ಭಾರತದಲ್ಲಿ ಚಾಲಕ ರಹಿತ ಕಾರ್ ಅನ್ನು ಬಿಡುಗಡೆಗೊಳಿಸಲಿದೆ ಮುಂಬೈ ಮೂಲದ ಕಂಪನಿ

ಹಲವು ಶತಮಾನಗಳ ಹಿಂದೆ ಮನುಷ್ಯ ಸಂಚಾರಕ್ಕಾಗಿ ಪ್ರಾಣಿಗಳನ್ನು ಬಳಸುತ್ತಿದ್ದ. ನಂತರ ಎತ್ತಿನ ಗಾಡಿ, ಕುದುರೆ ಗಾಡಿಗಳ ಬಳಕೆಯನ್ನು ಆರಂಭಿಸಿದ. ತಂತ್ರಜ್ಞಾನ ಬೆಳೆದಂತೆ ಕಾರುಗಳನ್ನು ಆವಿಷ್ಕಾರ ಮಾಡಿ, ಅವುಗಳಲ್ಲಿಯೇ ಸಂಚರಿಸುತ್ತಿದ್ದ. ಆರಂಭದಲ್ಲಿ ಕಾರುಗಳು ಕೇವಲ ಸೀಟುಗಳನ್ನು ಮಾತ್ರ ಹೊಂದಿರುತ್ತಿದ್ದವು. ಕಾಲ ಕಳೆದಂತೆ ಕಾರುಗಳಲ್ಲಿ ಹಲವು ಫೀಚರ್ ಗಳನ್ನು ಅಳವಡಿಸಲಾಯಿತು.

ಭಾರತದಲ್ಲಿ ಚಾಲಕ ರಹಿತ ಕಾರ್ ಅನ್ನು ಬಿಡುಗಡೆಗೊಳಿಸಲಿದೆ ಮುಂಬೈ ಮೂಲದ ಕಂಪನಿ

ಕೆಲವು ಹಾಲಿವುಡ್ ಸಿನಿಮಾಗಳಲ್ಲಿ ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿರುವ ಕಾರುಗಳನ್ನು ಕಾಣಬಹುದು. ನಿಜ ಜೀವನದಲ್ಲಿಯೂ ಈ ರೀತಿಯ ಕಾರುಗಳಿದ್ದರೆ ಎಷ್ಟು ಚೆಂದ ಎಂದು ಅನಿಸದೇ ಇರದು. ಆದರೆ ಕೆಲವು ಕಾರುಗಳಲ್ಲಿ ಸಿನಿಮಾಗಳನ್ನು ವೀಕ್ಷಿಸಲು ದೊಡ್ಡ ಪರದೆಯನ್ನು ಹೊಂದಿರುತ್ತವೆ. ಕೆಲವು ಕಾರುಗಳಲ್ಲಿ ಮಸಾಜ್ ಸೌಲಭ್ಯವೂ ಇರುತ್ತದೆ. ಈ ಫೀಚರ್ ಗಳನ್ನು ಈಗ ಬಿಡುಗಡೆಯಾಗುತ್ತಿರುವ ಐಷಾರಾಮಿ ಕಾರುಗಳಲ್ಲಿ ನೀಡಲಾಗುತ್ತದೆ.

ಭಾರತದಲ್ಲಿ ಚಾಲಕ ರಹಿತ ಕಾರ್ ಅನ್ನು ಬಿಡುಗಡೆಗೊಳಿಸಲಿದೆ ಮುಂಬೈ ಮೂಲದ ಕಂಪನಿ

ಇಂತಹ ಸೌಲಭ್ಯಗಳು 20 - 30 ವರ್ಷಗಳ ಹಿಂದೆ ಇರಲಿಲ್ಲ. ಕೆಲವೇ ಕೆಲವು ಕಂಪನಿಗಳ ಕಾರುಗಳು ಮಾತ್ರ ಡ್ರೈವರ್ ಲೆಸ್ ತಂತ್ರಜ್ಞಾನವನ್ನು ಹೊಂದಿವೆ. ಈ ತಂತ್ರಜ್ಞಾನ ಇನ್ನೂ ಭಾರತಕ್ಕೆ ಕಾಲಿಟ್ಟಿಲ್ಲ. ಟೆಸ್ಲಾ ಕಂಪನಿಯು ತನ್ನ ಕಾರುಗಳಲ್ಲಿ ಡ್ರೈವರ್ ಲೆಸ್ ತಂತ್ರಜ್ಞಾನವನ್ನು ನೀಡುತ್ತದೆ. ಡ್ರೈವರ್ ಲೆಸ್ ತಂತ್ರಜ್ಞಾನವು ಭಾರತದಂತಹ ದೇಶಕ್ಕೆ ಸೂಕ್ತವೇ ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ.

