ಜಿ‌ಪಿ‌ಎಸ್ ಟ್ರ್ಯಾಕರ್ ಹೊಂದಲಿವೆ ಆಕ್ಸಿಜನ್ ಸಾಗಿಸುವ ವಾಹನಗಳು

ದೇಶಾದ್ಯಂತ ಕರೋನಾ ವೈರಸ್ ಎರಡನೇ ಅಲೆ ವೇಗವಾಗಿ ಹರಡುತ್ತಿದೆ. ಇದರಿಂದಾಗಿ ತೀವ್ರ ನಿಗಾ ಘಟಕಗಳಲ್ಲಿ ಆಕ್ಸಿಜನ್'ಗೆ ಬೇಡಿಕೆ ಹೆಚ್ಚಾಗಿದೆ. ಬೇಡಿಕೆಗೆ ತಕ್ಕಷ್ಟು ಆಕ್ಸಿಜನ್ ಉತ್ಪಾದನೆಯಾಗದ ಕಾರಣಕ್ಕೆ ದೇಶಾದ್ಯಂತ ಆಕ್ಸಿಜನ್ ಕೊರತೆ ಎದುರಾಗಿದೆ.

ಜಿ‌ಪಿ‌ಎಸ್ ಟ್ರ್ಯಾಕರ್ ಹೊಂದಲಿವೆ ಆಕ್ಸಿಜನ್ ಸಾಗಿಸುವ ವಾಹನಗಳು

ಆಕ್ಸಿಜನ್ ಕೊರತೆಯಿಂದಾಗಿ ಕರೋನಾ ಸೋಂಕಿತರು ಸಾಯುವಂತಾಗಿದೆ. ಕೇಂದ್ರ ಹಾಗೂ ರಾಜ್ಯ ರಾಜ್ಯ ಸರ್ಕಾರಗಳು ಅಗತ್ಯವಿರುವಷ್ಟು ಆಕ್ಸಿಜನ್ ಪೂರೈಸಲು ಶ್ರಮಿಸುತ್ತಿವೆ. ಆಕ್ಸಿಜನ್ ಬೇಡಿಕೆ ಹೆಚ್ಚಾಗಿರುವುದರಿಂದ ಕರೋನಾ ಸೋಂಕಿತರು ಹಾಗೂ ಅವರ ಸಂಬಂಧಿಕರು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪೂರೈಕೆಗಾಗಿ ಕಾಯುತ್ತಿದ್ದಾರೆ.

ಜಿ‌ಪಿ‌ಎಸ್ ಟ್ರ್ಯಾಕರ್ ಹೊಂದಲಿವೆ ಆಕ್ಸಿಜನ್ ಸಾಗಿಸುವ ವಾಹನಗಳು

ಜೀವ ರಕ್ಷಕ ಆಕ್ಸಿಜನ್ ಸಿಲಿಂಡರ್'ಗಳನ್ನು ಸಾಗಿಸುವ ವಾಹನಗಳ ಚಲನೆಯನ್ನು ನಿಖರವಾಗಿ ಪತ್ತೆಹಚ್ಚಲು ಜಿಪಿಎಸ್ ಸಾಧನಗಳನ್ನು ಉಚಿತವಾಗಿ ನೀಡುವುದಾಗಿ ಮ್ಯಾಪ್ ಮೈ ಇಂಡಿಯಾ ಘೋಷಿಸಿದೆ.

MOSTREAD: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಜಿ‌ಪಿ‌ಎಸ್ ಟ್ರ್ಯಾಕರ್ ಹೊಂದಲಿವೆ ಆಕ್ಸಿಜನ್ ಸಾಗಿಸುವ ವಾಹನಗಳು

ಮ್ಯಾಪ್ ಮೈ ಇಂಡಿಯಾದ ಸಿಇಒ ರೋಹನ್ ವರ್ಮಾ ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ಈ ಜಿಪಿಎಸ್ ಸಾಧನವು ವಾಹನ ಎಲ್ಲಿ ಸಂಚರಿಸುತ್ತಿದೆ, ಸಂಚರಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ಟ್ರ್ಯಾಕ್ ಮಾಡಲು ನೆರವಾಗಲಿದೆ.

