ಹೊಸ ವಿನ್ಯಾಸದ ಸ್ಕಿಡ್ ಪ್ಲೇಟ್ ಮತ್ತು ರೆಡಿಯೆಟರ್ ಗಾರ್ಡ್ ಪಡೆದುಕೊಂಡ ನ್ಯೂ ಜನರೇಷನ್ ಥಾರ್

ಮಹೀಂದ್ರಾ ಕಂಪನಿಯು ನ್ಯೂ ಜನರೇಷನ್ ಥಾರ್ ಕಾರು ಮಾದರಿಯ ಮಾರಾಟದಲ್ಲಿ ಹೊಸ ದಾಖಲೆಗೆ ಕಾರಣವಾಗಿದ್ದು, ಥಾರ್ ಕಾರು ಖರೀದಿದಾರರ ಬೇಡಿಕೆಗೆ ಅನುಗುಣವಾಗಿ ಕಂಪನಿಯು ಕೆಲವು ಪ್ರಮುಖ ತಾಂತ್ರಿಕ ಅಂಶಗಳನ್ನು ಬದಲಾವಣೆಗೊಳಿಸುತ್ತಿದೆ.

ಸ್ಕಿಡ್ ಪ್ಲೇಟ್ ಮತ್ತು ರೆಡಿಯೆಟರ್ ಗಾರ್ಡ್ ಪಡೆದುಕೊಂಡ ನ್ಯೂ ಥಾರ್

ಕಳೆದ ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ನಂತರ ಇದುವರೆಗೆ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿರುವ ನ್ಯೂ ಜನರೇಷನ್ ಕಾರು ಮಾದರಿಯು ಇದೀಗ ಗ್ರಾಹಕರ ಬೇಡಿಕೆಯೆಂತೆ ಮುಂಭಾಗದಲ್ಲಿ ಹೊಸ ವಿನ್ಯಾಸದ ಸ್ಕೀಡ್ ಪ್ಲೇಟ್ ಮತ್ತು ರೆಡಿಯೆಟರ್ ಗಾರ್ಡ್ ಪಡೆದುಕೊಂಡಿದ್ದು, ಹೊಸ ಸ್ಕೀಡ್ ಪ್ಲೇಟ್ ಮತ್ತು ರೆಡಿಯೆಟರ್ ಗಾರ್ಡ್ ಸೌಲಭ್ಯವು ಕಾರಿನ ಮುಂಭಾಗದ ಬಲಿಷ್ಠತೆಗೆ ಮತ್ತಷ್ಟು ಪೂರಕವಾಗಿದೆ.

ಸ್ಕಿಡ್ ಪ್ಲೇಟ್ ಮತ್ತು ರೆಡಿಯೆಟರ್ ಗಾರ್ಡ್ ಪಡೆದುಕೊಂಡ ನ್ಯೂ ಥಾರ್

ಹೊಸ ಸ್ಕೀಡ್ ಪ್ಲೇಟ್ ಮತ್ತು ರೆಡಿಯೆಟರ್ ಗಾರ್ಡ್ ಸೌಲಭ್ಯವನ್ನು ಹೊಂದಿರುವ ಹೊಸ ಥಾರ್ ಮಾದರಿಯು ಈಗಾಗಲೇ ಡೀಲರ್ಸ್ ಯಾರ್ಡ್ ತಲುಪಿದ್ದು, ಹೊಸ ಆವೃತ್ತಿಯ ವಿತರಣೆಯು ಶೀಘ್ರದಲ್ಲೇ ಚಾಲನೆ ಪಡೆದುಕೊಳ್ಳಲಿದೆ.

ಸ್ಕಿಡ್ ಪ್ಲೇಟ್ ಮತ್ತು ರೆಡಿಯೆಟರ್ ಗಾರ್ಡ್ ಪಡೆದುಕೊಂಡ ನ್ಯೂ ಥಾರ್

ಸ್ಕೀಡ್ ಪ್ಲೇಟ್ ಸೌಲಭ್ಯದಿಂದ ಅಂಡರ್ ಬಾಡಿ ಎಂಜಿನ್‌ ವಿಭಾಗಕ್ಕೂ ಉತ್ತಮ ಸುರಕ್ಷತೆ ಸಿಗಲಿದ್ದು, ಆಫ್ ರೋಡ್ ಕೌಶಲ್ಯತೆಗೆ ಇದು ಉತ್ತಮವಾಗಿದೆ. ಹೀಗಾಗಿ ಹೊಸ ಸ್ಕೀಡ್ ಪ್ಲೇಟ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡದ ಮಹೀಂದ್ರಾ ಕಂಪನಿಯು ಹೆಚ್ಚುವರಿ ಮೊತ್ತಕ್ಕೆ ಆಕ್ಸೆಸರಿಸ್ ಮಾದರಿಯಲ್ಲಿ ನೀಡಲಾಗುತ್ತಿದೆ.

