ಮಾನ್ಸೂನ್ ಸರ್ವಿಸ್ ಕ್ಯಾಂಪ್‌ನೊಂದಿಗೆ 18 ಹೊಸ ಸರ್ವಿಸ್ ಸೆಂಟರ್ ತೆರೆದ ನಿಸ್ಸಾನ್ ಇಂಡಿಯಾ

ನಿಸ್ಸಾನ್ ಇಂಡಿಯಾ ಕಂಪನಿಯು ಹೊಸ ಕಿಕ್ಸ್ ಮತ್ತು ಮ್ಯಾಗ್ನೈಟ್ ಕಾರುಗಳ ಮೂಲಕ ಗ್ರಾಹಕರ ಬೇಡಿಕೆಯೆಂತೆ ಭರ್ಜರಿ ಮುನ್ನಡೆ ಸಾಧಿಸುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಕಂಪನಿಯು ವಿವಿಧ ನಗರಗಳಲ್ಲಿ ಹೊಸ ಮಾರಾಟ ಮಳಿಗೆಗಳ ವಿಸ್ತರಣೆಯೊಂದಿಗೆ ಸರ್ವಿಸ್ ಸೆಂಟರ್‌ಗಳನ್ನು ಸಹ ಹೆಚ್ಚಿಸುತ್ತಿದೆ.

ಮಾನ್ಸೂನ್ ಸರ್ವಿಸ್ ಕ್ಯಾಂಪ್ ಆರಂಭದೊಂದಿಗೆ 18 ಹೊಸ ಸರ್ವಿಸ್ ಕೇಂದ್ರಗಳನ್ನು ತೆರೆದ ನಿಸ್ಸಾನ್ ಇಂಡಿಯಾ

ಹೊಸ ಖರೀದಿಗೆ ಪ್ರಮುಖ ಅಂಶವಾಗಿರುವ ಸರ್ವಿಸ್ ಕೇಂದ್ರಗಳ ಲಭ್ಯತೆ ಬಗ್ಗೆ ಗ್ರಾಹಕರಲ್ಲಿ ವಿಶ್ವಾಸ ಮೂಡಿಸಲು ಮುಂದಾಗಿರುವ ನಿಸ್ಸಾನ್ ಕಂಪನಿಯು ದೇಶಾದ್ಯಂತ 18 ಹೊಸ ಅಧಿಕೃತ ಸರ್ವಿಸ್ ಸೆಂಟರ್‌ಗಳನ್ನು ತೆರೆದಿದ್ದು, ಹೊಸ ಸರ್ವಿಸ್ ಸೆಂಟರ್‌ಗಳ ಮೂಲಕ ಕಂಪನಿಯು ಕಾರು ಮಾರಾಟದಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ವಿಶ್ವಾಸದಲ್ಲಿದೆ.

ಮಾನ್ಸೂನ್ ಸರ್ವಿಸ್ ಕ್ಯಾಂಪ್ ಆರಂಭದೊಂದಿಗೆ 18 ಹೊಸ ಸರ್ವಿಸ್ ಕೇಂದ್ರಗಳನ್ನು ತೆರೆದ ನಿಸ್ಸಾನ್ ಇಂಡಿಯಾ

ನಿಸ್ಸಾನ್ ಕಂಪನಿಯು ಪ್ರಮುಖ ಮಾಹಾನಗರಗಳಲ್ಲಿ ಉತ್ತಮ ಸರ್ವಿಸ್ ಸೇವೆಗಳನ್ನು ಹೊಂದಿದ್ದರೂ ಟೈರ್ 1, ಟೈರ್ 2 ನಗರಗಳಲ್ಲಿನ ಸರ್ವಿಸ್ ಸೆಂಟರ್‌ಗಳನ್ನು ಹೆಚ್ಚಿಸುವ ಯೋಜನೆಯಲ್ಲಿದ್ದು, ಅಧಿಕೃತ ಸರ್ವಿಸ್ ಕೇಂದ್ರಗಳನ್ನು ಹೆಚ್ಚಿಸಲು ಪ್ರಮುಖ ನಗರಗಳಲ್ಲಿ ಮೈಟಿವಿಎಸ್ ಸರ್ವಿಸ್ ಕೇಂದ್ರಗಳ ಜೊತೆಗೂಡಿ ಅಧಿಕೃತ ಬಿಡಿಭಾಗಗಳ ಸೇವೆಯನ್ನು ಆರಂಭಿಸಿದೆ.

