ಅಕರ್ಷಕ ವಿನ್ಯಾಸದ 2022ರ Creta ಎಸ್‍ಯುವಿಯ ಉತ್ಪಾದನೆ ಆರಂಭಿಸಿದ Hyundai

ಭಾರತೀಯ ಮಾರುಕಟ್ಟೆಯಲ್ಲಿ Hyundai ಕಂಪನಿಯ Creta ಮಾದರಿಯು ಅತಿ ಹೆಚ್ಚು ಮಾರಾಟವಗುತ್ತಿರುವ ಮಿಡ್ ಸೈಜ್ ಎಸ್‍ಯುವಿಯಾಗಿದೆ. ಈ Hyundai Creta ಮಾದರಿಯು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯು ಕೂಡ ಜನಪ್ರಿಯ ಮಿಡ್ ಎಸ್‍ಯುವಿಯಾಗಿದೆ.

ಅಕರ್ಷಕ ವಿನ್ಯಾಸದ 2022ರ Creta ಎಸ್‍ಯುವಿಯ ಉತ್ಪಾದನೆ ಆರಂಭಿಸಿದ Hyundai

ಈ Hyundai Creta ಮಾರಾಟದ ವೇಗವನ್ನು ಮತ್ತಷ್ಟು ಹೆಚ್ಚಿಸಲು ಕಂಪನಿಯು 2022ರ ಅಂತ್ಯದ ವೇಳೆಗೆ ಕ್ರೆಟಾಕ್ಕೆ ಮಿಡ್-ಲೈಫ್ ಅಪ್‌ಡೇಟ್ ನೀಡಲು ಯೋಜಿಸಿದೆ. ಹ್ಯುಂಡೈ ಕಂಪನಿಯು ಈ ತಿಂಗಳ ಕೊನೆಯಲ್ಲಿ ಬ್ರೆಜಿಲ್‌ನಲ್ಲಿ 2022ರ Hyundai Creta facelift ಎಸ್‌ಯುವಿಯನ್ನು ಇದೇ ತಿಂಗಳ 25 ರಂದು ಪರಿಚಯಿಸಲಿದೆ, Hyundai ಕಂಪನಿಯು ಬ್ರೆಜಿಲ್ ನಲ್ಲಿರುವ ಕಂಪನಿಯ ಪಿರಾಸಿಕ್ಯಾಬಾ ಕಾರು ತಯಾರಕ ಘಟಕದಲ್ಲಿ 2022ರ Creta ಎಸ್‍ಯುವಿಯ ಉತ್ಪಾದನೆಯನ್ನು ಪ್ರಾರಂಭಿಸಿದೆ.

ಅಕರ್ಷಕ ವಿನ್ಯಾಸದ 2022ರ Creta ಎಸ್‍ಯುವಿಯ ಉತ್ಪಾದನೆ ಆರಂಭಿಸಿದ Hyundai

2022ರ Creta ಎಸ್‍ಯುವಿಯಮರುವಿನ್ಯಾಸಗೊಳಿಸಲಾದ ಗ್ರಿಲ್‌ನಲ್ಲಿ ಒಂದು ಗಮನಾರ್ಹವಾದ ಬದಲಾವಣೆಗಳಿವೆ, ಇದು ಇತ್ತೀಚೆಗೆ ಬಿಡುಗಡೆಯಾದ Hyundai Alcazar ಮೂರು-ಸಾಲಿನ ಎಸ್‌ಯುವಿಯಲ್ಲಿ ಕಂಡುಬಂದಿದೆ. 2022ರ Creta ಎಸ್‌ಯುವಿಯನ್ನು ಈ ವರ್ಷದ ಆರಂಭದಲ್ಲಿ ರಷ್ಯಾದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು.