ಸ್ಕಿಡ್ ಪ್ಲೇಟ್ ಮತ್ತು ರೆಡಿಯೆಟರ್ ಗಾರ್ಡ್ ಪಡೆದುಕೊಂಡ ನ್ಯೂ ಥಾರ್

ಮಹೀಂದ್ರಾ ಕಂಪನಿಯು ಸ್ಕಿಡ್ ಪ್ಲೇಟ್ ಮತ್ತು ರೆಡಿಯೆಟರ್ ಗಾರ್ಡ್ ಸೌಲಭ್ಯವನ್ನು ಆಕ್ಸೆಸರಿಸ್ ಮಾದರಿಯಲ್ಲಿ ರೂ. 5,500 ಗಳಿಗೆ ಮಾರಾಟ ಮಾಡುವ ಸಾಧ್ಯತೆಗಳಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಹೊಸ ಆಕ್ಸೆಸರಿಸ್ ಸೌಲಭ್ಯವು ಖರೀದಿಗೆ ಲಭ್ಯವಿರಲಿದೆ. ಸ್ಕಿಡ್ ಪ್ಲೇಟ್ ಮತ್ತು ರೆಡಿಯೆಟರ್ ಗಾರ್ಡ್ ಜೊತೆಗೆ ಮಹೀಂದ್ರಾ ಕಂಪನಿಯು ರೂ. 2,335 ಬೆಲೆಯ ಫ್ಯೂಲ್ ಟ್ಯಾಂಕ್ ಪ್ರೊಟೆಕ್ಟರ್ ಸೌಲಭ್ಯವನ್ನು ಸಹ ಪರಿಚಯಿಸುತ್ತಿದ್ದು, ಆಫ್ ರೋಡ್ ಪ್ರಿಯರಿಗೆ ಹೊಸ ಆಕ್ಸೆಸರಿಸ್ ಸೌಲಭ್ಯಗಳು ಉತ್ತಮವಾಗಿವೆ.

ಸ್ಕಿಡ್ ಪ್ಲೇಟ್ ಮತ್ತು ರೆಡಿಯೆಟರ್ ಗಾರ್ಡ್ ಪಡೆದುಕೊಂಡ ನ್ಯೂ ಥಾರ್

ಇನ್ನು ಹೊಸ ಥಾಕ್ ಕಾರು ಮಾದರಿಯು ಆಫ್ ರೋಡ್ ಎಸ್‌ಯುವಿ ವಿಭಾಗದಲ್ಲಿ ಹೊಸ ದಾಖಲೆಗೆ ಕಾರಣವಾಗುತ್ತಿದ್ದು ಇದುವರೆಗೆ ಬರೋಬ್ಬರಿ ಸುಮಾರು 50 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿದೆ.

ಸ್ಕಿಡ್ ಪ್ಲೇಟ್ ಮತ್ತು ರೆಡಿಯೆಟರ್ ಗಾರ್ಡ್ ಪಡೆದುಕೊಂಡ ನ್ಯೂ ಥಾರ್

ಗ್ಲೊಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 4 ಸ್ಟಾರ್ ಸೇಫ್ಚಿ ರೇಟಿಂಗ್ ಪಡೆದುಕೊಳ್ಳುವ ಮೂಲಕ ಸುರಕ್ಷಿತ ಕಾರು ಮಾದರಿಯಾಗಿ ಗುರುತಿಸಿಕೊಂಡ ನಂತರ ಹೊಸ ಥಾರ್ ಕಾರಿಗೆ ಮತ್ತಷ್ಟು ಬೇಡಿಕೆ ಪಡೆದುಕೊಂಡಿರುವ ಮಹೀಂದ್ರಾ ಕಂಪನಿಯು ಕಳೆದ ಎರಡು ತಿಂಗಳ ಅವಧಿಯಲ್ಲಿ ಹೆಚ್ಚಿನ ಮಟ್ಟದ ಬುಕ್ಕಿಂಗ್ ಪಡೆದುಕೊಂಡಿದೆ.

