ಪ್ರತಿ ಚಾರ್ಜ್‍ಗೆ 500 ಕಿ.ಮೀ ಮೈಲೇಜ್ ನೀಡುವ ಐ.ಡಿ ಕ್ರಾಝ್ ಅನಾವರಣ

ಫೋಕ್ಸ್‌ವ್ಯಾಗನ್ ಸಂಸ್ಥೆಯು ತನ್ನ ಐ.ಡಿ ಕ್ರಾಝ್ ಎಲೆಕ್ಟ್ರಿಕ್ ಕಾರನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದೆ. ಈ ಕಾರು ಭಾರತದಲ್ಲಿ 2021ರಲ್ಲಿ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸುತ್ತೇವೆ.

ಪ್ರತಿ ಚಾರ್ಜ್‍ಗೆ 500 ಕಿ.ಮೀ ಮೈಲೇಜ್ ನೀಡುವ ಐ.ಡಿ ಕ್ರಾಝ್ ಅನಾವರಣ

ಭಾರತದ ರಸ್ತೆಗಳಲ್ಲಿ ಎಲೆಕ್ಟ್ರಿಕ್‌ ಕಾರುಗಳ ಹವಾ ಆರಂಭವಾಗಿದೆ. ಇದೇ ಕಾರಣದಿಂದ ಹಲವಾರು ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಗಳು ಕೂಡ ಎಲೆಕ್ಟ್ರಿಕ್ ಕಾರುಗಳ ಕಡೆ ಮುಖ ಮಾಡುತ್ತಿದ್ದಾರೆ. ಇದೇ ಕಾರಣದಿಂದ ಫೋಕ್ಸ್ ವ್ಯಾಗನ್ ಸಂಸ್ಥೆಯು ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ತೊಡಗಿದೆ. ಅಲ್ಲದೇ ಫೋಕ್ಸ್‌ವ್ಯಾಗನ್ ಸಂಸ್ಥೆಯು ತನ್ನ ಬಹುನಿರೀಕ್ಷಿತ ಐ.ಡಿ ಕ್ರಾಝ್ ಎಲೆಕ್ಟ್ರಿಕ್ ಕಾರನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದೆ.

ಪ್ರತಿ ಚಾರ್ಜ್‍ಗೆ 500 ಕಿ.ಮೀ ಮೈಲೇಜ್ ನೀಡುವ ಐ.ಡಿ ಕ್ರಾಝ್ ಅನಾವರಣ

ಐ.ಡಿ ಕ್ರಾಝ್ ಕಾರು 83 ಕಿ.ವ್ಯಾಟ್ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಈ ಕಾರಿನ ಮುಂಭಾಗದ ಎಲೆಕ್ಟ್ರಿಕ್ ಮೋಟಾರ್ 102 ಬಿ‍‍ಹೆಚ್‍‍ಪಿ ಪವರ್ ಮತ್ತು 140 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಪ್ರತಿ ಚಾರ್ಜ್‍ಗೆ 500 ಕಿ.ಮೀ ಮೈಲೇಜ್ ನೀಡುವ ಐ.ಡಿ ಕ್ರಾಝ್ ಅನಾವರಣ

ಇನ್ನೂ ಹಿಂಭಾಗದ ಮೋಟಾರ್ 204 ಬಿ‍ಹೆಚ್‍ಪಿ ಪವರ್ ಮತ್ತು 301 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರು ಪ್ರತಿ ಚಾರ್ಜ್‍ಗೆ 500 ಕಿ.ಮೀ ಮೈಲೇಜ್ ನೀಡುತ್ತದೆ. ಈ ಕಾರು 180 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಪ್ರತಿ ಚಾರ್ಜ್‍ಗೆ 500 ಕಿ.ಮೀ ಮೈಲೇಜ್ ನೀಡುವ ಐ.ಡಿ ಕ್ರಾಝ್ ಅನಾವರಣ

2017ರ ಶಾಂಘೈ ಮೋಟಾರ್ ಶೋನಲ್ಲಿ ಈ ಕಾರನ್ನು ಮೊದಲ ಬಾರಿಗೆ ಪ್ರದರ್ಶಿಸಿದರು. ಅಂದಿನಿಂದ ಐ.ಡಿ ಕ್ರಾಝ್ ಕಾನ್ಸೆಪ್ಟ್ ಅಭಿವೃದ್ದಿಪಡಿಸಿ ಅಂತಿಮವಾಗಿ ಈ ಕಾರನ್ನು ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಪಡಿಸಿದೆ.

