ಪ್ರಪಂಚದ ಅತಿ ಹಳೆಯ ಕಾರು ತಯಾರಕ ಕಂಪನಿಗಳಿವು

ಇಂದು ವಿಶ್ವಾದ್ಯಂತ ಹಲವಾರು ಕಾರು ತಯಾರಕ ಕಂಪನಿಗಳಿವೆ. ಆದರೆ ವಿಶ್ವದ ಅತ್ಯಂತ ಹಳೆಯ ವಾಹನ ತಯಾರಕ ಕಂಪನಿ ಯಾವುದು ಎಂಬ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ. ಕಾರು ಪ್ರಿಯರಿಗೂ ಸಹ ಈ ಬಗ್ಗೆ ಸ್ಪಷ್ಟವಾಗಿ ತಿಳಿದಿರುವುದಿಲ್ಲ.

ಪ್ರಪಂಚದ ಅತಿ ಹಳೆಯ ಕಾರು ತಯಾರಕ ಕಂಪನಿಗಳಿವು

ವಿಶ್ವದ ಮೊದಲ ಕಾರು ತಯಾರಕ ಕಂಪನಿಯು 1810ರಿಂದ ಕಾರ್ಯನಿರ್ವಹಿಸುತ್ತಿದೆ. ಪ್ರಪಂಚದ ಅತಿ ಹಳೆಯ ಕಾರು ತಯಾರಕ ಕಂಪನಿಗಳು ಯಾವುವು, ಅವುಗಳ ಹಿನ್ನೆಲೆ ಏನು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಪ್ರಪಂಚದ ಅತಿ ಹಳೆಯ ಕಾರು ತಯಾರಕ ಕಂಪನಿಗಳಿವು

7. ರೆನಾಲ್ಟ್:

ಫ್ರಾನ್ಸ್ ಮೂಲದ ರೆನಾಲ್ಟ್ ಕಂಪನಿಯನ್ನು 1899ರಲ್ಲಿ ಫೆರ್ನಾಂಡ್, ಲೂಯಿಸ್ ಮತ್ತು ಮಾರ್ಸೆಲ್ ರೆನಾಲ್ಟ್ ಎಂಬ ಮೂವರು ಸಹೋದರರು ಆರಂಭಿಸಿದರು. ಲೂಯಿಸ್ ರವರು ವಿನ್ಯಾಸ ಹಾಗೂ ನಿರ್ಮಾಣ ಕಾರ್ಯಗಳನ್ನು ನೋಡಿಕೊಂಡರೆ, ಫರ್ನಾಂಡ್ ಹಾಗೂ ಮಾರ್ಷಲ್ ಉದ್ಯಮದ ನಿರ್ವಹಣೆಯನ್ನು ನೋಡಿಕೊಂಡರು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಪ್ರಪಂಚದ ಅತಿ ಹಳೆಯ ಕಾರು ತಯಾರಕ ಕಂಪನಿಗಳಿವು

ಈಗ ಪ್ರಪಂಚದ ಜನಪ್ರಿಯ ಕಾರು ತಯಾರಕ ಕಂಪನಿಗಳಲ್ಲಿ ಒಂದಾಗಿರುವ ಈ ಕಂಪನಿಯು ಆರಂಭದಲ್ಲಿ ಬಸ್ಸು, ಲಾರಿ ಹಾಗೂ ಇತರ ಕಮರ್ಷಿಯಲ್ ವಾಹನಗಳನ್ನು ಉತ್ಪಾದಿಸುತ್ತಿತ್ತು. ಈ ಕಂಪನಿಯು ಮೊದಲ ಮಹಾಯುದ್ದದ ಸಂದರ್ಭದಲ್ಲಿ ಸೇನೆಗಾಗಿ ವಾಹನ ಹಾಗೂ ಇತರ ಯಂತ್ರೋಪಕರಣಗಳನ್ನು ಒದಗಿಸುತ್ತಿತ್ತು.

