ಒಂದೇ ದಿನ ನೂರಕ್ಕೂ ಹೆಚ್ಚು ಕಾರುಗಳನ್ನು ವಿತರಿಸಿದ Tata Motors ಡೀಲರ್

Tata Motors ಕಂಪನಿಯ ಕಾರುಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಗುರುಗ್ರಾಮದ ಡೀಲರ್ ಶಿಪ್ ವೊಂದು ನವರಾತ್ರಿಯ ಮೊದಲ ದಿನವೇ 106 ಕಾರುಗಳನ್ನು ವಿತರಿಸಿದೆ. ವಿತರಣೆಯಾದ ಕಾರುಗಳಲ್ಲಿ Tata Safari, Tata Nexon, Tata Altroz, Tata Tiago, Tata Harrier, Tata Tigor ಕಾರುಗಳು ಸೇರಿವೆ. ಇಷ್ಟೊಂದು ಸಂಖ್ಯೆಯಲ್ಲಿ Tata ಕಾರುಗಳು ವಿತರಣೆಯಾಗಿರುವುದರಿಂದ ಮುಂದಿನ ತಿಂಗಳು ಕಂಪನಿಯ ಕಾರುಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಸಾಧ್ಯತೆಗಳಿವೆ.

ಒಂದೇ ದಿನ ನೂರಕ್ಕೂ ಹೆಚ್ಚು ಕಾರುಗಳನ್ನು ವಿತರಿಸಿದ Tata Motors ಡೀಲರ್

Tata Motors‌ ಕಂಪನಿಯ ಗುರುಗ್ರಾಮ ಡೀಲರ್‌ಶಿಪ್ ಬುಕ್ಕಿಂಗ್ ಮಾಡಿದ್ದ ಗ್ರಾಹಕರಿಗೆ ಈ ಎಲ್ಲಾ ಕಾರುಗಳನ್ನು ವಿತರಿಸಿದೆ. ಇದರ ಜೊತೆಗೆ ವಿತರಿಸಿದ ಪ್ರತಿ ಕಾರಿಗೆ ಕೇಕ್ ಕತ್ತರಿಸಿ, ಪೂಜೆಯನ್ನು ಸಹ ಮಾಡಲಾಗಿದೆ. ಆರ್ಯ ಎಂಬ ಹೆಸರಿನ ಈ ಡೀಲರ್‌ಶಿಪ್ ನವರಾತ್ರಿ ಹಬ್ಬದ ಮೊದಲ ದಿನದ ಹಿನ್ನೆಲೆಯಲ್ಲಿ ಒಂದೇ ಬಾರಿಗೆ ಹೆಚ್ಚಿನ ಸಂಖ್ಯೆಯ ಕಾರುಗಳನ್ನು ವಿತರಿಸಿದೆ.

ಒಂದೇ ದಿನ ನೂರಕ್ಕೂ ಹೆಚ್ಚು ಕಾರುಗಳನ್ನು ವಿತರಿಸಿದ Tata Motors ಡೀಲರ್

Tata Motors‌ ಕಂಪನಿಯು ಈಗಾಗಲೇ ಹಬ್ಬದ ಸಿದ್ಧತೆಗಳನ್ನು ಆರಂಭಿಸಿದೆ. ಇದರ ಫಲಿತಾಂಶವು ಈಗ ಗೋಚರಿಸುತ್ತಿವೆ. Tata Motors‌ ಕಂಪನಿಯು ಮಾರುಕಟ್ಟೆಯಲ್ಲಿದ್ದ ತನ್ನ ಹಲವು ಕಾರುಗಳನ್ನು ಕಳೆದ ವರ್ಷ ಹೊಸ ಅವತಾರದಲ್ಲಿ ಬಿಡುಗಡೆಗೊಳಿಸಿತು. ಇದರ ನಂತರ ಮಾರಾಟದಲ್ಲಿ ಹೆಚ್ಚಳ ಕಂಡು ಬಂದಿದೆ. ಜೊತೆಗೆ ಈ ಮಾದರಿಗಳು ಹಲವು ವಿಶೇಷ ಆವೃತ್ತಿಗಳಲ್ಲಿ ಲಭ್ಯವಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿವೆ.

