ಅನಾವರಣವಾಯ್ತು ಹೊಸ ಟೊಯೊಟಾ ಕೊರೊಲ್ಲಾ ಜಿಆರ್ ಸ್ಪೋರ್ಟ್ ಆವೃತ್ತಿ

ಟೊಯೊಟಾ ಕಂಪನಿಯು ಯುರೋಪಿನಲ್ಲಿ ಹೊಸ ಕೊರೊಲ್ಲಾ 'ಜಿಆರ್ ಸ್ಪೋರ್ಟ್' ಆವೃತ್ತಿಯನ್ನು ಅನಾವರಣಗೊಳಿಸಿದೆ. ಈ 'ಜಿಆರ್ ಸ್ಪೋರ್ಟ್' ಆವೃತ್ತಿಯು ಸಾಮಾನ್ಯ ಕೊರೊಲ್ಲಾ ಮಾದರಿಗೆ ಹೋಲಿಸಿದರೆ ಸ್ಪೂರ್ಟಿ ಲುಕ್ ಅನ್ನು ಹೊಂದಿದ್ದು, ಇತರೆ ಹೆಚ್ಚಿನ ಯಾವುದೇ ಬದಲಾಣೆಗಳಿಲ್ಲ.

ಅನಾವರಣವಾಯ್ತು ಹೊಸ ಟೊಯೊಟಾ ಕೊರೊಲ್ಲಾ ಜಿಆರ್ ಸ್ಪೋರ್ಟ್ ಆವೃತ್ತಿ

ಸಾಮಾನ್ಯ ಕೊರೊಲ್ಲಾ ಮಾದರಿಗೆ ಹೋಲಿಸಿದರೆ ಜಿಆರ್ ಸ್ಪೋರ್ಟ್ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಹೊಂದಿದೆ. ಟೊಯೊಟಾ ಕೊರೊಲ್ಲಾ ಜಿಆರ್ ಸ್ಪೋರ್ಟ್ ಆವೃತ್ತಿಯು ಸಾಮಾನ್ಯ ಮಾದರಿಯಲ್ಲಿದ್ದ ಕ್ರೋಮ್ ಬಿಟ್‌ಗಳನ್ನು ಬದಲಾಯಿಸಿ ಪಿಯಾನೋ-ಬ್ಲ್ಯಾಕ್ ಫಿನಿಶಿಂಗ್ ಅನ್ನು ಹೊಂದಿದೆ. ಇನ್ನು ಮುಂಭಾಗದಲ್ಲಿ ಗ್ರಿಲ್, ಒಆರ್‌ವಿಎಂಗಳು, ಸೈಡ್ ಸಿಲ್ಗಳು, ಬಿ-ಪಿಲ್ಲರ್ ಮತ್ತು ಬಂಪರ್‌ನಲ್ಲಿನ ಏರ್ ಡ್ಯಾಮ್ ಬ್ಲ್ಯಾಕ್ ಬಣ್ಣದ ಫಿನಿಶಿಂಗ್ ಅನ್ನು ಹೊಂದಿದೆ. ಇದು ಕಾರಿಗೆ ಇನ್ನಷ್ಟು ಸ್ಪೋರ್ಟಿ ಲುಕ್ ಅನ್ನು ನೀಡಿದೆ.

ಅನಾವರಣವಾಯ್ತು ಹೊಸ ಟೊಯೊಟಾ ಕೊರೊಲ್ಲಾ ಜಿಆರ್ ಸ್ಪೋರ್ಟ್ ಆವೃತ್ತಿ

ಈ ಹೊಸ ಟೊಯೊಟಾ ಜಿಆರ್ ಸ್ಪೋರ್ಟ್ ಡ್ಯುಯಲ್-ಟೋನ್ ಫಿನಿಶೀಂಗ್ ನೊಂದಿಗೆ ಹೊಸ 17 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಇನ್ನು ಗ್ರಾಹಕರು 18 ಇಂಚಿನ ಅಲಾಯ್ ವ್ಹೀಲ್ ಅನ್ನು ಸಹ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

MOST READ: ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಅನಾವರಣವಾಯ್ತು ಹೊಸ ಟೊಯೊಟಾ ಕೊರೊಲ್ಲಾ ಜಿಆರ್ ಸ್ಪೋರ್ಟ್ ಆವೃತ್ತಿ

ಈ ಕಾರಿನ ಹಿಂಭಾಗದಲ್ಲಿ ಬೂಟ್ ಲಿಟ್ ನಲ್ಲಿ ಸಣ್ಣ ಸ್ಪಾಯ್ಲರ್ ಅನ್ನು ಸಂಯೋಜಿಸಲಾಗಿದೆ. ಬೂಟ್ ಮತ್ತು ಟೈಲ್ ಲೈಟ್ ಗಳ ಸುತ್ತಲೂ ಬ್ಕ್ಯಾಕ್ ಬಣ್ಣದ ಅಂಶಗಳನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಟೊಯೊಟಾ ಕೊರೊಲ್ಲಾ ಜಿಆರ್ ಸ್ಪೋರ್ಟ್ ಆವೃತ್ತಿ

