Just In
- 3 hrs ago
ಬಿಡುಗಡೆಯಾಗಲಿರುವ ಓಲಾ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳೇನು?
- 5 hrs ago
ಪರಿಸರ ಸ್ನೇಹಿ ವಾಹನಗಳ ವಿಭಾಗದಲ್ಲಿ ಟಾಟಾ ನೆಕ್ಸಾನ್ ಇವಿ ಕಾರಿಗೆ ಪ್ರತಿಷ್ಠಿತ ಪ್ರಶಸ್ತಿ
- 6 hrs ago
ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ 2021ರ ಮಿನಿ 3 ಡೋರ್ ಫೇಸ್ಲಿಫ್ಟ್
- 7 hrs ago
ಪ್ರೀಮಿಯಂ ಕಾರುಗಳಲ್ಲಿ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿ ಮಾದರಿಯೇ ಬೆಸ್ಟ್
Don't Miss!
- Sports
ಐಎಸ್ಎಲ್: ಕೊನೆಯಲ್ಲಿ ಗೌರವದೊಂದಿಗೆ ನಿರ್ಗಮಿಸಿದ ಒಡಿಶಾ
- News
ಕಣಿವೆ ರಾಜ್ಯದಲ್ಲಿ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ ನಿಲ್ಲಿಸುವುದಿಲ್ಲ: ಭಾರತೀಯ ಸೇನೆ
- Movies
ಕಾಮಾಟಿಪುರದ ನಿಜ ಕತೆಗೆ ಅಜಯ್ ದೇವಗನ್ ಎಂಟ್ರಿ
- Lifestyle
ಮಾರ್ಚ್ ತಿಂಗಳಲ್ಲಿ ಹುಟ್ಟಿದವರು ಈ ವ್ಯಕ್ತಿತ್ವ ಹೊಂದಿರುತ್ತಾರೆ!!
- Finance
ಮತ್ತಷ್ಟು ಇಳಿಕೆಗೊಂಡ ಚಿನ್ನದ ಬೆಲೆ: ಫೆಬ್ರವರಿ 27ರ ಬೆಲೆ ಹೀಗಿದೆ
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ 2021ರ ಮಾರುತಿ ಸುಜುಕಿ ಸೆಲೆರಿಯೊ
ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ 2021ರ ಸೆಲೆರಿಯೊ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಮಾರುತಿ ಸುಜುಕಿ ಸೆಲೆರಿಯೊ ಕಾರು ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ.

ಹೊಸ ತಲೆಮಾರಿನ ಮಾರುತಿ ಸುಜುಕಿ ಸೆಲೆರಿಯೊ ಭಾರತದಲ್ಲಿ ಹಲವು ಬಾರಿ ರೋಡ್ ಟೆಸ್ಟ್ ನಡೆಸಿದೆ. ಈ ಸೆಲೆರಿಯೊ ಹ್ಯಾಚ್‌ಬ್ಯಾಕ್‌ನ ಹೊಸ ಮಾದರಿಯು ಮುಂದಿನ ತಿಂಗಳು ಭಾರತದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಆದರೆ ಮಾರುತಿ ಸುಜುಕಿ ಕಂಪನಿಯು ಈ ಹೊಸ ಸೆಲೆರಿಯೊ ಕಾರಿನ ಬಿಡುಗಡೆಯ ದಿನಾಂಕದ ಬಗ್ಗೆ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

2021ರ ಸೆಲೆರಿಯೊ ಕಾರು ಹೊಸ ಹಿಯರ್‌ಟೆಕ್ಟ್ ಪ್ಲಾಟ್‌ಫಾರ್ಮ್ ಅನ್ನು ಅನ್ನು ಆಧರಿಸಿ ಅಭಿವೃದ್ದಿ ಪಡಿಸಲಾಗಿದೆ. ಇನ್ನು ಈ ಹ್ಯಾಚ್‌ಬ್ಯಾಕ್ 7.0-ಇಂಚಿನ ಸ್ಮಾರ್ಟ್‌ಪ್ಲೇ ಸ್ಟುಡಿಯೋ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಪಡೆಯುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಇದು ಆಪಲ್ ಕಾರ್ ಪ್ಲೇ ಮತ್ತು ಮತ್ತು ಆಂಡ್ರಾಯ್ಡ್ ಆಟೋ ಎರಡನ್ನೂ ಅನ್ನು ಒಳಗೊಂಡಿರಬಹುದು. ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಬದಲಾಯಿಸಲಾಗುವುದಿಲ್ಲ. ಆದರೆ ಡ್ಯಾಶ್‌ಬೋರ್ಡ್, ಸ್ಟೀಯರಿಂಗ್ ವೀಲ್ ಮತ್ತು ಸೆಂಟರ್ ಕನ್ಸೋಲ್ ಅನ್ನು ಪರಿಷ್ಕರಿಸಲಾಗುತ್ತದೆ.

