Just In
- 9 min ago
ಮಿನಿ ಎಂಪಿವಿ ಕಾರು ಮಾರಾಟದಲ್ಲಿ ರೆನಾಲ್ಟ್ ಟ್ರೈಬರ್ ಹೊಸ ಮೈಲಿಗಲ್ಲು
- 1 hr ago
ಎಕ್ಸ್ಯುವಿ700 ಬಿಡುಗಡೆಯ ನಂತರ ತಾತ್ಕಾಲಿಕವಾಗಿ ಮಾರಾಟದಿಂದ ಸ್ಥಗಿತವಾಗಲಿದೆ ಎಕ್ಸ್ಯುವಿ500
- 2 hrs ago
ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ರಾಯಲ್ ಎನ್ಫೀಲ್ಡ್ ಹಂಟರ್ ಬೈಕ್
- 3 hrs ago
ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮೇಲೆ ಒಟ್ಟು ರೂ.12 ಸಾವಿರ ಕೋಟಿ ಹೂಡಿಕೆ ಮಾಡಿದ ಮಹೀಂದ್ರಾ
Don't Miss!
- Finance
ಏಪ್ರಿಲ್ 13ರ ಬಿಟ್ಕಾಯಿನ್ ರೇಟ್ ಎಷ್ಟಿದೆ?
- News
ಹೆಲಿ ಟೂರಿಸಂ; 'ಸೇವ್ ಮೈಸೂರು' ಅಭಿಯಾನಕ್ಕೆ ಭಾರೀ ಬೆಂಬಲ
- Movies
ಸಾಮಾಜಿಕ ಜಾಲತಾಣಕ್ಕೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟ ಕನಸುಗಾರ
- Sports
ಚೇತನ್ ಸಕಾರಿಯಾ ಕುಟುಂಬದ ದುರಂತ ಕತೆ ಬಿಚ್ಚಿಟ್ಟ ಸೆಹ್ವಾಗ್
- Lifestyle
ಮಂಗಳವಾರದ ದಿನ ಭವಿಷ್ಯ: ಯುಗಾದಿಯಂದು ಹೇಗಿದೆ ನಿಮ್ಮ ರಾಶಿಫಲ
- Education
WCL Recruitment 2021: 44 ಮೆಡಿಕಲ್ ಸ್ಪೆಷಲಿಸ್ಟ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಎಲೆಕ್ಟ್ರಿಕ್ ವಾಹನ ಖರೀದಿ ಹೆಚ್ಚಳಕ್ಕಾಗಿ ಮತ್ತೊಂದು ಮಹತ್ವದ ಕ್ರಮ
ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ.

ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರವು ಈಗಾಗಲೇ ಫೇಮ್ 2 ಸಬ್ಸಡಿ ಯೋಜನೆಯನ್ನು ಜಾರಿಗೆ ತಂದಿದ್ದು, ಹೊಸ ಯೋಜನೆಯಡಿ ಎಲೆಕ್ಟ್ರಿಕ್ ವಾಹನ ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ಧನಸಹಾಯ ಒದಗಿಸುತ್ತಿದೆ. ಹಾಗೆಯೇ ಫೇಮ್ 2 ಯೋಜನೆಯೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ತಮ್ಮದೇ ಆದ ಎಲೆಕ್ಟ್ರಿಕ್ ವಾಹನ ನೀತಿಯನ್ನು ಅಳವಡಿಸಿಕೊಳ್ಳುತ್ತಿದ್ದು, ಫೇಮ್ 2 ಯೋಜನೆಯ ಸಬ್ಸಡಿ ಜೊತೆಗೆ ವಿವಿಧ ರಾಜ್ಯದ ಸರ್ಕಾರಗಳು ಸಹ ಕೆಲವು ವಿನಾಯ್ತಿಗಳನ್ನು ನೀಡುತ್ತಿವೆ.