ಸ್ಕಿಡ್ ಪ್ಲೇಟ್ ಮತ್ತು ರೆಡಿಯೆಟರ್ ಗಾರ್ಡ್ ಪಡೆದುಕೊಂಡ ನ್ಯೂ ಥಾರ್

ಬೇಡಿಕೆ ಹೆಚ್ಚಿರುವ ಹಿನ್ನಲೆಯಲ್ಲಿ ನಾಸಿಕ್ ಕಾರು ಘಟಕದಲ್ಲಿನ ಉತ್ಪಾದನಾ ಪ್ರಮಾಣವನ್ನು ಸಹ ಹೆಚ್ಚಳ ಮಾಡಲಾಗಿದ್ದು, ಬುಕ್ಕಿಂಗ್ ನಂತರ ಹೊಸ ಕಾರು ಪಡೆದುಕೊಳ್ಳಲು ಸದ್ಯ ಕನಿಷ್ಠ 5 ರಿಂದ 8 ತಿಂಗಳು ಕಾಲ ಕಾಯಲೇಬೇಕಾಗುತ್ತದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಸ್ಕಿಡ್ ಪ್ಲೇಟ್ ಮತ್ತು ರೆಡಿಯೆಟರ್ ಗಾರ್ಡ್ ಪಡೆದುಕೊಂಡ ನ್ಯೂ ಥಾರ್

ಹೊಸ ಕಾರಿನ ಕಾಯುವಿಕೆ ಅವಧಿಯು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ನಿರ್ಧಾರವಾಗಲಿದ್ದು, ಸಾಫ್ಟ್ ಟಾಪ್ ಮಾದರಿಗಳು ಕಡಿಮೆ ಅವಧಿಯಲ್ಲಿ ವಿತರಣೆಯಾಗಲಿದ್ದರೆ ಡೀಸೆಲ್ ಆಟೋಮ್ಯಾಟಿಕ್ ಹಾರ್ಡ್ ಟಾಪ್ ಮಾದರಿಗಳ ಖರೀದಿಗೆ ಹೆಚ್ಚು ಕಾಯಬೇಕಿದೆ.

ಸ್ಕಿಡ್ ಪ್ಲೇಟ್ ಮತ್ತು ರೆಡಿಯೆಟರ್ ಗಾರ್ಡ್ ಪಡೆದುಕೊಂಡ ನ್ಯೂ ಥಾರ್

ಗ್ರಾಹಕರ ಬೇಡಿಕೆಯೆಂತೆ ಥಾರ್ ಆರಂಭಿಕ ಆವೃತ್ತಿಗಳಾದ ಎಎಕ್ಸ್ ಪೆಟ್ರೋಲ್ ಸ್ಟ್ಯಾಂಡರ್ಡ್ ಸಿಕ್ಸ್ ಸೀಟರ್, ಎಎಕ್ಸ್ ಸಿಕ್ಸ್ ಸೀಟರ್ ಸಾಫ್ಟ್ ಟಾಪ್ ಮತ್ತು ಎಎಕ್ಸ್ ಸಿಕ್ಸ್ ಸೀಟರ್ ಡೀಸೆಲ್ ಸಾಫ್ಟ್ ಟಾಪ್ ಮಾದರಿಗಳನ್ನು ಸ್ಥಗಿತಗೊಳಿಸಿರುವ ಕಂಪನಿಯು ಹೈ ಎಂಡ್ ಮಾದರಿಗಳ ಮಾರಾಟದ ಮೇಲೆ ಹೆಚ್ಚು ಗಮನಹರಿಸಿದೆ.

MOST READ: ಪ್ಯಾಡಲ್ ಶಿಫ್ಟ್ ಫೀಚರ್'ನಿಂದಾಗುವ ಪ್ರಯೋಜನಗಳಿವು

ಸ್ಕಿಡ್ ಪ್ಲೇಟ್ ಮತ್ತು ರೆಡಿಯೆಟರ್ ಗಾರ್ಡ್ ಪಡೆದುಕೊಂಡ ನ್ಯೂ ಥಾರ್

ಬಿಎಸ್-6 ಎಂಜಿನ್ ಪ್ರೇರಿತ 2.2-ಲೀಟರ್ ಡೀಸೆಲ್ ಎಂಜಿನ್ ಮತ್ತು ಹೊಸದಾಗಿ ಅಭಿವೃದ್ದಿಗೊಳಿಸಲಾದ 2.0-ಲೀಟರ್ ಎಂ-ಸ್ಟಾಲಿನ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿರುವ ಹೊಸ ಕಾರು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12.10 ಲಕ್ಷದಿಂದ ಟಾಪ್ ಮಾದರಿಯು ರೂ. 14.15 ಲಕ್ಷ ಬೆಲೆ ಪಡೆದುಕೊಂಡಿದ್ದು, ಅತ್ಯುತ್ತಮ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದೆ.

Most Read Articles

Kannada
English summary
Mahindra Updated Thar With New Skid Plate And Radiator Guards. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X