ಟೊಯೊಟಾ ಬ್ಯಾಡ್ಜ್‌ನೊಂದಿಗೆ ಸ್ಪಾಟ್ ಟೆಸ್ಟ್ ನಡೆಸಿದ ಮಾರುತಿ ವ್ಯಾಗನ್ಆರ್ ಫೇಸ್‌ಲಿಫ್ಟ್

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಭಾರತೀಯ ಮಾರುಕಟ್ಟೆಯಲ್ಲಿ ವ್ಯಾಗನ್ಆರ್ ಕಾರಿನ ಫೇಸ್‌ಲಿಫ್ಟ್ ಮಾದರಿಯನ್ನು ಅಭಿವೃದ್ಧಿ ಪಡಿಸುತ್ತಿದೆ. ಇತ್ತೀಚೆಗೆ ಈ ಹೊಸ ವ್ಯಾಗನ್ಆರ್ನ್ ಫೇಸ್‌ಲಿಫ್ಟ್ ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸ್ಪೈ ಚಿತ್ರಗಳು ಬಹಿರಂಗವಾಗಿದೆ.

ಟೊಯೊಟಾ ಬ್ಯಾಡ್ಜ್‌ನೊಂದಿಗೆ ಸ್ಪಾಟ್ ಟೆಸ್ಟ್ ನಡೆಸಿದ ಮಾರುತಿ ವ್ಯಾಗನ್ಆರ್ ಫೇಸ್‌ಲಿಫ್ಟ್

ಸ್ಫಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ಮಾದರಿಯು ಬ್ರ್ಯಾಂಡ್‌ನ ಪ್ರೀಮಿಯಂ ನೆಕ್ಸಾ ಲೈನ್‌ಅಪ್‌ಗೆ ಹೊಸ ಮಾದರಿಯಾಗಲಿದೆ ಅಥವಾ ಮಾರುತಿ ಸುಜುಕಿ ಅರೆನಾ ಶೋ ರೂಂಗಳಲ್ಲಿ ಮಾರಾಟವಾಗುತ್ತಿರುವ ಬದಲಿ ಮಾದರಿಯಾಗಿಲಿದೆಯೇ ಎಂಬುವುದು ಇನ್ನು ಮಾಹಿತಿ ಬಹಿರಂಗವಾಗಿಲ್ಲ. ಆದರೆ ಈ ಹೊಸ ಕಾರು ಸ್ಫಾಟ್ ಟೆಸ್ಟ್ ನಡೆಸುತ್ತಿರುವಾಗ ಟೊಯೊಟ್ ಬ್ಯಾಡ್ಜಿಂಗ್ ಅನ್ನು ಹೊಂದಿದೆ.

ಟೊಯೊಟಾ ಬ್ಯಾಡ್ಜ್‌ನೊಂದಿಗೆ ಸ್ಪಾಟ್ ಟೆಸ್ಟ್ ನಡೆಸಿದ ಮಾರುತಿ ವ್ಯಾಗನ್ಆರ್ ಫೇಸ್‌ಲಿಫ್ಟ್

ಆದರೆ ಸ್ಫಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡಿರುವ ಮಾದರಿಯು ವ್ಯಾಗನ್ಆರ್ ಕಾರಿನ ಫೇಸ್‌ಲಿಫ್ಟ್ ಮಾದರಿಯಾಗಿರಬಹುದು ಎಂದು ನಿರೀಕ್ಷಿಸುತ್ತೇವೆ. ಕಾರಿನ ಮುಂಭಾಗದ ಹೊಸ ಫಾಸಿಕವನ್ನು ಹೊಂದಿದೆ. ಇನ್ನು ಈ ಹ್ಯಾಚ್‌ಬ್ಯಾಕ್‌ನಲ್ಲಿ ಸ್ಪ್ಲಿಟ್-ಸ್ಟೈಲ್ ಹೆಡ್‌ಲ್ಯಾಂಪ್ ವಿನ್ಯಾಸವನ್ನು ಹೊಂದಿದ್ದು, ಡಿಆರ್‌ಎಲ್‌ಗಳನ್ನು ಮೇಲ್ಭಾಗದಲ್ಲಿ ಮತ್ತು ಹೆಡ್‌ಲ್ಯಾಂಪ್‌ಗಳನ್ನು ಕೆಳಭಾಗದಲ್ಲಿ ಇರಿಸಲಾಗಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಟೊಯೊಟಾ ಬ್ಯಾಡ್ಜ್‌ನೊಂದಿಗೆ ಸ್ಪಾಟ್ ಟೆಸ್ಟ್ ನಡೆಸಿದ ಮಾರುತಿ ವ್ಯಾಗನ್ಆರ್ ಫೇಸ್‌ಲಿಫ್ಟ್

