ಕರೋನಾ ವೈರಸ್ ಎಫೆಕ್ಟ್: ಭಾರಿ ನಷ್ಟದಲ್ಲಿ ಆಟೋ ಮೊಬೈಲ್ ಉದ್ಯಮ

ಕರೋನಾ ವೈರಸ್ ಅಪಾರ ಪ್ರಮಾಣದ ನಷ್ಟವನ್ನು ಉಂಟುಮಾಡುತ್ತಿದೆ. ಇದು ಯಾವುದೋ ಒಂದು ಉದ್ಯಮಕ್ಕೆ ಸೀಮಿತವಾಗಿಲ್ಲ. ಬಹುತೇಕ ಎಲ್ಲಾ ಉದ್ಯಮಗಳೂ ಸಂಕಷ್ಟವನ್ನು ಎದುರಿಸುತ್ತಿವೆ. ವಾಹನ ಡೀಲರ್ ಗಳೂ ಸಹ ನಷ್ಟವನ್ನು ಅನುಭವಿಸುತ್ತಿದ್ದಾರೆ.

ಕರೋನಾ ವೈರಸ್ ಎಫೆಕ್ಟ್: ಭಾರಿ ನಷ್ಟದಲ್ಲಿ ಆಟೋ ಮೊಬೈಲ್ ಉದ್ಯಮ

ಕರೋನಾದಿಂದ ಉಂಟಾಗಿರುವ ಸಮಸ್ಯೆಗಳನ್ನು ಮಾತಿನಲ್ಲಿ ಅಥವಾ ಪದಗಳಲ್ಲಿ ಹೇಳಿದರೆ ಸಾಕಾಗುವುದಿಲ್ಲ. ಕೂಲಿ ಕಾರ್ಮಿಕರು ಯಾವುದೇ ಆದಾಯವಿಲ್ಲದೆ ಸಂಕಷ್ಟದಲ್ಲಿದ್ದರೆ, ಉದ್ಯಮಗಳು ಹಾಗೂ ವಹಿವಾಟುಗಳು ಭಾರಿ ನಷ್ಟವನ್ನು ಅನುಭವಿಸುತ್ತಿವೆ. ಬಹುತೇಕ ಉದ್ಯೋಗಿಗಳ ಭವಿಷ್ಯವು ಅನಿಶ್ಚಿತತೆಯಲ್ಲಿದೆ.

ಕರೋನಾ ವೈರಸ್ ಎಫೆಕ್ಟ್: ಭಾರಿ ನಷ್ಟದಲ್ಲಿ ಆಟೋ ಮೊಬೈಲ್ ಉದ್ಯಮ

ಕರೋನಾ ವೈರಸ್ ಹಾವಳಿಯಿಂದಾಗಿ ಆಟೋ ಮೊಬೈಲ್ ಉದ್ಯಮವು ಪ್ರತಿದಿನ ನೂರಾರು ಕೋಟಿ ರೂಪಾಯಿಗಳಷ್ಟು ನಷ್ಟವನ್ನು ಅನುಭವಿಸುತ್ತಿದೆ. ಕಾರು ತಯಾರಕ ಕಂಪನಿಗಳು ಉತ್ಪಾದನಾ ಘಟಕಗಳನ್ನು ಸ್ಥಗಿತಗೊಳಿಸಿರುವುದರಿಂದ ಪ್ರತಿದಿನ ಸುಮಾರು ರೂ.2,500 ಕೋಟಿಗಳಷ್ಟು ನಷ್ಟ ಉಂಟಾಗುತ್ತಿದೆ.

ಕರೋನಾ ವೈರಸ್ ಎಫೆಕ್ಟ್: ಭಾರಿ ನಷ್ಟದಲ್ಲಿ ಆಟೋ ಮೊಬೈಲ್ ಉದ್ಯಮ

ವಾಹನ ಡೀಲರ್ ಗಳ ಪರಿಸ್ಥಿತಿಯೂ ಹದಗೆಡುತ್ತಿದೆ. ಅನೇಕ ಮಾರಾಟಗಾರರು ಬಿಎಸ್ 4 ವಾಹನಗಳನ್ನು ಗಡುವಿನೊಳಗೆ ಮಾರಾಟ ಮಾಡಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಗಡುವನ್ನು ವಿಸ್ತರಿಸಲಾಗಿದ್ದರೂ ಮಾರಾಟವಾಗದೇ ಉಳಿದಿರುವ ಬಿಎಸ್ 4 ವಾಹನಗಳಲ್ಲಿ ಕೇವಲ 10%ನಷ್ಟು ಮಾತ್ರ ಮಾರಾಟವಾಗುವ ಸಾಧ್ಯತೆಗಳಿವೆ.