ಪ್ರಪಂಚದ ಅತಿ ಹಳೆಯ ಕಾರು ತಯಾರಕ ಕಂಪನಿಗಳಿವು

ನಂತರ ಈ ಕಂಪನಿಯು ಕೃಷಿಗೆ ಸಂಬಂಧಿಸಿದ ಸಾಧನಗಳ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿತ್ತು. ಸದ್ಯಕ್ಕೆ ಕಾರುಗಳ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿರುವ ಕಂಪನಿಯು ವಿಶ್ವದ 100ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯಾಚರಣೆಯನ್ನು ನಡೆಸುತ್ತಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಪ್ರಪಂಚದ ಅತಿ ಹಳೆಯ ಕಾರು ತಯಾರಕ ಕಂಪನಿಗಳಿವು

6. ಲ್ಯಾಂಡ್ ರೋವರ್:

ಇಂಗ್ಲೆಂಡ್ ನ ಮೊದಲ ಕಾರು ತಯಾರಕ ಕಂಪನಿಯಾದ ಲ್ಯಾಂಡ್ ರೋವರ್ 1896ರಲ್ಲಿ ಆರಂಭವಾಯಿತು. ಈ ಕಂಪನಿಯನ್ನು ಹಿಂದೆ ಲ್ಯಾಂಕಾಷೈರ್ ಸ್ಟೀಮ್ ಮೋಟಾರ್ ಕಂಪನಿ ಎಂದು ಕರೆಯಲಾಗುತ್ತಿತ್ತು. 1978ರಲ್ಲಿ ಕಂಪನಿಯ ಹೆಸರನ್ನು ಲ್ಯಾಂಡ್ ರೋವರ್ ಎಂದು ಬದಲಿಸಲಾಯಿತು.

ಪ್ರಪಂಚದ ಅತಿ ಹಳೆಯ ಕಾರು ತಯಾರಕ ಕಂಪನಿಗಳಿವು

ಕಂಪನಿಯು ಈ ಹಿಂದೆ ಉಗಿ-ಚಾಲಿತ ಯಂತ್ರಗಳನ್ನು ತಯಾರಿಸುತ್ತಿತ್ತು. ಈ ಕಾರಣಕ್ಕೆ ಕಂಪನಿಯು ಸ್ಟೀಮ್ ಮೋಟಾರ್ ಕಂಪನಿ ಎಂಬ ಹೆಸರನ್ನು ಹೊಂದಿತ್ತು. ಈ ಕಂಪನಿಯ ಕಾರುಗಳು ದುಬಾರಿ ಬೆಲೆ ಹಾಗೂ ಐಷಾರಾಮಿತನಕ್ಕೆ ಹೆಸರುವಾಸಿಯಾಗಿವೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಪ್ರಪಂಚದ ಅತಿ ಹಳೆಯ ಕಾರು ತಯಾರಕ ಕಂಪನಿಗಳಿವು

5 ಸ್ಕೋಡಾ ಆಟೋ:

ಬೊಹೆಮಿಯಾ ಮೂಲದ ಸ್ಕೋಡಾ ಕಂಪನಿಯು ಆರಂಭದಲ್ಲಿ ಮೋಟಾರ್ ಸೈಕಲ್‌ ಹಾಗೂ ಬೈಸಿಕಲ್‌ಗಳನ್ನು ಮಾತ್ರ ಉತ್ಪಾದಿಸುತ್ತಿತ್ತು. ಕಂಪನಿಯು ಲಾರೆನ್ ಅಂಡ್ ಕ್ಲೆಮೆಂಟ್ ಎಂಬ ಹೆಸರಿನಿಂದ ಜನಪ್ರಿಯವಾಗಿತ್ತು.

ಪ್ರಪಂಚದ ಅತಿ ಹಳೆಯ ಕಾರು ತಯಾರಕ ಕಂಪನಿಗಳಿವು

1905ರಲ್ಲಿ ಸ್ಕೋಡಾ ಆಟೋ ಎಂಬ ಹೊಸ ಕಾರು ಬಿಡುಗಡೆಯಾದ ನಂತರ ಕಂಪನಿಯ ಹೆಸರನ್ನು ಸ್ಕೋಡಾ ಎಂದು ಬದಲಿಸಲಾಯಿತು. ಸುಮಾರು 95 ವರ್ಷಗಳ ಕಾಲ ಸ್ವತಂತ್ರವಾಗಿ ಕಾರು ಉತ್ಪಾದನೆ ಮಾಡುತ್ತಿದ್ದ ಸ್ಕೋಡಾ ಕಂಪನಿಯ 2000 ದಲ್ಲಿ ಫೋಕ್ಸ್‌ವ್ಯಾಗನ್ ಗ್ರೂಪ್‌ನ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ.

