ಕಿಯಾ ಮೋಟಾರ್ಸ್ ಹೊಸ ಕಾರುಗಳ ಬೆಲೆಯು ಶೀಘ್ರದಲ್ಲೇ ಮತ್ತಷ್ಟು ಹೆಚ್ಚಳ

ಕೋವಿಡ್ ಪರಿಣಾಮ ಸತತವಾಗಿ ಹೊಸ ವಾಹನ ಮಾರಾಟದಲ್ಲಿ ಹಿನ್ನಡೆ ಅನುಭವಿಸಿದ್ದ ಬಹುತೇಕ ಕಾರು ಕಂಪನಿಗಳು ಇದೀಗ ಚೇತರಿಕೆ ಕಂಡಿದ್ದು, ವಾಹನ ಉತ್ಪಾದನೆಯ ವೆಚ್ಚ ನಿರ್ವಹಣೆಗಾಗಿ ಬೆಲೆ ಹೆಚ್ಚಳದ ಮೊರೆಹೋಗಿವೆ.

ಕಿಯಾ ಮೋಟಾರ್ಸ್ ಹೊಸ ಕಾರುಗಳ ಬೆಲೆಯು ಶೀಘ್ರದಲ್ಲೇ ಮತ್ತಷ್ಟು ಹೆಚ್ಚಳ

ಉತ್ಪಾದನಾ ವೆಚ್ಚಗಳಲ್ಲಿ ನಿರಂತರವಾಗಿ ಏರಿಕೆಯ ಹಿನ್ನಲೆ ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಬೆಲೆ ಹೆಚ್ಚಳದ ಸುಳಿವು ನೀಡಿರುವ ವಿವಿಧ ಆಟೋ ಕಂಪನಿಗಳು ಶೀಘ್ರದಲ್ಲೇ ಹೊಸ ದರಪಟ್ಟಿ ಬಿಡುಗಡೆಗೊಳಿಸಲು ಸಿದ್ದಗೊಂಡಿದ್ದು, ಕಿಯಾ ಮೋಟಾರ್ಸ್ ಕಂಪನಿಯು ಸಹ ಸೆಲ್ಟೊಸ್ ಮತ್ತು ಸೊನೆಟ್ ಕಾರು ಮಾದರಿಗಳ ಬೆಲೆ ಹೆಚ್ಚಳ ಮಾಡುವುದಾಗಿ ಹೇಳಿಕೊಂಡಿದೆ.

ಕಿಯಾ ಮೋಟಾರ್ಸ್ ಹೊಸ ಕಾರುಗಳ ಬೆಲೆಯು ಶೀಘ್ರದಲ್ಲೇ ಮತ್ತಷ್ಟು ಹೆಚ್ಚಳ

ಮಾಹಿತಿಗಳ ಪ್ರಕಾರ ವಿವಿಧ ವೆರಿಯೆಂಟ್‌ಗೆ ಅನುಗುಣವಾಗಿ ಕಿಯಾ ಮೋಟಾರ್ಸ್ ಕಂಪನಿಯು ಶೇ.1 ರಿಂದ ಶೇ.2 ರಷ್ಟು ಹೆಚ್ಚಳ ಮಾಡಲಾಗಿದ್ದು, ಕಿಯಾ ಮೋಟಾರ್ಸ್ ಕಂಪನಿಯು ಶೀಘ್ರದಲ್ಲೇ ಹೊಸ ದರ ಪಟ್ಟಿಯನ್ನು ಅಧಿಕೃತವಾಗಿ ಹಂಚಿಕೊಳ್ಳಲಿದೆ.

ಕಿಯಾ ಮೋಟಾರ್ಸ್ ಹೊಸ ಕಾರುಗಳ ಬೆಲೆಯು ಶೀಘ್ರದಲ್ಲೇ ಮತ್ತಷ್ಟು ಹೆಚ್ಚಳ

ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿರುವ ಹೊಸ ದರಪಟ್ಟಿಯಂತೆ ಸೊನೆಟ್ ಕಾರಿನ ಬೆಲೆಯಲ್ಲಿ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ.8 ಸಾವಿರದಿಂದ ರೂ. 20 ಸಾವಿರ ತನಕ ಬೆಲೆ ಹೆಚ್ಚಳವಾಗಿದ್ದು, ಸೆಲ್ಟೊಸ್ ಮಾದರಿಯಲ್ಲಿ ರೂ.1 ಸಾವಿರದಿಂದ ಗರಿಷ್ಠ ರೂ. 11 ಸಾವಿರದಷ್ಟು ಬೆಲೆ ಹೆಚ್ಚಳ ಮಾಡಲಾಗಿದೆ ಎನ್ನುವ ಮಾಹಿತಿಯಿದೆ.

