ಬಹುನಿರೀಕ್ಷಿತ 2022ರ Jeep Grand Cherokee ಎಸ್‍ಯುವಿಯ ಟೀಸರ್ ಬಿಡುಗಡೆ

ಅಮೆರಿಕ ಮೂಲದ ವಾಹನ ತಯಾರಕ ಕಂಪನಿಯಾದ ಜೀಪ್ ತನ್ನ ಹೊಸ ಗ್ರ್ಯಾಂಡ್ ಚರೋಕಿ ಎಸ್‍ಯುವಿಯನ್ನು ಪರಿಚಯಿಸಲು ಸಜ್ಜಾಗಿದೆ. ಈ ಹೊಸ ಜೀಪ್ ಗ್ರ್ಯಾಂಡ್ ಚರೋಕಿ(Jeep Grand Cherokee) ಮಾದರಿಯು ಐಷಾರಾಮಿ ಮತ್ತು ಸಮರ್ಥ ಆಫ್-ರೋಡ್ ಎಸ್‍ಯುವಿಯಾಗಿರುತ್ತದೆ.

ಬಹುನಿರೀಕ್ಷಿತ 2022ರ Jeep Grand Cherokee ಎಸ್‍ಯುವಿಯ ಟೀಸರ್ ಬಿಡುಗಡೆ

ಜೀಪ್ ಕಂಪನಿಯು 4xe ಹೈಬ್ರಿಡ್ ಪ್ಲಗ್-ಇನ್ ರೂಪಾಂತರವನ್ನು ಒಳಗೊಂಡಂತೆ ಐದನೇ ತಲೆಮಾರಿನ ಗ್ರ್ಯಾಂಡ್ ಚರೋಕಿ ಎರಡು-ಸಾಲಿನ ಎಸ್‍ಯುವಿಯನ್ನು ಇದೇ ತಿಂಗಳ 29, 2021 ರಂದು ಪರಿಚಯಿಸಲಿದೆ. 2022ರ ಜೀಪ್ ಗ್ರ್ಯಾಂಡ್ ಚರೋಕಿ ಅತ್ಯಂತ ತಾಂತ್ರಿಕವಾಗಿ ಮುಂದುವರಿದ ಎಸ್‍ಯುವಿ ಮಾದರಿಯಾಗಿದೆ. ಈ ಐಷಾರಾಮಿ ಮತ್ತು 4x4 ಸಾಮರ್ಥ್ಯದ ಗ್ರ್ಯಾಂಡ್ ಚರೋಕಿಯಾಗಿರುತ್ತದೆ ಎಂದು ಕಾರು ತಯಾರಕರು ಹೇಳಿದ್ದಾರೆ, 2021ರ ನ್ಯೂಯಾರ್ಕ್ ಆಟೋ ಶೋನಲ್ಲಿ ಈ ಎಸ್‍ಯುವಿ ಜಾಗತಿಕವಾಗಿ ಎಂಟ್ರಿಯಾಗಲಿದೆ ಎಂದು ವರದಿಗಳಾಗಿತ್ತು.

ಬಹುನಿರೀಕ್ಷಿತ 2022ರ Jeep Grand Cherokee ಎಸ್‍ಯುವಿಯ ಟೀಸರ್ ಬಿಡುಗಡೆ

ಆದರೆ ಕರೋನಾ ಸೋಂಕಿನಿಂದ ಮೋಟಾರ್ ಶೋ ರದ್ದಾದ ನಂತರ ಈ ಯೋಜನೆಯನ್ನು ಕೈಬಿಡಲಾಯಿತು. ತನ್ನ ಲೋಕಾರ್ಪಣೆಯ ಮುಂಚೆ, ವಾಹನ ತಯಾರಕ ತನ್ನ ಸೋಷಿಯಲ್ ಮೀಡಿಯಾದಲ್ಲಿ ಖಾತೆಯಲ್ಲಿ ಕಿರು ಟೀಸರ್ ವೀಡಿಯೋವನ್ನು ಬಿಡುಗಡೆ ಮಾಡಿದ್ದು, ಗ್ರ್ಯಾಂಡ್ ಚರೋಕಿಯ ಮುಂಭಾಗವನ್ನು ಬಹಿರಂಗಪಡಿಸಿದೆ.

