ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ 2021ರ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು

ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ತನ್ನ ಹೊಸ ಸಿ-ಕ್ಲಾಸ್ ಕಾರನ್ನು ಜಾಗತಿಕವಾಗಿ ಅನಾವರಣಗೊಳಿಸಿದೆ. ಈ 2021ರ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ 2021ರ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು

2021ರ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಅನ್ನು ಸೆಡಾನ್ ಮತ್ತು ಎಸ್ಟೇಟ್ ಬಾಡಿ ಪ್ರಕಾರಗಳಲ್ಲಿ ಅನಾವರಣಗೊಳಿಸಿದೆ. ಆದರೆ ಭಾರತದಲ್ಲಿ ಸೆಡಾನ್ ಮಾದರಿಯಲ್ಲಿ ಮಾತ್ರ ಈ ಐಷಾರಮಿ ಕಾರನ್ನು ಬಿಡುಗಡೆಗೊಳಿಸಲಾಗುತ್ತದೆ. ಈ ಹೊಸ ಸಿ-ಕ್ಲಾಸ್ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇತರ ಮಾದರಿಗಳಾದ ಎ-ಕ್ಲಾಸ್ ಮತ್ತು ಇ-ಕ್ಲಾಸ್‌ಗೆ ಅನುಗುಣವಾಗಿರುತ್ತದೆ. ಇದು ಹೊಸ ಫ್ರಂಟ್ ಗ್ರಿಲ್, ಹೊಸ ಬಾನೆಟ್ ವಿನ್ಯಾಸ, ಮರುವಿನ್ಯಾಸಗೊಳಿಸಲಾದ ಲೈಟ್ ಕ್ಲಸ್ಟರ್‌ಗಳು ಮತ್ತು ಎರಡೂ ತುದಿಗಳಲ್ಲಿ ಕಡಿಮೆ ಓವರ್‌ಹ್ಯಾಂಗ್‌ಗಳನ್ನು ಒಳಗೊಂಡಿದೆ.

ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ 2021ರ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು

ಕಾರಿನ ಒಟ್ಟಾರೆ ಸಿಲೂಯೆಟ್ ಸಿ-ಕ್ಲಾಸ್‌ನ ಹಳೆಯ ಮಾದರಿಯಂತೆಯೇ ಉಳಿದಿದೆ. ಎರಡೂ ಸೆಡಾನ್‌ನಲ್ಲಿನ ವೀಲ್‌ಬೇಸ್ ಅನ್ನು ಹಳೆಯ ಮಾದರಿಯಿಂದ 25 ಎಂಎಂ ಹೆಚ್ಚಿಸಲಾಗಿದೆ. ಹಿಂದಿನ ಮಾದರಿಗಿಂತ 30 ಲೀಟರ್ ಬೂಟ್-ಸ್ಪೇಸ್ ಹೆಚ್ಚಳದೊಂದಿಗೆ ಒಟ್ಟಾರೆ ಉದ್ದವು ಈಗ 65 ಎಂಎಂ ಆಗಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ 2021ರ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು

ಹೊಸ ಸಿ-ಕ್ಲಾಸ್‌ನ ಒಳಭಾಗದಲ್ಲಿ ಹೊಸ ಸೆಡಾನ್ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದೆ, ಅದು ಬ್ರಾಂಡ್‌ನ ಪ್ರಮುಖ ಎಸ್-ಕ್ಲಾಸ್‌ನಿಂದ ಸ್ಫೂರ್ತಿ ಪಡೆದಿದೆ. ಇನ್ನು ಸೆಂಟರ್ ಕನ್ಸೋಲ್‌ನಲ್ಲಿ ಹೊಸ ಲಂಬವಾಗಿ ಜೋಡಿಸಲಾದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ 2021ರ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು

ಇನ್ಫೋಟೈನ್‌ಮೆಂಟ್ ಸಿಸ್ಟಂ ಎರಡು ಗಾತ್ರಗಳಲ್ಲಿ ಲಭ್ಯವಿದೆ, ಕಡಿಮೆ 10.25-ಇಂಚಿನ ಯುನಿಟ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ಇನ್ನು 11.9-ಇಂಚಿನ ಯುನಿಟ್ ಆಗಿಯು ಅಪ್‌ಗ್ರೇಡ್ ಮಾಡಲಾಗುತ್ತದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ 2021ರ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು

ಇನ್ಫೋಟೈನ್‌ಮೆಂಟ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇನಂತಹ ವೈರ್‌ಲೆಸ್ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿಯನ್ನು ಹೊಂದಿದೆ. ಬ್ರಾಂಡ್‌ನ ಇತ್ತೀಚಿನ ಎಂಬಿಯುಎಕ್ಸ್ ಕನೆಕ್ಟಿವಿಟಿ ತಂತ್ರಜ್ಞಾನವನ್ನು ಒಳಗೊಂಡಿದೆ.

ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ 2021ರ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು

2021ರ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ 1.5-ಲೀಟರ್ ಎಂಜಿನ್ ಅನ್ನು ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದರಲ್ಲಿ ಲೋವರ್-ಸ್ಪೆಕ್ (ಸಿ 180) 169 ಬಿಹೆಚ್‌ಪಿ ಮತ್ತು 263 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ 2021ರ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು

ಇನ್ನು ಟಾಪ್-ಸ್ಪೆಕ್ (ಸಿ 200) 203 ಬಿಹೆಚ್‌ಪಿ ಮತ್ತು 300 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಟಾಪ್-ಸ್ಪೆಕ್ ಕೇವಲ 7.1 ಸೆಕೆಂಡುಗಳ 0-100 ಕಿ,ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ 2021ರ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು

1.5-ಲೀಟರ್ ಪೆಟ್ರೋಲ್ ಎಂಜಿನ್ ಹೊರತಾಗಿ ಕಂಪನಿಯು ಸಿ 300 ರೂಪಾಂತರದಲ್ಲಿ 2.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ನೀಡಿದ್ದಾರೆ. ಈ ಎಂಜಿನ್ 259 ಬಿಹೆಚ್‍ಪಿ ಮತ್ತು 400 ಎನ್ಎಂ ಟಾರ್ಕ್ ಅನ್ನ್ನು ಉತ್ಪಾದಿಸುತ್ತದೆ.

ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ 2021ರ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು

2021ರ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು ಹೊಸ ಫೀಚರ್ ಗಳು, ತಂತ್ರಜ್ಞಾನ ಮತ್ತು ವಿನ್ಯಾಸದೊಂದಿಗೆ ನವೀಕರಿಸಲಾಗಿದೆ. ಈ ಹೊಸ ಸಿ-ಕ್ಲಾಸ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಬಿಎಂಡಬ್ಲ್ಯು 3 ಸೀರಿಸ್, ಆಡಿ ಎ4 ಮತ್ತು ಜಾಗ್ವಾರ್ ಎಕ್ಸ್‌ಇ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
2021 Mercedes-Benz C-Class Globally Unveiled. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X