ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2021ರ ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರು

ಜನಪ್ರಿಯ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಜನಪ್ರಿಯ ಟಿಗೋರ್ ಎಲೆಕ್ಟ್ರಿಕ್ ಮಾದರಿಯನ್ನು ನವೀಕರಿಸಲಾಗುತ್ತಿದೆ. ಈ ಟಾಟಾ ಟಿಗೋರ್ ಎಲೆಕ್ಟ್ರಿಕ್ ಸೆಡಾನ್ ಭಾರತದಲ್ಲಿ ಒಂದೆರಡು ಬಾರಿ ಸ್ಫಾಟ್ ಟೆಸ್ಟ್ ನಡೆಸುವಾಗ ಕಾಣಿಸಿಕೊಂಡಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2021ರ ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರು

ಇದೀಗ ಮತ್ತೊಮ್ಮೆ ಟಾಟಾ ಟಿಗೋರ್ ಎಲೆಕ್ಟ್ರಿಕ್ ಸೆಡಾನ್ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. 2021ರ ಟಿಗೋರ್ ಎಲೆಕ್ಟ್ರಿಕ್ ಕಾರು ಕಳೆದ ವರ್ಷ ಬಿಡುಗಡೆಯಾದ ನವೀಕರಿಸಿದ ಐಸಿ ಎಂಜಿನ್ ಚಾಲಿತ ಟಿಗೋರ್ ಮಾದರಿಗೆ ಹೋಲುತ್ತದೆ ಭಾರತದಲ್ಲಿ ಸರ್ಕಾರಿ ಮತ್ತು ಫ್ಲೀಟ್ ಗ್ರಾಹಕರಿಗೆ ಆರಂಭದಲ್ಲಿ ಲಭ್ಯವಿದ್ದ ಕಾಂಪ್ಯಾಕ್ಟ್ ಸೆಡಾನ್‌ನ ಎಲೆಕ್ಟ್ರಿಕ್ ಆವೃತ್ತಿಯು ಈಗ ದೇಶದ ಸಾಮಾನ್ಯ ಗ್ರಾಹಕರಿಗೆವರೆಗೆ ವಿಸ್ತರಿಸಲಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2021ರ ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರು

ಟಾಟಾ ಟಿಗೋರ್ ಫೇಸ್‌ಲಿಫ್ಟ್ ಎಲೆಕ್ಟ್ರಿಕ್ ಕಾರು ಮುಂಭಾಗದಲ್ಲಿ ಹೊಸ ಹೆಡ್‌ಲೈಟ್ ಸೆಟಪ್ ಜೊತೆಗೆ ಬ್ಲ್ಯಾಕ್ ಗ್ರಿಲ್ ಒಳಗೊಂಡಿದೆ. ಮುಂಭಾಗದ ಗ್ರಿಲ್ ಅನ್ನು ಪ್ರೊಜೆಕ್ಟರ್ ಎಲ್ಇಡಿ ಹೆಡ್ ಲ್ಯಾಂಪ್ ಗಳು, ಎಲ್ಇಡಿ ಡಿಆರ್ಎಲ್ ಗಳು ಮತ್ತು ಮರುವಿನ್ಯಾಸಗೊಳಿಸಲಾದ ಫಾಗ್ ಲ್ಯಾಂಪ್ ಹೌಸಿಂಗ್ಗಳಿಂದ ಸುತ್ತುವರಿದ ಅಂಡರ್ ಲೈನ್ ಗಳಿವೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2021ರ ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರು

ಇನ್ನು ವಿಶಾಲವಾದ ಏರ್ ಇನ್ ಟೆಕ್ ಅನ್ನು ಕೂಡ ನವೀಕರಿಸಿದೆ.ಪ್ರಸ್ತುತ ಮಾದರಿಯಂತೆ, ಮುಂಬರುವ ಸ್ಟ್ಯಾಂಡರ್ಡ್ ಟಿಗೋರ್ ಅನ್ನು ಪ್ರತ್ಯೇಕಿಸಿಕೊಳ್ಳುವ ಸಲುವಾಗಿ ಮುಂಭಾಗದ ಗ್ರಿಲ್ ಮತ್ತು ಇತರ ಸ್ಥಳಗಳಲ್ಲಿ ಇವಿ ಸ್ಟಿಕ್ಕರಿಂಗ್‌ನೊಂದಿಗೆ ಬರುತ್ತದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2021ರ ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರು

ಹೆಚ್ಚಿನ ಟ್ರಿಮ್‌ಗಳು ಬಾಡಿ ಒಆರ್‌ವಿಎಂಗಳ ಜೊತೆಗೆ ಹೊಸ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ವಿನ್ಯಾಸದೊಂದಿಗೆ ಬರಲಿದ್ದು, ಕೆಳ ಟ್ರಿಮ್‌ಗಳನ್ನು ಸ್ಟೀಲ್ ರಿಮ್ಸ್ ಮತ್ತು ವ್ಹೀಲ್ ಕ್ಯಾಪ್‌ಗಳ ಜೊತೆಗೆ ಬ್ಲ್ಯಾಕ್ ಔಟ್ ಒಆರ್‌ವಿಎಂಗಳೊಂದಿಗೆ ನೀಡಲಾಗುತ್ತದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2021ರ ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರು

ಇದು ಶಾರ್ಕ್-ಫಿನ್ ಆಂಟೆನಾ ಮತ್ತು ಇವಿ ಬ್ಯಾಡ್ಜಿಂಗ್ ಅನ್ನು ಹೊಂದಿರುತ್ತದೆ. ಇದಲ್ಲದೆ, ಇವಿ ಮತ್ತು ಸಾಮಾನ್ಯ ಸೆಡಾನ್ ನಡುವೆ ವ್ಯತ್ಯಾಸವನ್ನು ತೋರಿಸಲು ಗ್ರಿಲ್ ಮತ್ತು ಅಲಾಯ್ ವ್ಹೀಲ್ ಗಳಲ್ಲಿ ಬ್ಲೂ ಅಸ್ಸೆಂಟ್ ಗಳನ್ನು ಸೇರಿಸಲಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2021ರ ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರು

ಇನ್ನು ಈ ಟಾಟಾ ಟಿಗೋರ್ ಫೇಸ್‌ಲಿಫ್ಟ್ ಎಲೆಕ್ಟ್ರಿಕ್ ಕಾರಿನ ಒಳಭಾಗದಲ್ಲಿ ಹೊಸ ಮಲ್ಟಿ-ಫಂಕ್ಷನಲ್ ಸ್ಟೀಯರಿಂಗ್ ವ್ಹೀಲ್, ಹೊಸ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಡಿಸ್ ಪ್ಲೇ ಹೊಂದಿದೆ. ಸೆಂಟ್ರಲ್ ಏರ್-ಕಾನ್ ವೆಂಟ್ ಗಳನ್ನು ಹೊಂದಿವೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2021ರ ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರು

ಇನ್ನು ಈ ಕಾರಿನಲ್ಲಿ ಡ್ರೈವರ್ ಸೀಟ್, ಹರ್ಮನ್ ಆಡಿಯೊ ಸಿಸ್ಟಂ, ಪವರ್ ವಿಂಡೋಸ್ ಮತ್ತು ಹೆಚ್ಚಿನವುಗಳನ್ನು ಸೇರಿಸುವ ನಿರೀಕ್ಷೆಯಿದೆ. ಸೇಫ್ಟಿ ಕಿಟ್‌ನಲ್ಲಿ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ವಿಥ್ ಇಬಿಡಿ, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ನೀಡಬಹುದು.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2021ರ ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರು

ಇನ್ನು ಈ ಫೇಸ್‌ಲಿಫ್ಟೆಡ್ ಟಿಗೋರ್ ಎಲೆಕ್ಟ್ರಿಕ್ ಕಾರಿನಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ ಆದ್ದರಿಂದ ಪ್ರಸ್ತಾಪದಲ್ಲಿರುವ ಯಾವುದೇ ಜಿಪ್‌ಟ್ರಾನ್ ತಂತ್ರಜ್ಞಾನ ಇರುವುದಿಲ್ಲ. ಪವರ್‌ಟ್ರೇನ್‌ನಲ್ಲಿ ಮೋಟರ್‌ಗೆ ಜೋಡಿಯಾಗಿರುವ 21.5 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2021ರ ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರು

ಇದು 40.2 ಬಿಹೆಚ್‌ಪಿ ಪವರ್ ಮತ್ತು 105 ಎನ್‌ಎಂ ಪೀಕ್ ಟಾರ್ಕ್ ಅನ್ನು ಅಭಿವೃದ್ಧಿಪಡಿಸುತ್ತದೆ. ಈ ಸೆಟಪ್ 213 ಕಿ.ಮೀ ವರಗೆ ಮೈಲೇಜ್ ಅನ್ನು ನೀಡುತ್ತದೆ. ಇನ್ನು ಇದರ ಟಾಪ್ ಸ್ಪೀಡ್ 80 ಕಿ.ಮೀ.ಗೆ ಸೀಮಿತವಾಗಿದೆ. ಇನ್ನು 15 ಕಿಲೋವ್ಯಾಟ್ ಡಿಸಿ ಫಾಸ್ಟ್ ಚಾರ್ಜರ್ ಬಳಸುವಾಗ 11.5 ಗಂಟೆಗಳಲ್ಲಿ ಬ್ಯಾಟರಿಯು ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ.

Image Courtesy: The Fat Biker

Most Read Articles

Kannada
English summary
2021 Tata Tigor Electric Facelift Spied Almost Undisguised. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X