ಭಾರತದಲ್ಲಿ ರಿಕಾಲ್ ಆಗುತ್ತಿದೆ ದೋಷಪೂರಿತ Jeep Wrangler

ಅಮೆರಿಕ ಮೂಲದ ಜನಪ್ರಿಯ ವಾಹನ ತಯಾರಕ ಕಂಪನಿಯಾದ ಜೀಪ್ ತನ್ನ ರ‍್ಯಾಂಗ್ಲರ್ ಮಾದರಿಯ ಕೆಲವು ಯುನಿಟ್ ಗಳಲ್ಲಿ ದೋಷಯುಕ್ತ ಇಂಧನ ಪೂರೈಕೆ ಲೈನ್ ಕನೆಕ್ಟರ್ ನಿಂದಾಗಿ ರಿಕಾಲ್ ಮಾಡಲು ಪ್ರಾರಂಭಿಸಿದೆ. ಜೀಪ್ ರ‍್ಯಾಂಗ್ಲರ್(Jeep Wrangler) ಮಾದರಿಯ 39 ಯುನಿಟ್ ಗಳನ್ನು ರಿಕಾಲ್ ಮಾಡುತ್ತಿದೆ.

ಭಾರತದಲ್ಲಿ ರಿಕಾಲ್ ಆಗುತ್ತಿದೆ ದೋಷಪೂರಿತ Jeep Wrangler

ರ‍್ಯಾಂಗ್ಲರ್ ಎಸ್‍ಯುವಿಯಲ್ಲಿ ದೋಷಯುಕ್ತ ಇಂಧನ ಪೂರೈಕೆ ಲೈನ್ ಕನೆಕ್ಟರ್ ನಿಂದಾಗಿ ಇಂಧನ ಪೂರೈಕೆ ಲೈನ್ ಕನೆಕ್ಟರ್ ಬಿರುಕುಗೊಳ್ಳಬಹುದು. ಇದು ಇಂಧನ ಸೋರಿಕೆಗೆ ಕಾರಣವಾಗಬಹುದು ಅಥವಾ ಅದು ಬೆಂಕಿಯನ್ನು ಹಿಡಿಯುವ ಅಪಾಯಕ್ಕೆ ಕಾರಣವಾಗುತ್ತದ. ಇದು ವಾಹನದ ಒಳಗೆ ಪ್ರಯಾಣಿಕರಿಗೆ ಮತ್ತು ಹೊರಗಿನ ಜನರಿಗೆ ಮಾರಕವಾಗಬಹುದು ಮತ್ತು ಆಸ್ತಿಗೆ ಹಾನಿಯಾಗಬಹುದು. 2020ರ ಜನವರಿ 24 ರಿಂದ ಮಾರ್ಚ್ 17ರವರೆಗಿನ ನಡುವೆ ತಯಾರಿಸಿದ ಜೀಪ್ ರ‍್ಯಾಂಗ್ಲರ್ ಮಾದರಿಗಳಲ್ಲಿ ದೋಷವನ್ನು ಕಂಡುಬಂದಿದೆ.

ಭಾರತದಲ್ಲಿ ರಿಕಾಲ್ ಆಗುತ್ತಿದೆ ದೋಷಪೂರಿತ Jeep Wrangler

ಇದರರ್ಥ ಭಾರತದಲ್ಲಿ ತಯಾರಿಸಿದ ವ್ರಾಂಗ್ಲರ್ ಸುರಕ್ಷಿತವಾಗಿದೆ ಏಕೆಂದರೆ ಇದು ಮಾರ್ಚ್ 2021 ರಲ್ಲಿ ಮಾತ್ರ ಮಾರಾಟಕ್ಕೆ ಬಂದಿತು. ದೋಷ ಕಂಡು ಬಂದ ತಮ್ಮ ಎಸ್‍ಯುವಿಗಳನ್ನು ಡೀಲರ್‌ಶಿಪ್/ಸರ್ವಿಸ್ ಸೆಂಟರ್ ಗಳಿಗೆ ತಪಾಸಣೆಗಾಗಿ ತರಲು ಮಾಲೀಕರನ್ನು ಜೀಪ್ ಕಂಪನಿಯು ಸಂಪರ್ಕಿಸಬಹುದು.