ದೆಹಲಿ ಸರ್ಕಾರವು ಇತರೆ ರಾಜ್ಯಗಳಿಗಳಿಂತಲೂ ಅತ್ಯುತ್ತಮ ಇವಿ ವಾಹನ ನೀತಿ ಅಡಿಯಲ್ಲಿ ಪರಿಸರಕ್ಕೆ ಪೂರಕವಾದ ವಾಹನಗಳ ನೋಂದಣಿಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ದೆಹಲಿ ನಂತರ ಇತರೆ ರಾಜ್ಯಗಳಲ್ಲೂ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿದಾರರನ್ನು ಉತ್ತೇಜಿಸಲು ಗರಿಷ್ಠ ಸಬ್ಸಡಿ ಮತ್ತು ನೋಂದಣಿ ಶುಲ್ಕವನ್ನು ಮನ್ನಾದಂತಹ ಯೋಜನೆಗಳನ್ನು ಪ್ರಕಟಿಸುತ್ತಿವೆ.

ಎಲೆಕ್ಟ್ರಿಕ್ ವಾಹನಗಳ ಖರೀದಿದಾರರಿಗೆ ದೆಹಲಿ ಸರ್ಕಾರವು ಈಗಾಗಲೇ ಗರಿಷ್ಠ ಪ್ರಮಾಣದ ಸಬ್ಸಡಿ ಯೋಜನೆಯನ್ನು ಜಾರಿಗೆ ತಂದಿದ್ದು, ರಸ್ತೆ ತೆರಿಗೆ ಮತ್ತು ವಾಹನ ನೋಂದಣಿಯಿಂದಲೂ ವಿನಾಯ್ತಿ ನೀಡಲಾಗಿದೆ.

ಇದೀಗ ಮತ್ತೊಂದು ಮಹತ್ವದ ಕ್ರಮ ಪ್ರಕಟಿಸಲು ಮುಂದಾಗಿರುವ ದೆಹಲಿ ಸರ್ಕಾರವು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ವಾಹನದ ಮೇಲೆ ಸಾಲದ ಬಡ್ಡಿ ಮರುಪಾವತಿಸಲು ಶೇ.5 ರಷ್ಟು ಸಬ್ಸಡಿ ನೀಡುವ ಕುರಿತು ಒಪ್ಪಿಗೆ ಸೂಚಿಸಿದ್ದು, ಶೀಘ್ರದಲ್ಲೇ ಹೊಸ ವಾಹನಗಳ ಖರೀದಿ ಮೇಲಿನ ಬಡ್ಡಿಸಾಲ ಮರುಪಾವತಿಗಾಗಿ ಶೇ.5 ರಷ್ಟು ಬಡ್ಡಿ ಸಬ್ಸಡಿ ನೀಡಲಿದೆ.

ಇನ್ನು ದೆಹಲಿಯಲ್ಲಿ ಹೊಸ ಇವಿ ನೀತಿ ಜಾರಿಗೆ ಬಂದ ಆರು ತಿಂಗಳ ಅವಧಿಯಲ್ಲಿ ದೆಹಲಿಯಲ್ಲಿ ಸುಮಾರು 7 ಸಾವಿರ ಎಲೆಕ್ಟ್ರಿಕ್ ವಾಹನಗಳು ಮಾರಾಟಗೊಂಡಿದ್ದು, ಹೊಸ ನೀತಿಯಲ್ಲಿ ವಿವಿಧ ಮಾದರಿಯ ಒಟ್ಟು 21 ಎಲೆಕ್ಟ್ರಿಕ್ ವಾಹನ ಮಾದರಿಗಳಿಗೆ ಸಬ್ಸಡಿ ನೀಡಲಾಗುತ್ತಿದೆ.

ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ಸ್ವಿಚ್ ದೆಹಲಿ ಅಭಿಯಾನದ ನಂತರ ಇವಿ ನೀತಿ ಅಡಿಯಲ್ಲಿ ಸಾವಿರಾರು ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿದ್ದು, ಹೊಸ ಇವಿ ನೀತಿ ಅಡಿಯಲ್ಲಿ ನೋಂದಣಿಯಾದ ವಾಹನಗಳಿಗೆ ಇದುವರೆಗೆ ಸುಮಾರು ರೂ.13.50 ಕೋಟಿ ಸಹಾಯಧನ ನೀಡಲಾಗಿದೆ.

