15 ವರ್ಷ ಮೇಲ್ಪಟ್ಟ ಹಳೆಯ ವಾಹನಗಳ ನೋಂದಣಿ ನವೀಕರಣ ಶುಲ್ಕ ಎಂಟು ಪಟ್ಟು ಹೆಚ್ಚಳ!

ಕೇಂದ್ರ ಸರ್ಕಾರವು ತನ್ನ ಮಹತ್ವಾಕಾಂಕ್ಷಿ ವೆಹಿಕಲ್ ಸ್ಕ್ರ್ಯಾಪೇಜ್ ನೀತಿಯನ್ನು ಹಂತ-ಹಂತವಾಗಿ ಜಾರಿಗೆ ತರುತ್ತಿದ್ದು, ಸ್ವಯಂಪ್ರೇರಿತ ವೆಹಿಕಲ್ ಸ್ಕ್ರ್ಯಾಪೇಜ್ ನೀತಿಯಡಿಯಲ್ಲಿ ಮಾಲಿನ್ಯಕ್ಕೆ ಕಾರಣವಾಗಿರುವ ಹಳೆಯ ವಾಹನಗಳಿಗೆ ಮುಕ್ತಿ ನೀಡಲು ಕಠಿಣ ನಿಯಮಗಳನ್ನು ಅಳವಡಿಸಕೊಳ್ಳಲಾಗುತ್ತಿದೆ.

15 ವರ್ಷ ಮೇಲ್ಪಟ್ಟ ಹಳೆಯ ವಾಹನಗಳ ನೋಂದಣಿ ನವೀಕರಣ ಶುಲ್ಕ ಎಂಟು ಪಟ್ಟು ಹೆಚ್ಚಳ!

ಹೊಸ ಸ್ಕ್ಯಾಪೇಜ್ ನೀತಿ ಅಡಿಯಲ್ಲಿ ಅನರ್ಹ ಮತ್ತು ಮಾಲಿನ್ಯಕಾರಕ ವಾಹನಗಳನ್ನು ಹಂತ-ಹಂತವಾಗಿ ತೊಡೆದುಹಾಕಿ ಸ್ವಚ್ಚ ಭಾರತ ನಿರ್ಮಾಣಕ್ಕೆ ಸಿದ್ದವಾಗಿರುವ ಕೇಂದ್ರ ಸರ್ಕಾರವು ಖಾಸಗಿ ಮತ್ತು ವಾಣಿಜ್ಯ ವಾಹನಗಳಿಗೆ ಕ್ರಮವಾಗಿ 15 ವರ್ಷ ಮತ್ತು 8 ವರ್ಷಗಳ ಆರಂಭಿಕ ನೋಂದಣಿ ಅವಧಿಯ ನಂತರ ನೋಂದಣಿ ನವೀಕರಣ ಮತ್ತು ಕಡ್ಡಾಯ ಫಿಟ್ನೆಸ್ ಪರೀಕ್ಷೆಯನ್ನು ಜಾರಿಗೆ ತರಲಾಗುತ್ತಿದೆ.

15 ವರ್ಷ ಮೇಲ್ಪಟ್ಟ ಹಳೆಯ ವಾಹನಗಳ ನೋಂದಣಿ ನವೀಕರಣ ಶುಲ್ಕ ಎಂಟು ಪಟ್ಟು ಹೆಚ್ಚಳ!

8 ವರ್ಷ ಮೇಲ್ಪಟ್ಟ ವಾಣಿಜ್ಯ ವಾಹನಗಳು ಮತ್ತು 15 ವರ್ಷ ಮೇಲ್ಪಟ್ಟ ಖಾಸಗಿ ವಾಹನಗಳು ರಸ್ತೆಗಳಲ್ಲಿ ಸಂಚಾರವನ್ನು ಮುಂದುವರಿಸಲು ಫಿಟ್ನೆಸ್ ಪರೀಕ್ಷೆಯನ್ನು ತೆರವುಗೊಳಿಸುವುದು ಕಡ್ಡಾಯವಾಗಿದ್ದು, ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲವಾದರೆ ಅಂತಹ ವಾಹನವನ್ನು ಕಡ್ಡಾಯ ಸ್ಕ್ರ್ಯಾಪ್ ಮಾಡಬೇಕಾಗುತ್ತದೆ.