ಅಕರ್ಷಕ ವಿನ್ಯಾಸದ 2022ರ Creta ಎಸ್‍ಯುವಿಯ ಉತ್ಪಾದನೆ ಆರಂಭಿಸಿದ Hyundai

ಈ ಮಾದರಿಯು ಇತ್ತೀಚೆಗೆ ಚೀನಾದ ರಸ್ತೆಗಳಲ್ಲಿನ ಮರೆಮಾಚುವಿಕೆಯೊಂದಿಗೆ ಟೆಸ್ಟ್ ಮಾಡುವ ಸ್ಪೈ ಚಿತ್ರಗಳು ಬಹಿರಂಗವಾಗಿವೆ. ಇದು ಏಷ್ಯನ್ ಮಾರುಕಟ್ಟೆಯಲ್ಲಿ ಸನ್ನಿಹಿತವಾಗಿ ಪ್ರಾರಂಭವಾಗುವ ಸುಳಿವು ನೀಡಿದೆ. ಬ್ರೆಜಿಲ್‌ಗೆ, ಇದು 2016ರಲ್ಲಿ ಬಂದ ನಂತರ ಕಾಂಪ್ಯಾಕ್ಟ್ ಎಸ್‌ಯುವಿಯ ಎರಡನೇ ತಲೆಮಾರಿನ ಮಾದರಿಯಾಗಿದೆ. ಬ್ರೆಜಿಲ್‌ ನಲ್ಲಿಯು Creta ಬಹುಬೇಡಿಕೆಯ ಮಿಡ್ ಸೈಜ್ ಎಸ್‍ಯುವಿ ಮಾದರಿಯಾಗಿದೆ,

ಅಕರ್ಷಕ ವಿನ್ಯಾಸದ 2022ರ Creta ಎಸ್‍ಯುವಿಯ ಉತ್ಪಾದನೆ ಆರಂಭಿಸಿದ Hyundai

ಹೊಸ Creta ಎಸ್‍ಯುವಿಯ ಮುಂಭಾಗದ ಹೊರತಾಗಿ, ಎಸ್‌ಯುವಿಯ ಫೇಸ್‌ಲಿಫ್ಟ್ ಆವೃತ್ತಿಯಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳಿಲ್ಲ. ಬ್ರೆಜಿಲ್‌ನಲ್ಲಿ ಹ್ಯುಂಡೈ ಬಿಡುಗಡೆ ಮಾಡಿದ ಟೀಸರ್ ಇದೇ ರೀತಿಯ ಹೆಡ್‌ಲೈಟ್ ಮತ್ತು ಟೈಲ್‌ಲೈಟ್, ಅಲಯ್ ವ್ಹೀಲ್ ಗಳು ಮತ್ತು ಈಗಾಗಲೇ ಭಾರತೀಯ ಆವೃತ್ತಿಯಲ್ಲಿ ಕಾಣುವ ಇತರ ಬಾಹ್ಯ ಗುಣಲಕ್ಷಣಗಳನ್ನು ಹೊಂದಿದೆ. ಈ Hyundai Creta ತನ್ನ ಅದೇ ಆಕರ್ಷಕ ವಿನ್ಯಾಸ ಶೈಲಿಯನ್ನು ಮುಂದುವರಿಸಿದೆ,

ಅಕರ್ಷಕ ವಿನ್ಯಾಸದ 2022ರ Creta ಎಸ್‍ಯುವಿಯ ಉತ್ಪಾದನೆ ಆರಂಭಿಸಿದ Hyundai

ಈ 2022ರ Creta ಎಸ್‌ಯುವಿಯ ಒಳಭಾಗದಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ. ಬ್ರೆಜಿಲ್ ಆವೃತ್ತಿಗಾಗಿ, ಸನ್ ರೂಫ್ ಮತ್ತು ಡಿಜಿಟಲ್ ಪ್ಯಾನಲ್ ಅನ್ನು ಸೇರಿಸಿದೆ. ಇನ್ನು ಅದರಲ್ಲಿ ಅದೇ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು 7 ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಜೊತೆಗೆ Creta ಒಳಗೆ ಕಾಣಿಸುತ್ತದೆ, ಅದು ಡ್ಯಾಶ್‌ಬೋರ್ಡ್‌ನಲ್ಲಿ ಪ್ರಾಬಲ್ಯ ಸಾಧಿಸುತ್ತದೆ.

ಅಕರ್ಷಕ ವಿನ್ಯಾಸದ 2022ರ Creta ಎಸ್‍ಯುವಿಯ ಉತ್ಪಾದನೆ ಆರಂಭಿಸಿದ Hyundai

ಇನ್ನು ಈ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಇದರಲ್ಲಿ ಸುರಕ್ಷತೆಗಾಗಿ, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಲೇನ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಮಾನಿಟರ್ ಅನ್ನು ಕ್ಯಾಮರಾವನ್ನು ಒಳಗೊಂಡಿದೆ.

ಅಕರ್ಷಕ ವಿನ್ಯಾಸದ 2022ರ Creta ಎಸ್‍ಯುವಿಯ ಉತ್ಪಾದನೆ ಆರಂಭಿಸಿದ Hyundai

Hyundai Creta ಫೇಸ್‌ಲಿಫ್ಟ್ ಮಾದರಿಯು 1.0-ಲೀಟರ್ ಮೂರು ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮತ್ತು 2.0-ಲೀಟರ್ ಆಸ್ಪಿರೇಟೆಡ್ ಎಂಜಿನ್ ಅನ್ನು ಅಳವಡಿಸಲಾಗುತ್ತದೆ. ಎರಡು ಎಂಜಿನ್ ಗಳನ್ನು ಆರು ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಗೆ ಜೋಡಿಸುವ ಸಾಧ್ಯತೆಯಿದೆ. ಇನ್ನು 1.0-ಲೀಟರ್ ಮೂರು ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 121 ಬಿಹೆಚ್‍ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರಲಿದೆ.