ಹೊಸ ವಾಹನ ಖರೀದಿ ನಂತರ ದೆಹಲಿ ಸಾರಿಗೆ ಇಲಾಖೆಯಲ್ಲಿ ಹೊಸ ವಾಹನದ ಮಾಹಿತಿ ನೀಡಿದ ನಂತರ ನೇರವಾಗಿ ವಾಹನ ಖರೀದಿದಾರರ ಖಾತೆಗೆ ಸಬ್ಸಡಿ ಹಣ ಜಮಾ ಮಾಡಲಾಗುತ್ತಿದ್ದು, ವಿವಿಧ ಎಲೆಕ್ಟ್ರಿಕ್ ವಾಹನಗಳಿಗೆ ವಿವಿಧ ಹಂತದ ಸಬ್ಸಡಿ ಪಾವತಿಸಲಾಗಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಇವಿ ವಾಹನಗಳ ಖರೀದಿ ಉತ್ತೇಜಿಸುವುದರ ಜೊತೆಗೆ ಸಾರ್ವಜನಿಕ ಬಳಕೆಯ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ಸಹ ತೆರೆಯಲಾಗುತ್ತಿದ್ದು, ಶೀಘ್ರದಲ್ಲೇ 100 ಹೊಸ ಇವಿ ನಿಲ್ದಾಣಗಳಿಗೆ ಚಾಲನೆ ನೀಡುವುದಾಗಿ ದೆಹಲಿ ಸರ್ಕಾರವು ಸ್ಪಷ್ಟಪಡಿಸಿದೆ.

ಹೊಸ ಇವಿ ನೀತಿ ಅಡಿ ನಿರ್ಮಾಣ ಮಾಡಲಾಗುತ್ತಿರುವ ಹೊಸ ಇವಿ ಚಾರ್ಜಿಂಗ್ ನಿಲ್ದಾಣಗಳನ್ನು ಮಾಹಾನಗರ ಪಾಲಿಕೆಯ ಕಚೇರಿಗಳು, ದೆಹಲಿ ಅಭಿವೃದ್ದಿ ಪ್ರಾಧಿಕಾರ, ದೆಹಲಿ ಸಾರಿಗೆ ನಿಗಮ ಸಂಸ್ಥೆಗಳ ಅಧೀನದಲ್ಲಿರುವ ಕಚೇರಿಗಳ ಆವರಣಗಳಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಚಾರ್ಜಿಂಗ್ ಪ್ರಮಾಣಗಳಿಗೆ ಶೀಘ್ರದಲ್ಲೇ ದರ ಪಟ್ಟಿಯನ್ನು ನಿಗದಿಪಡಿಸಲಿದೆ.
MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಸರ್ಕಾರದ ಅಧೀನದಲ್ಲಿನ ಚಾರ್ಜ್ ನಿಲ್ದಾಣ ಹೊರತುಪಡಿಸಿ ಖಾಸಗಿ ಕಂಪನಿಗಳು ಕೂಡಾ ಆಯ್ದ ಪೆಟ್ರೋಲ್ ಬಂಕ್‌ಗಳೊಂದಿಗೆ ಜೊತೆಗೂಡಿ ಫಾಸ್ಟ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ತೆರೆಯುತ್ತಿದ್ದು, ಇದೀಗ ದೆಹಲಿ ಸರ್ಕಾರವೇ ಹೆಚ್ಚಿನ ಸಂಖ್ಯೆಯಲ್ಲಿ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣ ಮಾಡುತ್ತಿರುವುದು ಇವಿ ವಾಹನಗಳ ಬಳಕೆ ಹೆಚ್ಚಲು ಪ್ರಮುಖ ಕಾರಣವಾಗಲಿದೆ.