ಒಂದೇ ದಿನ ನೂರಕ್ಕೂ ಹೆಚ್ಚು ಕಾರುಗಳನ್ನು ವಿತರಿಸಿದ Tata Motors ಡೀಲರ್

ನವರಾತ್ರಿ ಹಬ್ಬದ ಸಂದರ್ಭದಲ್ಲಿ Tata Motors ಕಂಪನಿಯು ತನ್ನ ಗ್ರಾಹಕರಿಗಾಗಿ ಹೊಸ Punch ಮೈಕ್ರೋ ಎಸ್‌ಯು‌ವಿಯನ್ನು ತಂದಿದೆ. ಕಂಪನಿಯು ಈ ಮೈಕ್ರೋ ಎಸ್‌ಯು‌ವಿಯ ಬುಕ್ಕಿಂಗ್ ಗಳನ್ನು ಆರಂಭಿಸಿದೆ. ಈ ಮೈಕ್ರೋ ಎಸ್‌ಯು‌ವಿಯು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. Punch ಮೈಕ್ರೋ ಎಸ್‌ಯು‌ವಿಯು Tata Motors ಕಂಪನಿಯ ಮಾರಾಟವನ್ನು ಎಷ್ಟು ಪ್ರಮಾಣದಲ್ಲಿ ಹೆಚ್ಚಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಒಂದೇ ದಿನ ನೂರಕ್ಕೂ ಹೆಚ್ಚು ಕಾರುಗಳನ್ನು ವಿತರಿಸಿದ Tata Motors ಡೀಲರ್

ಈ ಮೈಕ್ರೋ ಎಸ್‌ಯು‌ವಿಯನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಥವಾ ಯಾವುದೇ ಅಧಿಕೃತ ಡೀಲರ್‌ಶಿಪ್‌ನಲ್ಲಿ ರೂ. 21,000 ಮುಂಗಡ ಹಣ ಪಾವತಿಸಿ ಬುಕ್ಕಿಂಗ್ ಮಾಡಬಹುದು. ಈ ಮೈಕ್ರೋ ಎಸ್‌ಯು‌ವಿಯನ್ನು ಬುಕ್ ಮಾಡಲು Tata Motors ಡೀಲರ್‌ಶಿಪ್‌ಗೆ ಭೇಟಿ ನೀಡಿದರೆ, ಹೊಸ Tata Punch ಅನ್ನು ನೋಡುವ ಅವಕಾಶ ಪಡೆಯಬಹುದು.

ಒಂದೇ ದಿನ ನೂರಕ್ಕೂ ಹೆಚ್ಚು ಕಾರುಗಳನ್ನು ವಿತರಿಸಿದ Tata Motors ಡೀಲರ್

ಇನ್ನು Tata Motors ಕಂಪನಿಯ ಮಾರಾಟದ ಬಗ್ಗೆ ಹೇಳುವುದಾದರೆ ಕಂಪನಿಯು ಕಳೆದ ತಿಂಗಳು ತನ್ನ ಪ್ರಯಾಣಿಕ ವಾಹನಗಳ ಮಾರಾಟದಲ್ಲಿ 20% ಗಿಂತ ಹೆಚ್ಚಿನ ಬೆಳವಣಿಗೆಯನ್ನು ದಾಖಲಿಸಿದೆ. ಕಂಪನಿಯು ಕಳೆದ ತಿಂಗಳು 25,730 ಯುನಿಟ್‌ ವಾಹನಗಳನ್ನು ಮಾರಾಟ ಮಾಡಿದ್ದರೆ ಕಳೆದ ವರ್ಷ ಇದೇ ಅವಧಿಯಲ್ಲಿ 21,199 ಯುನಿಟ್‌ ವಾಹನಗಳನ್ನು ಮಾರಾಟ ಮಾಡಿತ್ತು.

ಒಂದೇ ದಿನ ನೂರಕ್ಕೂ ಹೆಚ್ಚು ಕಾರುಗಳನ್ನು ವಿತರಿಸಿದ Tata Motors ಡೀಲರ್

Tata Motors ಕಂಪನಿಯ ಮಾರಾಟದ ಬೆಳವಣಿಗೆಯ ಪ್ರಮುಖ ಅಂಶವೆಂದರೆ ಎಲೆಕ್ಟ್ರಿಕ್ ವಾಹನಗಳ ಮಾರಾಟ ಎಂಬುದು ಗಮನಾರ್ಹ. ಚಾರ್ಜಿಂಗ್ ಮೂಲಸೌಕರ್ಯದಂತಹ ಸಮಸ್ಯೆಗಳ ನಡುವೆಯೂ ಕಳೆದ 12 ತಿಂಗಳಲ್ಲಿ Tata Motors ಕಂಪನಿಯ ಎಲೆಕ್ಟ್ರಿಕ್ ಕಾರುಗಳ ವ್ಯಾಪಾರವು ಸುಮಾರು ಮೂರು ಪಟ್ಟು ಹೆಚ್ಚಾಗಿದೆ. Tata Motors ಕಳೆದ ತಿಂಗಳು 1,078 ಇವಿಗಳನ್ನು ಮಾರಾಟ ಮಾಡಿದ್ದರೆ, 2020ರ ಸೆಪ್ಟೆಂಬರ್‌ನಲ್ಲಿ ಕೇವಲ 308 ಯುನಿಟ್ ಇವಿಗಳನ್ನು ಮಾರಾಟ ಮಾಡಿತ್ತು.