ಕಿಯಾ ಮೋಟಾರ್ಸ್ ಹೊಸ ಕಾರುಗಳ ಬೆಲೆಯು ಶೀಘ್ರದಲ್ಲೇ ಮತ್ತಷ್ಟು ಹೆಚ್ಚಳ

ಆದರೆ ಕಿಯಾ ಮೋಟಾರ್ಸ್ ಕಂಪನಿಯು ಹಂಚಿಕೊಳ್ಳುವ ಅಧಿಕೃತ ಮಾಹಿತಿಯೇ ಅಂತಿಮವಾಗಿ ಬೆಲೆ ಏರಿಕೆಯಾಗಿರುವುದನ್ನು ದೃಡಪಡಿಸಲಿದ್ದು, ಹೊಸ ಕಾರಗಳ ಬೆಲೆ ಏರಿಕೆಯಾಗುವುದು ಮಾತ್ರ ಬಹುತೇಕ ಖಚಿತವಾಗಿದೆ. ಕಿಯಾ ಮೋಟಾರ್ಸ್ ಕಂಪನಿಯು ಸೊನೆಟ್ ಮತ್ತು ಸೆಲ್ಟೊಸ್ ಕಾರುಗಳ ಬೆಲೆಯಲ್ಲಿ ಮಾತ್ರ ಹೆಚ್ಚಳ ಮಾಡುತ್ತಿದ್ದು, ಕಾರ್ನಿವಾಯ್ ಕಾರಿನ ಬೆಲೆಯಲ್ಲಿ ಯಾವುದೇ ಬದಲಾವಣೆ ತರದಿರಲು ನಿರ್ಧರಿಸಿದೆ.

ಕಿಯಾ ಮೋಟಾರ್ಸ್ ಹೊಸ ಕಾರುಗಳ ಬೆಲೆಯು ಶೀಘ್ರದಲ್ಲೇ ಮತ್ತಷ್ಟು ಹೆಚ್ಚಳ

ಇನ್ನು ಕಿಯಾ ಮೋಟಾರ್ಸ್ ಕಂಪನಿಯು 2020ರ ಡಿಸೆಂಬರ್ ಅವಧಿಯಲ್ಲಿ ದಾಖಲೆ ಪ್ರಮಾಣದ ಕಾರು ಮಾರಾಟವನ್ನು ತನ್ನದಾಗಿಸಿಕೊಂಡಿದ್ದು, ಕಳೆದ ವರ್ಷದ ಡಿಸೆಂಬರ್ ಅವಧಿಯ ಕಾರು ಮಾರಾಟಕ್ಕಿಂತಲೂ ಶೇ.154 ರಷ್ಟು ಬೆಳವಣಿಗೆ ಸಾಧಿಸಿದೆ.

ಕಿಯಾ ಮೋಟಾರ್ಸ್ ಹೊಸ ಕಾರುಗಳ ಬೆಲೆಯು ಶೀಘ್ರದಲ್ಲೇ ಮತ್ತಷ್ಟು ಹೆಚ್ಚಳ

ಕರೋನಾ ವೈರಸ್ ಪರಿಣಾಮ ತೀವ್ರವಾಗಿ ಕುಸಿತ ಕಂಡಿದ್ದ ಭಾರತೀಯ ಆಟೋ ಉದ್ಯಮವು ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಚೇತರಿಸಿಕೊಂಡಿದ್ದು, ಹೊಸದಾಗಿ ಮಾರುಕಟ್ಟೆಗೆ ಪ್ರವೇಶಿಸಿರುವ ವಾಹನಗಳ ಮಾರಾಟದಲ್ಲಿ ಏರಿಕೆ ಕಂಡುಬಂದಿದೆ.