ಪ್ರಪಂಚದ ಅತಿ ಹಳೆಯ ಕಾರು ತಯಾರಕ ಕಂಪನಿಗಳಿವು

4. ಮರ್ಸಿಡಿಸ್ ಬೆಂಝ್:

ಮರ್ಸಿಡಿಸ್ ಬೆಂಝ್ ಐಷಾರಾಮಿ ಕಾರುಗಳ ತಯಾರಿಕೆ ಹಾಗೂ ಮಾರಾಟದಲ್ಲಿ ಮುಂಚೂಣಿಯಲ್ಲಿದೆ. ಈ ಕಂಪನಿಯು ಎರಡು ಕಂಪನಿಗಳ ಜಂಟಿ ಉದ್ಯಮವಾಗಿದೆ. ಮರ್ಸಿಡಿಸ್ ಬೆಂಝ್ 1890ರಲ್ಲಿ ಸ್ಥಾಪನೆಯಾದ ಡೈಮ್ಲರ್ ಹಾಗೂ 1883 ರಲ್ಲಿ ಸ್ಥಾಪನೆಯಾದ ಬೆಂಝ್ ಅಂಡ್ ಸೈ ಕಂಪನಿಗಳ ನಡುವಿನ ಜಂಟಿ ಉದ್ಯಮವಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಪ್ರಪಂಚದ ಅತಿ ಹಳೆಯ ಕಾರು ತಯಾರಕ ಕಂಪನಿಗಳಿವು

ಕಂಪನಿಯು ಆರಂಭದಲ್ಲಿ ಪೆಟ್ರೋಲ್-ಚಾಲಿತ ಎಂಜಿನ್'ಗಳನ್ನು ಉತ್ಪಾದಿಸುತ್ತಿತ್ತು. ಈ ಎರಡು ಕಂಪನಿಗಳ ವಿಲೀನದ ನಂತರ ಕಂಪನಿಯು 1926ರಲ್ಲಿ ಕಾರುಗಳ ಉತ್ಪಾದನೆಯನ್ನು ಆರಂಭಿಸಿತು.

ಪ್ರಪಂಚದ ಅತಿ ಹಳೆಯ ಕಾರು ತಯಾರಕ ಕಂಪನಿಗಳಿವು

3. ಒಪೆಲ್ ಆಟೋಮೊಬೈಲ್ಸ್:

ಜರ್ಮನಿ ಮೂಲದ ಕಾರು ತಯಾರಕ ಕಂಪನಿಯಾದ ಒಪೆಲ್ ಆರಂಭದಲ್ಲಿ ಹೊಲಿಗೆ ಯಂತ್ರಗಳನ್ನು ತಯಾರಿಸುತ್ತಿತ್ತು. 1886ರಲ್ಲಿ ಬೈಸಿಕಲ್ ಹಾಗೂ 1899ರಲ್ಲಿ ವಾಹನಗಳ ಉತ್ಪಾದನೆಯನ್ನು ಆರಂಭಿಸಿತು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಪ್ರಪಂಚದ ಅತಿ ಹಳೆಯ ಕಾರು ತಯಾರಕ ಕಂಪನಿಗಳಿವು

1913ರಲ್ಲಿ ಒಪೆಲ್ ಕಂಪನಿಯು ವಿಶ್ವದ ಅತಿದೊಡ್ಡ ಕಾರು ತಯಾರಕ ಕಂಪನಿಗಳಲ್ಲಿ ಒಂದಾಗಿತ್ತು. 1930ರ ದಶಕದಲ್ಲಿ ಒಪೆಲ್, ಯುರೋಪಿಯನ್ ಕಾರು ತಯಾರಕ ಕಂಪನಿಗಳಲ್ಲಿ ಪ್ರಮುಖ ವಾಹನ ತಯಾರಕ ಕಂಪನಿಯಾಗಿತ್ತು.

ಪ್ರಪಂಚದ ಅತಿ ಹಳೆಯ ಕಾರು ತಯಾರಕ ಕಂಪನಿಗಳಿವು

2. ಟಟ್ರಾ:

