ಭಾರತದಲ್ಲೂ ಬಿಡುಗಡೆಯಾಗಲಿದೆ ಹ್ಯುಂಡೈ ಬಹುನೀರಿಕ್ಷಿತ ಐಯಾನಿಕ್ 5 ಇವಿ ಕಾರು

ಹ್ಯುಂಡೈ ಮೋಟಾರ್ಸ್ ಕಂಪನಿಯು ಭಾರತದಲ್ಲಿ ಪ್ರಯಾಣಿಕ ಕಾರು ಮಾರಾಟ ಆರಂಭಿಸಿ ಯಶಸ್ವಿ 25 ವರ್ಷಗಳನ್ನು ಪೂರೈಸಿದ್ದು, 25ನೇ ವರ್ಷದ ಸಂಭ್ರಮಕ್ಕಾಗಿ ಹ್ಯುಂಡೈ ಕಂಪನಿಯು ಹೊಸ ಕಾರ್ಪೊರೇಟ್ ಕಚೇರಿ ತೆರೆದಿದೆ.

ಭಾರತದಲ್ಲೂ ಬಿಡುಗಡೆಯಾಗಲಿದೆ ಹ್ಯುಂಡೈ ಬಹುನೀರಿಕ್ಷಿತ ಐಯಾನಿಕ್ 5 ಇವಿ ಕಾರು

ಜಾಗತಿಕ ಮಟ್ಟದಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ದಕ್ಷಿಣ ಕೊರಿಯಾದ ಹ್ಯುಂಡೈ ಮೋಟಾರ್ಸ್ ಕಂಪನಿಯು ತನ್ನ ಹೊಚ್ಚ ಹೊಸ ಅತ್ಯಾಧುನಿಕ ಸೌಲಭ್ಯವುಳ್ಳ ಐಯಾನಿಕ್ 5 ಅನಾವರಣಗೊಳಿಸಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹೊಸ ಕಾರನ್ನು ಹ್ಯುಂಡೈ ಕಂಪನಿಯು ಭಾರತ ಸೇರಿದಂತೆ ವಿಶ್ವದ ಪ್ರಮುಖ ಮಾರುಕಟ್ಟೆಗಳಿಗೆ ಪರಿಚಯಿಸುವ ಸುಳಿವು ನೀಡಿದೆ.

ಭಾರತದಲ್ಲೂ ಬಿಡುಗಡೆಯಾಗಲಿದೆ ಹ್ಯುಂಡೈ ಬಹುನೀರಿಕ್ಷಿತ ಐಯಾನಿಕ್ 5 ಇವಿ ಕಾರು

ಹೊಸ ಐಯಾನಿಕ್ 5 ಇವಿ ಕಾರು ಮಾದರಿಯನ್ನು ಹ್ಯುಂಡೈ ಕಂಪನಿಯು ಭಾರತದಲ್ಲಿ 25ನೇ ವರ್ಷದ ಸಂಭ್ರಮಾಚರಣೆಗಾಗಿ ಚಾಲನೆ ನೀಡಲಾಗಿರುವ ತನ್ನ ಹೊಸ ಕಾರ್ಪೊರೇಟ್ ಕಚೇರಿಯಲ್ಲಿ ಪ್ರದರ್ಶನಗೊಳಿಸಿದ್ದು, ಭವಿಷ್ಯ ವಾಹನಗಳ ಮೇಲೆ ಕಂಪನಿಯು ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದೆ.

ಭಾರತದಲ್ಲೂ ಬಿಡುಗಡೆಯಾಗಲಿದೆ ಹ್ಯುಂಡೈ ಬಹುನೀರಿಕ್ಷಿತ ಐಯಾನಿಕ್ 5 ಇವಿ ಕಾರು

ಭಾರತದಲ್ಲಿ ಸದ್ಯ ಕೊನಾ ಎಲೆಕ್ಟ್ರಿಕ್ ಮೂಲಕ ಇವಿ ವಾಹನ ಉದ್ಯಮ ಪ್ರವೇಶಿಸಿರುವ ಹ್ಯುಂಡೈ ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಇವಿ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಗುರುಗ್ರಾಮ್‌ನಲ್ಲಿ ತೆರೆಯಲಾಗಿರುವ ಹೊಸ ಕಾರ್ಪೊರೇಟ್ ಕಚೇರಿ ಆವರಣದಲ್ಲಿ ಐಯಾನಿಕ್ 5 ಎಲೆಕ್ಟ್ರಿಕ್ ಮತ್ತು ನೆಕ್ಸೊ ಹೈಡ್ರೊಜನ್ ಫ್ಯೂಲ್ ಸೆಲ್ಸ್ ಕಾರನ್ನು ಪ್ರದರ್ಶನ ಮಾಡಿದೆ.