ಬಹುನಿರೀಕ್ಷಿತ 2022ರ Jeep Grand Cherokee ಎಸ್‍ಯುವಿಯ ಟೀಸರ್ ಬಿಡುಗಡೆ

ಟೀಸರ್ ಅನ್ನು ಆಧರಿಸಿ, ಎರಡು ಸಾಲಿನ ಗ್ರ್ಯಾಂಡ್ ಚರೋಕಿಯ ಮುಂಭಾಗವು ಅದರ ಹಿರಿತ ಸಹೋದರ ಎಸ್‍ಯುವಿಗೆ ಹೋಲುವಂತಿದೆ, ಸ್ಟೆಲಾಂಟಿಸ್ ಒಡೆತನದ ಅಮೇರಿಕನ್ ಎಸ್‌ಯುವಿ ತಯಾರಕರು ಕೆಲವು ತಿಂಗಳ ಹಿಂದೆ ಎಲೆಕ್ಟ್ರಿಫೈಡ್ ಜೀಪ್ ಗ್ರ್ಯಾಂಡ್ ಚೆರೋಕೀ 4xe ಪ್ಲಗ್-ಇನ್ ಹೈಬ್ರಿಡ್‌ನ ಮೊದಲ ಚಿತ್ರಗಳನ್ನು ಬಹಿರಂಗಪಡಿಸಿದರು. ಇದು ವ್ರಾಂಗ್ಲರ್ 4xe, ಕಂಪಾಸ್ 4xe ಮತ್ತು ರೆನೆಗೇಡ್ 4xe ನಂತರ ಬ್ರ್ಯಾಂಡ್‌ನ ನಾಲ್ಕನೇ ಪ್ಲಗ್-ಇನ್ ಹೈಬ್ರಿಡ್ ಕೊಡುಗೆಯಾಗಿದೆ.

ಬಹುನಿರೀಕ್ಷಿತ 2022ರ Jeep Grand Cherokee ಎಸ್‍ಯುವಿಯ ಟೀಸರ್ ಬಿಡುಗಡೆ

ಗ್ರ್ಯಾಂಡ್ ಚರೋಕಿ ಎಸ್‍ಯುವಿ ಸಿಗ್ನೇಚರ್ ಶೈಲಿಯ ಏಳು-ಸ್ಲಾಟ್ ಗ್ರಿಲ್ ಅನ್ನು ಹೊಂದಿದೆ, ಇದು ಒಂದು ಜೋಡಿ ನಯವಾದ ಹೆಡ್‌ಲ್ಯಾಂಪ್‌ಗಳಿಂದ ಆವೃತವಾಗಿದೆ. ಇನ್ನು ಜೀಪ್ ಕಂಪನಿಯು ಕೆಲವು ತಿಂಗಳ ಹಿಂದೆ ಎಲೆಕ್ಟ್ರಿಫೈಡ್ ಜೀಪ್ ಗ್ರ್ಯಾಂಡ್ ಚರೋಕಿ 4xe ಪ್ಲಗ್-ಇನ್ ಹೈಬ್ರಿಡ್‌ನ ಮೊದಲ ಚಿತ್ರಗಳನ್ನು ಬಹಿರಂಗಪಡಿಸಿದರು. ಇದು ವ್ರಾಂಗ್ಲರ್ 4xe, ಕಂಪಾಸ್ 4xe ಮತ್ತು ರೆನೆಗೇಡ್ 4xe ನಂತರ ಬ್ರ್ಯಾಂಡ್‌ನ ನಾಲ್ಕನೇ ಪ್ಲಗ್-ಇನ್ ಹೈಬ್ರಿಡ್ ಕೊಡುಗೆಯಾಗಿದೆ.

ಬಹುನಿರೀಕ್ಷಿತ 2022ರ Jeep Grand Cherokee ಎಸ್‍ಯುವಿಯ ಟೀಸರ್ ಬಿಡುಗಡೆ

ಪವರ್‌ಟ್ರೇನ್ ವಿಶೇಷಣಗಳು ಮತ್ತು ಇತರ ವಿವರಗಳನ್ನು ಸದ್ಯಕ್ಕೆ ಬಹಿರಂಗಪಡಿಸಲಾಗಿಲ್ಲ. ಆದರೆ ಎಸ್‌ಯುವಿ ಗ್ರಾಂಡ್ ಚೆರೋಕೀ ಎಲ್ ನಿಂದ ವಿ6 ಮತ್ತು ವಿ8 ಎಂಜಿನ್‌ಗಳನ್ನು ಪಡೆಯುವ ಸಾಧ್ಯತೆಯಿದೆ. ಮೊದಲನೆಯದು 282 ಬಿಹೆಚ್‌ಪಿ ಪವರ್ 352 ಟಾರ್ಕ್‌ನೊಂದಿಗೆ ಟ್ಯೂನ್ ಮಾಡಲಾಗಿದ್ದು, ಎರಡನೆಯದು 352 ಬಿಹೆಚ್‌ಪಿ ಪವರ್ ಮತ್ತು 528 ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಬಹುನಿರೀಕ್ಷಿತ 2022ರ Jeep Grand Cherokee ಎಸ್‍ಯುವಿಯ ಟೀಸರ್ ಬಿಡುಗಡೆ

