Just In
- 11 min ago
ಐಷಾರಾಮಿ ಕಾರು ಚಾಲಕನ ನಿರ್ಲಕ್ಷ್ಯಕ್ಕೆ ಪ್ರಾಣ ತೆತ್ತ ಪೊಲೀಸ್ ಕಾನ್ಸ್ಟೆಬಲ್ಗಳು
- 1 hr ago
ಭಾರತದಲ್ಲಿ 3 ಸೀರಿಸ್ ಗ್ರ್ಯಾನ್ ಲಿಮೊಸಿನ್ ಬಿಡುಗಡೆ ಮಾಡಿದ ಬಿಎಂಡಬ್ಲ್ಯು
- 2 hrs ago
2020ರ ಡಿಸೆಂಬರ್ ತಿಂಗಳಿನಲ್ಲಿ ಭರ್ಜರಿಯಾಗಿ ಮಾರಾಟವಾದ ಟಾಟಾ ಹ್ಯಾರಿಯರ್
- 3 hrs ago
ಭಾರತದಲ್ಲಿ ಬಿಡುಗಡೆಯಾದ ಐದು ವರ್ಷಗಳಲ್ಲಿ ಹೊಸ ದಾಖಲೆಗೆ ಕಾರಣವಾದ ಹ್ಯುಂಡೈ ಕ್ರೆಟಾ
Don't Miss!
- Movies
ಸುದೀಪ್ 'ಫ್ಯಾಂಟಮ್' ಸಿನಿಮಾದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್?
- News
ಖಾತೆ ಹಂಚಿಕೆ ಅಸಮಾಧಾನ: ಸಚಿವ ಸ್ಥಾನಕ್ಕೆ ಜೆ.ಸಿ. ಮಾಧುಸ್ವಾಮಿ ರಾಜೀನಾಮೆ?
- Sports
ಆಸ್ಟ್ರೇಲಿಯಾ ತಂಡದ ಬದ್ಧತೆ ಹಾಗೂ ಪೈಯ್ನ್ ನಾಯಕತ್ವವನ್ನು ಪ್ರಶ್ನಿಸಿದ ಮಾಜಿ ಆಸಿಸ್ ಕ್ರಿಕೆಟಿಗ
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಟೆಕ್ನಿಶಿಯನ್ ತಲೆ ಮೇಲೆ ಟ್ರಕ್ ಹರಿಸಿ ಗ್ರೌಂಡ್ ಕ್ಲಿಯರೆನ್ಸ್ ಪರೀಕ್ಷಿಸಿದ ವಾಹನ ತಯಾರಕ ಕಂಪನಿ
ಜನಪ್ರಿಯ ವಾಹನ ತಯಾರಕ ಕಂಪನಿಯಾದ ವೊಲ್ವೊ ಐಷಾರಾಮಿ ಕಾರು ಹಾಗೂ ಟ್ರಕ್'ಗಳ ತಯಾರಿಕೆಗೆ ಹೆಸರುವಾಸಿಯಾಗಿದೆ. ಈ ಕಂಪನಿಯು ತನ್ನ ವಾಹನಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ.

ವೊಲ್ವೊ ಕಂಪನಿಯು ಕಾರುಗಳನ್ನು ಮಾತ್ರವಲ್ಲದೆ ಬಸ್, ಟ್ರಕ್, ಟಿಪ್ಪರ್ ಟ್ರಕ್ ಹಾಗೂ ಟ್ರಾಕ್ಷನ್ ಕಂಟ್ರೋಲ್ ಯಂತ್ರಗಳನ್ನು ಸಹ ತಯಾರಿಸುತ್ತದೆ. ಈಗ ವೊಲ್ವೊ ಕಂಪನಿಯು ಹೊಸ ಟ್ರಕ್ ಅನ್ನು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್'ನೊಂದಿಗೆ ಅಭಿವೃದ್ಧಿಪಡಿಸಿರುವ ಬಗ್ಗೆ ವರದಿಯಾಗಿದೆ.

ಇದನ್ನು ದೃಢಪಡಿಸಲು ವೊಲ್ವೊ ಕಂಪನಿಯು ಹೊಸ ಟ್ರಕ್‌ನ ಪ್ರಚಾರ ವೀಡಿಯೊವೊಂದನ್ನು ಬಿಡುಗಡೆಗೊಳಿಸಿದೆ. ಈ ಜಾಹೀರಾತು ವಿಲಕ್ಷಣವಾಗಿದೆ. ಹೊಸ ಟ್ರಕ್ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ ಎಂಬುದನ್ನು ತೋರಿಸಲು ವ್ಯಕ್ತಿಯೊಬ್ಬನ ಇಡೀ ದೇಹವನ್ನು ಭೂಮಿಯಲ್ಲಿ ಹೂಳಲಾಗುತ್ತದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಆತನ ತಲೆ ಮಾತ್ರ ಹೊರಗೆ ಕಾಣುತ್ತದೆ. ನಂತರ ಟ್ರಕ್ ಆತನ ತಲೆಯ ಮೇಲೆ ಹೋಗುವ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಈ ವಿಲಕ್ಷಣ ಜಾಹೀರಾತು ನೋಡುಗರ ಎದೆ ಝಲ್ ಎನಿಸುವಂತೆ ಮಾಡುತ್ತದೆ.

