Just In
Don't Miss!
- News
ನೊಂದ ಮಹಿಳೆಯಿಂದ ಪೊಲೀಸ್ ಸ್ಟೇಷನ್ ನಿಂದಲೇ ಫೇಸ್ ಬುಕ್ ಲೈವ್ !
- Movies
ಉಪೇಂದ್ರ ನಟನೆಯ ಕಬ್ಜ ಚಿತ್ರಕ್ಕೆ ಎಂಟ್ರಿ ಕೊಟ್ಟ 'ಕುರುಕ್ಷೇತ್ರ'ದ ಭೀಮ
- Sports
ಆರು ನಗರಗಳಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಸಿದ್ಧತೆ: ಅಹ್ಮದಾಬಾದ್ನಲ್ಲಿ ಫೈನಲ್: ವರದಿ
- Finance
ಭಾರತದಲ್ಲಿ ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಸ್ ಮಾರಾಟ
- Lifestyle
ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಫ್ಯಾಬಿಯಾ ಕಾರಿನ ಟೀಸರ್ ಬಿಡುಗಡೆಗೊಳಿಸಿದ ಸ್ಕೋಡಾ
ಸ್ಕೋಡಾ ಕಂಪನಿಯು ತನ್ನ ನಾಲ್ಕನೇ ತಲೆಮಾರಿನ ಫ್ಯಾಬಿಯಾ ಕಾರಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಸ್ಕೋಡಾ ಕಂಪನಿಯು ಈ ಹೊಸ ಫ್ಯಾಬಿಯಾ ಕಾರನ್ನು ಈ ವರ್ಷದ ಮಾರ್ಚ್ ಮತ್ತು ಜೂನ್ ತಿಂಗಳ ನಡುವೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸಬಹುದು.

ಈ ಹೊಸ ಸ್ಕೋಡಾ ಕಾರು ಫೋಕ್ಸ್‌ವ್ಯಾಗನ್ ಗ್ರೂಪ್‌ನ ಮಾಡ್ಯುಲರ್ ಟ್ರಾನ್ಸ್‌ವರ್ಸ್ ಟೂಲ್‌ಕಿಟ್ ಎಂಕ್ಯೂಬಿ-ಎ 0 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಈ ಪ್ಲಾಟ್‌ಫಾರ್ಮ್ ಆಂತರಿಕ ಜಾಗವನ್ನು ಹೆಚ್ಚಿಸುತ್ತದೆ ಮತ್ತು ಅತ್ಯಾಧುನಿಕ ಮತ್ತು ಕನೆಕ್ಟಿವಿ ಫೀಚರ್ ಗಳನ್ನು ಬೆಂಬಲಿಸುತ್ತದೆ. ಇನ್ನು ಕಂಪನಿಯು ಬಿಡುಗಡೆ ಮಾಡಿದ ಟೀಸರ್ ಚಿತ್ರದಲ್ಲಿ ಸ್ಕೋಡಾ ಫ್ಯಾಬಿಯಾ ಕಾರು ರೂಫ್‌ಲೈನ್ ಒಳಗೊಂಡಿರುವಂತಿದೆ.

ಸ್ಕೋಡಾ ಫೋಕ್ಸ್‌ವ್ಯಾಗನ್ ಗ್ರೂಪ್‌ನ ಮಾಡ್ಯುಲರ್ ಟ್ರಾನ್ಸ್‌ವರ್ಸ್ ಟೂಲ್‌ಕಿಟ್ ಎಂಕ್ಯೂಬಿ-ಎ 0 ಪ್ಲಾಟ್‌ಫಾರ್ಮ್ ಅನ್ನು ಬಳಸುತ್ತಿರುವುದು ಇದೇ ಮೊದಲು ಮತ್ತು ಕಂಪನಿಯು ಈ ಪ್ಲಾಟ್‌ಫಾರ್ಮ್ ಅನ್ನು ಬಳಸುವುದರಿಂದ ಫ್ಯಾಬಿಯಾವನ್ನು ತನ್ನ ಹಿಂದಿನದಕ್ಕಿಂತ ಗಾತ್ರದಲ್ಲಿ ದೊಡ್ಡದಾಗಿದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಕೆಲವು ವರದಿಗಳ ಪ್ರಕಾರ, ಮುಂದಿನ ತಲೆಮಾರಿನ ಸ್ಕೋಡಾ ಫ್ಯಾಬಿಯಾ ತನ್ನ ತನ್ನ ನೇರ ಪ್ರತಿಸ್ಪರ್ಧಿಗಳಿಗಿಂತ ದೊಡ್ಡದಾಗಿದೆ ಮತ್ತು ಒಳಭಾಗದಲ್ಲಿ ಹೆಚ್ಚು ಸ್ಪೇಸ್ ಅನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ.

