ಏಪ್ರಿಲ್ ತಿಂಗಳಿಂದ ದುಬಾರಿಯಾಗಲಿವೆ ಮಾರುತಿ ಸುಜುಕಿ ಕಾರುಗಳು

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಸರಣಿಯಲ್ಲಿರುವ ಎಲ್ಲಾ ಕಾರುಗಳ ಬೆಲೆಯನ್ನು ಮುಂದಿನ ತಿಂಗಳು ಹೆಚ್ಚಿಸಲಿದೆ. ಇದರಿಂದ ಮುಂದಿನ ತಿಂಗಳಿನಿಂದ ಮಾರುತಿ ಸುಜುಕಿ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ತುಸು ದುಬಾರಿಯಾಗಿರಲಿವೆ.

ಏಪ್ರಿಲ್ ತಿಂಗಳಿಂದ ದುಬಾರಿಯಾಗಲಿವೆ ಮಾರುತಿ ಸುಜುಕಿ ಕಾರುಗಳು

ಇನ್ ಪುಟ್ ವೆಚ್ಚಗಳು ಹೆಚ್ಚಳವಾಗಿರುವುದರಿಂದ ಕಾರುಗಳ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಕಂಪನಿ ಹೇಳಿದೆ. ಇದರಿಂದ ಹೆಚ್ಚುವರಿ ವೆಚ್ಚವು ಕಾರು ಖರೀದಿಸುವ ಗ್ರಾಹಕರ ಮೇಲೆ ಬೀಳುತ್ತದೆ. ಆದರೆ ಮಾರುತಿ ಸುಜುಕಿ ಇಂಡಿಯಾ ಬೆಲೆ ಏರಿಕೆಯ ಪ್ರಮಾಣ ಅಥವಾ ಶೇಕಡಾವಾರು ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ ಬೆಲೆ ಹೆಚ್ಚಳವು ವಿಭಿನ್ನ ಮಾದರಿಗಳಿಗೆ ಅನುಗುಣವಾಗಿ ಬದಲಾಗುತ್ತದೆ ಎಂದು ಹೇಳಿದೆ.

ಏಪ್ರಿಲ್ ತಿಂಗಳಿಂದ ದುಬಾರಿಯಾಗಲಿವೆ ಮಾರುತಿ ಸುಜುಕಿ ಕಾರುಗಳು

ಹೊಸ ಹಣಕಾಸು ವರ್ಷದ ಆರಂಭದಲ್ಲಿ ಮೂಲ ಸಲಕರಣೆಗಳ ತಯಾರಕರು ಅಥವಾ ಒಇಎಂಗಳು ಭಾರತದಲ್ಲಿ ವಾಹನಗಳ ಬೆಲೆಯನ್ನು ಹೆಚ್ಚಿಸುವುದು ಸಾಮಾನ್ಯವಾಗಿದೆ. ಆದರೆ ಮಾರುತಿ ಸುಜುಕಿ ಕಂಪನಿಯು ಈ ವರ್ಷದ ಆರಂಭದಲ್ಲಿ ಬೆಲೆಯನ್ನು ಹೆಚ್ಚಿಸಲಾಗಿತ್ತು.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಏಪ್ರಿಲ್ ತಿಂಗಳಿಂದ ದುಬಾರಿಯಾಗಲಿವೆ ಮಾರುತಿ ಸುಜುಕಿ ಕಾರುಗಳು

ಇದು ಕೇವಲ ಮೂರು ತಿಂಗಳಲ್ಲಿ ಎರಡನೇ ಬೆಲೆ ಪರಿಷ್ಕರಣೆಯಾಗಿದೆ. ಇನ್ನು ಇಸುಝು ಮೋಟಾರ್ ಕಂಪನಿಯು ತನ್ನ ಡಿ-ಮ್ಯಾಕ್ಸ್ ರೆಗ್ಯುಲರ್ ಕ್ಯಾಬ್ ಮತ್ತು ಭಾರತದಲ್ಲಿನ ಡಿ-ಮ್ಯಾಕ್ಸ್ ಎಸ್-ಕ್ಯಾಬ್ ಬೆಲೆಗಳನ್ನು ರೂ.1 ಲಕ್ಷದವರೆಗೆ ಮುಂದಿನ ತಿಂಗಳಿನ ಹೆಚ್ಚಾಗಲಿದೆ ಎಂದು ಘೋಷಣೆ ಮಾಡಿದೆ.