ಕಿಯಾ ಮೋಟಾರ್ಸ್ ಹೊಸ ಕಾರುಗಳ ಬೆಲೆಯು ಶೀಘ್ರದಲ್ಲೇ ಮತ್ತಷ್ಟು ಹೆಚ್ಚಳ

ಕಿಯಾ ಹೊಸದಾಗಿ ಬಿಡುಗಡೆ ಮಾಡಿರುವ ಸೊನೆಟ್ ಕಾರು ಭರ್ಜರಿ ಬೇಡಿಕೆ ದಾಖಲಿಸಿದ್ದು, 2020ರ ಡಿಸೆಂಬರ್ ಅವಧಿಯಲ್ಲಿ ಒಟ್ಟು 11,818 ಯುನಿಟ್ ಮಾರಾಟದೊಂದಿಗೆ 2019ರ ಡಿಸೆಂಬರ್ ಅವಧಿಗಿಂತಲೂ ಶೇ. 154 ರಷ್ಟು ಹೆಚ್ಚು ಬೇಡಿಕೆ ಪಡೆದುಕೊಂಡಿದೆ.

MOST READ: 2020 ಫ್ಲ್ಯಾಶ್‌ಬ್ಯಾಕ್: ಭಾರತೀಯ ಆಟೋ ಉದ್ಯಮದಲ್ಲಿ ನಡೆದ ಪ್ರಮುಖ ಘಟನೆಗಳಿವು..

ಕಿಯಾ ಮೋಟಾರ್ಸ್ ಹೊಸ ಕಾರುಗಳ ಬೆಲೆಯು ಶೀಘ್ರದಲ್ಲೇ ಮತ್ತಷ್ಟು ಹೆಚ್ಚಳ

2019ರ ಡಿಸೆಂಬರ್ ಅವಧಿಯಲ್ಲಿ 4,645 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ್ದ ಕಿಯಾ ಮೋಟಾರ್ಸ್ ಕಂಪನಿಯು ಇದೀಗ 2020ರ ಡಿಸೆಂಬರ್ ಅವಧಿಯಲ್ಲಿ 11,818 ಯುನಿಟ್ ಮಾರಾಟ ಮೂಲಕ ಭಾರೀ ಪ್ರಮಾಣದ ಬೆಳವಣಿಗೆ ಸಾಧಿಸಿದೆ.

ಕಿಯಾ ಮೋಟಾರ್ಸ್ ಹೊಸ ಕಾರುಗಳ ಬೆಲೆಯು ಶೀಘ್ರದಲ್ಲೇ ಮತ್ತಷ್ಟು ಹೆಚ್ಚಳ

ಆದರೆ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಅನುಭವಿಸಿರುವ ಕಿಯಾ ಮೋಟಾರ್ಸ್ ಕಂಪನಿಯು ದೀಪಾವಳಿ ಅವಧಿಯಲ್ಲಿ ಕಾರು ಮಾರಾಟಕ್ಕಿಂತಲೂ ಡಿಸೆಂಬರ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಶೇ. 43.78 ರಷ್ಟು ಕುಸಿತ ಕಂಡಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಕಿಯಾ ಮೋಟಾರ್ಸ್ ಹೊಸ ಕಾರುಗಳ ಬೆಲೆಯು ಶೀಘ್ರದಲ್ಲೇ ಮತ್ತಷ್ಟು ಹೆಚ್ಚಳ

2020ರ ನವೆಂಬರ್ ಅವಧಿಯಲ್ಲಿನ ದೀಪಾವಳಿ ಸಂಭ್ರಮದಲ್ಲಿ ಒಟ್ಟು 21,022 ಯನಿಟ್ ಕಾರುಗಳನ್ನು ಮಾರಾಟ ಮಾಡಿದ್ದ ಕಿಯಾ ಮೋಟಾರ್ಸ್ ಕಂಪನಿಯು ಡಿಸೆಂಬರ್ ಅವಧಿಯಲ್ಲಿ ಶೇ. 43.78 ರಷ್ಟು ಹಿನ್ನಡೆ ಅನುಭವಿಸಿದ್ದು, ದಸರಾ ಮತ್ತು ದೀಪಾವಳಿಯ ನಂತರ ಕಾರು ಮಾರಾಟದಲ್ಲಿ ತುಸು ಇಳಿಕೆಯಾಗುವುದು ಸಾಮಾನ್ಯವಾಗಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಕಾರು ಮಾರಾಟವು ಮತ್ತೆ ಹೆಚ್ಚಳವಾಗುವ ನೀರಿಕ್ಷೆಗಳಿದ್ದು, ಸೊನೆಟ್ ಕಾರು ಮಾದರಿಯು ಹೆಚ್ಚಿನ ಮಟ್ಟದ ಬೇಡಿಕೆಗೆ ಕಾರಣವಾಗಿದೆ.

Most Read Articles

Kannada
English summary
Kia Sonet, Seltos Price Hike Details. Read in Kannada.
Story first published: Saturday, January 2, 2021, 23:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X