ಕರೋನಾ ವೈರಸ್ ಎಫೆಕ್ಟ್: ಭಾರಿ ನಷ್ಟದಲ್ಲಿ ಆಟೋ ಮೊಬೈಲ್ ಉದ್ಯಮ

ಲಾಕ್ ಡೌನ್ ಅವಧಿ ಮುಗಿದ ನಂತರ 10 ದಿನಗಳ ಕಾಲಾವಧಿಯನ್ನು ನೀಡಿ ಉಳಿದಿರುವ ವಾಹನಗಳನ್ನು ಮಾರಾಟ ಮಾಡಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಸುಮಾರು 7 ಲಕ್ಷ ದ್ವಿಚಕ್ರ ಹಾಗೂ 20,000 ನಾಲ್ಕು ಚಕ್ರ ವಾಹನಗಳು ಮಾರಾಟವಾಗದೇ ಹಾಗೆ ಉಳಿದಿವೆ.

MOST READ: ವಾಹನ ಉತ್ಪಾದನೆ ಸ್ಥಗಿತದಿಂದಾಗಿ ಸಾವಿರಾರು ಕೋಟಿ ನಷ್ಟ

ಕರೋನಾ ವೈರಸ್ ಎಫೆಕ್ಟ್: ಭಾರಿ ನಷ್ಟದಲ್ಲಿ ಆಟೋ ಮೊಬೈಲ್ ಉದ್ಯಮ

ಲಾಕ್ ಡೌನ್ ಘೋಷಿಸಿರುವ ಕಾರಣಕ್ಕೆ ಎಲ್ಲಾ ಶೋರೂಂಗಳನ್ನು ಮುಚ್ಚಲಾಗಿದೆ. ಮಾರಾಟವಿಲ್ಲದ ಕಾರಣಕ್ಕೆ ನೂರಾರು ಕೋಟಿಗಳಷ್ಟು ನಷ್ಟ ಉಂಟಾಗುತ್ತಿದೆ. ನೌಕರರ ಸಂಬಳ, ಬಾಡಿಗೆ ಹಾಗೂ ವಿದ್ಯುತ್ ಬಿಲ್‌ಗಳಂತಹ ಖರ್ಚುಗಳಿರುವುದರಿಂದ ಹೆಚ್ಚು ತೊಂದರೆಯಾಗುತ್ತಿರುವುದಾಗಿ ಡೀಲರ್ ಗಳು ಹೇಳಿದ್ದಾರೆ.

MOST READ: ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ಕರೋನಾ ವೈರಸ್ ಎಫೆಕ್ಟ್: ಭಾರಿ ನಷ್ಟದಲ್ಲಿ ಆಟೋ ಮೊಬೈಲ್ ಉದ್ಯಮ

ವಾಹನ ತಯಾರಕ ಕಂಪನಿಯ ವಕ್ತಾರರೊಬ್ಬರು ಮಾತನಾಡಿ, ನಾವು 12 ಡೀಲರ್ ಗಳನ್ನು ಹಾಗೂ 15 ವರ್ಕ್ ಶಾಪ್ ಗಳನ್ನು ಹೊಂದಿದ್ದೇವೆ. ಈ ತಿಂಗಳಲ್ಲಿಯೇ ರೂ.8.5 ಕೋಟಿಗಳ ನಷ್ಟವನ್ನು ಅನುಭವಿಸಿದ್ದೇವೆ. ಏಪ್ರಿಲ್ 14ರವರೆಗೆ ಒಟ್ಟು ರೂ.12 ಕೋಟಿಗಳಷ್ಟು ನಷ್ಟವಾಗುವ ಸಾಧ್ಯತೆಗಳಿವೆ ಎಂದು ಹೇಳಿದರು.

MOST READ: ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕರೋನಾ ವೈರಸ್ ಎಫೆಕ್ಟ್: ಭಾರಿ ನಷ್ಟದಲ್ಲಿ ಆಟೋ ಮೊಬೈಲ್ ಉದ್ಯಮ

ಉಂಟಾಗಿರುವ ನಷ್ಟವನ್ನು ಸರಿಪಡಿಸಲು ಕೇಂದ್ರ ಸರ್ಕಾರವು ರಿಯಾಯಿತಿಗಳನ್ನು ನೀಡಬೇಕೆಂದು ಡೀಲರ್ ಗಳು ಒತ್ತಾಯಿಸಿದ್ದಾರೆ. ವಾಹನ ತಯಾರಕ ಕಂಪನಿಗಳಿಂದ ವಾಹನಗಳನ್ನು ಪಡೆಯಲು ಸಾಲ ಪಡೆದಿರುವ ಡೀಲರ್ ಗಳಿಗೆ ಬಡ್ಡಿ ಪಾವತಿಸಲು ಸಮಯ ನೀಡಬೇಕು. ಬಿಎಸ್ 4 ವಾಹನಗಳ ಮಾರಾಟದ ಗಡುವನ್ನು ಮತ್ತಷ್ಟು ವಿಸ್ತರಿಸಬೇಕೆಂದು ಒತ್ತಾಯಿಸಿದ್ದಾರೆ.

ಮೂಲ: ಎನ್‌ಡಿಟಿವಿ ಆಟೋ

Most Read Articles

Kannada
English summary
Vehicle dealers facing huge losses across India. Read in Kannada.
Story first published: Tuesday, March 31, 2020, 11:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X