15 ವರ್ಷ ಮೇಲ್ಪಟ್ಟ ಹಳೆಯ ವಾಹನಗಳ ನೋಂದಣಿ ನವೀಕರಣ ಶುಲ್ಕ ಎಂಟು ಪಟ್ಟು ಹೆಚ್ಚಳ!

ಇದರ ಜೊತೆಗೆ ಹಳೆಯ ವಾಹನಗಳ ನೋಂದಣಿ ನವೀಕರಣ ಪ್ರಕ್ರಿಯೆ ನಿಯಮವನ್ನು ಮುಂದಿನ 2022ರ ಏಪ್ರಿಲ್ ತಿಂಗಳಿನಲ್ಲಿ ಜಾರಿಗೆ ತರುವುದು ಅಧಿಕೃತವಾಗಿದ್ದು, ಹೊಸ ನಿಯಮದ ಪ್ರಕಾರ 15 ವರ್ಷಗಳಿಂತಲೂ ಹೆಚ್ಚು ಹಳೆಯ ವಾಹನಗಳು ನೋಂದಣಿ ನವೀಕರಣಕ್ಕಾಗಿ ಸದ್ಯ ಚಾಲ್ತಿಯಲ್ಲಿರುವ ಮರು ನೋಂದಣಿ ಶುಲ್ಕಕ್ಕಿಂತಲೂ ಎಂಟು ಪಟ್ಟು ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ.

15 ವರ್ಷ ಮೇಲ್ಪಟ್ಟ ಹಳೆಯ ವಾಹನಗಳ ನೋಂದಣಿ ನವೀಕರಣ ಶುಲ್ಕ ಎಂಟು ಪಟ್ಟು ಹೆಚ್ಚಳ!

ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೊಸ ನಿಯಮವನ್ನು ಅಧಿಕೃತವಾಗಿ ಜಾರಿಗೊಳಿಸಿ ಆದೇಶ ಹೊರಡಿಸಿದ್ದು, ಪ್ರಯಾಣಿಕ ಕಾರುಗಳಿಗೆ ಮಾತ್ರವಲ್ಲ ಹಳೆಯ ವಾಣಿಜ್ಯ ವಾಹನ ಮಾದರಿಗಳಿಗೂ ಕೂಡಾ ದುಬಾರಿ ಮೊತ್ತದ ಮರುನೋಂದಣಿ ಶುಲ್ಕ ಅನ್ವಯಿಸಲಿದೆ.

15 ವರ್ಷ ಮೇಲ್ಪಟ್ಟ ಹಳೆಯ ವಾಹನಗಳ ನೋಂದಣಿ ನವೀಕರಣ ಶುಲ್ಕ ಎಂಟು ಪಟ್ಟು ಹೆಚ್ಚಳ!

ಹೊಸ ನಿಯಮದ ಪ್ರಕಾರ ನಿಗದಿತ ಅವಧಿ ಮೀರಿದ ಹಳೆಯ ಕಾರುಗಳ ನೋಂದಣಿ ನವೀಕರಣಕ್ಕೆ 2022ರ ಏಪ್ರಿಲ್‌ನಿಂದ ರೂ. 5 ಸಾವಿರ ಪಾವತಿಸಬೇಕಿದ್ದು, ಇದು ಪ್ರಸ್ತುತ ರೂ. 600 ರೂಪಾಯಿ ಶುಲ್ಕ ಹೊಂದಿದೆ.

15 ವರ್ಷ ಮೇಲ್ಪಟ್ಟ ಹಳೆಯ ವಾಹನಗಳ ನೋಂದಣಿ ನವೀಕರಣ ಶುಲ್ಕ ಎಂಟು ಪಟ್ಟು ಹೆಚ್ಚಳ!

ನೋಂದಣಿ ನವೀಕರಣ ಪ್ರಕ್ರಿಯೆಯಲ್ಲಿ ವಾಣಿಜ್ಯ ಬಳಕೆಯ ವಾಹನಗಳಿಗೆ ಸದ್ಯ ರೂ. 1,500 ಶುಲ್ಕ ವಿಧಿಸುತ್ತಿರುವ ಕೇಂದ್ರ ಸರ್ಕಾರವು ಮುಂದಿನ ವರ್ಷದಿಂದ ರೂ. 12,500ಕ್ಕೆ ಹೆಚ್ಚಿಸಲು ನಿರ್ಧರಿದ್ದು, ನೋಂದಣಿ ನವೀಕರಣವು ವಿಳಂಬವಾದಲ್ಲಿ ಶುಲ್ಕದ ಮೊತ್ತವು ಮತ್ತಷ್ಟು ಹೆಚ್ಚಳವಾಗುತ್ತದೆ.