ಜಿ‌ಪಿ‌ಎಸ್ ಟ್ರ್ಯಾಕರ್ ಹೊಂದಲಿವೆ ಆಕ್ಸಿಜನ್ ಸಾಗಿಸುವ ವಾಹನಗಳು

ಔಷಧೀಯ ಉಪಕರಣ ಹಾಗೂ ಆಕ್ಸಿಜನ್ ವಾಹನಗಳ ಮಾಲೀಕರು ಮತ್ತು ಈ ಆಕ್ಸಿಜನ್ ಸಿಲಿಂಡರ್'ಗಳನ್ನು ಸ್ವೀಕರಿಸುವವರು ಜಿಪಿಎಸ್ ಹೊಂದಿದ ವಾಹನಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು.

MOSTREAD: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಜಿ‌ಪಿ‌ಎಸ್ ಟ್ರ್ಯಾಕರ್ ಹೊಂದಲಿವೆ ಆಕ್ಸಿಜನ್ ಸಾಗಿಸುವ ವಾಹನಗಳು

ಆಕ್ಸಿಜನ್ ಸಿಲಿಂಡರ್'ಗಳನ್ನು ಸಾಗಿಸುವ ವಾಹನಗಳಲ್ಲಿ ಈ ಜಿಪಿಎಸ್ ಸಾಧನವನ್ನು ಕೇವಲ 15 ನಿಮಿಷಗಳಲ್ಲಿ ಅಳವಡಿಸಬಹುದು ಎಂದು ಅವರು ಹೇಳಿದ್ದಾರೆ. ಮ್ಯಾಪ್ ಮೈ ಇಂಡಿಯಾದ ಈ ನೆರವಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆ ವ್ಯಕ್ತವಾಗುತ್ತಿದೆ.

ಜಿ‌ಪಿ‌ಎಸ್ ಟ್ರ್ಯಾಕರ್ ಹೊಂದಲಿವೆ ಆಕ್ಸಿಜನ್ ಸಾಗಿಸುವ ವಾಹನಗಳು

ಕೆಲವು ಸ್ಥಳಗಳಲ್ಲಿ ಆಕ್ಸಿಜನ್ ಸಿಲಿಂಡರ್'ಗಳನ್ನು ಬೇರೆಡೆಗೆ ಸಾಗಿಸುತ್ತಿರುವ ಪರಿಸ್ಥಿತಿ ಎದುರಾಗಿದೆ. ಈ ಜಿಪಿಎಸ್ ಸಾಧನದ ಮೂಲಕ ವಾಹನವಿರುವ ಸ್ಥಳವನ್ನು ಸುಲಭವಾಗಿ ಪತ್ತೆ ಹಚ್ಚಬಹುದು.

MOSTREAD: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಜಿ‌ಪಿ‌ಎಸ್ ಟ್ರ್ಯಾಕರ್ ಹೊಂದಲಿವೆ ಆಕ್ಸಿಜನ್ ಸಾಗಿಸುವ ವಾಹನಗಳು

ವಾಹನದ ವಿಳಂಬದ ಬಗೆಯೂ ಮಾಹಿತಿ ಪಡೆಯಬಹುದು. ಎರಡನೇ ಹಾಗೂ ಮೂರನೇ ಹಂತದ ನಗರಗಳಿಂದಲೂ ಈ ಜಿ‌ಪಿ‌ಎಸ್ ಉಪಕರಣಕ್ಕೆ ಬೇಡಿಕೆ ಬರುತ್ತಿದೆ ಎಂದು ರೋಹನ್ ವರ್ಮಾ ಹೇಳಿದರು.

ಜಿ‌ಪಿ‌ಎಸ್ ಟ್ರ್ಯಾಕರ್ ಹೊಂದಲಿವೆ ಆಕ್ಸಿಜನ್ ಸಾಗಿಸುವ ವಾಹನಗಳು

ಇದರ ಜೊತೆಗೆ ಮ್ಯಾಪ್ ಮೈ ಇಂಡಿಯಾ ತನ್ನ ಪ್ರೊಸೆಸರ್‌ನಲ್ಲಿ ಕರೋನಾ ಪರೀಕ್ಷಾ ಕೇಂದ್ರಗಳ ಬಗ್ಗೆ, ಚಿಕಿತ್ಸಾ ಕೇಂದ್ರಗಳ ಬಗ್ಗೆ, ನಿರ್ಬಂಧಿತ ಪ್ರದೇಶಗಳ ಬಗ್ಗೆ ಹಾಗೂ ವ್ಯಾಕ್ಸಿನೇಷನ್ ಕೇಂದ್ರಗಳ ಬಗ್ಗೆ ಮಾಹಿತಿ ನೀಡುತ್ತಿದೆ.

Most Read Articles

Kannada
English summary
Map my India to give free GPS tracker for oxygen carrying vehicles. Read in Kannada.
Story first published: Monday, May 3, 2021, 16:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X