ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ Tata Nexon ಕಾರು

ಟಾಟಾ ಮೋಟಾರ್ಸ್ (Tata Motors) ಕಂಪನಿಯು ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ 33,926 ಯುನಿಟ್‌ ಕಾರುಗಳನ್ನು ಮಾರಾಟ ಮಾಡಿದೆ. ಕಂಪನಿಯು 2020ರ ಅಕ್ಟೋಬರ್ ನಲ್ಲಿ ಕೇವಲ 23,600 ಯುನಿಟ್ ಕಾರುಗಳನ್ನು ಮಾರಾಟ ಮಾಡಿತ್ತು. ಟಾಟಾ ಮೋಟಾರ್ಸ್ ಕಂಪನಿಯ ಮಾರಾಟವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 43.8% ನಷ್ಟು ಪ್ರಗತಿ ದಾಖಲಿಸಿದೆ.

ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ Tata Nexon ಕಾರು

ನೆಕ್ಸಾನ್ (Nexon) ಕಳೆದ ಅಕ್ಟೋಬರ್‌ನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಟಾಟಾ ಮೋಟಾರ್ಸ್ ಕಂಪನಿಯ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನೆಕ್ಸಾನ್ ಸಬ್ 4 ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ಟಾಟಾ ನೆಕ್ಸಾನ್ ಎಸ್‌ಯುವಿಯು ದೇಶಿಯ ಮಾರುಕಟ್ಟೆಯಲ್ಲಿ Maruti Suzuki Vitara Brezza, Kia Sonet, Hyundai Venue, Mahindra XUV 300, Nissan Magnite, Renault Kiger ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ Tata Nexon ಕಾರು

ಟಾಟಾ ನೆಕ್ಸಾನ್ ಗ್ಲೋಬಲ್ ಎನ್‌ಸಿಎಪಿ ಕ್ರಾಶ್ ಟೆಸ್ಟ್ ನಲ್ಲಿ 5 ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಟಾಟಾ ನೆಕ್ಸಾನ್ ಈ ಪ್ರಶಸ್ತಿ ಪಡೆದ ಮೊದಲ ಮೇಡ್ ಇನ್ ಇಂಡಿಯಾ ಕಾರು ಎಂಬುದು ಗಮನಾರ್ಹ. ಟಾಟಾ ಮೋಟಾರ್ಸ್ ಈ ವರ್ಷದ ಅಕ್ಟೋಬರ್‌ನಲ್ಲಿ 10,096 ಯುನಿಟ್ ನೆಕ್ಸಾನ್ ಕಾರುಗಳನ್ನು ಮಾರಾಟ ಮಾಡಿದೆ.

ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ Tata Nexon ಕಾರು

ಈ ಪ್ರಮಾಣವು 2020ರ ಅಕ್ಟೋಬರ್ ತಿಂಗಳಿನಲ್ಲಿ ಕೇವಲ 6,888 ಯುನಿಟ್'ಗಳಾಗಿತ್ತು. ನೆಕ್ಸಾನ್ ಮಾರಾಟ ಪ್ರಮಾಣವು ಕಳೆದ ವರ್ಷಕ್ಕಿಂತ ಈ ವರ್ಷ 46.5% ನಷ್ಟು ಹೆಚ್ಚಳವಾಗಿದೆ. ಹೊಸದಾಗಿ ಬಿಡುಗಡೆಯಾಗಿರುವ ಟಾಟಾ ಪಂಚ್ (Punch) ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಟಾಟಾ ಪಂಚ್ ಮೈಕ್ರೋ ಎಸ್‌ಯುವಿಯನ್ನು ಕಳೆದ ಅಕ್ಟೋಬರ್‌ನಲ್ಲಿ ಬಿಡುಗಡೆಗೊಳಿಸಲಾಗಿದೆ. ಬಿಡುಗಡೆಯಾದ ಮೊದಲ ತಿಂಗಳಲ್ಲೇ ಟಾಟಾ ಮೋಟಾರ್ಸ್ ಪಂಚ್ ಕಾರಿನ 8,453 ಯುನಿಟ್'ಗಳನ್ನು ಮಾರಾಟ ಮಾಡಿದೆ.

ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ Tata Nexon ಕಾರು

ಟಾಟಾ ಪಂಚ್ ಕಡಿಮೆ ಬೆಲೆಯನ್ನು ಹೊಂದಿದೆ. ಈ ಕಾರು ಸಹ ನೆಕ್ಸಾನ್ ಕಾರಿನಂತೆ ಗ್ಲೋಬಲ್ ಎನ್‌ಸಿಎಪಿ ಕ್ರಾಶ್ ಟೆಸ್ಟ್ ನಲ್ಲಿ 5 ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿದೆ. ಮುಂಬರುವ ದಿನಗಳಲ್ಲಿ ಪಂಚ್ ಅತಿ ಹೆಚ್ಚು ಮಾರಾಟವಾಗುವ ಟಾಟಾ ಕಾರು ಎಂಬ ಹೆಗ್ಗಳಿಕೆಯನ್ನು ಪಡೆಯುವ ಸಾಧ್ಯತೆಗಳಿವೆ. ಈ ಪಟ್ಟಿಯಲ್ಲಿ Tata Altroz ಕಾರು ಮೂರನೇ ಸ್ಥಾನದಲ್ಲಿದೆ.

ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ Tata Nexon ಕಾರು

ನೆಕ್ಸಾನ್ ಹಾಗೂ ಪಂಚ್ ಕಾರುಗಳಂತೆ Altroz ಕಾರು ಸಹ ಗ್ಲೋಬಲ್ ಎನ್‌ಸಿಎಪಿ ಕ್ರಾಶ್ ಟೆಸ್ಟ್ ನಲ್ಲಿ ಸುರಕ್ಷತೆಗಾಗಿ 5 ಸ್ಟಾರ್ ರೇಟಿಂಗ್ ಪಡೆದಿದೆ. ಈ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನದಲ್ಲಿರುವ ಕಾರುಗಳು ಸುರಕ್ಷತೆಗಾಗಿ 5 ಸ್ಟಾರ್ ರೇಟಿಂಗ್ ಪಡೆದಿವೆ. ಈ ಕಾರುಗಳ ಯಶಸ್ಸಿಗೆ ಇದು ಪ್ರಮುಖ ಕಾರಣವೆಂದು ಪರಿಗಣಿಸಲಾಗಿದೆ. ಆದರೆ Altroz ಕಾರಿನ ಮಾರಾಟವು ಅಕ್ಟೋಬರ್‌ನಲ್ಲಿ ಕುಸಿದಿದೆ.

ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ Tata Nexon ಕಾರು

2020ರ ಅಕ್ಟೋಬರ್'ನಲ್ಲಿ 6,730 ಯುನಿಟ್'ಗಳಿದ್ದ Altroz ಕಾರಿನ ಮಾರಾಟ ಪ್ರಮಾಣವು ಈ ಅಕ್ಟೋಬರ್‌ನಲ್ಲಿ 5,128 ಯುನಿಟ್'ಗಳಿಗೆ ಕುಸಿದಿದೆ. Altroz ಕಾರು ದೇಶಿಯ ಮಾರುಕಟ್ಟೆಯಲ್ಲಿ Maruti Suzuki Baleno ಹಾಗೂ Hyundai i 20 ಕಾರುಗಳಿಗೆ ಪೈಪೋಟಿ ನೀಡುತ್ತದೆ. ಈ ಪಟ್ಟಿಯಲ್ಲಿ Tata Tiago ನಾಲ್ಕನೇ ಸ್ಥಾನದಲ್ಲಿದೆ.

ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ Tata Nexon ಕಾರು

2020ರ ಅಕ್ಟೋಬರ್'ನಲ್ಲಿ 6,083 ಯುನಿಟ್'ಗಳಿದ್ದ Tiagoದ ಮಾರಾಟವು ಈ ಅಕ್ಟೋಬರ್‌ನಲ್ಲಿ 4,040 ಕ್ಕೆ ಇಳಿದಿದೆ. ಮಾರಾಟ ಪ್ರಮಾಣವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 33.5% ನಷ್ಟು ಕುಸಿದಿದೆ. ಈ ಪಟ್ಟಿಯಲ್ಲಿ ಟಾಟಾ ಹ್ಯಾರಿಯರ್ ಕಾರು ಐದನೇ ಸ್ಥಾನದಲ್ಲಿದೆ. ಟಾಟಾ ಮೋಟಾರ್ಸ್ ಈ ವರ್ಷದ ಅಕ್ಟೋಬರ್‌ನಲ್ಲಿ ಹ್ಯಾರಿಯರ್ ಕಾರಿನ 3,097 ಯುನಿಟ್'ಗಳನ್ನು ಮಾರಾಟ ಮಾಡಿದೆ. 2020ರ ಅಕ್ಟೋಬರ್'ನಲ್ಲಿ ಈ ಸಂಖ್ಯೆ ಕೇವಲ 2,398 ಯುನಿಟ್'ಗಳಾಗಿತ್ತು.

ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ Tata Nexon ಕಾರು

ಈ ಕಾರಿನ ಮಾರಾಟ ಪ್ರಮಾಣದಲ್ಲಿ 29% ನಷ್ಟು ಹೆಚ್ಚಳವಾಗಿದೆ. ಹೊಸ ಟಾಟಾ ಸಫಾರಿ ಈ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಟಾಟಾ ಮೋಟಾರ್ಸ್ ಈ ವರ್ಷದ ಅಕ್ಟೋಬರ್‌ನಲ್ಲಿ 1,735 ಯುನಿಟ್ ಸಫಾರಿ ಕಾರುಗಳನ್ನು ಮಾರಾಟ ಮಾಡಿದೆ. ಹೊಸ ಟಾಟಾ ಸಫಾರಿ ಕಾರ್ ಅನ್ನು ಈ ವರ್ಷ ಬಿಡುಗಡೆ ಮಾಡಲಾಗಿದೆ. Tata Tigor ಈ ಪಟ್ಟಿಯಲ್ಲಿ ಏಳನೇ ಹಾಗೂ ಕೊನೆಯ ಸ್ಥಾನದಲ್ಲಿದೆ. ಕಳೆದ ವರ್ಷ ಅಕ್ಟೋಬರ್'ನಲ್ಲಿ 1,501 ಯುನಿಟ್'ಗಳಿದ್ದ ಈ ಕಾರಿನ ಮಾರಾಟ ಪ್ರಮಾಣವು ಈ ವರ್ಷ 1,377 ಯುನಿಟ್'ಗಳಿಗೆ ಇಳಿದಿದೆ. ಈ ಕಾರಿನ ಮಾರಾಟವು 8.2% ನಷ್ಟು ಕಡಿಮೆಯಾಗಿದೆ.

ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ Tata Nexon ಕಾರು

ವಿಶ್ವದ ಅತಿ ದೊಡ್ಡ ಕಾರು ತಯಾರಕ ಕಂಪನಿಗಳಲ್ಲಿ ಒಂದಾದ ಟಾಟಾ ಮೋಟಾರ್ಸ್ (Tata Motors) ತನ್ನ ವಾಹನಗಳ ಕಾಯುವ ಅವಧಿ ಎರಡು ತಿಂಗಳಿಂದ ಆರು ತಿಂಗಳವರೆಗೆ ಇರಲಿದೆ ಎಂದು ಹೇಳಿದೆ. ಚಿಪ್ ಗಳಿಗೆ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಆರು ತಿಂಗಳವರೆಗೆ ಹಾಗೂ ಇತರ ವಾಹನಗಳಿಗೆ ಎರಡು ತಿಂಗಳವರೆಗೆ ಕಾಯುವ ಅವಧಿ ಇರಲಿದೆ ಎಂದು ಟಾಟಾ ಮೋಟಾರ್ಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ Tata Nexon ಕಾರು

ಇದರಿಂದ ಈಗ ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರುಗಳನ್ನು ಬುಕ್ ಮಾಡುವ ಗ್ರಾಹಕರು ಅವುಗಳ ವಿತರಣೆ ಪಡೆಯಲು ಆರು ತಿಂಗಳವರೆಗೆ ಕಾಯಬೇಕಾಗುತ್ತದೆ. ಅದೇ ರೀತಿ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಹೊಂದಿರುವ ಟಾಟಾ ಮೋಟಾರ್ಸ್ ಕಾರುಗಳನ್ನು ಬುಕ್ ಮಾಡಿದರೆ ಅವುಗಳ ವಿತರಣೆ ಪಡೆಯಲು ಎರಡು ತಿಂಗಳವರೆಗೆ ಕಾಯಬೇಕಾಗುತ್ತದೆ. ವಿಶ್ವದಾದ್ಯಂತ ವಾಹನ ತಯಾರಕ ಕಂಪನಿಗಳಿಗೆ ಚಿಪ್‌ಗಳ ಕೊರತೆ ಎದುರಾಗಿದೆ.

ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ Tata Nexon ಕಾರು

ಇದರಿಂದ ವಾಹನ ತಯಾರಕ ಕಂಪನಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಭಾರತೀಯ ವಾಹನ ತಯಾರಕ ಕಂಪನಿಗಳು ಸಹ ಇದಕ್ಕೆ ಹೊರತಾಗಿಲ್ಲ. ಇತರ ಕಾರು ತಯಾರಕ ಕಂಪನಿಗಳಂತೆ ಟಾಟಾ ಮೋಟಾರ್ಸ್ ಸಹ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಟಾಟಾ ಮೋಟಾರ್ಸ್ ಈ ಪ್ರಕಟಣೆಯನ್ನು ಹೊರಡಿಸಿದೆ. ಚಿಪ್‌ಗಳ ಕೊರತೆಯಿಂದ ಹೊಸ ವಾಹನಗಳ ಉತ್ಪಾದನೆಯನ್ನು ಮುಂದುವರಿಸಲು ಸಾಧ್ಯವಾಗದೇ ವಾಹನ ತಯಾರಕ ಕಂಪನಿಗಳು ತತ್ತರಿಸುತ್ತಿವೆ.

ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ Tata Nexon ಕಾರು

ಇದರಿಂದ ಪ್ರೀ ಬುಕ್ಕಿಂಗ್ ಮಾಡಿರುವ ಗ್ರಾಹಕರಿಗೆ ಸಕಾಲದಲ್ಲಿ ಹೊಸ ವಾಹನಗಳನ್ನು ತಲುಪಿಸಲು ವಿಳಂಬವಾಗುತ್ತಿದೆ. ಚಿಪ್ ಕೊರತೆಯು ಕಂಪನಿಯ ಐಷಾರಾಮಿ ಜಾಗ್ವಾರ್ ಲ್ಯಾಂಡ್ ರೋವರ್‌ ಕಾರಿನ ಸುಮಾರು 1,25,000 ಆರ್ಡರ್ ಮೇಲೆ ಪರಿಣಾಮ ಬೀರಿದೆ ಎಂದು ಟಾಟಾ ಮೋಟಾರ್ಸ್ ಹೇಳಿದೆ. ಕಂಪನಿಯು ಸದ್ಯಕ್ಕೆ ಲಾಭದಾಯಕ ವಾಹನಗಳ ಮೇಲೆ ಹೆಚ್ಚು ಗಮನ ಹರಿಸಿದೆ.

ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ Tata Nexon ಕಾರು

ಇದೇ ವೇಳೆ ಕಾಯುವ ಸಮಯವನ್ನು ಕಡಿಮೆ ಮಾಡಲು ತನ್ನ ಕೈಲಾದ ಪ್ರಯತ್ನವನ್ನು ಮಾಡುತ್ತಿರುವುದಾಗಿ ಕಂಪನಿ ಹೇಳಿದೆ. ಈ ಜಾಗತಿಕ ಸಮಸ್ಯೆಯು ಇನ್ನೂ ಹಲವು ದಿನಗಳು ಮುಂದುವರೆಯುವ ಸಾಧ್ಯತೆಗಳಿವೆ. ಟಾಟಾ ಮೋಟಾರ್ಸ್ ಕಂಪನಿಯು ಭಾರತದಲ್ಲಿ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತದೆ. ಒಟ್ಟಾರೆ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಕಂಪನಿಯು 71% ನಷ್ಟು ಪಾಲನ್ನು ಹೊಂದಿದೆ.

ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ Tata Nexon ಕಾರು

ಈ ಪ್ರಮಾಣವು ಟಾಟಾ ಮೋಟಾರ್ಸ್ ಕಂಪನಿಯ ಎಲೆಕ್ಟ್ರಿಕಲ್ ಕಾರಿಗಳಿಗಿರುವ ಬೇಡಿಕೆಯನ್ನು ಪ್ರತಿಬಿಂಬಿಸುತ್ತದೆ. ನೆಕ್ಸಾನ್ (Nexon)ಇವಿ ಹಾಗೂ Tigor ಇವಿ ಟಾಟಾ ಮೋಟಾರ್ಸ್‌ ಕಂಪನಿಯ ಅತ್ಯಂತ ಜನಪ್ರಿಯ ಎಲೆಕ್ಟ್ರಿಕ್ ಕಾರುಗಳಾಗಿವೆ. ಇವುಗಳಲ್ಲಿ ಟಿಗೋರ್ ಇವಿ ಕಡಿಮೆ ಬೆಲೆಯನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಕಾರಿನ ಬಿಡುಗಡೆಗೂ ಮುನ್ನ ನೆಕ್ಸಾನ್ ಇವಿ ದೇಶದ ಅಗ್ಗದ ಎಲೆಕ್ಟ್ರಿಕ್ ಕಾರ್ ಆಗಿತ್ತು.

Most Read Articles

Kannada
English summary
Tata nexon compact suv sales increases in october 2021 details
Story first published: Saturday, November 13, 2021, 17:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X