ಪ್ರತಿ ಚಾರ್ಜ್‍ಗೆ 500 ಕಿ.ಮೀ ಮೈಲೇಜ್ ನೀಡುವ ಐ.ಡಿ ಕ್ರಾಝ್ ಅನಾವರಣ

ಈ ಕಾರಿನಲ್ಲಿ 21 ಇಂಚಿನ ವ್ಹೀಲ್ ಅನ್ನು ಅಳವಡಿಸಲಾಗಿದೆ. ಈ ಕಾರು ಸಣ್ಣ ಓವರ್‍‍ಹ್ಯಾಂಗ್‍‍ಗಳು, ಲಾಂಗ್ ವ್ಹೀಲ್‍‍ಬೇಸ್ ಮತ್ತು ಅಂಡರ್‌ಫ್ಲೋರ್ ಬ್ಯಾಟರಿ ಪ್ಯಾಕ್‌ಗಾಗಿ ಗರಿಷ್ಠ ಜಾಗವನ್ನು ಹೊಂದಿದೆ. ಈ ಫೋಕ್ಸ್ ವ್ಯಾಗನ್ ಐ.ಡಿ ಕ್ರಾಝ್ ಸ್ಪೋರ್ಟ್ ಕಾರು ವಿನ್ಯಾಸವನ್ನು ಹೊಂದಿದೆ ಮತ್ತು ಆಫ್ ರೋಡ್ ಸಾಮಥ್ಯವನ್ನು ಹೊಂದಿರುವುದು ಈ ಕಾರಿನ ವಿಶೇಷವಾಗಿದೆ.

ಪ್ರತಿ ಚಾರ್ಜ್‍ಗೆ 500 ಕಿ.ಮೀ ಮೈಲೇಜ್ ನೀಡುವ ಐ.ಡಿ ಕ್ರಾಝ್ ಅನಾವರಣ

ಈ ಕಾರು ಸ್ಚಲ್ಫ ಮಟ್ಟಿಗೆ 7 ಸೀಟಿನ ಟಿಗುವಾನ್ ಆಲ್‍‍ಸ್ಪೇಸ್‍ಗೆ ಹೋಲುತ್ತದೆ. ಐ.ಡಿ ಕ್ರಾಝ್ ಕಾರಿನಲ್ಲಿ ಹೆಡ್ಸ್-ಅಪ್ ಡಿಸ್‍ಪ್ಲೇ, 3 ಕ್ಯಾಮೆರಾಗಳಿಂದ ಫೀಡ್ ಅನ್ನು ಪ್ರದರ್ಶಿಸುವ ಇ-ಮಿರರ್ ಅನ್ನು ಹೊಂದಿದೆ.

ಪ್ರತಿ ಚಾರ್ಜ್‍ಗೆ 500 ಕಿ.ಮೀ ಮೈಲೇಜ್ ನೀಡುವ ಐ.ಡಿ ಕ್ರಾಝ್ ಅನಾವರಣ

ಈ ಕಾರಿನಲ್ಲಿ ಆಧುನಿಕ ಫೀಚರ್ಸ್‍‍ಗಳನ್ನು ಅಳವಡಿಸಲಾಗಿದೆ. ವಾಯ್ಸ್ ಕಮಾಂಡ್ ಮೂಲಕ ಅಥವಾ ಸ್ಟೀಯರಿಂಗ್‍‍ನಲ್ಲಿ ವಿಡಬ್ಲೂ ಲೋಗೊ ಒತ್ತುವ ಮೂಲಕ ಸಕ್ರಿಯಗೊಳಿಸಬಹುದಾದ ಆಟೋಮ್ಯಾಟಿಕ್ ಡ್ರೈವಿಂಗ್ ಮೋಡ್ ಸಹ ಇದೆ.

ಪ್ರತಿ ಚಾರ್ಜ್‍ಗೆ 500 ಕಿ.ಮೀ ಮೈಲೇಜ್ ನೀಡುವ ಐ.ಡಿ ಕ್ರಾಝ್ ಅನಾವರಣ

ಈ ಕಾರು ಹಲವಾರು ಫೀಚರ್ಸ್‍‍ಗಳೊಂದಿಗೆ ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಕಾರು ಭಾರತದಲ್ಲಿ ಮುಂದಿನ ವರ್ಷ ಬಿಡುಗಡೆಯಾಗುವ ನಿರೀಕ್ಷೆಗಳಿವೆ.

Most Read Articles

Kannada
English summary
I.D. Crozz previews VW India’s electric future. Read in Kananda.
Story first published: Friday, February 7, 2020, 20:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X