ಟೊಯೊಟಾ ಕೊರೊಲ್ಲಾ ಜಿಆರ್ ಸ್ಪೋರ್ಟ್ ಇಂಟಿರಿಯರ್ ಆಕರ್ಷಕವಾಗಿದೆ. ಆಲ್-ಬ್ಲ್ಯಾಕ್ ಬಣ್ಣದ ಆಯ್ಕೆಯು ಕ್ಯಾಬಿನ್‌ಗೆ ಸ್ಪೋರ್ಟಿ ಲುಕ್ ನೀಡುತ್ತದೆ. ಲೆದರ್ ಸ್ಟೀಯರಿಂಗ್ ವ್ಹೀಲ್ ಅನ್ನು ಹೊಂದಿದೆ. ಇನ್ನು ಆಂಬಿಯೆಂಟ್ ಕ್ಯಾಬಿನ್ ಲೈಟಿಂಗ್ ಅನ್ನು ಒಳಗೊಂಡಿದೆ.

MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಅನಾವರಣವಾಯ್ತು ಹೊಸ ಟೊಯೊಟಾ ಕೊರೊಲ್ಲಾ ಜಿಆರ್ ಸ್ಪೋರ್ಟ್ ಆವೃತ್ತಿ

ಕಾರಿನ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ, ಸಾಮಾನ್ಯ ಕೊರೊಲ್ಲಾ ಕಾರಿನಲ್ಲಿರುವ 1.6-ಲೀಟರ್ ಪೆಟ್ರೋಲ್ ಮೋಟಾರ್ ಮತ್ತು 1.8-ಲೀಟರ್ ಪೆಟ್ರೋಲ್/ಎಲೆಕ್ಟ್ರಿಕ್ ಹೈಬ್ರಿಡ್ ಸಿಸ್ಟಂ ಅನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಟೊಯೊಟಾ ಕೊರೊಲ್ಲಾ ಜಿಆರ್ ಸ್ಪೋರ್ಟ್ ಆವೃತ್ತಿ

ಇದರಲ್ಲಿ 1.6-ಲೀಟರ್ ಪೆಟ್ರೋಲ್ ಮೋಟಾರ್ 132 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸಿದರೆ, ಎರಡನೇ ಮೋಟಾರ್ 120 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎರಡು ಮೋಟಾರ್ ಗಳೊಂದಿಗೆ ಇ-ಸಿವಿಟಿಯನ್ನು ಜೋಡಿಸಲಾಗಿದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಅನಾವರಣವಾಯ್ತು ಹೊಸ ಟೊಯೊಟಾ ಕೊರೊಲ್ಲಾ ಜಿಆರ್ ಸ್ಪೋರ್ಟ್ ಆವೃತ್ತಿ

ಕೊರೊಲ್ಲಾ ಜಿಆರ್ ಸೆಡಾನ್ ಉತ್ಪಾದನೆಯನ್ನು ಈ ವರ್ಷದ ನವೆಂಬರ್ ತಿಂಗಳಲ್ಲಿ ಪ್ರಾರಂಭಿಸಲಿದೆ. ಇನ್ನು ಮುಂದಿನ ವರ್ಷದ ಪ್ರಾರಂಭದಲ್ಲಿ ಈ ಟೊಯೊಟಾ ಕೊರೊಲ್ಲಾ ಜಿಆರ್ ಸ್ಪೋರ್ಟ್ ಆವೃತ್ತಿಯ ವಿತರಣೆಯನ್ನು ಪ್ರಾರಂಭಿಸಬಹುದು.

ಅನಾವರಣವಾಯ್ತು ಹೊಸ ಟೊಯೊಟಾ ಕೊರೊಲ್ಲಾ ಜಿಆರ್ ಸ್ಪೋರ್ಟ್ ಆವೃತ್ತಿ

ಕೊರೊಲ್ಲಾ ಜಿಆರ್ ಸೆಡಾನ್ ಯುರೋಪಿನ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದು ಖಚಿತವಾಗಿದೆ. ಆದರೆ ಈ ಟೊಯೊಟಾ ಕೊರೊಲ್ಲಾ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳು ಕಡಿಮೆಯಾಗಿದೆ.

Article Published On: Saturday, July 25, 2020, 18:07 [IST]
English summary
Sporty-Looking Toyota Corolla GR Sport Unveiled. Read In Kannada.
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+