ಅಗ್ಗದ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಹೊಸ ಹ್ಯುಂಡೈ ಎಸ್‍ಯುವಿ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ಹೊಸ ಬಯೋನ್ ಎಸ್‍ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದೀಗ ಈ ಹೊಸ ಹ್ಯುಂಡೈ ಬಯೋನ್ ಎಸ್‍ಯುವಿಯ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಅಗ್ಗದ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಹೊಸ ಹ್ಯುಂಡೈ ಎಸ್‍ಯುವಿ

ಈ ಹೊಸ ಹ್ಯುಂಡೈ ಬಯೋನ್ ಎಸ್‍ಯುವಿಯ ಟೀಸರ್ ಚಿತ್ರಗಳಲ್ಲಿ ಹೈಟೆಕ್ ಲುಕ್ ಅನ್ನು ಹೊಂದಿದೆ. ಟೀಸರ್ ಚಿತ್ರಗಳಲ್ಲಿ ಈ ಹೊಸ ಹ್ಯುಂಡೈ ಎಸ್‍ಯುವಿ ವಿನ್ಯಾಸದ ಕೆಲವು ಮಾಹಿತಿಗಳು ಬಹಿರಂಗವಾಗಿವೆ. ಬಯೋ ಎಸ್‍ಯುವಿ ಸ್ಪೋರ್ಟಿನೆಸ್ ವಿನ್ಯಾಸವನ್ನು ಹೊಂದಿರುವ ಮಾದರಿಯಾಗಿರಲಿದೆ. ಈ ಹೊಸ ಹ್ಯುಂಡೈ ಬಯೋನ್ ಎಸ್‍ಯುವಿಯ ಮುಂಭಾಗದಲ್ಲಿ ವಿಸ್ತರಿಸಿರುವ ಏರ್ ಇಂಟೆಕ್ ಬ್ಯಾಂಡ್ ಅನ್ನು ಹೊಂದಿದೆ.

ಅಗ್ಗದ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಹೊಸ ಹ್ಯುಂಡೈ ಎಸ್‍ಯುವಿ

ಇನ್ನು ಈ ಬಯೋನ್ ಎಸ್‍ಯುವಿಯಲ್ಲಿ ಹೆಡ್‌ಲ್ಯಾಂಪ್ ಜೊತೆ ಕಿರಿದಾದ ಡಿಆರ್ಎಲ್ ಮತ್ತು ಮುಂಭಾಗದಲ್ಲಿ ವಿಶಾಲವಾದ ಗ್ರಿಲ್ ಅನ್ನು ಹೊಂದಿದೆ. ಈ ಹೊಸ ಹ್ಯುಂಡೈ ಎಸ್‍ಯುವಿಯ ಮುಂಭಾಗ ಸಂಪ್ರದಾಯಕ ವಿನ್ಯಾಸದೊಂದಿಗೆ ಹೈಟಿಕ್ ಟೆಜ್ ಅನ್ನು ನೀಡಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಅಗ್ಗದ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಹೊಸ ಹ್ಯುಂಡೈ ಎಸ್‍ಯುವಿ

ಹ್ಯುಂಡೈ ಬಯೋನ್ ಎಸ್‍ಯುವಿಯ ಹಿಂಭಾಗ ಏರೋ ಆಕಾರದ ಬ್ರೇಕ್ ಲೈಟ್ ತೆಳುವಾದ ರೆಡ್ ಲೈನ್ ನೊಂದಿಗೆ ಕನೆಕ್ಟ್ ಆಗಿದೆ. ಇದು ಹಿಂಭಾಗದ ಗ್ರಾಫಿಕ್ ಅನ್ನು ಇನ್ನಷ್ಟು ಅತ್ಯುತ್ತಮವಾಗಿಸುತ್ತದೆ.