ಭಾರತದಲ್ಲಿ ಚಾಲಕ ರಹಿತ ಕಾರ್ ಅನ್ನು ಬಿಡುಗಡೆಗೊಳಿಸಲಿದೆ ಮುಂಬೈ ಮೂಲದ ಕಂಪನಿ

ಮುಂಬೈ ಮೂಲದ ಆಟೋಮೊಬೈಲ್ ಕಂಪನಿಯಾದ ಅಟಾನಾಮಸ್ ಇಂಟೆಲಿಜೆನ್ಸ್ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ (ಎಐಎಂಪಿಎಲ್) ಮುಂದಿನ ವರ್ಷ ದೇಶದಲ್ಲಿ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಚಾಲಿತ ಸ್ವಾಯತ್ತ ಕಾರನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಪೆಟ್ರೋಲ್ ಹಾಗೂ ಡೀಸೆಲ್‌ನಲ್ಲಿ ಚಲಿಸುವ ಈ ಚಾಲಕ ರಹಿತ ಕಾರು ಮುಂದಿನ ವರ್ಷ ಮಾರ್ಚ್‌ನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಭಾರತದಲ್ಲಿ ಚಾಲಕ ರಹಿತ ಕಾರ್ ಅನ್ನು ಬಿಡುಗಡೆಗೊಳಿಸಲಿದೆ ಮುಂಬೈ ಮೂಲದ ಕಂಪನಿ

ಈ ಕಾರು ಭಾರತ್ ಸ್ಟೇಜ್ 8 ಅಂದರೆ ಬಿಎಸ್ 8ಗೆ ಹೊಂದಿಕೊಳ್ಳುವ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‌ಗಳನ್ನು ಒಳಗೊಂಡಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಚಾಲಿತ ಸ್ವಾಯತ್ತ ಕಾರುಗಳಲ್ಲಿ ಮೊದಲನೆಯದಾಗಿದೆ. ಈ ಕಾರ್ ಅನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲಿಯೂ ಬಿಡುಗಡೆಗೊಳಿಸಲಾಗುವುದು. ಈ ಕಾರಿನಲ್ಲಿ ಸೆನ್ಸಾರ್‌ಗಳು, ಕ್ಯಾಮೆರಾಗಳು ಹಾಗೂ ರಾಡಾರ್‌ಗಳನ್ನು ಅಳವಡಿಸಲಾಗುವುದು.

ಭಾರತದಲ್ಲಿ ಚಾಲಕ ರಹಿತ ಕಾರ್ ಅನ್ನು ಬಿಡುಗಡೆಗೊಳಿಸಲಿದೆ ಮುಂಬೈ ಮೂಲದ ಕಂಪನಿ

ಇವುಗಳು ರಸ್ತೆಯ ಸುತ್ತಮುತ್ತಲಿನ ಮಾಹಿತಿಯನ್ನು ಸಂಗ್ರಹಿಸಿ, ಬಳಸುತ್ತವೆ. ಈ ವ್ಯವಸ್ಥೆಯು ರಸ್ತೆ ಗುಂಡಿ, ಹಂಪ್ ಹಾಗೂ ಲೇನ್‌ಗಳನ್ನು ಸಹ ಮೇಲ್ವಿಚಾರಣೆ ಮಾಡುತ್ತದೆ. ಈ ಕಾರಿನಲ್ಲಿರುವ ಸೆನ್ಸಾರ್‌ಗಳು ತುರ್ತು ಬದಲಾವಣೆ, ರಸ್ತೆ ತಡೆಗಳು, ಸಂಚಾರ, ಹವಾಮಾನ ಪರಿಸ್ಥಿತಿ, ಭಾರೀ ಮಳೆಯಂತಹ ಅಸಂಖ್ಯಾತ ಅಡೆತಡೆಗಳನ್ನು ಪತ್ತೆಹಚ್ಚಲು ನೆರವಾಗುತ್ತವೆ.