2021ರ ಮಾರುತಿ ಸೆಲೆರಿಯೊ ಕಾರಿನಲ್ಲಿ ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೋಲ್, ಸ್ಟೀಯರಿಂಗ್ ಮೌಂಟಡ್ ಕಂಟ್ರೋಲ್ ಮತ್ತು ಹೆಚ್ಚಿನ ಫೀಚರ್ ಗಳನ್ನು ಹೊಂದಿರಬಹುದು. ಈ ಹ್ಯಾಚ್‌ಬ್ಯಾಕ್ ಸ್ಟ್ಯಾಂಡರ್ಡ್ ಸೀಟ್‌ಬೆಲ್ಟ್ ಅಲರ್ಟ್, ಎಲೆಕ್ಟ್ರಾನಿಕ್ ಬ್ರೇಕ್-ಫೋರ್ಸ್ ಡೆಲವೆರಿಯೊಂದಿಗೆ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ, ರೇರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ರಿವರ್ಸ್ ಕ್ಯಾಮೆರಾ ಜೊತೆಗೆ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ ಅನ್ನು ಹೊಂದಿರುತ್ತದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

2021ರ ಮಾರುತಿ ಸುಜುಕಿ ಸೆಲೆರಿಯೊ ಹೊಸದಾಗಿ ವಿನ್ಯಾಸಗೊಳಿಸಿದೆ. ಮುಂಭಾಗದಲ್ಲಿ ಸಣ್ಣ ಗ್ರಿಲ್ ಮತ್ತು ಏರ್ ಡ್ಯಾಮ್, ಹ್ಯಾಲೊಜೆನ್ ಹೆಡ್‌ಲ್ಯಾಂಪ್‌ಗಳು, ಹೊಸ ಡೋರ್ ಹ್ಯಾಂಡಲ್‌ಗಳು, ನವೀಕರಿಸಿದ ಬಂಪರ್ ಮತ್ತು ಟ್ವೀಕ್ಡ್ ಟೈಲ್‌ಲ್ಯಾಂಪ್‌ಗಳನ್ನು ಹೊಂದಿರುತ್ತದೆ.

ಇನ್ನು 2021ರ ಮಾರುತಿ ಸುಜುಕಿ ಸೆಲೆರಿಯೊ ಕಾರಿನ ಎಂಜಿನ್ ಅನ್ನು ಬದಲಾಯಿಸಲಾಗಿದೆ. ಇದರಲ್ಲಿ ಹೊಸ ಪವರ್ ಫುಲ್ 1.2ಎಲ್, 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 83 ಬಿಹೆಚ್ಪಿ ಪವರ್ ಅನ್ನು ಉತ್ಪಾದಿಸುತ್ತದೆ.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಇದರೊಂದಿಗೆ ಎಲ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಸಹ ನೀಡಬಹುದು. ಈ ಎಂಜಿನ್ 68 ಬಿಹೆಚ್ಪಿ ಪವರ್ ಉತ್ಪಾದಿಸುತ್ತದೆ. ಇನ್ನು ಈ ಎಂಜಿನ್ ಗಳೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್‌ಬಾಕ್ಸ್ ಆಯ್ಕೆಯನ್ನು ನೀಡಲಾಗುತ್ತದೆ.

ಹೊಸ ತಲೆಮಾರಿನ ಮಾರುತಿ ಸುಜುಕಿ ಸೆಲೆರಿಯೊ ಭಾರತದಲ್ಲಿ ಬಿಡುಗಡೆಯಾದ ಬಳಿಕ ಟಾಟಾ ಟಿಯಾಗೋ, ಹ್ಯುಂಡೈ ಸ್ಯಾಂಟ್ರೊ ಮತ್ತು ರೆನಾಲ್ಟ್ ಕ್ವಿಡ್ ಕಾರುಗಳಿಗೆ ಪೈಪೋಟಿ ನೀಡುತ್ತದೆ. 2021ರ ಮಾರುತಿ ಸುಜುಕಿ ಸೆಲೆರಿಯೊ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಾರುಗಳಲ್ಲಿ ಒಂದಾಗಿದೆ.