25 ಸಾವಿರ ಕುಟುಂಬಗಳಿಗೆ ಆರೋಗ್ಯ ಕಿಟ್ ವಿತರಿಸಿದ ಟೊಯೊಟಾ

ಕರೋನಾ ವೈರಸ್ ಸೋಂಕಿಗೆ ತುತ್ತಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಖ್ಯಾತ ಕಾರು ತಯಾರಕ ಕಂಪನಿಯಾದ ಟೊಯೊಟಾ ಕಿರ್ಲೋಸ್ಕರ್ ಮೋಟರ್ ಇಂಡಿಯಾ ಹಲವಾರು ಕುಟುಂಬಗಳಿಗೆ ಆರೋಗ್ಯ ಕಿಟ್ ಗಳನ್ನು ವಿತರಿಸಿದೆ.

25 ಸಾವಿರ ಕುಟುಂಬಗಳಿಗೆ ಆರೋಗ್ಯ ಕಿಟ್ ವಿತರಿಸಿದ ಟೊಯೊಟಾ

ಕಂಪನಿಯು ಈ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿದೆ. ಕಂಪನಿಯು ಇದುವರೆಗೂ 1 ಲಕ್ಷ ಜನರಿಗೆ ಕಂಪನಿ ಸಹಾಯ ಮಾಡಿದೆ.ಸಂಜೀವಿನಿ ಕಾರ್ಯಕ್ರಮದಡಿ ಆರೋಗ್ಯ ಹಾಗೂ ನೈರ್ಮಲ್ಯ ಕಿಟ್‌ಗಳನ್ನು ವಿತರಿಸಿದೆ. ಇದೇ ಸಂಜೀವಿನಿ ಕಾರ್ಯಕ್ರಮದ ಅಂಗವಾಗಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ತನ್ನ ಸಿಬ್ಬಂದಿಗಳಿಗೆ 5,000 ಆರೋಗ್ಯ ಹಾಗೂ ನೈರ್ಮಲ್ಯ ಕಿಟ್‌ಗಳನ್ನು ವಿತರಿಸಿದೆ.

25 ಸಾವಿರ ಕುಟುಂಬಗಳಿಗೆ ಆರೋಗ್ಯ ಕಿಟ್ ವಿತರಿಸಿದ ಟೊಯೊಟಾ

ಈ ಸಿಬ್ಬಂದಿಗಳಿಗೆ ತಮ್ಮ ನೆರೆಹೊರೆಯವರಿಗೆ ಈ ಕಿಟ್ ವಿತರಿಸುವಂತೆ ಸೂಚಿಸಲಾಗಿದೆ. ಈ ಮೂಲಕ ಕಂಪನಿಯು ಸುಮಾರು 25 ಸಾವಿರ ಕುಟುಂಬಗಳಿಗೆ ಅಥವಾ ಸುಮಾರು 1 ಲಕ್ಷ ಜನರಿಗೆ ಆರೋಗ್ಯ ಹಾಗೂ ನೈರ್ಮಲ್ಯ ಕಿಟ್‌ಗಳನ್ನು ವಿತರಿಸಿದಂತಾಗಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

25 ಸಾವಿರ ಕುಟುಂಬಗಳಿಗೆ ಆರೋಗ್ಯ ಕಿಟ್ ವಿತರಿಸಿದ ಟೊಯೊಟಾ

ಈ ಕಿಟ್‌ನಲ್ಲಿ ಸ್ಯಾನಿಟೈಜರ್ ಬಾಟಲ್, ಥ್ರೀ-ಪ್ಲೈ ಫೇಸ್‌ಮಾಸ್ಕ್ ಹಾಗೂ ಹ್ಯಾಂಡ್-ವಾಶ್ ಸೋಪ್ ಗಳಿವೆ. ಇದರ ಜೊತೆಗೆ ಕಂಪನಿಯು ವಾಲಂಟರಿ ಕಾರ್ಯಕ್ರಮವನ್ನೂ ಸಹ ಹಮ್ಮಿಕೊಂಡಿತ್ತು. ಈ ಎಲ್ಲಾ ಕಾರ್ಯಕ್ರಮಗಳ ಉದ್ದೇಶವು ನೌಕರರಿಗೆ ನೈರ್ಮಲ್ಯವನ್ನು ಅಳವಡಿಸಿಕೊಳ್ಳುವಂತೆ ಮಾಡುವುದಾಗಿತ್ತು.

