ಜೈಲಿನಲ್ಲಿರುವ ಮಗನನ್ನು ಭೇಟಿಯಾಗಲು ಸಾಮಾನ್ಯ ಕಾರಿನಲ್ಲಿ ತೆರಳಿದ ಶಾರುಖ್ ಖಾನ್

ಬಾಲಿವುಡ್ ನಟ ಶಾರುಖ್ ಖಾನ್ ರವರ ಪುತ್ರ ಆರ್ಯನ್ ಖಾನ್ ರವರನ್ನು ಡ್ರಗ್ ಸೇವನೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಆರ್ಯನ್ ಖಾನ್ ಸದ್ಯ ಮುಂಬೈನ ಆರ್ಥರ್ ರಸ್ತೆಯಲ್ಲಿರುವ ಜೈಲಿನಲ್ಲಿದ್ದಾರೆ. ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ. ಈಗ ಅವರು ಜಾಮೀನು ಕೋರಿ ಮುಂಬೈ ಹೈ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಮುಂದಿನ ವಾರ ವಿಚಾರಣೆಗೆ ಬರಲಿದೆ.

ಜೈಲಿನಲ್ಲಿರುವ ಮಗನನ್ನು ಭೇಟಿಯಾಗಲು ಸಾಮಾನ್ಯ ಕಾರಿನಲ್ಲಿ ತೆರಳಿದ ಶಾರುಖ್ ಖಾನ್

ಆರ್ಯನ್ ಖಾನ್ ಅಕ್ಟೋಬರ್ 2 ರಿಂದ ಪೊಲೀಸರ ವಶದಲ್ಲಿದ್ದಾರೆ. ಈಗ ನ್ಯಾಯಾಂಗ ಬಂಧನದಲ್ಲಿರುವ ಅವರನ್ನು ಆರ್ಥರ್ ರೋಡ್ ಜೈಲಿನಲ್ಲಿರಿಸಲಾಗಿದೆ. ತಮ್ಮ ಮಗನನ್ನು ಕಾಣಲು ಶಾರುಖ್ ಖಾನ್ ರವರು ನಿನ್ನೆ ಜೈಲಿಗೆ ಭೇಟಿ ನೀಡಿದ್ದರು. ಅವರು Kia Seltos ಕಾರಿನಲ್ಲಿ ತೆರಳಿ ತಮ್ಮ ಮಗನನ್ನು ಭೇಟಿಯಾಗಿದ್ದಾರೆ. ಶಾರುಖ್ ಖಾನ್ ಸಿನಿಮಾ ಜೊತೆಗೆ ಕಾರುಗಳ ಬಗ್ಗೆಯೂ ಕ್ರೇಜ್ ಹೊಂದಿದ್ದಾರೆ.

ಜೈಲಿನಲ್ಲಿರುವ ಮಗನನ್ನು ಭೇಟಿಯಾಗಲು ಸಾಮಾನ್ಯ ಕಾರಿನಲ್ಲಿ ತೆರಳಿದ ಶಾರುಖ್ ಖಾನ್

Maruti Suzuki Omni ಶಾರುಖ್ ಖಾನ್ ರವರ ಮೊದಲ ಕಾರು. ಈಗ ಅವರು ಹಲವು ದುಬಾರಿ ಬೆಲೆಯ ಕಾರುಗಳನ್ನು ಹೊಂದಿದ್ದಾರೆ. ಶಾರುಖ್ ಖಾನ್ BMW 7 Series, Audi A 8 L, Land Rover Range Rover Sports ನಂತಹ ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಜೈಲಿನಲ್ಲಿರುವ ತಮ್ಮ ಮಗ ಆರ್ಯನ್ ಖಾನ್ ನನ್ನು ಕಾಣಲು ಶಾರುಖ್ ಖಾನ್ ಸಾಮಾನ್ಯ ಕಿಯಾ ಸೆಲ್ಟೋಸ್ ಕಾರಿನಲ್ಲಿ ಬಂದಿರುವುದು ಅಚ್ಚರಿ ಮೂಡಿಸಿದೆ.