ಏಪ್ರಿಲ್ ತಿಂಗಳಿಂದ ದುಬಾರಿಯಾಗಲಿವೆ ಮಾರುತಿ ಸುಜುಕಿ ಕಾರುಗಳು

ಸಧ್ಯ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಅರೆನಾ ಮತ್ತು ನೆಕ್ಸಾ ಡೀಲರ್ ಗಳ ಮೂಲಕ 15 ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಮಾರುತಿ ಸುಜುಕಿ ಕಾರುಗಳ ಸರಣಿಯಲ್ಲಿ ಜನಪ್ರಿಯ ಮಾದರಿಗಳನ್ನು ಹೊಂದಿವೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಏಪ್ರಿಲ್ ತಿಂಗಳಿಂದ ದುಬಾರಿಯಾಗಲಿವೆ ಮಾರುತಿ ಸುಜುಕಿ ಕಾರುಗಳು

ಭಾರತದಲ್ಲಿ ಹೆಚ್ಚಿನ ಗ್ರಾಹಕರು ಮೈಲೇಜ್ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬೇರೆ ಗಗನದೆತ್ತರಕ್ಕೆ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಾರು ಖರೀದಿಸುವ ಗ್ರಾಹಕರು ಹೆಚ್ಚು ಮೈಲೇಜ್ ನೀಡುವ ಕಾರಿನ ಕಡೆ ಹೆಚ್ಚು ಒಲವನ್ನು ಹೊಂದಿರುತ್ತಾರೆ.

ಏಪ್ರಿಲ್ ತಿಂಗಳಿಂದ ದುಬಾರಿಯಾಗಲಿವೆ ಮಾರುತಿ ಸುಜುಕಿ ಕಾರುಗಳು

ಭಾರತೀಯ ಮಾರುಕಟ್ಟೆಯಲ್ಲಿ ಮೈಲೇಜ್ ವಿಷಯ ಬಂದಾಗ ಮೊದಲು ಯೋಚನೆ ಬರುವುದು ಮಾರುತಿ ಸುಜುಕಿ ಕಾರುಗಳು. ಮೈಲೇಜ್ ಮತ್ತು ಕಡಿಮೆ ನಿರ್ವಹಣ ವೆಚ್ಚಕ್ಕೆ ಮಾರುತಿ ಸುಜುಕಿ ಕಾರುಗಳು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ.

MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಏಪ್ರಿಲ್ ತಿಂಗಳಿಂದ ದುಬಾರಿಯಾಗಲಿವೆ ಮಾರುತಿ ಸುಜುಕಿ ಕಾರುಗಳು

ಅಲ್ಲದೇ ಮಾರುತಿ ಸುಜುಕಿ ಕಾರುಗಳಿಗೆ ಉತ್ತಮ ರಿಸೇಲ್ ವ್ಯಾಲೂ ಕೂಡ ಇದೆ. ಈ ಎಲ್ಲಾ ಕಾರಣದಿಂದಾಗಿ ಇಂದಿಗೂ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಾರುಗಲು ಅತಿ ಹೆಚ್ಚು ಮಾರಾಟವಾಗುತ್ತಿವೆ.