ಭಾರತದಲ್ಲಿ ಚಾಲಕ ರಹಿತ ಕಾರ್ ಅನ್ನು ಬಿಡುಗಡೆಗೊಳಿಸಲಿದೆ ಮುಂಬೈ ಮೂಲದ ಕಂಪನಿ

ಈ ಸೆನ್ಸಾರ್‌ಗಳು ಸ್ಕೂಟರ್‌ ಅಥವಾ ಟ್ಯಾಕ್ಸಿಗಳು, ಹಾಗೆಯೇ ಬೀದಿಗಳಲ್ಲಿ ಚಲಿಸುವ ಸಣ್ಣ ವಾಹನಗಳು ಅಥವಾ ಕೈಯಲ್ಲಿ ಹಿಡಿಯುವ ವಾಹನಗಳನ್ನು ಸಹ ಗುರುತಿಸುತ್ತವೆ. ಇದರ ಜೊತೆಗೆ ಟ್ರಾಫಿಕ್ ನಲ್ಲಿ ದಿಢೀರ್ ಆಗಿ ಬರುವ ವಾಹನಗಳ ಮೇಲೂ ಈ ಸೆನ್ಸಾರ್‌ಗಳು ಕಣ್ಣಿಡಲಿವೆ. ಸೆನ್ಸಾರ್‌ಗಳ ಸಹಾಯದಿಂದ, ಚಾಲಕರಹಿತ ಕಾರು ಸಾಮಾನ್ಯ ಪರಿಸ್ಥಿತಿಯನ್ನು ತ್ವರಿತವಾಗಿ ಗುರುತಿಸಬಹುದು.

ಭಾರತದಲ್ಲಿ ಚಾಲಕ ರಹಿತ ಕಾರ್ ಅನ್ನು ಬಿಡುಗಡೆಗೊಳಿಸಲಿದೆ ಮುಂಬೈ ಮೂಲದ ಕಂಪನಿ

ಈ ಕಾರು ಸುಮಾರು 500 ಮೀಟರ್ ದೂರವನ್ನು ಕ್ರಮಿಸುತ್ತದೆ. ಈ ಚಾಲಕ ರಹಿತ ಕಾರು 50% ನಷ್ಟು ಗೂಗಲ್ ಮ್ಯಾಪ್ ಗಳ ಮೇಲೆ ಅವಲಂಬಿತವಾಗಿದ್ದು, ಉಳಿದ 50% ಕಂಪನಿಯ ಸೆನ್ಸಾರ್‌ಗಳ ಮೇಲೆ ಅವಲಂಬಿತವಾಗಿರುತ್ತದೆ. ಎಐಎಂಪಿಎಲ್‌ನ ಚಾಲಕ ರಹಿತ ಹ್ಯಾಚ್‌ಬ್ಯಾಕ್‌ ಕಾರಿನಲ್ಲಿ ಬಳಸಲಾಗುತ್ತಿರುವ ಸ್ವಾಯತ್ತ ತಂತ್ರಜ್ಞಾನವನ್ನು ಕಂಪ್ಯೂಟರ್ ತಂತ್ರಜ್ಞಾನದ ವಿದ್ಯಾರ್ಥಿ ಕುಶಾಲ್ ತಾನಾಜಿ ಶಿಲಿಮ್ಕರ್ ಎಂಬುವವರು 2014 ರಲ್ಲಿ ಐಐಟಿ ಬಾಂಬೆಯಲ್ಲಿ ನಡೆದ ರಾಷ್ಟ್ರೀಯ ರೊಬೊಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ (ಎನ್‌ಆರ್‌ಸಿ) ಮೊದಲ ಬಾರಿ ಪ್ರದರ್ಶಿಸಿದರು.