ಒಂದೇ ದಿನ ನೂರಕ್ಕೂ ಹೆಚ್ಚು ಕಾರುಗಳನ್ನು ವಿತರಿಸಿದ Tata Motors ಡೀಲರ್

Tata Motors ಕಂಪನಿಯು ಸದ್ಯಕ್ಕೆ ದೇಶಿಯ ಮಾರುಕಟ್ಟೆಯಲ್ಲಿ Nexon ಹಾಗೂ Tigor ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿದೆ. ಕಂಪನಿಯು ತನ್ನಉತ್ಪಾದನೆಯನ್ನು ವಿಸ್ತರಿಸಲು Ford ಕಂಪನಿಯ ಉತ್ಪಾದನಾ ಘಟಕವನ್ನು ಸ್ವಾಧೀನಪಡಿಸಿ ಕೊಳ್ಳಲು ಮುಂದಾಗಿದೆ. Ford ಕಂಪನಿಯು ಗುಜರಾತ್ ಹಾಗೂ ತಮಿಳುನಾಡಿನಲ್ಲಿ ತನ್ನ ಉತ್ಪಾದನಾ ಘಟಕಗಳನ್ನು ಹೊಂದಿದೆ.

ಒಂದೇ ದಿನ ನೂರಕ್ಕೂ ಹೆಚ್ಚು ಕಾರುಗಳನ್ನು ವಿತರಿಸಿದ Tata Motors ಡೀಲರ್

Ford ಕಂಪನಿಯು ಇತ್ತೀಚಿಗಷ್ಟೇ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿತ್ತು. ಮುಂದಿನ ವರ್ಷ ಮಾರ್ಚ್ ಅಂತ್ಯದ ವೇಳೆಗೆ Ford ಕಂಪನಿಯು ಭಾರತದಲ್ಲಿ ತನ್ನ ಎಲ್ಲಾ ಸ್ಥಳೀಯ ಉತ್ಪಾದನೆಯನ್ನು ನಿಲ್ಲಿಸಲಿದೆ. ಇನ್ನು Tata Motors ಕಂಪನಿಯ ವಾಹನಗಳ ಬಗ್ಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿತರಾಗುತ್ತಿದ್ದಾರೆ. ಈ ಕಾರಣಕ್ಕೆ ಒಂದೇ ದಿನ ಭಾರಿ ಸಂಖ್ಯೆಯಲ್ಲಿ ವಾಹನಗಳನ್ನು ವಿತರಿಸಲಾಗಿದೆ.

Tata Motors ಕಂಪನಿಯು ಶೀಘ್ರದಲ್ಲೇ ಬಿಡುಗಡೆಯಾಗಲಿರುವ ತನ್ನ ಬಹು ನಿರೀಕ್ಷಿತ Punch ಮೈಕ್ರೊ ಎಸ್‌ಯುವಿಯ ಎಲೆಕ್ಟ್ರಿಕ್ ಆವೃತ್ತಿಯನ್ನು ಅಭಿವೃದ್ಧಿ ಪಡಿಸಲು ಮುಂದಾಗಿದೆ. Tata Motors ಕಂಪನಿಯು ಹೊಸ Punch ಮೈಕ್ರೊ ಎಸ್‌ಯುವಿಯನ್ನು ಸದ್ಯಕ್ಕೆ ಪೆಟ್ರೋಲ್ ಮಾದರಿಯಲ್ಲಿ ಬಿಡುಗಡೆಗೊಳಿಸುತ್ತಿದೆ. ಮುಂಬರುವ ದಿನಗಳಲ್ಲಿ Punch ಮೈಕ್ರೊ ಎಸ್‌ಯುವಿಯನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸುವ ಬಗೆ ಅಧ್ಯಯನ ನಡೆಸುತ್ತಿದೆ.

ಒಂದೇ ದಿನ ನೂರಕ್ಕೂ ಹೆಚ್ಚು ಕಾರುಗಳನ್ನು ವಿತರಿಸಿದ Tata Motors ಡೀಲರ್

Tata Motors ಕಂಪನಿಯ Nexon ಇವಿ ಹಾಗೂ Tigor ಇವಿಗಳು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿವೆ. ಈ ಹಿನ್ನೆಲೆಯಲ್ಲಿ ಕಂಪನಿಯು ಬಜೆಟ್ ಬೆಲೆಯಲ್ಲಿ Punch ಇವಿ ಕಾರನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

ಚಿತ್ರ ಕೃಪೆ: ಮೊದಲ ಏಳು ಚಿತ್ರಗಳನ್ನು TheCarsShow by Arsh Jollyನಿಂದ ಪಡೆಯಲಾಗಿದ್ದು, ಉಳಿದ ಎರಡು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Tata motors dealership delivers more than 100 cars in a single day details
Story first published: Saturday, October 9, 2021, 18:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X