ಜೈಲಿನಲ್ಲಿರುವ ಮಗನನ್ನು ಭೇಟಿಯಾಗಲು ಸಾಮಾನ್ಯ ಕಾರಿನಲ್ಲಿ ತೆರಳಿದ ಶಾರುಖ್ ಖಾನ್

ಅನಗತ್ಯವಾಗಿ ಜನಸಂದಣಿ ಉಂಟಾಗುವುದನ್ನು ತಪ್ಪಿಸಲು ಶಾರುಖ್ ಖಾನ್ ಸಾಮಾನ್ಯ ಕಿಯಾ ಸೆಲ್ಟೋಸ್ ಕಾರಿನಲ್ಲಿ ಬಂದಿರಬಹುದು ಎಂದು ಹೇಳಲಾಗಿದೆ. ದುಬಾರಿ ಕಾರುಗಳಲ್ಲಿ ಹೋದರೆ ಆ ಕಾರು ರಸ್ತೆಯಲ್ಲಿ ಎದ್ದು ಕಾಣುತ್ತದೆ. ಆದರೆ ಕಿಯಾ ಸೆಲ್ಟೋಸ್ ಕಾರು ಇತರ ಕಾರುಗಳಂತೆ ಕಾಣುತ್ತದೆ. ಈಗ ಭಾರತೀಯ ರಸ್ತೆಗಳಲ್ಲಿ ಕಿಯಾ ಸೆಲ್ಟೋಸ್ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿವೆ.

ಜೈಲಿನಲ್ಲಿರುವ ಮಗನನ್ನು ಭೇಟಿಯಾಗಲು ಸಾಮಾನ್ಯ ಕಾರಿನಲ್ಲಿ ತೆರಳಿದ ಶಾರುಖ್ ಖಾನ್

ಈ ಹಿನ್ನೆಲೆಯಲ್ಲಿ ಶಾರುಖ್ ಖಾನ್ ರವರು ಸಹ ಕಿಯಾ ಸೆಲ್ಟೋಸ್ ಕಾರ್ ಅನ್ನು ಆಯ್ಕೆ ಮಾಡಿ ಕೊಂಡಿರಬಹುದು ಎಂದು ಹೇಳಲಾಗಿದೆ. ಈ ಕಿಯಾ ಸೆಲ್ಟೋಸ್ ಕಾರು ಶಾರುಖ್ ಖಾನ್ ರವರಿಗೆ ಸೇರಿದ್ದೇ ಅಥವಾ ಬೇರೆಯವರಿಗೆ ಸೇರಿದ್ದೇ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ. ಕಿಯಾ ಸೆಲ್ಟೋಸ್ ದೇಶಿಯ ಮಾರುಕಟ್ಟೆಯಲ್ಲಿರುವ ಜನಪ್ರಿಯ ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಒಂದಾಗಿದೆ.

ಜೈಲಿನಲ್ಲಿರುವ ಮಗನನ್ನು ಭೇಟಿಯಾಗಲು ಸಾಮಾನ್ಯ ಕಾರಿನಲ್ಲಿ ತೆರಳಿದ ಶಾರುಖ್ ಖಾನ್

ಮಧ್ಯಮ ಗಾತ್ರದ ಎಸ್‌ಯುವಿ ಸೆಗ್ ಮೆಂಟಿನಲ್ಲಿ ಕಿಯಾ ಸೆಲ್ಟೋಸ್ ಎಸ್‌ಯುವಿಯು Hyundai Creta, Skoda Kushaq, Volkswagen Taigun ಸೇರಿದಂತೆ ಹಲವು ಎಸ್‌ಯುವಿಗಳಿಗೆ ಪೈಪೋಟಿ ನೀಡುತ್ತದೆ. ಇವುಗಳ ಜೊತೆಗೆ ಇತ್ತೀಚೆಗೆ ಬಿಡುಗಡೆಯಾದ MG Aster ಸಹ ಕಿಯಾ ಸೆಲ್ಟೋಸ್‌ಗೆ ಪ್ರತಿಸ್ಪರ್ಧಿಯಾಗಿದೆ. ಕಿಯಾ ಮೋಟಾರ್ಸ್ ಕಂಪನಿಯು ಸೆಲ್ಟೋಸ್ ಆಧಾರಿತ ಹೊಸ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ.

ಜೈಲಿನಲ್ಲಿರುವ ಮಗನನ್ನು ಭೇಟಿಯಾಗಲು ಸಾಮಾನ್ಯ ಕಾರಿನಲ್ಲಿ ತೆರಳಿದ ಶಾರುಖ್ ಖಾನ್

Kia Motors ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಸೆಲ್ಟೋಸ್ ಜೊತೆಗೆ ಕಿಯಾ Sonet ಹಾಗೂ Carnival ಕಾರುಗಳನ್ನು ಸಹ ಮಾರಾಟ ಮಾಡುತ್ತದೆ. ಈ ಎಲ್ಲಾ ಕಾರುಗಳು ಭಾರತದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿವೆ. Sonet ಎಸ್‌ಯುವಿಯು ಸಬ್ 4 ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್ ಮೆಂಟಿನಲ್ಲಿ ಸ್ಥಾನ ಪಡೆದಿದೆ. ಇನ್ನು Kia Carnvial ಎಂಪಿವಿ ಮಾದರಿಯಾಗಿದೆ.

ಜೈಲಿನಲ್ಲಿರುವ ಮಗನನ್ನು ಭೇಟಿಯಾಗಲು ಸಾಮಾನ್ಯ ಕಾರಿನಲ್ಲಿ ತೆರಳಿದ ಶಾರುಖ್ ಖಾನ್

Kia Carnvial ದುಬಾರಿ ಬೆಲೆ ಕಾರು. ಕಿಯಾ ಕಾರ್ನಿವಲ್ ಕಾರು ಮೌಲ್ಯಕ್ಕೆ ತಕ್ಕಂತೆ ಸಾಕಷ್ಟು ಐಷಾರಾಮಿ ಫೀಚರ್ ಗಳನ್ನು ಹೊಂದಿದೆ. ಕಿಯಾ ಕಾರ್ನಿವಲ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ Toyota Innova Crysta ಕಾರಿಗೆ ಅತ್ಯುತ್ತಮ ಪರ್ಯಾಯ ಕಾರು ಎಂದು ಪರಿಗಣಿಸಲಾಗಿದೆ. ಮಾರಾಟ ವರದಿಗಳ ಪ್ರಕಾರ, ಕಿಯಾ ಇಂಡಿಯಾ ಕಂಪನಿಯು ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ 14,441 ಯುನಿಟ್‌ ಕಾರುಗಳನ್ನು ಮಾರಾಟ ಮಾಡಿದೆ.

ಜೈಲಿನಲ್ಲಿರುವ ಮಗನನ್ನು ಭೇಟಿಯಾಗಲು ಸಾಮಾನ್ಯ ಕಾರಿನಲ್ಲಿ ತೆರಳಿದ ಶಾರುಖ್ ಖಾನ್

2021ರ ಆಗಸ್ಟ್ ತಿಂಗಳಿನಲ್ಲಿ ಕಿಯಾ ಇಂಡಿಯಾ ಕಂಪನಿಯು 16,750 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಆಗಸ್ಟ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಕಳೆದ ತಿಂಗಳ ಮಾರಾಟವು 13.7% ನಷ್ಟು ಇಳಿಕೆಯಾಗಿದೆ. 2020ರ ಸೆಪ್ಟೆಂಬರ್ ತಿಂಗಳಿನಲ್ಲಿ 18,676 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ವರ್ಷದ ಮಾರಾಟಕ್ಕೆ ಹೋಲಿಸಿದರೆ ಈ ಬಾರಿಯ ಮಾರಾಟದಲ್ಲಿ 22.6% ನಷ್ಟು ಇಳಿಕೆಯಾಗಿದೆ.