ಈ ಎರಡೂ ಎಂಜಿನ್‌ಗಳು 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಹಿಂಬದಿ ವ್ಹೀಲ್ ಮತ್ತು ಫ್ಹೋರ್ ವ್ಹೀಲ್ ಡ್ರೈವ್ ನೊಂದಿಗೆ ಬರುತ್ತದೆ. ಹೈಬ್ರಿಡ್ ಮಾದರಿಯು ಜೀಪ್ ವ್ರಾಂಗ್ಲರ್‌ನಿಂದ ಪ್ಲಗ್-ಇನ್ ಹೈಬ್ರಿಡ್ ಪವರ್‌ಟ್ರೇನ್‌ನ ಆವೃತ್ತಿಯನ್ನು ಬಳಸಬಹುದು, ಇದು 2.0-ಲೀಟರ್ ಟರ್ಬೊ ಯುನಿಟ್ ಆಗಿದ್ದು. ಎರಡು ಎಲೆಕ್ಟ್ರಿಕ್ ಮೋಟಾರ್‌ಗಳ ಜೊತೆಯಲ್ಲಿ 375 ಬಿಎಚ್‌ಪಿ ಮತ್ತು 673 ಎನ್ಎಂ ಟಾರ್ಕ್ ಅನ್ನು ಸಂಯೋಜಿಸುತ್ತದೆ.

ಬಹುನಿರೀಕ್ಷಿತ 2022ರ Jeep Grand Cherokee ಎಸ್‍ಯುವಿಯ ಟೀಸರ್ ಬಿಡುಗಡೆ

ಜೀಪ್ ತನ್ನ ಹೊಸ ಕಮಾಂಡರ್‌ ಎಸ್‌ಯುವಿಯನ್ನು ಇತ್ತೀಚೆಗೆ ಬ್ರೆಜಿಲ್‌ನಲ್ಲಿ ಅನಾವರಣಗೊಳಿಸಿದೆ. ಜೀಪ್ ಕಂಪನಿಯು ಭಾರತದಲ್ಲಿ ಈ ಮಾದರಿಯನ್ನು ಮೆರಿಡಿಯನ್‌ಎಂಬ ಹೆಸರಿನಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಯಿದೆ. 2022ರಲ್ಲಿ ಭಾರತದ ಮಾರುಕಟ್ಟೆಗೆ ಮೆರಿಡಿಯನ್‌ ಮಾದರಿಯನ್ನು ಬಿಡುಗಡೆಗೊಳಿಸಲಿದೆ. ಆದರೆ ಜೀಪ್ ಕಂಪನಿಯು ಮೆರಿಡಿಯನ್‌ ಎಸ್‍ಯುವಿಯ ಭಾರತದ ಬಿಡುಗಡೆಯ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ,

ಬಹುನಿರೀಕ್ಷಿತ 2022ರ Jeep Grand Cherokee ಎಸ್‍ಯುವಿಯ ಟೀಸರ್ ಬಿಡುಗಡೆ

ಇಂಡಿಯಾ-ಸ್ಪೆಕ್ ಮಾದರಿಯನ್ನು 'ಮೆರಿಡಿಯನ್' ಹೆಸರಿನಲ್ಲಿ ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸುತ್ತೇವೆ. ಏಕೆಂದರೆ ಮಹೀಂದ್ರಾ ಕಂಪನಿಯು ಭಾರತದಲ್ಲಿ 'ಕಮಾಂಡರ್' ಟ್ರೇಡ್‌ಮಾರ್ಕ್ ಹೊಂದಿದೆ. ಇದರಿಂದ ಮೆರಿಡಿಯನ್‌ ಹೆಸರಿನಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಾಗುತ್ತಿದೆ ಎಂದು ನಿರೀಕ್ಷಿಸುತ್ತೇವೆ.