ಅಗ್ಗದ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಹೊಸ ಹ್ಯುಂಡೈ ಎಸ್‍ಯುವಿ

ಹ್ಯುಂಡೈ ತನ್ನ ಈ ಹೊಸ ಬಯೋನ್ ಎಸ್‍ಯುವಿಯನ್ನು ಈ ವರ್ಷದಲ್ಲಿ ಯುರೋಪಿನ ಬಿಡುಗಡೆಗೊಳಿಸಲಾಗುತ್ತದೆ. ಪಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಹ್ಯುಂಡೈ ಎಸ್‌ಯುವಿಗಳಿಗಿಂತ ಇದು ಕೈಗೆಟುಕುವ ಮಾದರಿಯಾಗಿರಲಿದೆ ಎಂದು ಹ್ಯುಂಡೈ ಹೇಳಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಅಗ್ಗದ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಹೊಸ ಹ್ಯುಂಡೈ ಎಸ್‍ಯುವಿ

ಹ್ಯುಂಡೈ ಬಯೋನ್ ಕಂಪನಿಯ ಯುರೋಪಿಯನ್ ಕ್ರಾಸ್ಒವರ್ ತಂಡವನ್ನು ಸೇರಿಕೊಳ್ಳುತ್ತದೆ. ಈ ಹೊಸ ಎಸ್‍ಯುವಿಯು ಕಂಪನಿಯ ಕೋನಾ, ಟ್ಯೂಸಾನ್, ನೆಕ್ಸೋ ಮತ್ತು ಸಂತಾ ಫೆ ಮಾದರಿಗಳ ಸರಣಿಗೆ ಸೇರಲಿದೆ.

ಅಗ್ಗದ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಹೊಸ ಹ್ಯುಂಡೈ ಎಸ್‍ಯುವಿ

ಹ್ಯುಂಡೈ ಕಂಪನಿಯು ಮೊದಲಿಗೆ ಈ ಹೊಸ ಎಸ್‍ಯುವಿಯನ್ನು ಯುರೋಪಿನ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಇದೇ ಕಾರಣದಿಂದ ಯುರೋಪಿನ ನಗರವಾದ ಬಯೋನ್ ಸಿಟಿಯ ಹೆಸರನ್ನು ಈ ಹೊಸ ಮಾದರಿಗೆ ಇಡಲಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಅಗ್ಗದ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಹೊಸ ಹ್ಯುಂಡೈ ಎಸ್‍ಯುವಿ

ಇನ್ನು ಈ ಹೊಸ ಹ್ಯುಂಡೈ ಬಯೋನ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ. ಅಲ್ಲದೇ ಹ್ಯುಂಡೈ ಕಂಪನಿಯು ಭಾರತದಲ್ಲಿ ತನ್ನ ಐ30 ಮಾದರಿಯನ್ನು ಕೂಡ ಬಿಡುಗಡೆಗೊಳಿಸಲು ನಿರ್ಧರಿಸಿಲ್ಲ.

ಅಗ್ಗದ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಹೊಸ ಹ್ಯುಂಡೈ ಎಸ್‍ಯುವಿ

ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕಂಪನಿಯ ಐ20, ವೆನ್ಯೂ ಮತ್ತು ಕ್ರೆಟಾ ಮಾದರಿಗಳು ದಾಖಲೆಯ ಮಟ್ಟದಲ್ಲಿ ಮಾರಾಟವಾಗುತ್ತಿದೆ. ಈ ಮಾದರಿಗಳು ಕಂಪನಿಗೆ ಕಾರು ಮಾರಾಟದಲ್ಲಿ ದೊಡ್ಡ ಕೊಡುಗೆಯನ್ನು ನೀಡುತ್ತಿದೆ. ಇದರಿಂದಾಗಿ ಇದೇ ವಿಭಾಗದಲ್ಲಿ ಮತ್ತೊಂದು ಮಾದರಿಯನ್ನು ಬಿಡುಗಡೆಗೊಳಿಸಲು ಹ್ಯುಂಡೈ ಹಿಂದೇಟು ಹಾಕಿದ್ದಾರೆ.

Most Read Articles

Kannada
English summary
Hyundai Teases Design Of Its Upcoming Affordable SUV Bayon. Read In Kananda.
Story first published: Thursday, January 21, 2021, 17:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X