2021ರಲ್ಲಿ ಏಳು ಹೊಸ ಎಎಂಜಿ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಮರ್ಸಿಡಿಸ್ ಬೆಂಝ್

ಜರ್ಮನಿ ಮೂಲದ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ಈ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಇ-ಕ್ಲಾಸ್ ಫೇಸ್‌ಲಿಫ್ಟ್ ಹಾಗೂ ಎ-ಕ್ಲಾಸ್ ಲಿಮೋಸಿನ್ ಕಾರುಗಳನ್ನು ಬಿಡುಗಡೆಗೊಳಿಸಿದೆ.

2021ರಲ್ಲಿ ಏಳು ಹೊಸ ಎಎಂಜಿ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಮರ್ಸಿಡಿಸ್ ಬೆಂಝ್

ಮರ್ಸಿಡಿಸ್ ಬೆಂಝ್ ಕಂಪನಿಯು ಈ ವರ್ಷ ಭಾರತದಲ್ಲಿ 7 ಹೊಸ ಎಎಂಜಿ ಮಾದರಿಗಳನ್ನು ಬಿಡುಗಡೆಗೊಳಿಸಬಹುದೆಂದು ವರದಿಯೊಂದು ಬಹಿರಂಗಪಡಿಸಿದೆ. ಇದರ ಜೊತೆಗೆ ಕಂಪನಿಯು ಈ ಕಾರುಗಳನ್ನು ಸ್ಥಳೀಯವಾಗಿ ಉತ್ಪಾದಿಸುವುದರತ್ತ ಗಮನ ಹರಿಸಿದೆ.

2021ರಲ್ಲಿ ಏಳು ಹೊಸ ಎಎಂಜಿ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಮರ್ಸಿಡಿಸ್ ಬೆಂಝ್

ಮರ್ಸಿಡಿಸ್ ಬೆಂಝ್ ಕಂಪನಿಯು ಎಎಂಜಿ ಜಿಎಲ್‌ಸಿ 43 ಕೂಪೆ ಹಾಗೂ ಎಎಂಜಿ ಎ 35 ಸೆಡಾನ್ ಕಾರುಗಳನ್ನು ಪುಣೆಯ ಚಕನ್ ಘಟಕದಲ್ಲಿ ಉತ್ಪಾದಿಸುತ್ತಿದೆ. ಈ ಘಟಕದಲ್ಲಿ ಕಂಪನಿಯು ಇತರ ಎಎಂಜಿ ಮಾದರಿಗಳನ್ನು ಸಹ ಉತ್ಪಾದಿಸಲಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

2021ರಲ್ಲಿ ಏಳು ಹೊಸ ಎಎಂಜಿ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಮರ್ಸಿಡಿಸ್ ಬೆಂಝ್

ಎಎಂಜಿ ಸರಣಿಯ ಮುಂದಿನ ಕಾರು ಹೊಸ ತಲೆಮಾರಿನ ಜಿಎಲ್‌ಎ ಹಾಗೂ ಸಿ-ಕ್ಲಾಸ್ ಆಗಿರಬಹುದು. ಈ ಎರಡೂ ಮಾದರಿಗಳು ಭಾರತದಲ್ಲಿ ಮಾತ್ರ ಉತ್ಪಾದನೆಯಾಗಲಿವೆ. ಮರ್ಸಿಡಿಸ್ ಬೆಂಝ್ ಕಂಪನಿಯು ಭಾರತದಲ್ಲಿ ಸ್ಥಳೀಕರಣದ ನೀತಿಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

2021ರಲ್ಲಿ ಏಳು ಹೊಸ ಎಎಂಜಿ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಮರ್ಸಿಡಿಸ್ ಬೆಂಝ್

ಇದರಿಂದ ಭಾರತದಲ್ಲಿ ಕಾರುಗಳ ಉತ್ಪಾದನಾ ವೆಚ್ಚ ಕಡಿಮೆಯಾಗಲಿದೆ. ಜೊತೆಗೆ ಕಾರುಗಳ ಬೆಲೆಗಳು ಸಹ ಕಡಿಮೆಯಾಗುತ್ತವೆ ಎಂಬುದು ಕಂಪನಿಯ ಅಭಿಪ್ರಾಯ. ಮರ್ಸಿಡಿಸ್ ಬೆಂಝ್ ಕಂಪನಿಯು ಇತ್ತೀಚಿಗಷ್ಟೇ ಎ-ಕ್ಲಾಸ್ ಲಿಮೋಸಿನ್ ಕಾರ್ ಅನ್ನು ಬಿಡುಗಡೆಗೊಳಿಸಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