ಭಾರತದಲ್ಲಿ ರಿಕಾಲ್ ಆಗುತ್ತಿದೆ ದೋಷಪೂರಿತ Jeep Wrangler

ಜೀಪ್ ಕಂಪನಿಯು ಮೇಡ್ ಇನ್ ಇಂಡಿಯಾ 2021ರ ರ‍್ಯಾಂಗ್ಲರ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದ ಜುಲೈ ತಿಂಗಳಿನಲ್ಲಿ ಬಿಡುಗಡೆಗೊಳಿಸಿತು. ಇತ್ತೀಚೆಗೆ ಜೀಪ್ ಕಂಪನಿಯು ಈ ರ‍್ಯಾಂಗ್ಲರ್ ಎಸ್‍ಯುವಿಯ ಬೆಲೆಯನ್ನು ಹೆಚ್ಚಿಸಿದೆ. ಜೀಪ್ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಮೊದಲಿಗೆ ಕಂಪಾಸ್ ಎಸ್‍ಯುವಿಯ ಬೆಲೆಯನ್ನು ಹೆಚ್ಚಿಸಿದ್ದರೆ, ನಂತರ ರ‍್ಯಾಂಗ್ಲರ್ ಬೆಲೆಗಳಲ್ಲಿ ಗಣನೀಯ ಏರಿಕೆ ಮಾಡಿದೆ.

ಭಾರತದಲ್ಲಿ ರಿಕಾಲ್ ಆಗುತ್ತಿದೆ ದೋಷಪೂರಿತ Jeep Wrangler

ಈ ಜೀಪ್ ರ‍್ಯಾಂಗ್ಲರ್ ಎಸ್‍ಯುವಿಯು ಅನ್ಲಿಮಿಟೆಡ್ ಮತ್ತು ರುಬಿಕಾನ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಈ ಎರಡೂ ರೂಪಾಂತರಗಳ ಬೆಲೆಗಳನ್ನು ರೂ.1,25,000 ವರೆಗೆ ಹೆಚ್ಚಿಸಿದೆ. ಬೆಲೆ ಏರಿಕೆಯ ಬಳಿಕ ಜೀಪ್ ರ‍್ಯಾಂಗ್ಲರ್ ಎಸ್‍ಯುವಿಯ ಅನ್ಲಿಮಿಟೆಡ್ ರೂಪಾಂತರದ ಬೆಲೆಯು ರೂ.55.15 ಲಕ್ಷಗಳಾದರೆ, ರುಬಿಕಾನ್ ರೂಪಾಂತರದ ಬೆಲೆಯು ರೂ.59.15 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಭಾರತದಲ್ಲಿ ರಿಕಾಲ್ ಆಗುತ್ತಿದೆ ದೋಷಪೂರಿತ Jeep Wrangler

ಬೆಲೆ ಏರಿಕೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳಿಲ್ಲ, ಜೀಪ್ ಕಂಪನಿಯು ಮೇಕ್ ಇನ್ ಇಂಡಿಯಾ ಅಭಿಯಾನದಡಿಯಲ್ಲಿ ಮಹಾರಾಷ್ಟ್ರದ ರಂಜನ್ಗಾಂವ್ ಕಾರು ಉತ್ಪಾದನಾ ಘಟಕದಲ್ಲಿ ತಯಾರಿಸಲಾಗಿದೆ. ಈ ಹೊಸ ಯೋಜನೆಯಡಿ ನಿರ್ಮಾಣ ಮಾಡಿರುವ 2021ರ ರ‍್ಯಾಂಗ್ಲರ್ ಎಸ್‌ಯುವಿ ಮಾದರಿಯು ಈ ಹಿಂದಿನ ಮಾದರಿಗಿಂತಲೂ ರೂ.10 ಲಕ್ಷ ಕಡಿಮೆಯಾಗಿದೆ.