ಭಾರತದಲ್ಲಿ ಚಾಲಕ ರಹಿತ ಕಾರ್ ಅನ್ನು ಬಿಡುಗಡೆಗೊಳಿಸಲಿದೆ ಮುಂಬೈ ಮೂಲದ ಕಂಪನಿ

ಈ ಸಂದರ್ಭದಲ್ಲಿ ಅವರು ತಮ್ಮ ಪೂರ್ಣ ಪ್ರಮಾಣದ ಚಾಲಕ ರಹಿತ ಆಟೋಮೊಬೈಲ್ ಯೋಜನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಅವರು ಈ ಹಿಂದೆ ಮೂಲ ಮಾದರಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ಎನ್‌ಆರ್‌ಸಿಯ ನಿಯಂತ್ರಿತ ಪರಿಸರದಲ್ಲಿ ತಮ್ಮ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಚಾಲಿತ ಸ್ವಾಯತ್ತ ವಾಹನವನ್ನು ಪರೀಕ್ಷಿಸಿದ್ದ ಅವರು ತಂತ್ರಜ್ಞಾನದ ಪಾದಚಾರಿ ನಿಯಂತ್ರಣ ವ್ಯವಸ್ಥೆ ಹಾಗೂ ಘರ್ಷಣೆ ತಪ್ಪಿಸುವ ವ್ಯವಸ್ಥೆಯ ಪರಿಣಾಮಕಾರಿತ್ವವನ್ನು ನಿರ್ಣಯಿಸಲು ಎಲ್ಲಾ ಮೂಲಭೂತ ರಸ್ತೆ ಸನ್ನಿವೇಶಗಳನ್ನು ಕೃತಕವಾಗಿ ರಚಿಸಿದ್ದರು.

ಭಾರತದಲ್ಲಿ ಚಾಲಕ ರಹಿತ ಕಾರ್ ಅನ್ನು ಬಿಡುಗಡೆಗೊಳಿಸಲಿದೆ ಮುಂಬೈ ಮೂಲದ ಕಂಪನಿ

ಶಿಲಿಮ್ಕರ್ ರವರ ಕಂಪನಿಯು ಈಗ ಭಾರತೀಯ ಗ್ರಾಹಕರಿಗಾಗಿ ಸುರಕ್ಷಿತವಾದ ಹಾಗೂ ವಿಶ್ವಾಸಾರ್ಹವಾದ ಸ್ವಾಯತ್ತ ಚಾಲನಾ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ. ಈ ಆಟೋಮ್ಯಾಟಿಕ್ ಕಾರ್ ಅನ್ನು ಪರೀಕ್ಷೆಯ ಸಮಯದಲ್ಲಿಯೇ ಸಾವಿರಾರು ಕಿ.ಮೀ ಚಾಲನೆ ಮಾಡಲಾಗಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಭಾರತದ ಮೊದಲ ಚಾಲಕ ರಹಿತ ಕಾರು ಜನರ ಮುಂದೆ ಬರಲಿದೆ ಎಂದು ಶಿಮಿಲ್ಕರ್ ಹೇಳಿದ್ದಾರೆ.

ಭಾರತದಲ್ಲಿ ಚಾಲಕ ರಹಿತ ಕಾರ್ ಅನ್ನು ಬಿಡುಗಡೆಗೊಳಿಸಲಿದೆ ಮುಂಬೈ ಮೂಲದ ಕಂಪನಿ

ಇನ್ನು ಟೆಸ್ಲಾ ಕಂಪನಿಯ ಚಾಲಕ ರಹಿತ ಕಾರುಗಳು ಹಲವು ಬಾರಿ ಅಪಘಾತಕ್ಕೀಡಾಗಿವೆ. ಕಾರು ಚಾಲಕರು ಈ ಕಾರಿನಲ್ಲಿರುವ ಆಟೋ ಪೈಲಟ್ ಮೋಡ್ ಆನ್ ಮಾಡಿ ಇತರ ಕಾರ್ಯಗಳಲ್ಲಿ ಭಾಗಿಯಾಗುವುದೇ ಈ ಕಾರುಗಳ ಅಪಘಾತಕ್ಕೆ ಪ್ರಮುಖ ಕಾರಣವೆಂದು ಹಲವು ಬಾರಿ ಸಾಬೀತಾಗಿದೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Mumbai based company to launch autonomous car in india soon details
Story first published: Thursday, December 9, 2021, 14:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X