ಭಾರತದಲ್ಲೂ ಬಿಡುಗಡೆಯಾಗಲಿದೆ ಹ್ಯುಂಡೈ ಬಹುನೀರಿಕ್ಷಿತ ಐಯಾನಿಕ್ 5 ಇವಿ ಕಾರು

ಎಲೆಕ್ಟ್ರಿಕ್ ಜೊತೆಗೆ ಭವಿಷ್ಯದಲ್ಲಿ ಹೈಡ್ರೊಜನ್ ಫ್ಯೂಲ್ ಸೆಲ್ಸ್ ವಾಹನಗಳು ಕೂಡಾ ಸದ್ದು ಮಾಡುವ ನೀರಿಕ್ಷೆಯಿದ್ದು, ಹೊಸ ಮಾದರಿಯ ವಾಹನಗಳ ಸಂಶೋಧನೆ ಮತ್ತು ಅಭಿವೃದ್ದಿ ಮೇಲೆ ಹೆಚ್ಚಿನ ಗಮನಹರಿಸಿರುವ ಹ್ಯುಂಡೈ ಕೂಡಾ ಶೀಘ್ರದಲ್ಲೇ ಐಯಾನಿಕ್ 5 ಕಾರನ್ನು ವಿಶ್ವದ ಪ್ರಮುಖ ಮಾರುಕಟ್ಟೆಗೆ ಪರಿಚಯಿಸಲಿದೆ.

ಭಾರತದಲ್ಲೂ ಬಿಡುಗಡೆಯಾಗಲಿದೆ ಹ್ಯುಂಡೈ ಬಹುನೀರಿಕ್ಷಿತ ಐಯಾನಿಕ್ 5 ಇವಿ ಕಾರು

ಹ್ಯುಂಡೈ ಕಂಪನಿಯು ಹೊಸ ಐಯಾನಿಕ್ 5 ಇವಿ ಕಾರನ್ನು ಸದ್ಯಕ್ಕೆ ಭಾರತದಲ್ಲಿ ಬಿಡುಗಡೆ ಮಾಡುವುದಿಲ್ಲವಾದರೂ ಹೊಸ ಕಾರಿನ ಮಾಹಿತಿಗಾಗಿ ಕಾರ್ಪೊರೇಟ್ ಕಚೇರಿ, ಪ್ರಮುಖ ಡೀಲರ್ಸ್‌ಗಳಲ್ಲಿ ಪ್ರದರ್ಶನಗೊಳಿಸಲು ನಿರ್ಧರಿಸಿದೆ.

ಭಾರತದಲ್ಲೂ ಬಿಡುಗಡೆಯಾಗಲಿದೆ ಹ್ಯುಂಡೈ ಬಹುನೀರಿಕ್ಷಿತ ಐಯಾನಿಕ್ 5 ಇವಿ ಕಾರು

ಈ ವರ್ಷಾಂತ್ಯಕ್ಕೆ ಅಮೆರಿಕ ಮತ್ತು ಯುರೋಪಿನ ಪ್ರಮುಖ ಮಾರುಕಟ್ಟೆಗಳನ್ನು ಪ್ರವೇಶಿಸಲಿರುವ ಐಯಾನಿಕ್ 5 ಕಾರನ್ನು ಹ್ಯುಂಡೈ ಕಂಪನಿಯು ಭಾರತದಲ್ಲಿ ಸದ್ಯಕ್ಕೆ ಬಿಡುಗಡೆ ಮಾಡುವುದಿಲ್ಲವಾದರೂ ಆಮದು ಸುಂಕ ಪರಿಷ್ಕಣೆ ಮಾಡಿದ್ದಲ್ಲಿ ಖಂಡಿತವಾಗಿಯೂ ಮುಂದಿನ ಕೆಲ ವರ್ಷಗಳಲ್ಲಿ ಐಯಾನಿಕ್ 5 ಭಾರತ ಪ್ರವೇಶಿಸಲಿದೆ.

ಭಾರತದಲ್ಲೂ ಬಿಡುಗಡೆಯಾಗಲಿದೆ ಹ್ಯುಂಡೈ ಬಹುನೀರಿಕ್ಷಿತ ಐಯಾನಿಕ್ 5 ಇವಿ ಕಾರು

ಸದ್ಯ ಆಮದುಗೊಳ್ಳುವ ಐಷಾರಾಮಿ ವಾಹನಗಳ ಮೇಲೆ ಶೇ. 102ರಷ್ಟು ತೆರಿಗೆ ವಿಧಿಸುತ್ತಿರುವುದರಿಂದ ವಾಹನಗಳ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದ್ದು, ತೆರಿಗೆ ಪರಿಷ್ಕರಣೆ ಸಾಕಷ್ಟು ಒತ್ತಡಗಳು ಕೇಳಿಬರುತ್ತಿವೆ.