ಭಾರತದಲ್ಲಿ ರಿಕಾಲ್ ಆಗುತ್ತಿದೆ ದೋಷಪೂರಿತ Jeep Wrangler

ಈ ಐಕಾನಿಕ್ ಜೀಪ್ ರ‍್ಯಾಂಗ್ಲರ್ ಎಸ್‍ಯುವಿ 2.0-ಲೀಟರ್, ಫೋರ್ ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ, ಈ ಎಂಜಿನ್ 268 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ಭಾರತದಲ್ಲಿ ರಿಕಾಲ್ ಆಗುತ್ತಿದೆ ದೋಷಪೂರಿತ Jeep Wrangler

ಪ್ರಬಲ ಆಫ್ ರೋಡ್ ಸಾಮರ್ಥ್ಯದ ಹೊಸ ಎಸ್‍ಯುವಿ ಮಾದರಿಯಲ್ಲಿ ವೆರಿಯೆಂಟ್ ಅನುಗುಣವಾಗಿ ಸೆಲೆಕ್ಟ್ ಟ್ರಾಕ್ ಮತ್ತು ರಾಕ್ ಟ್ರಾಕ್ ಎನ್ನುವ ಆಲ್ ವೀಲ್ಹ್ ಡ್ರೈವ್ ಸಿಸ್ಟಂ ಟೆಕ್ನಾಲಜಿಯನ್ನು ನೀಡಲಾಗಿದ್ದು, ಪರ್ಫಾಮೆನ್ಸ್ ಸಸ್ಷೆಷನ್‌ಗಳು ಕಠಿಣ ಭೂಪ್ರದೇಶಗಳಲ್ಲೂ ಕಾರನ್ನು ಸರಾಗವಾಗಿ ಚಲಿಸಲು ಸಹಕಾರಿಯಾಗಿವೆ.

ಭಾರತದಲ್ಲಿ ರಿಕಾಲ್ ಆಗುತ್ತಿದೆ ದೋಷಪೂರಿತ Jeep Wrangler

ಇದರ ಟಾಪ್ ಎಂಡ್ ರೂಪಾಂತರವಾದ ರೂಬಿಕಾನ್ ಆವೃತ್ತಿಯು ಬೆಸ್ ಮಾದರಿಗಿಂತಲೂ ಇನ್ನು ಹೆಚ್ಚಿನ ಮಟ್ಟದ ಫೀಚರ್ಸ್‌ಗಳೊಂದಿಗೆ ಕಾರು ಚಾಲನೆಯನ್ನು ಸುಲಭಗೊಳಿಸಲಿದ್ದು, ಎರಡು ಮಾದರಿಯಲ್ಲೂ 18-ಇಂಚಿನ ಅಲಾಯ್ ವೀಲ್ಹ್ ಜೋಡಣೆಯೊಂದಿಗೆ ಅತ್ಯುತ್ತಮ ಗ್ರೌಂಡ್ ಕ್ಲಿಯೆರೆನ್ಸ್ ಪಡೆದುಕೊಂಡಿವೆ. ಹೊಸ ಎಸ್‍ಯುವಿ ಆಫ್ ರೋಡ್ ಸಾಮರ್ಥ್ಯದ ಜೊತೆಗೆ ಐಷಾರಾಮಿ ಪ್ರಯಾಣಕ್ಕೂ ಸಹಕಾರಿಯಾಗುವ ಹಲವಾರು ತಾಂತ್ರಿಇನ್ನು ಹೊಸ ಕಾರು ಬ್ರೈಟ್ ವೈಟ್, ಸ್ಟಿಂಗ್ ಗ್ರೇ, ಗ್ರಾನೈಟ್ ಕ್ರಿಸ್ಟಲ್, ಬ್ಲ್ಯಾಕ್ ಮತ್ತು ಫೈರ್‌ಕ್ರ್ಯಾಕರ್ ರೆಡ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಭಾರತದಲ್ಲಿ ರಿಕಾಲ್ ಆಗುತ್ತಿದೆ ದೋಷಪೂರಿತ Jeep Wrangler

