Just In
Don't Miss!
- Movies
ಜಾಕಿ ಚಾನ್ ತಮ್ಮ ಮಗನಿಗೆ ಸಾವಿರಾರು ಕೋಟಿ ಆಸ್ತಿಯನ್ನು ಕೊಡುತ್ತಿಲ್ಲವೇಕೆ?
- News
ಏಪ್ರಿಲ್ 22ರವರೆಗೆ ರಾಜ್ಯದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ
- Lifestyle
ಭಾನುವಾರದ ಭವಿಷ್ಯ: ಈ ದಿನ ಯಾವ ರಾಶಿಯವರಿಗೆ ಅದೃಷ್ಟದ ದಿನ
- Sports
ಹೈದರಾಬಾದ್ ಸೋಲಿಸಿ ಅಗ್ರ ಸ್ಥಾನಕ್ಕೇರಿದ ಮುಂಬೈ ಇಂಡಿಯನ್ಸ್
- Finance
ಮಹಾರಾಷ್ಟ್ರದಲ್ಲಿ ಲಾಕ್ಡೌನ್: ಕಾರುಗಳ ಉತ್ಪಾದನೆ ಮೇಲೆ ಭಾರೀ ಪರಿಣಾಮ
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮರ್ಸಿಡಿಸ್ ಬೆಂಝ್ ವೆಬ್‌ಸೈಟ್‌ನಿಂದ ಮರೆಯಾಯ್ತು ಇ-ಕ್ಲಾಸ್ ಆಲ್-ಟೆರೈನ್ ಕಾರಿನ ಹೆಸರು
ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಿಂದ ಇ-ಕ್ಲಾಸ್ ಆಲ್-ಟೆರೈನ್ ಕಾರಿನ ಹೆಸರನ್ನು ತೆಗೆದುಹಾಕಿದೆ. ಈ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಆಲ್-ಟೆರೈನ್ ಕಾರು ಭಾರತದಲ್ಲಿ ಮೊದಲ ಬಾರಿಗೆ 2018ರಲ್ಲಿ ಬಿಡುಗಡೆಗೊಂಡಿತ್ತು.

ಈ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಆಲ್-ಟೆರೈನ್ ಕಾರಿನ ಆರಂಭಿಕ ಬೆಲೆಯು ಬಾರತದ ಎಕ್ಸ್ ಶೋರೂಂ ಪ್ರಕಾರ ರೂ.75 ಲಕ್ಷಗಳಾಗಿದೆ. ಇದರ ಸ್ಟ್ಯಾಂಡರ್ಡ್ ಮಾದರಿಯನ್ನು ಎಸ್ಟೇಟ್ ಬಾಡಿ ಸ್ಟೈಲ್ ನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಯಿತು. ಆದರೆ ಈ ಎಸ್ಟೇಟ್ ಮಾದರಿ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಕಂಡಿಲ್ಲ. ಇದೇ ಸ್ಥಗಿತಗೊಳ್ಳಲು ಕಾರಣವಾಯಿತು.

ಈ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಆಲ್-ಟೆರೈನ್ ಕಾರಿನಲ್ಲಿ ಬಿಎಸ್ 6 ಪ್ರೇರಿತ 2.0-ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 194 ಬಿಹೆಚ್‍ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಈ ಎಂಜಿನ್ ನೊಂದಿಗೆ 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ. ಇದು ಬ್ರ್ಯಾಂಡ್‌ನ 4 ಮ್ಯಾಟಿಕ್ ಸಿಸ್ಟಂ ಮೂಲಕ ನಾಲ್ಕು ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸಲಾಗುತ್ತದೆ.

ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಆಲ್-ಟೆರೈನ್ ಕಾರನ್ನು ಸಿಬಿಯು ಮಾರ್ಗದ ಮೂಲಕ ಭಾರತಕ್ಕೆ ತರಲಾಯಿತು. ಈ ಕಾರು ಹಲವಾರು ಅತ್ಯಾಧುನಿಕ ಫೀಚರ್ ಗಳನ್ನು ಒಳಗೊಂಡಿದೆ. ಈ ಕಾರಿನ ಏರ್ ಸಸ್ಪೆಂಕ್ಷನ್, ಹಿಂಭಾಗದ ಎಸಿ ವೆಂಟ್ಸ್, ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಪ್ರೀಮಿಯಂ ಲೆದರ್ ಸೀಟುಗಳು ಮತ್ತು ಇನ್ನು ಹಲವು ಫೀಚರ್ ಗಳನ್ನು ಒಳಗೊಂಡಿವೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಇನ್ನು ಇ-ಕ್ಲಾಸ್ ಆಲ್-ಟೆರೈನ್ ಕಾರಿನ ಮಾದರಿಯಲ್ಲಿ ಅತ್ಯಂತ ಪ್ರಭಾವಶಾಲಿ ಹೈಲೈಟ್ ದೊಡ್ಡದಾದ 640-ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದೆ. ಇದರ ಹಿಂಭಾಗದ ಸೀಟ್ ಮಾಡಿಚಿದರೆ 1800-ಲೀಟರ್ ವರೆಗೆ ವಿಸ್ತರಿಸಬಲ್ಲದು. ಇನ್ನು ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಆಲ್-ಟೆರೈನ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ವೋಲ್ವೋ ವಿ90 ಕ್ರಾಸ್ ಕಾರಿಗೆ ಪೈಪೋಟಿ ನೀಡುತ್ತದೆ.

ಮರ್ಸಿಡಿಸ್ ಬೆಂಝ್ ಕಂಪನಿಯು ಆಲ್-ಟೆರೈನ್ ಎಸ್ಟೇಟ್ ಮಾದರಿಯು ಸ್ಥಗಿತಕೊಳಿಸಿ ಶೀಘ್ರದಲ್ಲೇ ಹೊಸ ಇ-ಕ್ಲಾಸ್ ಎಲ್ಡಬ್ಲ್ಯೂಬಿ ಕಾರನ್ನು ಪರಿಚಯಿಸಲಿದೆ. ಮರ್ಸಿಡಿಸ್ ಬೆಂಝ್ ತನ್ನ ಹೊಸ ಜನಪ್ರಿಯ ಸಿ-ಕ್ಲಾಸ್ ಕಾರಿನ 2021ರ ಆವೃತ್ತಿಯನ್ನು ಜಾಗತಿಕವಾಗಿ ಅನಾವರಣಗೊಳಿಸಿದ್ದು, ಹೊಸ ಆವೃತ್ತಿಯಲ್ಲಿ ಭಾರತದಲ್ಲಿ ಇದೇ ತಿಂಗಳು 16ರಂದು ಬಿಡುಗಡೆಯಾಗಲಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

2021ರ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಅನ್ನು ಸೆಡಾನ್ ಮತ್ತು ಎಸ್ಟೇಟ್ ಬಾಡಿ ವಿನ್ಯಾಸಗಳಲ್ಲಿ ಅನಾವರಣಗೊಡಿದೆ. ಭಾರತದಲ್ಲಿ ಬಿಡುಗಡೆಯಾಗಿರುವ ಹೊಸ ಆವೃತ್ತಿಯ ಸೆಡಾನ್ ಮಾದರಿಯಲ್ಲಿ ಮಾತ್ರ ಬಿಡುಗಡೆಗೊಳಿಸಲಾಗುತ್ತದೆ.

ಹೊಸ ಆವೃತ್ತಿಯ ಒಟ್ಟಾರೆ ಸಿಲೊಟ್ ಸಿ-ಕ್ಲಾಸ್‌ನ ಹಳೆಯ ಮಾದರಿಯಂತೆಯೇ ಉಳಿದಿದ್ದರೂ ಎರಡೂ ಸೆಡಾನ್‌ನಲ್ಲಿನ ವ್ಹೀಲ್‌ಬೇಸ್ ಅನ್ನು ಹಳೆಯ ಮಾದರಿಗಿಂತಲೂ 25-ಎಂಎಂ ನಷ್ಟು ಹೆಚ್ಚಿಸಲಾಗಿದೆ. ಈ ಮೂಲಕ ಹಿಂದಿನ ಮಾದರಿಗಿಂತಲೂ 30 ಲೀಟರ್ ಬೂಟ್-ಸ್ಪೇಸ್ ಹೆಚ್ಚಳದೊಂದಿಗೆ ಒಟ್ಟಾರೆ ಉದ್ದವು ಈಗ 65 ಎಂಎಂ ಹೆಚ್ಚಾಗಿದೆ.

2021ರ ಸಿ-ಕ್ಲಾಸ್ ಮಾದರಿಯಲ್ಲಿ 1.5-ಲೀಟರ್ ಎಂಜಿನ್ ಅನ್ನು ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ, ಇದರಲ್ಲಿ ಲೋವರ್-ಸ್ಪೆಕ್ ಎಂಜಿನ್ (ಸಿ 180) 169 ಬಿಹೆಚ್‌ಪಿ ಮತ್ತು 263 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.