25 ಸಾವಿರ ಕುಟುಂಬಗಳಿಗೆ ಆರೋಗ್ಯ ಕಿಟ್ ವಿತರಿಸಿದ ಟೊಯೊಟಾ

ತಮ್ಮ ನೆರೆಹೊರೆಯಲ್ಲಿರುವವರಿಗೆ ಫೇಸ್ ಮಾಸ್ಕ್ ಗಳನ್ನು ಬಳಸಲು ಪ್ರೇರೇಪಿಸುವಂತೆ ಟೊಯೊಟಾ ಕಂಪನಿಯು ತನ್ನ ಸಿಬ್ಬಂದಿಗೆ ಸೂಚಿಸಿದೆ.ಇತ್ತೀಚೆಗಷ್ಟೇ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯು ಕರ್ನಾಟಕದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂ.2 ಕೋಟಿ ದೇಣಿಗೆ ನೀಡಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

25 ಸಾವಿರ ಕುಟುಂಬಗಳಿಗೆ ಆರೋಗ್ಯ ಕಿಟ್ ವಿತರಿಸಿದ ಟೊಯೊಟಾ

ಇದರ ಜೊತೆಗೆ ಟೊಯೊಟಾ ಕಿರ್ಲೋಸ್ಕರ್ ಕಂಪನಿಯು ಕರ್ನಾಟಕದಲ್ಲಿನ ಆರೋಗ್ಯ ಕಾರ್ಯಕರ್ತರಿಗೆ 3,000 ಹಜ್ಮತ್ ಸೂಟ್‌ಗಳನ್ನು ವಿತರಿಸಿದೆ.ಕಂಪನಿಯು ಸುಮಾರು 3,500 ಅಗತ್ಯ ಕಿಟ್‌ಗಳನ್ನು ಕೂಲಿ ಕಾರ್ಮಿಕರಿಗೆ ವಿತರಿಸಿ 15,000ಕ್ಕೂ ಹೆಚ್ಚು ಜನರಿಗೆ ನೆರವಾಗಿದೆ.

25 ಸಾವಿರ ಕುಟುಂಬಗಳಿಗೆ ಆರೋಗ್ಯ ಕಿಟ್ ವಿತರಿಸಿದ ಟೊಯೊಟಾ

ರಾಜ್ಯ ಪೊಲೀಸರಿಗೆ ಸ್ಯಾನಿಟೈಜರ್‌ ಹಾಗೂ ಫೇಸ್ ಮಾಸ್ಕ್ ಗಳನ್ನು ವಿತರಿಸುವುದರ ಜೊತೆಗೆ ರಾಜ್ಯದ ಆರೋಗ್ಯ ಇಲಾಖೆಯ ಬೆಂಬಲಕ್ಕಾಗಿ ಟೊಯೊಟಾ ಕಿರ್ಲೋಸ್ಕರ್ ಕಂಪನಿಯು 14 ಬಸ್‌ಗಳನ್ನು ನಿಯೋಜಿಸಿತ್ತು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

25 ಸಾವಿರ ಕುಟುಂಬಗಳಿಗೆ ಆರೋಗ್ಯ ಕಿಟ್ ವಿತರಿಸಿದ ಟೊಯೊಟಾ

ಕರ್ನಾಟಕದಲ್ಲಿ ಕರೋನಾ ವೈರಸ್ ಪರೀಕ್ಷೆಯನ್ನು ವೇಗಗೊಳಿಸಲು ಟೊಯೊಟಾ ಕಂಪನಿಯು ಮೊಬೈಲ್ ವೈದ್ಯಕೀಯ ಯುನಿಟ್ ಅನ್ನು ಭಾರತೀಯ ವಿಜ್ಞಾನ ಸಂಸ್ಥೆಗೆ ಹಸ್ತಾಂತರಿಸಿದೆ. ಇದರ ಜೊತೆಗೆ 45 ಥರ್ಮಲ್ ಸ್ಕ್ಯಾನರ್‌, 45,000 ಹ್ಯಾಂಡ್ ಸ್ಯಾನಿಟೈಜರ್‌, 100 ಹಾಸಿಗೆ, 100 ರೋಗಿಗಳಿಗಾಗಿ ಬೇಕಾಗಿರುವ ವಸ್ತುಗಳನ್ನು ಒದಗಿಸಿದೆ.

Most Read Articles

Kannada
Read more on ಟೊಯೊಟಾ toyota
English summary
Toyota company distributes health hygiene kits to 25000 families. Read in Kannada.
Story first published: Wednesday, August 19, 2020, 18:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X