ಐಕಾನಿಕ್ ಜೀಪ್ ರ‍್ಯಾಂಗ್ಲರ್ ಎಸ್‍ಯುವಿಯಲ್ಲಿ ತೆಗೆದುಹಾಕಬಹುದಾದ ಡೋರ್ ಸಿಸ್ಟಂ, ಹಾರ್ಡ್ ಟಾಪ್ ಆಯ್ಕೆ ಸಹ ಹೊಸ ಕಾರಿನಲ್ಲಿದ್ದು, ಸುರಕ್ಷತೆಗಾಗಿ ಎಬಿಸ್ ಜೊತೆ ಇಬಿಡಿ, ಫ್ರಂಟ್ ಮತ್ತು ಸೈಡ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೊಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್, ಎಲೆಕ್ಟ್ರಾನಿಕ್ ರೋಲ್ ಮಿಟಿಗೇಷನ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್ಸ್, ಟೈರ್ ಪ್ರೆಷರ್ ಮಾನಿಟರ್ ಸಿಸ್ಟಂ, ರಿಯರ್ ಪಾರ್ಕಿಂಗ್ ಸೆನ್ಸಾರ್ ಒಳಗೊಂಡಿದೆ.

ಭಾರತದಲ್ಲಿ ರಿಕಾಲ್ ಆಗುತ್ತಿದೆ ದೋಷಪೂರಿತ Jeep Wrangler

ಇನ್ನು ಜೀಪ್ ಕಂಪನಿಯು ತನ್ನ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಬೆಲೆ ಏರಿಕೆಯನ್ನು ಮಾಡಿದೆ. ಸ್ಪೋರ್ಟ್ ಮತ್ತು ಲಾಂಗಿಟ್ಯೂಡ್ (O) ವೆರಿಯಂಟ್‌ಗಳ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳು ಇದರ ಬೆಲೆಯನ್ನು ರೂ,10,000 ಹೆಚ್ಚು ಮಾಡಿದ್ದಾರೆ. ಉಳಿದಂತೆ ಎಸ್‌ಯುವಿಯ ಟಾಪ್-ಸ್ಪೆಕ್ ವೆರಿಯಂಟ್‌ಗಳ ಬೆಲೆಯನ್ನು ರೂ,20,000 ಗಳವರೆಗೆ ಹೆಚ್ಚಿಸಲಾಗಿದೆ. ಬೆಲೆ ಏರಿಕೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ.

ಭಾರತದಲ್ಲಿ ರಿಕಾಲ್ ಆಗುತ್ತಿದೆ ದೋಷಪೂರಿತ Jeep Wrangler

ಜೀಪ್ ಕಂಪಾಸ್ ಎಸ್‍ಯುವಿಯನ್ನು ನವೀಕರಿಸಿ ಬಿಡುಗಡೆಗೊಳಿಸಿದ ಬಳಿಕ ಮಾರಾಟದಲ್ಲಿ ಬೆಳವಣಿಗೆಯನ್ನು ಕಂಡಿದೆ. ಅಲ್ಲದ್ಪೇ ಕರೋನಾ ಆತಂಕ ಕಡಿಮೆಯಾಗಿರುವುದು ಕೂಡ ಜೀಪ್ ಕಂಪನಿಯ ಎಸ್‍ಯುವಿಗಳ ಮಾರಾಟ ಹೆಚ್ಚಳಕ್ಕೆ ಕಾರಣವಾಗಿದೆ. ಇನ್ನು ಜೀಪ್ ರ‍್ಯಾಂಗ್ಲರ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ. ಜೀಪ್ ರ‍್ಯಾಂಗ್ಲರ್ ಭಾರತೀಯ ಮಾರುಕಟ್ಟೆಯಲ್ಲಿ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಗೆ ಉತ್ತಮ ಪೈಪೋಟಿ ನೀಡುತ್ತಿದೆ.

Most Read Articles

Kannada
Read more on ಜೀಪ್ jeep
English summary
Jeep wrangler recalled reason issue of fuel supply line connector details
Story first published: Tuesday, October 19, 2021, 12:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X