ಜೈಲಿನಲ್ಲಿರುವ ಮಗನನ್ನು ಭೇಟಿಯಾಗಲು ಸಾಮಾನ್ಯ ಕಾರಿನಲ್ಲಿ ತೆರಳಿದ ಶಾರುಖ್ ಖಾನ್

ಕಳೆದ ತಿಂಗಳು ಕಿಯಾ ಸೆಲ್ಟೋಸ್ ಕಾರಿನ 9,583 ಯುನಿಟ್‌ಗಳು ಮಾರಾಟವಾಗಿದ್ದರೆ, ಸೊನೆಟ್ ಕಾರಿನ 4,454 ಯುನಿಟ್‌ಗಳು ಮಾರಾಟವಾಗಿವೆ. ಇನ್ನು ಕಾರ್ನಿವಲ್ ಪ್ರೀಮಿಯಂ ಎಂಪಿವಿಯ 404 ಯುನಿಟ್‌ಗಳು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗಿವೆ. ಕಳೆದ ತಿಂಗಳು ಕಿಯಾ ಮೋಟಾರ್ಸ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ 7.8% ರಷ್ಟು ಮಾರುಕಟ್ಟೆ ಪಾಲನ್ನು ಪಡೆದಿದೆ.

ಜೈಲಿನಲ್ಲಿರುವ ಮಗನನ್ನು ಭೇಟಿಯಾಗಲು ಸಾಮಾನ್ಯ ಕಾರಿನಲ್ಲಿ ತೆರಳಿದ ಶಾರುಖ್ ಖಾನ್

ಕಿಯಾ ಇಂಡಿಯಾ 3 ಲಕ್ಷ ಯೂನಿಟ್‌ ಮಾರಾಟದ ಮೈಲಿಗಲ್ಲನ್ನು ತಲುಪಿದ ಭಾರತದ ಅತಿ ವೇಗದ ಕಾರು ತಯಾರಕ ಕಂಪನಿಯಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಬ್ಲಾಕ್‌ಬಸ್ಟರ್‌ ಆಗಿರುವ ಕಿಯಾ ಸೆಲ್ಟೋಸ್ ಹಾಗೂ ಸೊನೆಟ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಸೆಲ್ಟೋಸ್ ಕಾಂಪ್ಯಾಕ್ಟ್ ಎಸ್‌ಯುವಿಯ ಮಾರಾಟವು ಕಿಯಾ ಮೋಟಾರ್ಸ್ ಕಂಪನಿಯ ಒಟ್ಟಾರೆ ಮಾರಾಟದ 66% ನಷ್ಟಿದೆ.

ಜೈಲಿನಲ್ಲಿರುವ ಮಗನನ್ನು ಭೇಟಿಯಾಗಲು ಸಾಮಾನ್ಯ ಕಾರಿನಲ್ಲಿ ತೆರಳಿದ ಶಾರುಖ್ ಖಾನ್

ಕಂಪನಿಯ 32% ನಷ್ಟು ಮಾರಾಟವು ಸೋನೆಟ್ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಮೂಲಕ ಆಗುತ್ತಿದೆ. ಕಂಪನಿಯು ಇದುವರೆಗೂ ಕಾರ್ನಿವಲ್ಎಂಪಿವಿಯ 7310 ಯುನಿಟ್‌ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದೆ.

Most Read Articles

Kannada
English summary
Shah rukh khan uses kia seltos to visit arthur road jail details
Story first published: Friday, October 22, 2021, 15:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X