Just In
Don't Miss!
- News
ಹುಣಸೋಡು ಸ್ಪೋಟದ ಸುತ್ತ ಒಂದು ನೋಟ: ಸಿಎಂ ಯಡಿಯೂರಪ್ಪ ಭೇಟಿ
- Sports
'ಭಾರತೀಯರಿಗೆ ಹೋಲಿಸಿದರೆ ಯುವ ಆಸೀಸ್ ಇನ್ನೂ ಪ್ರೈಮರಿ ಶಾಲೆಯಲ್ಲಿದೆ'
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಾರಾಟದಲ್ಲಿ ಹೊಸ ದಾಖಲೆಯನ್ನು ಬರೆದ ಮಾರುತಿ ಸುಜುಕಿ ಸೂಪರ್ ಕ್ಯಾರಿ ವ್ಯಾನ್
ಮಾರುತಿ ಸುಜುಕಿ ಕಂಪನಿಯು ತನ್ನ ನಿರ್ದಿಷ್ಟ ವಾಹನದ ಮಾರಾಟದಲ್ಲಿ ಅತಿದೊಡ್ಡ ಬೆಳವಣಿಗೆಯನ್ನು ದಾಖಲಿಸಿರುವುದಾಗಿ ತಿಳಿಸಿದೆ. ಮಾರುತಿ ಸುಜುಕಿ ಕಂಪನಿಯು ಈ ಬೆಳವಣಿಗೆಯನ್ನು 2020ರ ಡಿಸೆಂಬರ್ ತಿಂಗಳಿನಲ್ಲಿ ದಾಖಲಿಸಿದೆ.

ವರದಿಗಳ ಪ್ರಕಾರ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) 2020ರ ಆರಂಭಕ್ಕಿಂತ ಮೊದಲಿಗಿಂತ ಹೆಚ್ಚಿನ ಮಾರಾಟವನ್ನು ದಾಖಲಿಸಿದೆ. ಸಿಯಾಜ್ ಮಾದರಿಯನ್ನು ಹೊರತುಪಡಿಸಿ ಮಾರುತಿ ಸುಜುಕಿ ಕಂಪನಿಯ ಇತರ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿವೆ.

ಆದರೂ ಮಾರುತಿ ಸುಜುಕಿ ಕಂಪನಿಯು ಈ ಎಲ್ಲಾ ವಾಹನಗಳಿಗಿಂತ ಹೆಚ್ಚಿನ ಮಾರಾಟವನ್ನು ಒಂದು ವಾಹನದ ಮಾರಾಟದಲ್ಲಿ ದಾಖಲಿಸಿದೆ. ಮಾರುತಿ ಸುಜುಕಿ ಕಂಪನಿಯು ತನ್ನ ಸೂಪರ್ ಕ್ಯಾರಿ ಮಿನಿ ವ್ಯಾಸ್ ಮಾರಾಟದಲ್ಲಿ 260%ನಷ್ಟು ಪ್ರಗತಿಯನ್ನು ದಾಖಲಿಸಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಮಾರುತಿ ಸುಜುಕಿ ಕಂಪನಿಯು ಸೂಪರ್ ಕ್ಯಾರಿ ಮಿನಿ ವ್ಯಾನ್ ಮೂಲಕ ಟಾಟಾ ಏಸ್ ಮಿನಿ ವ್ಯಾನ್‌ಗೆ ಪೈಪೋಟಿ ನೀಡುತ್ತದೆ. 2020ರ ಡಿಸೆಂಬರ್ ತಿಂಗಳಿನಲ್ಲಿ ಒಟ್ಟು 5,726 ಯುನಿಟ್ ಸೂಪರ್ ಕ್ಯಾರಿ ವಾಹನಗಳನ್ನು ಮಾರಾಟ ಮಾಡಲಾಗಿದೆ.