ಮಾನ್ಸೂನ್ ಸರ್ವಿಸ್ ಕ್ಯಾಂಪ್ ಆರಂಭದೊಂದಿಗೆ 18 ಹೊಸ ಸರ್ವಿಸ್ ಕೇಂದ್ರಗಳನ್ನು ತೆರೆದ ನಿಸ್ಸಾನ್ ಇಂಡಿಯಾ

ಮೈಟಿವಿಎಸ್ ಸರ್ವಿಸ್ ಸೆಂಟರ್ ಸದ್ಯ ದೇಶದ ಪ್ರಮುಖ ಬೃಹತ್ ಜಾಲ ಹೊಂದಿದ್ದು, ಮಲ್ಟಿ ಬ್ರಾಂಡ್‌ಗಳ ಅಧಿಕೃತ ಸೇವೆಯನ್ನು ನಿರ್ವಹಿಸುತ್ತಿದೆ. ಇದೀಗ ಮೈಟಿವಿಎಸ್ ಕಂಪನಿಯು ನಿಸ್ಸಾನ್ ಜೊಜತೆಗೂಡಿ ಪ್ರಮುಖ 18 ನಗರಗಳಲ್ಲಿ ಮಾರಾಟ ನಂತರದ ಸೇವೆಗಳನ್ನು ಖಾತ್ರಿಪಡಿಸುತ್ತಿದೆ.

ಮಾನ್ಸೂನ್ ಸರ್ವಿಸ್ ಕ್ಯಾಂಪ್ ಆರಂಭದೊಂದಿಗೆ 18 ಹೊಸ ಸರ್ವಿಸ್ ಕೇಂದ್ರಗಳನ್ನು ತೆರೆದ ನಿಸ್ಸಾನ್ ಇಂಡಿಯಾ

ಮೈಟಿವಿಎಸ್ ಕಂಪನಿಯು ಅಧಿಕೃತ ಬಿಡಿಭಾಗಗಳ ಸೇವೆಯೊಂದಿಗೆ ರೋಡ್ ಸೈಡ್ ಅಸಿಸ್ಟ್ ಸೇವೆಯನ್ನು ನೀಡಲಿದ್ದು, ನಿಸ್ಸಾನ್ ಕನೆಕ್ಟ್ ಆ್ಯಪ್ ಮೂಲಕವೇ ಮೈಟಿವಿಎಸ್ ಕಂಪನಿಯ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ.

ಮಾನ್ಸೂನ್ ಸರ್ವಿಸ್ ಕ್ಯಾಂಪ್ ಆರಂಭದೊಂದಿಗೆ 18 ಹೊಸ ಸರ್ವಿಸ್ ಕೇಂದ್ರಗಳನ್ನು ತೆರೆದ ನಿಸ್ಸಾನ್ ಇಂಡಿಯಾ

ಜೊತೆಗೆ ಮೈಟಿವಿಎಸ್ ಸರ್ವಿಸ್ ಕಂಪನಿಯು ನಿಸ್ಸಾನ್ ಗ್ರಾಹಕರಿಗೆ ರೋಡ್ ಸೈಡ್ ಅಸಿಸ್ಟ್ ಸೌಲಭ್ಯಗಳನ್ನು ನೀಡುವುದರ ಜೊತೆಗೆ ಕಾರುಗಳ ಬ್ರೇಕ್ ಡೌನ್ ಸಂದರ್ಭದಲ್ಲಿ ಟೋಯಿಂಗ್ ಸೇವೆಗಳನ್ನು ಸಹ ನೀಡಲಿದ್ದು, ವಾರಂಟಿ ಸೇವೆಗಳನ್ನು ಹೊರತುಪಡಿಸಿ ಹೆಚ್ಚುವರಿ ಸೇವೆಗಳಿಗೆ ಆಕರ್ಷಕ ದರಗಳಲ್ಲಿ ಸರ್ವಿಸ್ ಒದಗಿಸಲಿದೆ.