ಭಾರತದಲ್ಲೂ ಬಿಡುಗಡೆಯಾಗಲಿದೆ ಹ್ಯುಂಡೈ ಬಹುನೀರಿಕ್ಷಿತ ಐಯಾನಿಕ್ 5 ಇವಿ ಕಾರು

ಭಾರತ ಸರ್ಕಾರವು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ ಆಮದುಗೊಳ್ಳುವ ಇವಿ ವಾಹನಗಳಿಗೆ ತೆರಿಗೆಯಲ್ಲಿ ಕೆಲವು ವಿನಾಯ್ತಿ ಸಿಗಬಹುದಾದ ಸಾಧ್ಯತೆಗಳಿದ್ದು, ತೆರಿಗೆ ವಿನಾಯ್ತಿ ಸಿಕ್ಕಲ್ಲಿ ಹ್ಯುಂಡೈ ಐಯಾನಿಕ್ 5 ಸೇರಿದಂತೆ ಹಲವಾರು ಕಂಪನಿಗಳು ತಮ್ಮ ಜನಪ್ರಿಯ ವಾಹನಗಳನ್ನು ಭಾರತದಲ್ಲೂ ಬಿಡುಗಡೆ ಮಾಡಲಿವೆ.

ಭಾರತದಲ್ಲೂ ಬಿಡುಗಡೆಯಾಗಲಿದೆ ಹ್ಯುಂಡೈ ಬಹುನೀರಿಕ್ಷಿತ ಐಯಾನಿಕ್ 5 ಇವಿ ಕಾರು

ಇನ್ನು ವಿಸ್ತೃತ ವೀಲ್‌ಬೇಸ್‌ನ ಕಾರಣದಿಂದಾಗಿ ಐಯಾನಿಕ್ 5 ಕಾರು ಹಲವಾರು ವಿಶಿಷ್ಟ್ಯತೆಗಳೊಂದಿಗೆ ಅಭಿವೃದ್ದಿಗೊಂಡಿದ್ದು, ಹೊಸ ಎಲೆಕ್ಟ್ರಿಕ್ ಕಾರನ್ನು ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್ (ಇ-ಜಿಎಂಪಿ) ತಂತ್ರಜ್ಞಾನದಡಿ ನಿರ್ಮಾಣ ಮಾಡಲಾಗಿದೆ.

ಭಾರತದಲ್ಲೂ ಬಿಡುಗಡೆಯಾಗಲಿದೆ ಹ್ಯುಂಡೈ ಬಹುನೀರಿಕ್ಷಿತ ಐಯಾನಿಕ್ 5 ಇವಿ ಕಾರು

ಐಯಾನಿಕ್ 5 ಕಾರು ಮಾದರಿಯು 4635 ಎಂಎಂ ಉದ್ದ, 1890 ಎಂಎಂ ಅಗಲ, 1605 ಎಂಎಂ ಎತ್ತರ ಮತ್ತು 3000 ಎಂಎಂ ವೀಲ್‌ಬೇಸ್‌ನೊಂದಿಗೆ ವಿಶಾಲವಾದ ಕ್ಯಾಬಿನ್ ಹೊಂದಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 58 ಕಿ.ವ್ಯಾ ಮತ್ತು 72.6 ಕಿ.ವ್ಯಾ ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿದೆ.

ಭಾರತದಲ್ಲೂ ಬಿಡುಗಡೆಯಾಗಲಿದೆ ಹ್ಯುಂಡೈ ಬಹುನೀರಿಕ್ಷಿತ ಐಯಾನಿಕ್ 5 ಇವಿ ಕಾರು

ಐಯಾನಿಕ್ 5 ಕಾರು ಬ್ಯಾಟರಿ ಪ್ಯಾಕ್ ಆಧಾರದ ಪ್ರತಿ ಚಾರ್ಜ್‌ಗೆ ಗರಿಷ್ಠ 470-480 ಕಿ.ಮೀ ಮೈಲೇಜ್ ಹಿಂದಿಗಿರುಗಿಸಲಿದ್ದು, ಆಧುನಿಕ ತಂತ್ರಜ್ಞಾನ ಪ್ರೇರಿತ ಚಾರ್ಜಿಂಗ್ ಸೌಲಭ್ಯದೊಂದಿಗೆ ಕೇವಲ 5 ನಿಮಿಷಗಳ ಕಾಲ ಚಾರ್ಜ್ ಮಾಡಿದರೂ 100 ಕಿ.ಮೀ ಮೈಲೇಜ್ ಪಡೆದುಕೊಳ್ಳಬಹುದಾಗಿದೆ.

Most Read Articles

Kannada
English summary
Hyundai Ioniq 5 Electric Vehicle Displayed In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X