2019ರ ಡಿಸೆಂಬರ್ ತಿಂಗಳಿನಲ್ಲಿ ಈ ಮಿನಿ ವ್ಯಾನ್'ನ 1,591 ಯುನಿಟ್‌ಗಳು ಮಾರಾಟವಾಗಿದ್ದವು. ಸೂಪರ್ ಕ್ಯಾರಿ ವ್ಯಾನ್'ನ ಕಳೆದ ತಿಂಗಳ ಮಾರಾಟವು ವಾಹನ ಉದ್ಯಮದಲ್ಲಿ ಅಚ್ಚರಿಯನ್ನುಂಟು ಮಾಡಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಈ ಬೆಳವಣಿಗೆಯು ಸ್ವತಃ ಮಾರುತಿ ಸುಜುಕಿ ಕಂಪನಿಗೆ ಅಚ್ಚರಿಯನ್ನುಂಟು ಮಾಡಿದೆ. 2020ರ ಡಿಸೆಂಬರ್ ತಿಂಗಳಿನಲ್ಲಿ ಈ ವಾಹನವು 2020ರ ನವೆಂಬರ್ ತಿಂಗಳಿಗಿಂತ 80%ನಷ್ಟು ಹೆಚ್ಚು ಮಾರಾಟವನ್ನು ದಾಖಲಿಸಿದೆ.

ನವೆಂಬರ್ ತಿಂಗಳಿನಲ್ಲಿ ಈ ವಾಹನದ 3,181 ಯೂನಿಟ್'ಗಳು ಮಾರಾಟವಾಗಿದ್ದವು. ಮಾರುತಿ ಸುಜುಕಿ ಕಂಪನಿಯು ಸೂಪರ್ ಕ್ಯಾರಿ ಮಿನಿ ಲೋಡ್ ವ್ಯಾನ್ ಅನ್ನು ಮೊದಲ ಬಾರಿಗೆ 2016ರ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸಿತು.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಬಿಡುಗಡೆಯಾದ ನಾಲ್ಕು ವರ್ಷಗಳಲ್ಲಿ 70,000 ಯುನಿಟ್‌ಗಳ ಮಾರಾಟದೊಂದಿಗೆ ಸೂಪರ್ ಕ್ಯಾರಿ ವ್ಯಾನ್ ಹೊಸ ಮೈಲಿಗಲ್ಲನ್ನು ದಾಖಲಿಸಿದೆ. ಮಾರುತಿ ಸುಜುಕಿ ಕಂಪನಿಯು ಈ ವಾಹನವನ್ನು ಮೂರು ಮಾದರಿಗಳಲ್ಲಿ ಮಾರಾಟ ಮಾಡುತ್ತದೆ.

ಸೂಪರ್ ಕ್ಯಾರಿ ವ್ಯಾನ್ - ಸ್ಟ್ಯಾಂಡರ್ಡ್, ಎಸ್-ಸಿಎನ್‌ಜಿ ಹಾಗೂ ಕ್ಯಾಪ್ ಚಾಸಿಸ್ ಮಾದರಿಗಳಲ್ಲಿ ಮಾರಾಟವಾಗುತ್ತದೆ. ಸ್ಟ್ಯಾಂಡರ್ಡ್ ಮಾದರಿಯಲ್ಲಿ 1.2 ಲೀಟರಿನ, 4 ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, ಎಸ್-ಸಿಎನ್‌ಜಿ ಮಾದರಿಯಲ್ಲಿ 1.2 ಲೀಟರಿನ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಸ್ಟ್ಯಾಂಡರ್ಡ್ ಮಾದರಿಯಲ್ಲಿರುವ ಎಂಜಿನ್ ಅನ್ನು ಕ್ಯಾಪ್ ಚಾಸಿಸ್ ಮಾದರಿಯಲ್ಲಿಯೂ ಅಳವಡಿಸಲಾಗಿದೆ. ಸೂಪರ್ ಕ್ಯಾರಿ ವ್ಯಾನ್'ನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.4.25 ಲಕ್ಷದಿಂದ ರೂ.5.18 ಲಕ್ಷಗಳಾಗಿದೆ.