ಬಹುನಿರೀಕ್ಷಿತ 2022ರ Jeep Grand Cherokee ಎಸ್‍ಯುವಿಯ ಟೀಸರ್ ಬಿಡುಗಡೆ

ಕಮಾಂಡರ್ ಎಸ್‍ಯುವಿಯ ಆಫ್-ರೋಡ್ ಸಾಮರ್ಥ್ಯದ ವಿಡಿಯೋವನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ವಿಡಿಯೋದಲ್ಲಿ ಬೆಟ್ಟ ಹತ್ತುವಿಕೆ, ವಿಭಿನ್ನ ಭೂಪ್ರದೇಶಗಳನ್ನು ಸಾಗುವುದನ್ನು ಪ್ರದರ್ಶಿಸಿದ್ದಾರೆ. ವಿವಿಧ ಆಫ್-ರೋಡ್ ಸವಾಲುಗಳನ್ನು ನಿರ್ವಹಿಸುವುದನ್ನು ವಿಡಿಯೋದಲ್ಲಿ ಪ್ರದರ್ಶಿಸಲಾಗಿದೆ. ಈ ಎಸ್‍ಯುವಿಯು ವಿಡಿಯೋದಲ್ಲಿ ಮೊದಲು ಕಡಿದಾದ ಇಳಿಜಾರಿನಲ್ಲಿ ಸುಲಭವಾಗಿ ಇಳಿಯುತ್ತದೆ, ನಂತರ, ಇದು ಆಕ್ಸಲ್ ಟ್ವಿಸ್ಟರ್ ರನ್ ಅನ್ನು ನೋಡುತ್ತೇವೆ, ಅದು ಕೂಡ ಹೆಚ್ಚು ಸಮಸ್ಯೆಯಾಗಿರಲಿಲ್ಲ. ಮುಂದೆ, ಜೀಪ್ ಮೆಟ್ಟಿಲುಗಳ ಮೇಲೆ ಏರುತ್ತದೆ.

ಬಹುನಿರೀಕ್ಷಿತ 2022ರ Jeep Grand Cherokee ಎಸ್‍ಯುವಿಯ ಟೀಸರ್ ಬಿಡುಗಡೆ

ಬ್ರೆಜಿಲ್ ಈ ಕಮಾಂಡರ್ ಎಸ್‍ಯುವಿಯು ಮೊದಲು ಬಿಡುಗಡೆಯಾಗಲಿದೆ, ಭಾರತದಲ್ಲಿ ಈ ಎಸ್‍ಯುವಿಯು ಮುಂದಿನ ವರ್ಷ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಬ್ರೆಜಿಲ್‌ನಲ್ಲಿ ಈ ಕಮಾಂಡರ್ ಎಸ್‌ಯುವಿಯನ್ನು ಗೊಯಾನಾ ಆಧಾರಿತ ಘಟಕದಲ್ಲಿ ಉತ್ಪಾದಿಸಲಾಗುತ್ತದೆ. ಬಲಗೈ ಡ್ರೈವ್ (ಆರ್‌ಎಚ್‌ಡಿ) ಎಸ್‍ಯುವಿಯನ್ನು ಜೀಪ್‌ನ ರಂಜನಗಾಂವ್ ಘಟಕದಲ್ಲಿ ತಯಾರಿಸಲಿದೆ,

ಬಹುನಿರೀಕ್ಷಿತ 2022ರ Jeep Grand Cherokee ಎಸ್‍ಯುವಿಯ ಟೀಸರ್ ಬಿಡುಗಡೆ

ಕಂಪಾಸ್ ಎಸ್‌ಯುವಿಗಿಂತ ಉದ್ದವಾದ ಕಮಾಂಡರ್ ಹೆಚ್ಚು ವಿಶಾಲವಾದ ಮತ್ತು ಪ್ರೀಮಿಯಂ ಮಾದರಿಯಾಗಿದೆ. ಆಯತಾಕಾರದ ಫುಲ್-ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಸ್ಲಿಮ್ ಟೈಲ್‌ಲ್ಯಾಂಪ್‌ಗಳನ್ನು ಒಳಗೊಂಡಂತೆ ಅದರ ಕೆಲವು ವಿನ್ಯಾಸ ಬಿಟ್‌ಗಳು ಗ್ರ್ಯಾಂಡ್ ಚೆರೋಕೀ ಎಲ್‌ನಿಂದ ಪ್ರೇರಿತವಾಗಿವೆ. ಈ ಜೀಪ್ ಎಸ್‍ಯುವಿಯ ಮುಂಭಾಗದ ಗ್ರಿಲ್ ಕಂಪಾಸ್ 5-ಸೀಟರ್‌ನಂತೆಯೇ ಕಾಣುತ್ತದೆ, ಹೊಸದಾಗಿ ವಿನ್ಯಾಸಗೊಳಿಸಲಾದ ಫ್ರಂಟ್ ಬಂಪರ್ ಮತ್ತು ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಫಾಗ್ ಲ್ಯಾಂಪ್‌ಗಳೊಂದಿಗೆ ಫ್ರಾಗ್ ಲ್ಯಾಂಪ್‌ಗಳು ಕ್ರೋಮ್ ಸ್ಟ್ರಿಪ್‌ನೊಂದಿಗೆ ಫ್ರಂಟ್ ಮಾರ್ಕ್ ವ್ಯತ್ಯಾಸವನ್ನು ಅದರ ಪೋರ್ಟ್‌ಫೋಲಿಯೊಗೆ ಚಲಿಸುತ್ತದೆ

Most Read Articles

Kannada
Read more on ಜೀಪ್ jeep
English summary
Jeep teased all new jeep grand cherokee suv debut details
Story first published: Monday, September 27, 2021, 14:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X