ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿ ಮಾದರಿಗಳಲ್ಲಿ ಹೊಸ ಬಣ್ಣದ ಆಯ್ಕೆ ನೀಡಲಿದೆ ಟಾಟಾ ಮೋಟಾರ್ಸ್

ಹೊಸ ಕಾರುಗಳ ಮಾರಾಟದಲ್ಲಿ ಮಹತ್ವದ ಬದಲಾವಣೆಗಳನ್ನು ಪರಿಚಯಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಕಂಪನಿಯು ಶೀಘ್ರದಲ್ಲಿಯೇ ಹೊಸ ಹ್ಯಾರಿಯರ್ ಮತ್ತು ಸಫಾರಿ ಕಾರುಗಳಲ್ಲಿ ಮತ್ತಷ್ಟು ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಹೆಚ್ಚುವರಿ ಬಣ್ಣಗಳ ಆಯ್ಕೆ ನೀಡಲು ಮುಂದಾಗಿದೆ.

ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿ ಮಾದರಿಗಳಲ್ಲಿ ಹೊಸ ಬಣ್ಣದ ಆಯ್ಕೆ ನೀಡಲಿದೆ ಟಾಟಾ ಮೋಟಾರ್ಸ್

ಹ್ಯಾರಿಯರ್ ಮತ್ತು ಸಫಾರಿ ಕಾರುಗಳ ಪ್ರತಿಸ್ಪರ್ಧಿ ಕಾರು ಮಾದರಿಗಳಾದ ಕಿಯಾ ಸೆಲ್ಟೊಸ್, ಹ್ಯುಂಡೈ ಕ್ರೆಟಾ ಮತ್ತು ಎಂಜಿ ಹೆಕ್ಟರ್, ಎಕ್ಸ್‌ಯುವಿ700, ಹೆಕ್ಟರ್ ಪ್ಲಸ್ ಕಾರುಗಳಿಗೆ ಪೈಪೋಟಿಯಾಗಿ ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಉನ್ನತೀಕರಿಸಿದ ಮಾದರಿಯನ್ನು ಬಿಡುಗಡೆ ಮಾಡಲು ಟಾಟಾ ಕಂಪನಿಯು ಯೋಜನೆ ರೂಪಿಸಿದ್ದು, ಹೊಸ ಬಣ್ಣಗಳ ಆಯ್ಕೆಯೊಂದಿಗೆ ವಿವಿಧ ಹೊಸ ಎಂಜಿನ್ ಆಯ್ಕೆಯು ಕೂಡಾ ಹೊಸ ಕಾರುಗಳ ಪ್ರಮುಖ ಆಕರ್ಷಣೆಯಾಗಲಿದೆ.

ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿ ಮಾದರಿಗಳಲ್ಲಿ ಹೊಸ ಬಣ್ಣದ ಆಯ್ಕೆ ನೀಡಲಿದೆ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಸದ್ಯ ಸಫಾರಿ ಎಸ್‌ಯುವಿಯಲ್ಲಿ ವೈಟ್ ಗೋಲ್ಡ್, ಬ್ಲ್ಯಾಕ್ ಗೋಲ್ಡ್, ರಾಯಲ್ ಬ್ಲ್ಯೂ, ಟ್ರೊಪಿಕಲ್ ಮಿಸ್ಟ್, ಡೇಟೊನಾ ಗ್ರೇ, ಆರ್ಕಸ್ ವೈಟ್ ಮತ್ತು ಟ್ರೊಪಿಕಲ್ ಮಿಸ್ಟ್ ಅಡ್ವೆಂಚರ್ ಬಣ್ಣಗಳ ಆಯ್ಕೆಯನ್ನು ಮತ್ತು ಹ್ಯಾರಿಯರ್‌ನಲ್ಲಿ ಒಬೆರಾನ್ ಬ್ಲ್ಯಾಕ್, ಕ್ಯಾಲಿಪ್ಸೊ ರೆಡ್, ಆರ್ಕಸ್ ವೈಟ್ ಮತ್ತು ಡೇಟೊನಾ ಗ್ರೇ ಬಣ್ಣಗಳ ಆಯ್ಕೆಗಳಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ 2022ರ ಮಾದರಿಯಲ್ಲಿ ಕಂಪನಿಯು ಎರಡು ಮಾದರಿಗಳಲ್ಲೂ ಹೆಚ್ಚುವರಿ ಬಣ್ಣಗಳನ್ನು ನೀಡಲು ಯೋಜಿಸಿದೆ.

ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿ ಮಾದರಿಗಳಲ್ಲಿ ಹೊಸ ಬಣ್ಣದ ಆಯ್ಕೆ ನೀಡಲಿದೆ ಟಾಟಾ ಮೋಟಾರ್ಸ್

ಇದರ ಜೊತೆಗೆ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಹ್ಯಾರಿಯರ್ ಮತ್ತು ಸಫಾರಿ ಕಾರಿನಲ್ಲೂ ಪೆಟ್ರೋಲ್ ಎಂಜಿನ್ ಮಾದರಿಯನ್ನು ಬಿಡುಗಡೆಗೊಳಿಸಲಾಗುತ್ತಿದ್ದು, ಹೊಸ ಮಾದರಿಗಳ ಮೂಲಕ ಟಾಟಾ ಕಂಪನಿಯು ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದೆ.

ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿ ಮಾದರಿಗಳಲ್ಲಿ ಹೊಸ ಬಣ್ಣದ ಆಯ್ಕೆ ನೀಡಲಿದೆ ಟಾಟಾ ಮೋಟಾರ್ಸ್

ಹೊಸ ಎಂಜಿನ್ ಆಯ್ಕೆ ಪಡೆದುಕೊಂಡಿರುವ ಹ್ಯಾರಿಯರ್ ಮತ್ತು ಸಫಾರಿ ಪೆಟ್ರೋಲ್ ಮಾದರಿಗಳನ್ನು ಸದ್ಯ ರೋಡ್ ಟೆಸ್ಟಿಂಗ್ ನಡೆಸುತ್ತಿರುವ ಟಾಟಾ ಕಂಪನಿಯು ಹೊಸ ಮಾದರಿಗಳನ್ನು 2022ರ ಮಾದರಿಗಳಲ್ಲಿ ಬಿಡುಗಡೆ ಮಾಡಬಹುದಾಗಿದೆ.

ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿ ಮಾದರಿಗಳಲ್ಲಿ ಹೊಸ ಬಣ್ಣದ ಆಯ್ಕೆ ನೀಡಲಿದೆ ಟಾಟಾ ಮೋಟಾರ್ಸ್

ಮೈಲೇಜ್ ವಿಚಾರವಾಗಿ ಡೀಸೆಲ್ ಎಂಜಿನ್ ಮಾದರಿಗಳು ಇಷ್ಟು ದಿನ ಹೆಚ್ಚಿನ ಬೇಡಿಕೆ ಹೊಂದಿದ್ದರೂ ಡೀಸೆಲ್ ಮಾದರಿಗಿಂತಲೂ ಕಡಿಮೆ ಬೆಲೆ ಮತ್ತು ನಿರ್ವಹಣೆಯಲ್ಲೂ ಡೀಸೆಲ್ ಮಾದರಿಗಿಂತ ಕಡಿಮೆ ಖರ್ಚು ಹೊಂದಿರುವ ಪೆಟ್ರೋಲ್ ಮಾದರಿಗಳೇ ಇದೀಗ ವ್ಯಯಕ್ತಿಕ ಕಾರು ಬಳಕೆದಾರರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿವೆ.

ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿ ಮಾದರಿಗಳಲ್ಲಿ ಹೊಸ ಬಣ್ಣದ ಆಯ್ಕೆ ನೀಡಲಿದೆ ಟಾಟಾ ಮೋಟಾರ್ಸ್

ಟಾಟಾ ಕಂಪನಿಯು ಸದ್ಯ ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿಗಳಲ್ಲಿ ಡೀಸೆಲ್ ಎಂಜಿನ್ ಆಯ್ಕೆ ಮಾತ್ರ ನೀಡುತ್ತಿದ್ದು, ಹೊಸ ಕಾರಗಳಲ್ಲಿರುವ 2.0-ಲೀಟರ್(1,956 ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಮಾದರಿಯಲ್ಲಿ 6 ಸ್ಪೀಡ್ ಮ್ಯಾನುವಲ್ ಮತ್ತು 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆ ಹೊಂದಿವೆ.

ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿ ಮಾದರಿಗಳಲ್ಲಿ ಹೊಸ ಬಣ್ಣದ ಆಯ್ಕೆ ನೀಡಲಿದೆ ಟಾಟಾ ಮೋಟಾರ್ಸ್

ಹೊಸ ಕಾರುಗಳು ಫ್ರಂಟ್ ವೀಲ್ಹ್ ಡ್ರೈವ್ ಸಿಸ್ಟಂನೊಂದಿಗೆ 168-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದ್ದು, ಡೀಸೆಲ್ ಕಾರುಗಳ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ವಿಧಿಸುತ್ತಿರುವುದು ಕೂಡಾ ಪೆಟ್ರೋಲ್ ಕಾರುಗಳ ಬಳಕೆಯು ಹೆಚ್ಚುತ್ತಿದೆ.

ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿ ಮಾದರಿಗಳಲ್ಲಿ ಹೊಸ ಬಣ್ಣದ ಆಯ್ಕೆ ನೀಡಲಿದೆ ಟಾಟಾ ಮೋಟಾರ್ಸ್

ಇನ್ನು 2018ರ ಆಟೋ ಎಕ್ಸ್‌ಫೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಹ್ಯಾರಿಯರ್ ಕಾರು ಮಾದರಿಯು 2019ರ ಜನವರಿಯಲ್ಲಿ ಅಧಿಕೃತ ಬಿಡುಗಡೆಗೊಂಡಿತ್ತು. ಹೊಸ ಕಾರು ಬಿಡುಗಡೆಯ ನಂತರ ಬೇಡಿಕೆಯಲ್ಲಿ ಏರಿಳಿತದೊಂದಿಗೆ ಇದುವರೆಗೆ 50 ಸಾವಿರಕ್ಕೂ ಹೆಚ್ಚು ಯುನಿಟ್ ಮಾರಾಟ ಗುರಿತಲುಪಿದೆ.

ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿ ಮಾದರಿಗಳಲ್ಲಿ ಹೊಸ ಬಣ್ಣದ ಆಯ್ಕೆ ನೀಡಲಿದೆ ಟಾಟಾ ಮೋಟಾರ್ಸ್

ಬಿಎಸ್-4 ಮಾದರಿಯೊಂದಿಗೆ ಕೇವಲ 17 ಸಾವಿರ ಯುನಿಟ್ ಮಾರಾಟಗೊಂಡಿದ್ದ ಹ್ಯಾರಿಯರ್ ಕಾರು ಮಾದರಿಯು ಬಿಎಸ್-6 ಎಂಜಿನ್‌ನೊಂದಿಗೆ ಉನ್ನತೀಕರಣಗೊಂಡ ನಂತರ ಸುಮಾರು 33 ಸಾವಿರ ಯುನಿಟ್ ಮಾರಾಟಗೊಂಡಿದೆ.

ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿ ಮಾದರಿಗಳಲ್ಲಿ ಹೊಸ ಬಣ್ಣದ ಆಯ್ಕೆ ನೀಡಲಿದೆ ಟಾಟಾ ಮೋಟಾರ್ಸ್