ಇನ್ನು ಈ ಕಾರಿನಲ್ಲಿ ಫಾಗ್ ಲ್ಪಾಂಪ್ ಯುನಿಟ್ ಗಳನ್ನು ಸಹ ಹೊಂದಿದೆ, ಇವುಗಳನ್ನು ಹೆಡ್‌ಲ್ಯಾಂಪ್ ಯುನಿಟ್ ಗಳ ಬಂಪರ್‌ನ ಕೆಳಗೆ ಇಡಲಾಗುತ್ತದೆ. ಫಾಗ್ ಲ್ಯಾಂಪ್ ಗಳನ್ನು ರೇಡಿಯೇಟರ್ ಗ್ರಿಲ್‌ನಲ್ಲಿ ಸಂಯೋಜಿಸಲಾಗಿದೆ. ಗ್ರಿಲ್‌ನ ಮೇಲಿನ ವಿಭಾಗವು ಡಿಆರ್‌ಎಲ್‌ಗಳನ್ನು ನೀಡಲಾಗಿದೆ.

ಟೊಯೊಟಾ ಬ್ಯಾಡ್ಜ್‌ನೊಂದಿಗೆ ಸ್ಪಾಟ್ ಟೆಸ್ಟ್ ನಡೆಸಿದ ಮಾರುತಿ ವ್ಯಾಗನ್ಆರ್ ಫೇಸ್‌ಲಿಫ್ಟ್

ಮಾರುತಿ ಸುಜುಕಿ ವ್ಯಾಗನ್ಆರ್ ಫೇಸ್‌ಲಿಫ್ಟ್ ಅಥವಾ ಎಕ್ಸ್‌ಎಲ್5 ಹ್ಯಾಚ್‌ಬ್ಯಾಕ್‌ನ ಸೈಡ್ ಪ್ರೊಫೈಲ್ ಪ್ರಸ್ತುತ ಮಾರುಕಟ್ಟೆಯಲ್ಲಿರುವ ವ್ಯಾಗನ್ಆರ್ ಮಾದರಿಗೆ ಹೋಲುತ್ತದೆ. ಹಿಂಭಾಗದಲ್ಲಿ ಕೆಲವು ಸೂಕ್ಷ್ಮ ಬದಲಾವಣೆಗಳನ್ನು ಮಾಡಲಾಗಿದೆ.

MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಟೊಯೊಟಾ ಬ್ಯಾಡ್ಜ್‌ನೊಂದಿಗೆ ಸ್ಪಾಟ್ ಟೆಸ್ಟ್ ನಡೆಸಿದ ಮಾರುತಿ ವ್ಯಾಗನ್ಆರ್ ಫೇಸ್‌ಲಿಫ್ಟ್

ಹಿಂಭಾಗದ ಬಂಪರ್ ಹೊಸ ವಿನ್ಯಾಸವನ್ನು ಹೊಂದಿದೆ. ಹಿಂಭಾಗದಲ್ಲಿರುವ ಉಳಿದ ವೈಶಿಷ್ಟ್ಯಗಳು ಬದಲಾಗದೆ ಉಳಿದಿವೆ. ಇನ್ನು ಮಾರುತಿ ಸುಜುಕಿ ವ್ಯಾಗನ್ಆರ್ ಫೇಸ್‌ಲಿಫ್ಟ್ ಅಥವಾ ಎಕ್ಸ್‌ಎಲ್5 ಹ್ಯಾಚ್‌ಬ್ಯಾಕ್‌ ಮಾದರಿಯು ಸ್ಪಾಟ್ ಟೆಸ್ಟ್ ನಡೆಸುವಾಗ ಟೊಯೊಟಾ ಬ್ಯಾಡ್ಜ್ ಅನ್ನು ಹೊಂದಿದೆ.