ಏಪ್ರಿಲ್ ತಿಂಗಳಿಂದ ದುಬಾರಿಯಾಗಲಿವೆ ಮಾರುತಿ ಸುಜುಕಿ ಕಾರುಗಳು

ಇನ್ನು ಮಾರುತಿ ಸುಜುಕಿ ಕಂಪನಿಯು 2021ರ ಮಾರ್ಚ್ ತಿಂಗಳಲ್ಲಿ ಇಗ್ನಿಸ್ ಕಾರಿನ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಇಗ್ನಿಸ್ ಕಾರಿನ ಮೇಲೆ ಒಟ್ಟು ರೂ.42,000 ವರೆಗೆ ರಿಯಾಯಿತಿಯನ್ನು ಘೋಷಿಸಲಾಗಿದೆ

ಏಪ್ರಿಲ್ ತಿಂಗಳಿಂದ ದುಬಾರಿಯಾಗಲಿವೆ ಮಾರುತಿ ಸುಜುಕಿ ಕಾರುಗಳು

ಇದರಲ್ಲಿ ಇಗ್ನಿಸ್ ಕಾರಿನ ಮೇಲೆ ರೂ.20,000 ವರೆಗೂ ನಗದು ರಿಯಾಯಿತಿ ನೀಡಲಾಗಿದೆ. ಇನ್ನು ಆಸಕ್ತ ಖರೀದಿದಾರರು ಹಳೆಯ ವಾಹನದ ವಿನಿಮಯ ಮಾಡಿದಾಗಿ ರೂ.15,000 ವರೆಗೆ ಎಕ್ಸ್‌ಚೇಂಚ್ ಬೋನಸ್ ಅನ್ನು ಪಡೆಯಬಹುದು. ಇನ್ನು ಇದರೊಂದಿಗೆ ಐಎನ್‌ಟಿ ರೂ.7,000 ವರೆಗಿನ ಹೆಚ್ಚುವರಿ ಡೀಲರ್-ಮಟ್ಟದ ಕೊಡುಗೆಗಳಿವೆ.

ಏಪ್ರಿಲ್ ತಿಂಗಳಿಂದ ದುಬಾರಿಯಾಗಲಿವೆ ಮಾರುತಿ ಸುಜುಕಿ ಕಾರುಗಳು

ಮಾರುತಿ ಸುಜುಕಿ ತನ್ನ 2021ರ ಸೆಲೆರಿಯೊ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಸಜ್ಜಾಗುತ್ತಿದೆ. ಈ 2021ರ ಮಾರುತಿ ಸುಜುಕಿ ಸೆಲೆರಿಯೊ ಕಾರು ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ. ಹೊಸ ತಲೆಮಾರಿನ ಮಾರುತಿ ಸುಜುಕಿ ಸೆಲೆರಿಯೊ ಭಾರತದಲ್ಲಿ ಹಲವು ಬಾರಿ ರೋಡ್ ಟೆಸ್ಟ್ ನಡೆಸಿದೆ.

ಏಪ್ರಿಲ್ ತಿಂಗಳಿಂದ ದುಬಾರಿಯಾಗಲಿವೆ ಮಾರುತಿ ಸುಜುಕಿ ಕಾರುಗಳು

ವರದಿಗಳ ಪ್ರಕಾರ, ಹೊಸ ಸೆಲೆರಿಯೊ ಹ್ಯಾಚ್‌ಬ್ಯಾಕ್‌ ಮಾದರಿಯು ಮೇ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ. ಇನ್ನು ಜಿಮ್ನಿ ಎಸ್‍ಯುವಿಯನ್ನು ಕೂಡ ಭಾರತದಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಇನ್ನು ಮಾರುತಿ ಸುಜುಕಿ ಕಾರುಗಳು ಉತ್ತಮ ಬೇಡಿಕೆಯೊಂದಿಗೆ ಭಾರತದಲ್ಲಿ ಮಾರಾಟವಾಗುತ್ತಿವೆ.

Most Read Articles

Kannada
English summary
Maruti Suzuki To Increase Car Prices From April 2021. Read In kannada.
Story first published: Tuesday, March 23, 2021, 18:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X