ಹ್ಯಾರಿಯರ್ ಕಾರು ಮಾದರಿಗೆ ಮೊದಲ ಎರಡು ವರ್ಷದ ಬೇಡಿಕೆ ಪ್ರಮಾಣವು ಕಳೆದ ಹತ್ತು ತಿಂಗಳಿನಲ್ಲಿ ಬೇಡಿಕೆ ಹರಿದುಬಂದಿದ್ದು, 2020ರ ಕೊನೆಯ ತನಕವು 25 ಸಾವಿರ ಯುನಿಟ್ ಕೂಡಾ ಮಾರಾಟಗೊಂಡಿರಲಿಲ್ಲ. ಈ ವರ್ಷದ ಆರಂಭದಿಂದ ಟಾಟಾ ಕಾರುಗಳಿಗೆ ಬೇಡಿಕೆಯು ಹೊಸ ಟ್ರೆಂಡ್ ಸೃಷ್ಠಿಸಿದ್ದು, ಹ್ಯಾರಿಯರ್ ಸೇರಿದಂತೆ ಕಂಪನಿಯ ಪ್ರಮುಖ ಕಾರುಗಳ ಮಾರಾಟವು ಹಲವಾರು ಹೊಸ ದಾಖಲೆಗಳಿಗೆ ಕಾರಣವಾಗಿವೆ.

ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿ ಮಾದರಿಗಳಲ್ಲಿ ಹೊಸ ಬಣ್ಣದ ಆಯ್ಕೆ ನೀಡಲಿದೆ ಟಾಟಾ ಮೋಟಾರ್ಸ್

ಕಳೆದ ಜನವರಿಯಿಂದ ಇದುವರೆಗೆ ಹ್ಯಾರಿಯರ್ ಮಾದರಿಯು ಸುಮಾರು 25 ಸಾವಿರ ಯುನಿಟ್‌ ಮಾರಾಟಗೊಂಡಿದ್ದು, ಹೊಸ ಹೊಸ ಬದಲಾವಣೆಗಳೊಂದಿಗೆ ಹ್ಯಾರಿಯರ್ ಕಾರು ಹೊಸ ದಾಖಲೆಗಳನ್ನು ತನ್ನದಾಗಿಸಿಕೊಳ್ಳುತ್ತಿದೆ.

ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿ ಮಾದರಿಗಳಲ್ಲಿ ಹೊಸ ಬಣ್ಣದ ಆಯ್ಕೆ ನೀಡಲಿದೆ ಟಾಟಾ ಮೋಟಾರ್ಸ್

ಹ್ಯಾರಿಯರ್ ಎಸ್‌ಯುವಿ ಮಾದರಿಯು ಸದ್ಯ ಸ್ಟ್ಯಾಂಡರ್ಡ್, ಡಾರ್ಕ್, ಕ್ಯಾಮೊ ಎಡಿಷನ್‌ ಒಳಗೊಂಡಂತೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 14.39 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 21.19 ಲಕ್ಷ ಬೆಲೆ ಹೊಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಕಾರು ಬರೋಬ್ಬರಿ 26 ವೆರಿಯೆಂಟ್‌ಗಳನ್ನು ಪಡೆದುಕೊಂಡಿದೆ.

ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿ ಮಾದರಿಗಳಲ್ಲಿ ಹೊಸ ಬಣ್ಣದ ಆಯ್ಕೆ ನೀಡಲಿದೆ ಟಾಟಾ ಮೋಟಾರ್ಸ್

ಇನ್ನು ಸಫಾರಿ ಕಾರು ಮಾದರಿಯು ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ, ಎಕ್ಸ್‌ಟಿ ಪ್ಲಸ್, ಎಕ್ಸ್‌ಜೆಡ್, ಎಕ್ಸ್‌ಜೆಡ್ ಪ್ಲಸ್ ಮತ್ತು ಎಕ್ಸ್‌ಜೆಡ್ ಪ್ಲಸ್ ಅಡ್ವೆಂಚರ್ ಪೆರಸೊನಾ ಮಾದರಿಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ 6 ಸೀಟರ್ ಮತ್ತು 7 ಸೀಟರ್ ಆಯ್ಕೆ ಪಡೆದುಕೊಂಡಿದೆ.

Most Read Articles

Kannada
English summary
Tata harrier and safari to get new colour option soon
Story first published: Thursday, December 30, 2021, 9:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X