ಟೊಯೊಟಾ ಬ್ಯಾಡ್ಜ್‌ನೊಂದಿಗೆ ಸ್ಪಾಟ್ ಟೆಸ್ಟ್ ನಡೆಸಿದ ಮಾರುತಿ ವ್ಯಾಗನ್ಆರ್ ಫೇಸ್‌ಲಿಫ್ಟ್

ಈ ಕಾರಿನಲ್ಲಿ ಅಲಾಯ್ ವ್ಹೀಲ್ ಮತ್ತು ಟೊಯೊಟಾ ಸೆಂಟರ್ ಕ್ಯಾಪ್ ಅನ್ನು ಹೊಂದಿವೆ. ಟೊಯೊಟಾ ಮತ್ತು ಮಾರುತಿ ಸುಜುಕಿ ಪಾಲುಗಾರಿಕೆಯಲ್ಲೊ ಈಗಾಗಲೇ ಟೊಯೊಟಾ ಗ್ಲಾಂಝಾ ಮತ್ತು ಅರ್ಬನ್ ಕ್ರೂಸರ್ ಮಾದರಿಯನ್ನು ಬಿಡುಗಡೆಗೊಳಿಸಲಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಸ್ಪಾಟ್ ಟೆಸ್ಟ್ ನಡೆಸುತ್ತಿರುವಾಗ ಕಾಣಿಸಿಕೊಂಡ ಮಾದರಿಯು ವ್ಯಾಗನ್ಆರ್ ಎಲೆಕ್ಟ್ರಿಕ್ ಎಂದು ಕೂಡ ಹೇಳಲಾಗುತ್ತಿದೆ, ಆದರೆ ಸ್ಪೈ ವಿಡಿಯೋ ಪ್ರಕಾರದಲ್ಲಿ ಸ್ಪಾಟ್ ಟೆಸ್ಟ್ ಸಂದರ್ಭದಲ್ಲಿ ಐಸಿ ಎಂಜಿನ್ ಅಳವಡಿಸಲಾಗಿದ್ದು, ಇದರ ಶಬ್ದವು ಕೇಳುತ್ತಿತ್ತು. ಆದರೆ ಶೀಘ್ರದಲ್ಲೇ ವ್ಯಾಗನ್ಆರ್ ಎಲೆಕ್ಟ್ರಿಕ್ ಮಾದರಿಯು ಕೂಡ ಬಿಡುಗಡೆಯಾಗಲಿದೆ.

ಟೊಯೊಟಾ ಬ್ಯಾಡ್ಜ್‌ನೊಂದಿಗೆ ಸ್ಪಾಟ್ ಟೆಸ್ಟ್ ನಡೆಸಿದ ಮಾರುತಿ ವ್ಯಾಗನ್ಆರ್ ಫೇಸ್‌ಲಿಫ್ಟ್

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾದರಿಯಲ್ಲಿ ಮಾರಾಟವಾಗುವ ವ್ಯಾಗನ್ಆರ್ ಅದೇ ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿರಬಹುದು ಎಂದು ನಿರೀಕ್ಷಿಸುತ್ತೇವೆ. ಇದು 1.0-ಲೀಟರ್ ಮತ್ತು 1.2-ಲೀಟರ್ ಪೆಟ್ರೋಲ್ ಎಂಜಿನ್ ಗಳಾಗಿದೆ.

Image Courtesy: MRD Cars

Most Read Articles

Kannada
English summary
Maruti Suzuki WagonR Facelift (XL5) With Toyota Badge Spied Testing. Read In Kannada.
Story first published: Friday, May 28, 2021, 12:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X