15 ವರ್ಷ ಮೇಲ್ಪಟ್ಟ ಹಳೆಯ ವಾಹನಗಳ ನೋಂದಣಿ ನವೀಕರಣ ಶುಲ್ಕ ಎಂಟು ಪಟ್ಟು ಹೆಚ್ಚಳ!

ಹಾಗೆಯೇ ಹಳೆಯ ದ್ವಿಚಕ್ರಗಳ ನೋಂದಣಿ ನವೀಕರಣಕ್ಕೆ ಚಾಲ್ತಿಯಲ್ಲಿರುವ ರೂ. 300 ರೂಪಾಯಿ ದರವನ್ನು ಹೊಸದಾಗಿ ರೂ. 1 ಸಾವಿರಕ್ಕೆ ಏರಿಕೆ ಮಾಡಲಾಗುತ್ತಿದ್ದು, ಖಾಸಗಿ ವಾಹನಗಳ ಮಾಲೀಕರು ತಮ್ಮ ನೋಂದಣಿ ಸರಿಯಾದ ಸಮಯಕ್ಕೆ ನವೀಕರಿಸದಿದ್ದರೆ ತಿಂಗಳಿಗೆ ರೂ. 300 ಮತ್ತು ಅದೇ ಸಮಯದಲ್ಲಿ ವಾಣಿಜ್ಯ ವಾಹನಗಳ ಮಾಲೀಕರು ನೋಂದಣಿಯನ್ನು ನವೀಕರಿಸಲು ವಿಳಂಬ ಮಾಡಿದರೆ ತಿಂಗಳಿಗೆ ರೂ .500 ದಂಡವನ್ನು ಪಾವತಿಸಬೇಕಾಗುತ್ತದೆ.

15 ವರ್ಷ ಮೇಲ್ಪಟ್ಟ ಹಳೆಯ ವಾಹನಗಳ ನೋಂದಣಿ ನವೀಕರಣ ಶುಲ್ಕ ಎಂಟು ಪಟ್ಟು ಹೆಚ್ಚಳ!

ಖಾಸಗಿ ವಾಹನಗಳಿಗೆ ನೋಂದಣಿ ನವೀಕರಣವನ್ನು 15 ವರ್ಷಗಳ ನಂತರ ಪ್ರತಿ 5 ವರ್ಷಗಳಿಗೊಮ್ಮೆ ನವೀಕರಿಸಬೇಕಿದ್ದು, ವಾಣಿಜ್ಯ ವಾಹನಗಳ ಮಾಲೀಕರು ಮೊದಲ 8 ವರ್ಷಗಳ ನಂತರ ಪ್ರತಿ ವರ್ಷಕ್ಕೊಮ್ಮೆ ದಾಖಲೆಗಳನ್ನು ನವೀಕರಿಸಬೇಕಾಗುತ್ತದೆ.

15 ವರ್ಷ ಮೇಲ್ಪಟ್ಟ ಹಳೆಯ ವಾಹನಗಳ ನೋಂದಣಿ ನವೀಕರಣ ಶುಲ್ಕ ಎಂಟು ಪಟ್ಟು ಹೆಚ್ಚಳ!

ನೋಂದಣಿ ನವೀಕರಣ ಶುಲ್ಕವನ್ನು ಹೆಚ್ಚಿಸಿದರೆ ಜನರು ಹಳೆಯ ವಾಹನಗಳನ್ನು ಬಳಸಲು ಹಿಂಜರಿಯುತ್ತಾರೆ ಎನ್ನುವ ಉದ್ದೇಶದಿಂದ ಇಂತಹ ಕಠಿಣ ಕ್ರಮಗಳನ್ನು ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರವು 15 ವರ್ಷ ಮೇಲ್ಪಟ್ಟ ಪ್ರಯಾಣಿಕರ ಕಾರುಗಳನ್ನು ಮತ್ತು 8 ವರ್ಷ ಮೇಲ್ಪಟ್ಟ ವಾಣಿಜ್ಯ ವಾಹನಗಳ ಫಿಟ್ನೆಸ್ ಪರೀಕ್ಷೆಗೆ ಕಠಿಣವಾದ ಮಾನದಂಡಗಳನ್ನು ವಿಧಿಸಲು ನಿರ್ಧರಿಸಿದೆ.