ಮಾನ್ಸೂನ್ ಸರ್ವಿಸ್ ಕ್ಯಾಂಪ್ ಆರಂಭದೊಂದಿಗೆ 18 ಹೊಸ ಸರ್ವಿಸ್ ಕೇಂದ್ರಗಳನ್ನು ತೆರೆದ ನಿಸ್ಸಾನ್ ಇಂಡಿಯಾ

ಇನ್ನು ನಿಸ್ಸಾನ್ ಕಂಪನಿಯು ತನ್ನ ಗ್ರಾಹಕರಿಗೆ ಮಾನ್ಸೂನ್ ಸರ್ವಿಸ್ ಕ್ಯಾಂಪ್ ಆಯೋಜಿಸಿದ್ದು, ನಿಗದಿತ ಅವಧಿಯಲ್ಲಿ ಪಡೆದುಕೊಳ್ಳುವ ಪ್ರಮುಖ ಸರ್ವಿಸ್ ಸೇವೆಗಳ ಮೇಲೆ ಹಲವಾರು ಆಫರ್ ನೀಡುತ್ತಿದೆ.

ಮಾನ್ಸೂನ್ ಸರ್ವಿಸ್ ಕ್ಯಾಂಪ್ ಆರಂಭದೊಂದಿಗೆ 18 ಹೊಸ ಸರ್ವಿಸ್ ಕೇಂದ್ರಗಳನ್ನು ತೆರೆದ ನಿಸ್ಸಾನ್ ಇಂಡಿಯಾ

ಸರ್ವಿಸ್ ಕ್ಯಾಂಪ್‌ನಲ್ಲಿ ಕಂಪನಿಯು ವಿವಿಧ ಕಾರುಗಳ ವಾರಂಟಿ ಸರ್ವಿಸ್ ಹೊರತುಪಡಿಸಿ ಸಾಮಾನ್ಯ ಸೇವೆಗಳಲ್ಲಿ 30 ಪ್ರಮುಖ ತಾಂತ್ರಿಕ ಅಂಶಗಳ ತಪಾಸಣೆಯನ್ನು ಉಚಿತವಾಗಿ ಮಾಡಲಿದ್ದು, ಅಗತ್ಯ ಬಿಡಿಭಾಗಗಳ ಸೇವೆಗಳನ್ನು ಆಕರ್ಷಕ ದರಗಳಲ್ಲಿ ಒದಗಿಸಲಿದೆ.

ಮಾನ್ಸೂನ್ ಸರ್ವಿಸ್ ಕ್ಯಾಂಪ್ ಆರಂಭದೊಂದಿಗೆ 18 ಹೊಸ ಸರ್ವಿಸ್ ಕೇಂದ್ರಗಳನ್ನು ತೆರೆದ ನಿಸ್ಸಾನ್ ಇಂಡಿಯಾ

ಜೊತೆಗೆ ಸರ್ವಿಸ್ ಶುಲ್ಕದಲ್ಲೂ ಶೇ.20 ರಷ್ಟು ರಿಯಾಯ್ತಿ ಘೋಷಣೆ ಮಾಡಿರುವ ನಿಸ್ಸಾನ್ ಕಂಪನಿಯು ಈ ತಿಂಗಳು 31ರ ತನಕ ಸರ್ವಿಸ್ ಕ್ಯಾಂಪ್ ಆಯೋಜಿಸುತ್ತಿದ್ದು, ಸರ್ವಿಸ್ ಕ್ಯಾಂಪ್‌ನಲ್ಲಿ ಪಿಕ್ಅಪ್ ಮತ್ತು ಡ್ರಾಪ್ ಸೇವೆಗಳನ್ನು ಒದಗಿಸುತ್ತದೆ.