ಅಕರ್ಷಕ ವಿನ್ಯಾಸದ 2022ರ Creta ಎಸ್‍ಯುವಿಯ ಉತ್ಪಾದನೆ ಆರಂಭಿಸಿದ Hyundai

ಇನ್ನು 2-ಲೀಟರ್ ಎಂಜಿನ್ 168 ಬಿಹೆಚ್‍ಪಿ ಪವರ್ ಮತ್ತು 201 ಎನ್ಎಂ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಮಾರಟವಾಗುತ್ತಿರುವ ಕ್ರೆಟಾ ಎಸ್‍ಯುವಿಯು ಗ್ರಾಹಕರ ಬೇಡಿಕೆಯೆಂತೆ ಹಲವು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಈ Creta ಎಸ್‍ಯುವಿಯಲ್ಲಿ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಒಳಗೊಂಡಿದೆ.

ಅಕರ್ಷಕ ವಿನ್ಯಾಸದ 2022ರ Creta ಎಸ್‍ಯುವಿಯ ಉತ್ಪಾದನೆ ಆರಂಭಿಸಿದ Hyundai

Creta ಎಸ್‍ಯುವಿಯ ಈ ಹಿಂದೆ ನೀಡಲಾಗುತ್ತಿದ್ದ 1.6-ಲೀಟರ್ ಮತ್ತು 1.4-ಲೀಟರ್ ಡೀಸೆಲ್ ಎಂಜಿನ್ ಅನ್ನು ತೆಗೆದುಹಾಕಲಾಗಿದ್ದು, ಸಾಮಾನ್ಯ ಮಾದರಿಯಲ್ಲಿ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಹಾಗೂ ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಖರೀದಿಸಬಹುದಾಗಿದೆ. ಇನ್ನು 1.5-ಲೀಟರ್ ಪೆಟ್ರೋಲ್ ಮಾದರಿಯೊಂದಿಗೆ 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 115 ಬಿಎಚ್‌ಪಿ ಪವರ್ ಮತ್ತು 144 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ,

ಅಕರ್ಷಕ ವಿನ್ಯಾಸದ 2022ರ Creta ಎಸ್‍ಯುವಿಯ ಉತ್ಪಾದನೆ ಆರಂಭಿಸಿದ Hyundai

ಇನ್ನು 1.5-ಲೀಟರ್ ಡೀಸೆಲ್ ಮಾದರಿಯು ಸಹ 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 115-ಬಿಎಚ್‌ಪಿ ಪವರ್ ಮತ್ತು 250-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಈ ಹ್ಯುಂಡೈ ಕ್ರೆಟಾ ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್, ರೆನಾಲ್ಟ್ ಡಸ್ಟರ್, ಎಂಜಿ ಹೆಕ್ಟರ್ ಹಾಗೂ ಟಾಟಾ ಹ್ಯಾರಿಯರ್ ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.

ಅಕರ್ಷಕ ವಿನ್ಯಾಸದ 2022ರ Creta ಎಸ್‍ಯುವಿಯ ಉತ್ಪಾದನೆ ಆರಂಭಿಸಿದ Hyundai

ಇನ್ನು Hyundai ತನ್ನ ಹೊಸ ಐ20 ಎನ್ ಲೈನ್ ಪರ್ಫಾಮೆನ್ಸ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. Hyundai ಕಂಪನಿಯು ಎನ್ ಸರಣಿಯ ಪರ್ಫಾಮೆನ್ಸ್ ಕಾರುಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆಯನ್ನು ಗಳಿಸಿದೆ. ಭಾರತದಲ್ಲಿ ಹ್ಯುಂಡೈ ಕಂಪನಿಯು ತನ್ನ ಎನ್ ಸರಣಿಯ ಕಾರುಗಳನ್ನು ಬಿಡುಗಡೆಗೊಳಿಸಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಎನ್ ಲೈನ್ ಪರ್ಫಾಮೆನ್ಸ್ ಕಾರುಗಳ ಬಿಡುಗಡೆಗೊಳಿಸಲಾಗುವುದು ಎಂದು ಹ್ಯುಂಡೈ ಕಂಪನಿಯು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

Most Read Articles

Kannada
English summary
2022 hyundai creta suv production begins in brazil launch soon details
Story first published: Friday, August 20, 2021, 20:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X