2021ರಲ್ಲಿ ಏಳು ಹೊಸ ಎಎಂಜಿ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಮರ್ಸಿಡಿಸ್ ಬೆಂಝ್

ಈ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.39.90 ಲಕ್ಷಗಳಾಗಿದೆ. ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಕಾರ್ ಅನ್ನು ಎ 200, ಎ 200 ಡಿ ಹಾಗೂ ಭಾರತದಲ್ಲಿ ಉತ್ಪಾದನೆಯಾಗಿರುವ ಎ 35 ಎಎಂಜಿ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

2021ರಲ್ಲಿ ಏಳು ಹೊಸ ಎಎಂಜಿ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಮರ್ಸಿಡಿಸ್ ಬೆಂಝ್

ಎ-ಕ್ಲಾಸ್, ಭಾರತದಲ್ಲಿ ಅಸೆಂಬಲ್ ಮಾಡಲಾದ ಕಂಪನಿಯ ಎರಡನೇ ಎಎಂಜಿ ಕಾರ್ ಆಗಿದೆ. ಎ-ಕ್ಲಾಸ್ ಸೆಡಾನ್ ಕಾರಿನ ವಿನ್ಯಾಸವನ್ನು ಎ-ಕ್ಲಾಸ್ ಹ್ಯಾಚ್‌ಬ್ಯಾಕ್‌ ಕಾರಿನಿಂದ ಪಡೆಯಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

2021ರಲ್ಲಿ ಏಳು ಹೊಸ ಎಎಂಜಿ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಮರ್ಸಿಡಿಸ್ ಬೆಂಝ್

ಎ-ಕ್ಲಾಸ್ ಸೆಡಾನ್ ಕಾರ್ ಅನ್ನು 2020ರ ಮಧ್ಯಭಾಗದಲ್ಲಿಯೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬೇಕಿತ್ತು. ಆದರೆ ಕರೋನಾ ಸಾಂಕ್ರಾಮಿಕದಿಂದಾಗಿ ಈ ಕಾರಿನ ಬಿಡುಗಡೆಯನ್ನು ಮುಂದೂಡಲಾಯಿತು. ಈ ಕಾರಿನ ಇಂಟಿರಿಯರ್'ನಲ್ಲಿ ಹಲವಾರು ಫೀಚರ್'ಗಳನ್ನು ನೀಡಲಾಗಿದೆ.

2021ರಲ್ಲಿ ಏಳು ಹೊಸ ಎಎಂಜಿ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಮರ್ಸಿಡಿಸ್ ಬೆಂಝ್

ಈ ಕಾರಿನಲ್ಲಿ ಕಂಪನಿಯ ಹೊಸ ಡ್ಯುಯಲ್ ಸ್ಕ್ರೀನ್ ಎಂಬಿಯುಎಕ್ಸ್ ಇನ್ಫೋಟೇನ್ ಮೆಂಟ್ ಸಿಸ್ಟಂ ಅನ್ನು ನೀಡಲಾಗಿದೆ. ಇದರ ಜೊತೆಗೆ ಈ ಕಾರು ಕ್ಲೈಮೇಟ್ ಕಂಟ್ರೋಲ್, ವಾಯ್ಸ್ ಕಮ್ಯಾಂಡ್, ಪಾರ್ಕ್ ಅಸಿಸ್ಟ್, ಬ್ರೇಕ್ ಅಸಿಸ್ಟ್ ಸೇರಿದಂತೆ ಹಲವಾರು ಫೀಚರ್'ಗಳನ್ನು ನೀಡಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

2021ರಲ್ಲಿ ಏಳು ಹೊಸ ಎಎಂಜಿ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಮರ್ಸಿಡಿಸ್ ಬೆಂಝ್

ಎ-ಕ್ಲಾಸ್ ಲಿಮೋಸಿನ್‌ ಕಾರ್ ಅನ್ನು ಭಾರತದಲ್ಲಿ ಮೂರು ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುವುದು ಎಂದು ಹೇಳಲಾಗಿದೆ. ಎ 200 ಮಾದರಿಯು 1.4 ಲೀಟರ್ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ 161 ಬಿಹೆಚ್‌ಪಿ ಪವರ್ ಹಾಗೂ 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