ಇನ್ನು ಹೊಸ ಸ್ಕೋಡಾ ಫ್ಯಾಬಿಯಾ ಕಾರಿನ ಬೂಟ್ ಸ್ಪೇಸ್ 50 ಲೀಟರ್‌ಗಳಷ್ಟು ಹೆಚ್ಚಾಗಿರುತ್ತದೆದೆ. ಅಲ್ಲದೇ ಹೊಸ ಮಾಡ್ಯುಲರ್ ಟ್ರಾನ್ಸ್‌ವರ್ಸ್ ಟೂಲ್‌ಕಿಟ್ ಎಂಕ್ಯೂಬಿ-ಎ 0 ಪ್ಲಾಟ್‌ಫಾರ್ಮ್ ನಿಂದ ಸುರಕ್ಷತೆಯಲ್ಲಿ ಮತ್ತಷ್ಟು ಸುಧಾರಣೆಗಳನ್ನು ತರುತ್ತದೆ ಮತ್ತು ಹಲವಾರು ಆಧುನಿಕ ತಂತ್ರಜ್ಙಾನವನ್ನು ಒಳಗೊಂಡಿರುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ಕಾರಿನ ಎಂಜಿನ್‌ಗಳಿಗೆ ಸಂಬಂಧಿಸಿದಂತೆ, ಹೊಸ ಫ್ಯಾಬಿಯಾ ಮಾದರಿಯಲ್ಲಿ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಳಾಗಿದೆ. ಫೋಕ್ಸ್‌ವ್ಯಾಗನ್ ಗ್ರೂಪ್‌ನ ಇವಿಒ ಎಂಜಿನ್ ಉತ್ಪಾದನೆಯಿಂದ ಸ್ಕೋಡಾ ಅತ್ಯಾಧುನಿಕ ಪೆಟ್ರೋಲ್ ಎಂಜಿನ್‌ಗಳನ್ನು ಆರಿಸಿಕೊಂಡಿದೆ

ಇದು ಹೆಚ್ಚಿನ ಮಾಲಿನ್ಯವನ್ನು ಕೂಡ ಸೃಷ್ಟಿಸುವುದಿಲ್ಲ. ಇನ್ನು ಈ ಹೊಸ ಫ್ಯಾಬಿಯಾ ಫ್ರಂಟ್-ವೀಲ್ ಡ್ರೈವ್‌ನೊಂದಿಗೆ ಬರಲಿದೆ. ಮ್ಯಾನುಯಲ್ ಗೇರ್‌ಬಾಕ್ಸ್ ಅಥವಾ ಆಟೋಮ್ಯಾಟಿಕ್ ಸ್ಪೀಡ್ ಡಿಎಸ್‌ಜಿ ಹೊಂದಿರಲಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಹೊಸ ಮಾದರಿಯು ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವನ್ನು ಸಹ ಪಡೆಯಬಹುದು, ಇದನ್ನು ಹೊಸ ಆಕ್ಟೀವಿಯಾ ಕಾರಿನಲ್ಲಿಯು ಕೂಡ ನೀಡಲಾಗುತ್ತದೆ. ಇದು ಹೊಸ ಕಾರನ್ನು ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲು ಸಹಾಯ ಮಾಡುತ್ತದೆ ಮತ್ತು ಮೈಲೇಜ್ ಅನ್ನು ಸುಧಾರಿಸುತ್ತದೆ.

ಇನ್ನು ಹೊಸ ಸ್ಕೋಡಾ ಫ್ಯಾಬಿಯಾ ಕಾರಿನ ಬಗ್ಗೆ ಹೆಚ್ಚಿನ ವಿವರಗಳು ಶೀಘ್ರದಲ್ಲೇ ಹೊರಬರುತ್ತವೆ, ಆದರೆ ಈ ಹೊಸ ಸ್ಕೋಡಾ ಫ್ಯಾಬಿಯಾ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ. ಸ್ಖೋಡಾ ಕಂಪನಿಯು ಭಾರತದಲ್ಲಿ ಕುಶಾಕ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.