15 ವರ್ಷ ಮೇಲ್ಪಟ್ಟ ಹಳೆಯ ವಾಹನಗಳ ನೋಂದಣಿ ನವೀಕರಣ ಶುಲ್ಕ ಎಂಟು ಪಟ್ಟು ಹೆಚ್ಚಳ!

ಸದ್ಯಕ್ಕೆ ಕೇಂದ್ರ ಸರ್ಕಾರವು 15 ವರ್ಷ ಮೇಲ್ಪಟ್ಟ ಪ್ರಯಾಣಿಕರ ಕಾರುಗಳಿಗೆ ಮತ್ತು 8 ವರ್ಷ ಮೇಲ್ಪಟ್ಟ ವಾಹನಗಳು ನೋಂದಣಿ ನವೀಕರಣ ಶುಲ್ಕವನ್ನು ಮಾತ್ರ ಹೆಚ್ಚಿಸಲಾಗುತ್ತಿದ್ದು, 2023ರಿಂದ ಹಳೆಯ ವಾಹನಗಳ ನೋಂದಣಿ ನವೀಕರಣದ ವೇಳೆ ಕಠಿಣವಾದ ಫಿಟ್ನೆಸ್ ಪರೀಕ್ಷೆಯನ್ನು ಕೂಡಾ ಎದುರಿಸಬೇಕಾಗುತ್ತದೆ.

15 ವರ್ಷ ಮೇಲ್ಪಟ್ಟ ಹಳೆಯ ವಾಹನಗಳ ನೋಂದಣಿ ನವೀಕರಣ ಶುಲ್ಕ ಎಂಟು ಪಟ್ಟು ಹೆಚ್ಚಳ!

2023ರಿಂದ 8 ವರ್ಷ ಮೇಲ್ಪಟ್ಟ ವಾಣಿಜ್ಯ ವಾಹನಗಳ ಫಿಟ್ನೆಸ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗುತ್ತಿದ್ದು, ಜೂನ್ 2024ರಿಂದ ಪ್ರಯಾಣಿಕ ಕಾರುಗಳಿಗೆ ಕಡ್ಡಾಯ ಫಿಟ್ನೆಸ್ ಪರೀಕ್ಷೆಯನ್ನು ಜಾರಿಗೆ ತರಲು ಸಿದ್ದತೆ ನಡೆಸಲಾಗಿದೆ.

15 ವರ್ಷ ಮೇಲ್ಪಟ್ಟ ಹಳೆಯ ವಾಹನಗಳ ನೋಂದಣಿ ನವೀಕರಣ ಶುಲ್ಕ ಎಂಟು ಪಟ್ಟು ಹೆಚ್ಚಳ!

ಒಂದು ವೇಳೆ 15 ವರ್ಷ ಮೇಲ್ಪಟ್ಟ ಕಾರುಗಳು ಫಿಟ್ನೆಸ್ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಮತ್ತೆ 5 ವರ್ಷಗಳ ಕಾಲ ಸಂಚಾರಕ್ಕೆ ಅವಕಾಶ ಸಿಗಲಿದ್ದು, ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲವಾದರೆ ಅದನ್ನುಸ್ಕ್ಯಾಪೇಜ್ ನೀತಿ ಅಡಿಯಲ್ಲಿ ಗುಜುರಿಗೆ ಸೇರಿಸಬೇಕಾಗುತ್ತದೆ. ಹಾಗೆಯೇ ವಾಣಿಜ್ಯ ವಾಹನಗಳಿಗೆ ಈ ನಿಯಯವು ಮೊದಲ ನೋಂದಣಿಯ ಎಂಟು ವರ್ಷಗಳ ನಂತರ ಅನ್ವಯಿಸಲಿದ್ದು, ವಾಣಿಜ್ಯ ವಾಹನಗಳು ಪ್ರತಿ ವರ್ಷವು ಫಿಟ್ನೆಸ್ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ.

Most Read Articles

Kannada
English summary
Old vehicles re registration fees to be increased 8 times high from april 2022
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X