2021ರಲ್ಲಿ ಏಳು ಹೊಸ ಎಎಂಜಿ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಮರ್ಸಿಡಿಸ್ ಬೆಂಝ್

ಎ 200 ಡಿ ಮಾದರಿಯಲ್ಲಿ 2.0 ಲೀಟರ್ 4-ಸಿಲಿಂಡರ್ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಡೀಸೆಲ್ ಎಂಜಿನ್ 147 ಬಿಹೆಚ್‌ಪಿ ಪವರ್ ಹಾಗೂ 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಸರಣಿಯ ಬಲಶಾಲಿ ಎಂಜಿನ್ ಅನ್ನು ಎ 35 ಎಎಂಜಿ ಮಾದರಿಯಲ್ಲಿ ನೀಡಲಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

2021ರಲ್ಲಿ ಏಳು ಹೊಸ ಎಎಂಜಿ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಮರ್ಸಿಡಿಸ್ ಬೆಂಝ್

ಈ ಮಾದರಿಯಲ್ಲಿ 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 302 ಬಿಹೆಚ್‌ಪಿ ಪವರ್ ಹಾಗೂ 400 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಪೆಟ್ರೋಲ್ ಎಂಜಿನ್ ಮಾದರಿಗಳಲ್ಲಿ 7-ಸ್ಪೀಡ್ ಡಿಸಿಟಿ ಹಾಗೂ ಡೀಸೆಲ್ ಎಂಜಿನ್ ಹೊಂದಿರುವ ಮಾದರಿಗಳಲ್ಲಿ 8-ಸ್ಪೀಡ್ ಡಿಸಿಟಿ ಗೇರ್ ಬಾಕ್ಸ್ ನೀಡಲಾಗಿದೆ.

2021ರಲ್ಲಿ ಏಳು ಹೊಸ ಎಎಂಜಿ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಮರ್ಸಿಡಿಸ್ ಬೆಂಝ್

ಮರ್ಸಿಡಿಸ್ ಬೆಂಝ್ 35 ಎಎಂಜಿ ಕಾರು ಹೆಚ್ಚು ಪರ್ಫಾಮೆನ್ಸ್ ನೀಡುವ ಸೆಡಾನ್ ಕಾರ್ ಆಗಿದೆ. ಈ ಕಾರು ಕೇವಲ 4.8 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 225 ಕಿ.ಮೀಗಳಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

2021ರಲ್ಲಿ ಏಳು ಹೊಸ ಎಎಂಜಿ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಮರ್ಸಿಡಿಸ್ ಬೆಂಝ್

ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ಕಾರಿನ ಎಲ್ಲಾ ಯುನಿಟ್'ಗಳನ್ನು ಬುಕ್ಕಿಂಗ್ ಮಾಡಲಾಗಿದೆ. ಮರ್ಸಿಡಿಸ್ ಬೆಂಝ್ ಕಂಪನಿಯು ಇತ್ತೀಚಿಗೆ 5 ಕೋಟಿ ಕಾರುಗಳ ಉತ್ಪಾದನೆಯನ್ನು ಪೂರ್ಣಗೊಳಿಸಿದೆ. ಕಂಪನಿಯು ಕಳೆದ 75 ವರ್ಷಗಳಿಂದ ಕಾರುಗಳನ್ನು ಉತ್ಪಾದಿಸುತ್ತಿದೆ ಎಂದು ಮರ್ಸಿಡಿಸ್ ಬೆಂಝ್ ಕಂಪನಿಯು ವರದಿಯಲ್ಲಿ ತಿಳಿಸಿದೆ.

2021ರಲ್ಲಿ ಏಳು ಹೊಸ ಎಎಂಜಿ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಮರ್ಸಿಡಿಸ್ ಬೆಂಝ್

ಈಗ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಯು ಸಹ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯತ್ತ ಗಮನ ಹರಿಸುತ್ತಿದೆ.

Most Read Articles

Kannada
English summary
Mercedes Benz company to launch seven AMG cars in India in 2021. Read in Kannada.
Story first published: Saturday, March 27, 2021, 16:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X