ಮಾನ್ಸೂನ್ ಸರ್ವಿಸ್ ಕ್ಯಾಂಪ್ ಆರಂಭದೊಂದಿಗೆ 18 ಹೊಸ ಸರ್ವಿಸ್ ಕೇಂದ್ರಗಳನ್ನು ತೆರೆದ ನಿಸ್ಸಾನ್ ಇಂಡಿಯಾ

ನಿಸ್ಸಾನ್ ಕಂಪನಿಯು ಸದ್ಯ ಮ್ಯಾಗ್ನೈಟ್ ಮತ್ತು ಕಿಕ್ಸ್ ಕಾರುಗಳ ಮೂಲಕ ಭಾರತೀಯ ಆಟೋ ಮಾರುಕಟ್ಟೆಯಲ್ಲಿ ಉತ್ತಮ ಮುನ್ನಡೆ ಕಾಯ್ದುಕೊಳ್ಳುತ್ತಿದ್ದು, ಕಂಪನಿಯು ಮುಂಬರುವ ದಿನಳಲ್ಲಿ ಮ್ಯಾಗ್ನೈಟ್ ಮಾದರಿಯೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುವ ತವಕದಲ್ಲಿದೆ.

ಮಾನ್ಸೂನ್ ಸರ್ವಿಸ್ ಕ್ಯಾಂಪ್ ಆರಂಭದೊಂದಿಗೆ 18 ಹೊಸ ಸರ್ವಿಸ್ ಕೇಂದ್ರಗಳನ್ನು ತೆರೆದ ನಿಸ್ಸಾನ್ ಇಂಡಿಯಾ

ಜೊತೆಗೆ ನಿಸ್ಸಾನ್ ಇಂಡಿಯಾ ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳ ಮೇಲೆ ವಿವಿಧ ಕಾರ್ ರೆಂಟಲ್ ಕಂಪನಿಗಳೊಂದಿಗೆ ಜೊತೆಗೂಡಿ ಲೀಸ್ ಆಯ್ಕೆ ಆರಂಭಿಸಿದ್ದು, ಮ್ಯಾಗ್ನೈಟ್ ಮತ್ತು ಕಿಕ್ಸ್ ಕಾರುಗಳನ್ನು ಕಾರ್ ರೆಂಟಲ್‌ ಕಂಪನಿಗಳಲ್ಲಿ ಆಸಕ್ತ ಗ್ರಾಹಕರು ಸಬ್‌ಸ್ಕ್ರೈಬ್ ಮಾಡಿಕೊಳ್ಳಬಹುದಾಗಿದೆ.

ಮಾನ್ಸೂನ್ ಸರ್ವಿಸ್ ಕ್ಯಾಂಪ್ ಆರಂಭದೊಂದಿಗೆ 18 ಹೊಸ ಸರ್ವಿಸ್ ಕೇಂದ್ರಗಳನ್ನು ತೆರೆದ ನಿಸ್ಸಾನ್ ಇಂಡಿಯಾ

ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಗ್ರಾಹಕರು ಹೊಸ ವಾಹನಗಳ ಖರೀದಿಗೆ ಬದಲು ತಾತ್ಕಲಿಕವಾಗಿ ಸೆಲ್ಫ್ ಡ್ರೈವ್ ಲೀಸ್‌ ವಾಹನಗಳ ಮಾಲೀಕತ್ವವನ್ನು ಪಡೆದುಕೊಳ್ಳಲು ಮುಂದಾಗುತ್ತಿದ್ದು, ಈ ನಿಟ್ಟಿನಲ್ಲಿ ಆಸಕ್ತಿ ವಹಿಸಿರುವ ಪ್ರಮುಖ ಕಾರು ಕಂಪನಿಗಳು ಲೀಸ್ ಕಾರುಗಳ ಸಂಖ್ಯೆಯನ್ನು ಹೆಚ್ಚಿಸುತ್ತಿವೆ.

Most Read Articles

Kannada
English summary
Nissan india opens 18 service centres in 18 new cities details
Story first published: Friday, August 6, 2021, 20:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X