ಟಟ್ರಾ, ಜೆಕ್ ಗಣರಾಜ್ಯದ ಮೊದಲ ವಾಹನ ತಯಾರಕ ಕಂಪನಿ. ಈ ಕಂಪನಿಯು ತನ್ನ ಮೊದಲ ಕಾರನ್ನು 1897ರಲ್ಲಿ ಬಿಡುಗಡೆಗೊಳಿಸಿತು. ಹಿಂದೆ ಕಂಪನಿಯು ಟ್ರಕ್ ಹಾಗೂ ಟ್ಯಾಂಕರ್ ವಾಹನಗಳನ್ನು ಮಾತ್ರ ಉತ್ಪಾದಿಸುತ್ತಿತ್ತು. ಈ ವಾಹನಗಳನ್ನು ಜರ್ಮನಿಯು 2ನೇ ಮಹಾಯುದ್ಧದ ಸಮಯದಲ್ಲಿ ಬಳಸಿತ್ತು. ಟಟ್ರಾ ಕಂಪನಿಯು 1999ರಲ್ಲಿ ಕಾರುಗಳ ಉತ್ಪಾದನೆಯನ್ನು ನಿಲ್ಲಿಸಿ ಪೂರ್ಣ ಪ್ರಮಾಣದಲ್ಲಿ ಟ್ರಕ್'ಗಳ ಉತ್ಪಾದನೆಯನ್ನು ಆರಂಭಿಸಿತು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಪ್ರಪಂಚದ ಅತಿ ಹಳೆಯ ಕಾರು ತಯಾರಕ ಕಂಪನಿಗಳಿವು

1. ಪ್ಯೂಜೊ:

ಪ್ಯೂಜೊ ವಿಶ್ವದ ಅತ್ಯಂತ ಹಳೆಯ ಕಾರು ತಯಾರಕ ಕಂಪನಿ. 1810ರಲ್ಲಿ ಈ ಕಂಪನಿಯು ಕಾಫಿ ಬೀಜಗಳನ್ನು ತಯಾರಿಸಲು ಮಿಲ್-ಲೈನ್ ಅನ್ನು ಆರಂಭಿಸಿತು. 1830ರಲ್ಲಿ ಫ್ಯೂಜೊ ಕಂಪನಿಯು ಮೋಟರ್ ಸೈಕಲ್ ಉತ್ಪಾದನೆಯನ್ನು ಆರಂಭಿಸಿತು. ಈ ಕಂಪನಿಯು 1882ರಿಂದ ಕಾರುಗಳ ಉತ್ಪಾದನೆಯಲ್ಲಿ ತೊಡಗಿದೆ.

ಪ್ರಪಂಚದ ಅತಿ ಹಳೆಯ ಕಾರು ತಯಾರಕ ಕಂಪನಿಗಳಿವು

ಕಂಪನಿಯು ವಿಶ್ವದ ಮೊದಲ ಕಾರನ್ನು ಬಿಡುಗಡೆಗೊಳಿಸುವ ಸಂದರ್ಭದಲ್ಲಿ ಲಿಯಾನ್ ಸೆರ್ಬಾಲ್ಟ್ ಜೊತೆ ಕೈಜೋಡಿಸಿತ್ತು. ಈ ಸಹಭಾಗಿತ್ವವು ಯಶಸ್ಸನ್ನು ಕಂಡ ಹಿನ್ನೆಲೆಯಲ್ಲಿ ಈ ಕಂಪನಿಗಳು ಪ್ಯಾನ್‌ಹಾರ್ಟ್-ಡೈಮ್ಲರ್ ಎಂಜಿನ್ ಬಳಸಿ ಹೊಸ ಕಾರುಗಳನ್ನು ಬಿಡುಗಡೆಗೊಳಿಸಿದವು.

ಪ್ರಪಂಚದ ಅತಿ ಹಳೆಯ ಕಾರು ತಯಾರಕ ಕಂಪನಿಗಳಿವು

ಇನ್ನು ಭಾರತದಲ್ಲೂ ವಾಹನ ಉತ್ಪಾದನೆ ಆರಂಭಿಸಿದ ಪುರಾತನ ಆಟೋ ಕಂಪನಿಗಳಲ್ಲಿ ಟಾಟಾ ಮೋಟಾರ್ಸ್ ಅಗ್ರಸ್ಥಾನದಲ್ಲಿದ್ದು, ತದನಂತರ ಮೀರಾ, ಮಾರುತಿ ಸುಜುಕಿ, ಮಹೀಂದ್ರಾ ಕಾರುಗಳು ಪ್ರಮುಖವಾಗಿವೆ. ಇವುಗಳಲ್ಲಿ ಮೀರಾ ಕಾರು ಮಾರುಕಟ್ಟೆ ಇಲ್ಲವಾದರೂ ಇನ್ನುಳಿದ ಬಹುತೇಕ ಕಂಪನಿಗಳು ಭಾರತದಲ್ಲಿ ಮಾತ್ರವಲ್ಲ ವಿದೇಶಿ ಮಾರುಕಟ್ಟೆಗಳಲ್ಲೂ ಜನಪ್ರಿಯತೆ ಸಾಧಿಸಿವೆ.

Most Read Articles

Kannada
English summary
Worlds oldest car manufacturing companies. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X