ಈ ವೀಡಿಯೊ ಎಫ್ಎಂಎಕ್ಸ್ ಸೀರಿಸ್ ಟ್ರಕ್'ನ ಜಾಹೀರಾತಿಗೆ ಸಂಬಂಧಿಸಿದೆ. ಈ ಟ್ರಕ್ ಅನ್ನು ವೊಲ್ವೊ ಕಂಪನಿಯು 300 ಎಂಎಂ ಗ್ರೌಂಡ್ ಕ್ಲಿಯರೆನ್ಸ್'ನೊಂದಿಗೆ ಅಭಿವೃದ್ಧಿಪಡಿಸಿದೆ. ಈ ಹಿಂದೆ ಈ ಟ್ರಕ್ 275 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿತ್ತು.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಹೊಸ ಗ್ರೌಂಡ್ ಕ್ಲಿಯರೆನ್ಸ್'ನಿಂದಾಗಿ ಹದಗೆಟ್ಟ ರಸ್ತೆಗಳಲ್ಲೂ ಸರಾಗವಾಗಿ ಸಾಗಲು ಸಾಧ್ಯವಾಗಲಿದೆ. ಕಲ್ಲು ಬಂಡೆಗಳೇ ತುಂಬಿರುವ ಕ್ವಾರಿಗಳಲ್ಲಿಯೂ ಸಹ ಈ ಟ್ರಕ್ ಸುಲಭವಾಗಿ ಚಲಿಸುತ್ತದೆ.

ವೊಲ್ವೊ ಕಂಪನಿಯು ಈ ರೀತಿಯ ವಿಲಕ್ಷಣ ಪ್ರಚಾರ ವೀಡಿಯೊವನ್ನು ಬಿಡುಗಡೆಗೊಳಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ವಿಂಡ್ ಷೀಲ್ಡ್'ಗಳ ಮೇಲೆ ಎರಡು ಟ್ರಕ್'ಗಳು ನಿಂತಿರುವ ವೀಡಿಯೊವನ್ನು ಬಿಡುಗಡೆಗೊಳಿಸಿತ್ತು.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಇದು ಮಾತ್ರವಲ್ಲದೇ ತನ್ನ ಟ್ರಕ್‌ಗಳಲ್ಲಿರುವ ಸ್ಟೀಯರಿಂಗ್ ವ್ಹೀಲ್'ಗಳು ಲಘುವಾಗಿ ಎಂಬುದನ್ನು ತೋರಿಸುವ ವೀಡಿಯೊವನ್ನು ಸಹ ವೊಲ್ವೊ ಕಂಪನಿಯು ಬಿಡುಗಡೆಗೊಳಿಸಿತ್ತು.
ಈ ವೀಡಿಯೊದಲ್ಲಿ ಸ್ಟೀಯರಿಂಗ್ ವ್ಹೀಲ್ ತುಂಬಾ ಹಗುರವಾಗಿದೆ ಎಂಬುದನ್ನು ಖಚಿತಪಡಿಸಲು ಇಲಿಯನ್ನು ಬಳಸಲಾಗಿತ್ತು. ಸ್ಟೀಯರಿಂಗ್ ವ್ಹೀಲ್ ಅನ್ನು ಬೇರೆಡೆಗೆ ತಿರುಗಿಸಲು ಕ್ಯಾರೆಟ್ ಅನ್ನು ಬಳಸಲಾಗಿತ್ತು.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ವೊಲ್ವೊ ಕಂಪನಿಯು ಕೆಲವು ವರ್ಷಗಳಿಂದ ಈ ರೀತಿಯ ವಿಭಿನ್ನ ಪ್ರಚಾರ ವೀಡಿಯೊಗಳನ್ನು ಬಿಡುಗಡೆಗೊಳಿಸುತ್ತಿದೆ. ಈ ಮೂಲಕ ನೋಡುಗರ ಹಾಗೂ ಗ್ರಾಹಕರ ಗಮನವನ್ನು ತನ್ನತ್ತ ಸೆಳೆಯುವ ಪ್ರಯತ್ನವನ್ನು ಮಾಡುತ್ತಿದೆ.