ್ ಹೆಡ್‍‍ಲ್ಯಾಂಪ್ ಕ್ಲಸ್ಟರ್ ಅನ್ನು ಹೊಂದಿದೆ.

ರಾಷ್ಟ್ರಪತಿಗಳ ಗರುಡ ಕಾರಿನ ಮಾದರಿಯನ್ನು ವಿನ್ಯಾಸಗೊಳಿಸಿದ ವಿದ್ಯಾರ್ಥಿಗಳು

ಈ ಕಾರಿನಲ್ಲಿ 26 ಇಂಚಿನ ಸ್ಪೋಕ್ ಅಲಾಯ್ ವ್ಹೀಲ್‍‍ಗಳನ್ನು ಅಳವಡಿಸಲಾಗಿದೆ. ಇದು ಲಿಮೋಸಿನ್‍‍ನ ಲುಕ್ ಅನ್ನು ಹೊಂದಿದೆ. ಈ ಕಾರಿನ ಸುತ್ತಲೂ ಟಾಟಾ ಬ್ಯಾಡ್ಜಿಂಗ್ ಅನ್ನು ಅಳವಡಿಸಲಾಗಿದೆ. ರಾಷ್ಟ್ರಪತಿಗಳು ಬಳಸುವ ವಾಹನ ಮಾದರಿಯಾಗಿರುವುದರಿಂದ ಮುಂಭಾಗದಲ್ಲಿ ಅಶೋಕ ಸ್ಥಂಭವನ್ನು ಇರಿಸಲಾಗಿದೆ.

ರಾಷ್ಟ್ರಪತಿಗಳ ಗರುಡ ಕಾರಿನ ಮಾದರಿಯನ್ನು ವಿನ್ಯಾಸಗೊಳಿಸಿದ ವಿದ್ಯಾರ್ಥಿಗಳು

ಕಾರಿನ ಹಿಂಭಾಗದಲ್ಲಿಎಲ್‍ಇಡಿ ಲ್ಯಾಂಪ್ ಮತ್ತು ಟೇಲ್ ಲ್ಯಾಂಪ್ ಅನ್ನು ಹೊಂದಿದೆ. ಈ ಕಾರಿನ ಉದ್ದಕ್ಕೂ ನೀಲಿ ಬಣ್ಣವನ್ನು ಹೊಂದಿರುವುದರಿಂದ ಆಕರ್ಷಕವಾಗಿದೆ. ಅಮೇರಿಕಾ ಮತ್ತು ರಷ್ಯಾದಂತಹ ದೇಶಗಳ ಅಧ್ಯಕ್ಷರು ಒಂದೇ ದೇಶಕ್ಕೆ ಸೇರಿದ ಉತ್ಪಾದಕರಿಂದ ತಯಾರಿಸಲ್ಪಟ ಕಸ್ಟಮೈಸ್ ಮಾಡಿದ ವಾಹನಗಳಲ್ಲಿ ಬಳಸುತ್ತಾರೆ ಎಂಬುದನ್ನು ಗಮನಿಸಬೇಕು.

ರಾಷ್ಟ್ರಪತಿಗಳ ಗರುಡ ಕಾರಿನ ಮಾದರಿಯನ್ನು ವಿನ್ಯಾಸಗೊಳಿಸಿದ ವಿದ್ಯಾರ್ಥಿಗಳು

ಅಮೇರಿಕಾದ ಅಧ್ಯಕ್ಷ ಬಳಸುವುದು ಕ್ಯಾಡಿಲಾಕ್ ಒನ್ ಎಕೆ‍ಎ ದಿ ಬೀಸ್ಟ್ ಎಂಬ ಕಾರನ್ನು ಜನರಲ್ ಮೋಟಾರ್ಸ್‍‍‍ನವರು ತಯಾರಿಸಿದ್ದಾರೆ. ಇದು ವಿಶ್ವದ ಸುರಕ್ಷಿತ ವಾಹನಗಳಲ್ಲಿ ಒಂದಾಗಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇತ್ತೀಚೆಗೆ ಅರಸ್ ಸೆನಾಟ್ ಲಿಮೋಸಿನ್‍ ಕಾರಿಗೆ ಅಪ್‍‍ಗ್ರೇಡ್ ಮಾಡಿದ್ದಾರೆ. ಈ ಕಾರನ್ನು ರಷ್ಯಾದಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ಇದನ್ನು ರಷ್ಯಾದ ಕಾರು ತಯಾರಕರು ತಯಾರಿಸಿದ್ದಾರೆ.

ರಾಷ್ಟ್ರಪತಿಗಳ ಗರುಡ ಕಾರಿನ ಮಾದರಿಯನ್ನು ವಿನ್ಯಾಸಗೊಳಿಸಿದ ವಿದ್ಯಾರ್ಥಿಗಳು

ಭಾರತದಲ್ಲಿ ನಮ್ಮ ಪ್ರಧಾನಮಂತ್ರಿಯ ಮಹೀಂದ್ರಾ ಸ್ಕಾರ್ಪಿಯೋದಿಂದ ಬಿ‍ಎಂಡಬ್ಲ್ಯು 7 ಸೀರಿಸ್ ವಾಹನಗಳವರೆಗೆ ಬುಲೆಟ್ ಫ್ರೂಫ್ ನಿಂದ ಹೈ-ಸೆಕ್ಯುರಿಟಿ ಬುಲೆಟ್ ಪ್ರೂಪ್ ವಾಹನಕ್ಕೆ ಅಪ್‍‍ಗ್ರೇಡ್ ಮಾಡಲಾಗಿದೆ. ಟೊಯೊಟಾ ಲ್ಯಾಂಡ್ ಕ್ರೂಸರ್ ಮತ್ತು ಲ್ಯಾಂಡ್ ರೋವರ್ ರೇಂಜ್ ರೋವರ್ ಕಾರುಗಳನ್ನು ಪ್ರಧಾನ ಮಂತ್ರಿಯವರು ಬಳಸುತ್ತಾರೆ. ಭಾರತದ ರಾಷ್ಟ್ರಪತಿಯವರು ಬೆಂಝ್ ಎಸ್600 ಕಾರನ್ನು ಬಳಸುತ್ತಾರೆ.

Most Read Articles

Kannada
English summary
Garuda Presidential vehicle is not built by Tata: Here are details. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X