ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಕಾರು ಬಿಡುಗಡೆ

ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ತನ್ನ ಎಂಟ್ರಿ ಲೆವೆಲ್ ಎ-ಕ್ಲಾಸ್ ಲಿಮೋಸಿನ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.39.90 ಲಕ್ಷಗಳಾಗಿದೆ.

ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಕಾರು ಬಿಡುಗಡೆ

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಭಾರತೀಯ ಮಾರುಕಟ್ಟೆಯಲಲ್ಲಿ ಎ200, ಎ220ಡಿ ಮತ್ತು ಎಎಂಜಿ ಎ 35 4 ಮ್ಯಾಟಿಕ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಇನ್ನು ಈ ಹೊಸ ಎ-ಕ್ಲಾಸ್ ಲಿಮೋಸಿನ್ ಕಾರು ಪೋಲಾರ್ ವೈಟ್, ಮೊಜಾವೆ ಸಿಲ್ವರ್, ಮೌಂಟೇನ್ ಗ್ರೇ, ಕಾಸ್ಮೋಸ್ ಬ್ಲ್ಯಾಕ್, ಡೆನಿಮ್ ಬ್ಲೂ, ಮತ್ತು ಇರಿಡಿಯಮ್ ಸಿಲ್ವರ್ ಬಣ್ಣಗಳಲ್ಲಿ ಲಭ್ಯವಿದೆ. ವಿಶೇಷ ವೆಚ್ಚದಲ್ಲಿ ವಿಶೇಷ ಯೆಲ್ಲೋ ಬಣ್ಣದ ಆಯ್ಕೆಯೊಂದಿಗೆ ನೀಡಲಾಗುತ್ತದೆ.

ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಕಾರು ಬಿಡುಗಡೆ

ಇರಿಡಿಯಮ್ ಸಿಲ್ವರ್ ಬಣ್ಣದ ಮಾದರಿಯನ್ನು ಹೊರತುಪಡಿಸಿ, ಉಳಿದ ಬಣ್ಣ ಆಯ್ಕೆಗಳು ಬೀಜ್ ಥೀಮ್ ಒಳಭಾಗವನ್ನು ಹೊಂದಿವೆ. ಮತ್ತೊಂದೆಡೆ ಇರಿಡಿಯಮ್ ಸಿಲ್ವರ್ ಬಣ್ಣದ ಮಾದರಿಯು ಆಲ್-ಬ್ಲ್ಯಾಕ್ ಒಳಭಾಗವನ್ನು ಹೊಂದಿದೆ. ಎಎಂಜಿ ಮಾದರಿಯು ಸೆಡಾನ್‌ನ ಸ್ಟ್ಯಾಂಡರ್ಡ್ ರೂಪಾಂತರಕ್ಕಿಂತ ಸ್ಪೋರ್ಟಿಯರ್ ಥೀಮ್‌ನೊಂದಿಗೆ ಆಲ್-ಬ್ಲ್ಯಾಕ್ ಒಳಾಂಗಣವನ್ನು ಸಹ ಹೊಂದಿರುತ್ತದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಕಾರು ಬಿಡುಗಡೆ

ಎ-ಕ್ಲಾಸ್ ಲಿಮೋಸಿನ್ ನಲ್ಲಿ ರೂಪಾಂತರಕ್ಕೆ ಅನುಗುಣವಾಗಿ ಮೂರು ಎಂಜಿನ್ ಆಯ್ಕೆಗಳಲ್ಲಿ ನೀಡಲಾಗಿದೆ. ಇದರಲ್ಲಿ ಎ200 ರೂಪಾಂತರದಲ್ಲಿ 1.3-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 161 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು 7-ಸ್ಪೀಡ್ ಡಿಸಿಟಿ ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್‌ಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.

ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಕಾರು ಬಿಡುಗಡೆ

ಇನ್ನು ಎ220ಡಿ ರೂಪಾಂತರದಲ್ಲೊ 2.0-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದ್ದು, ಈ ಎಂಜಿನ್ 148 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಅನ್ನು ಉತ್ಪಾದಿಸುತ್ತದೆ. ಎಂಜಿನ್ 8-ಸ್ಪೀಡ್ ಡಿಸಿಟಿಗೆ ಹೊಂದಿಕೆಯಾಗುತ್ತದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಕಾರು ಬಿಡುಗಡೆ

ಇದರೊಂದಿಗೆ ಎ 35 4 ಮ್ಯಾಟಿಕ್ ರೂಪಾಂತರದಲ್ಲಿ 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 304 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 7-ಸ್ಪೀಡ್ ಡಿಸಿಟಿ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ.

ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಕಾರು ಬಿಡುಗಡೆ

ಎ200 ಪೆಟ್ರೋಲ್ ರೂಪಾಂತರವು ಎಆರ್ಎಐ ಪ್ರಕಾರ 17.50 ಕಿ.ಮೀ ಮೈಲೇಜ್ ನೀಡುತ್ತದೆ ಮತ್ತು ಎ200ಡಿ ಯಲ್ಲಿ 21.35 ಕಿ.ಮೀ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಕಾರು ಕೇವಲ 4.8 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಕಾರು ಬಿಡುಗಡೆ

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಕಾರಿನಲ್ಲಿ ಸುತ್ತಲೂ ಎಲ್ಇಡಿ ಲೈಟಿಂಗ್ (ಹೆಡ್‌ಲ್ಯಾಂಪ್‌ಗಳು, ಡಿಆರ್‌ಎಲ್‌ಗಳು, ಟೈಲ್‌ಲೈಟ್‌ಗಳು ಮತ್ತು ಟರ್ನ್ ಸಿಗ್ನಲ್‌ಗಳು) ಮತ್ತು 7-ಇಂಚಿನ ಎರಡು-ಟೋನ್ ಡೈಮಂಡ್-ಕಟ್ ಅಲಾಯ್ ವ್ಹೀಲ್ ಗಳು ಹೊಂದಿವೆ.

ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಕಾರು ಬಿಡುಗಡೆ

ಇನ್ನು ಈ ಕಾರಿನಲ್ಲಿ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, 10.25-ಇಂಚಿನ ಕಸ್ಟಮೈಸ್ ಮಾಡಬಹುದಾದ ಟಿಎಫ್‌ಟಿ ಕ್ಲಸ್ಟರ್, 64 ಅಂಬೈಟ್ ಲೈಟಿಂಗ್, ಎಲೆಕ್ಟ್ರಿಕ್ ಆಗಿ ಅಡ್ಜೆಸ್ಟ್ ಮಾಡಬಹುಡಾದ ಸೀಟುಗಳು, ಡ್ಯುಯಲ್ ಝೋನ್ ಕ್ಲೈಮೆಂಟ್ ಕಂಟ್ರೋಲ್, ಪನರೋಮಿಕ್ ಸನ್‌ರೂಫ್, ಎಂಬಿಯುಎಕ್ಸ್ ವಾಯ್ಸ್ ಅಸಿಸ್ಟ್, ಅಲೆಕ್ಸಾ ಮತ್ತು ಗೂಗಲ್ ಹೋಮ್ ಇಂಟರ್ಗೇಷನ್ ಒಳಗೊಂಡಿದೆ.

ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಕಾರು ಬಿಡುಗಡೆ

ಈ ಎ-ಕ್ಲಾಸ್ ಲಿಮೋಸಿನ್ ಕಾರಿನಲ್ಲಿ ಸುರಕ್ಷತೆಗಾಗಿ, 7 ಏರ್‌ಬ್ಯಾಗ್‌ಗಳು, ಬ್ಲೈಂಡ್‌ಸ್ಪಾಟ್ ಮಾಹಿತಿ ಸಿಸ್ಟಂ, ಹಿಲ್ ಹೋಲ್ಡ್ ಕಂಟ್ರೋಲ್, ಟ್ರ್ಯಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಇಬಿಡಿಯೊಂದಿಗೆ ಎಬಿಎಸ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಎಮರ್ಜನ್ಸಿ ಬ್ರೇಕ್ ಅಸಿಸ್ಟ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ವಾಲ್ಯೂಮೆಟ್ರಿಕ್ ಅಲಾರಂ, ಕ್ರ್ಯಾಶ್ ಅಸಿಸ್ಟ್ ಮತ್ತು ಇತರ ಫೀಚರ್‌ಗಳನ್ನು ನೀಡಿದೆ.

ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಕಾರು ಬಿಡುಗಡೆ

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಮೂರು ವರ್ಷಗಳ ಸಮಗ್ರ ವಾರಂಟಿಯನ್ನು ನೀಡುತ್ತಿದೆ. ಅಲ್ಲದೆ ಎಂಜಿನ್ ಮತ್ತು ಗೇರ್ ಬಾಕ್ಸ್ ಗಾಗಿ ಅನಿಯಮಿತ ಕಿಲೋಮೀಟರ್‌ಗಳಿಗೆ ಸೆಗ್ಮೆಂಟ್-ಮೊದಲ ಎಂಟು ವರ್ಷಗಳ ವಾರಂಟಿಯನ್ನು ಕಂಪನಿಯು ನೀಡುತ್ತಿದೆ.

ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಕಾರು ಬಿಡುಗಡೆ

ಸ್ಟ್ಯಾಂಡರ್ಡ್ ವಾರಂಟಿ ಪ್ಯಾಕೇಜ್ ಜೊತೆಗೆ ಕಂಪನಿಯು ಗ್ರಾಹಕರಿಗೆ ಹೆಚ್ಚುವರಿ ವೆಚ್ಚದಲ್ಲಿ ಖರೀದಿಸಲು ಹಲವಾರು ನಿರ್ವಹಣಾ ಪ್ಯಾಕೇಜ್‌ಗಳನ್ನು ಸಹ ನೀಡುತ್ತಿದೆ. ಇದರೊಂದಿಗೆ ಕಂಪನಿಯು 24x7 (ಆರ್‌ಎಸ್‌ಎ) ರೋಡ್ ಸೈಡ್ ಅಸಿಸ್ಟ್ ಅನ್ನು ನೀಡುತ್ತಿದೆ. ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು 2-ಸೀರಿಸ್ ಗ್ರ್ಯಾನ್ ಕೂಪೆಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Mercedes-Benz A-Class Limousine Launched. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X