Just In
Don't Miss!
- News
ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ದರ: ಹೊಸ ದಾಖಲೆ ಸೃಷ್ಟಿ
- Sports
'ಭಾರತೀಯರಿಗೆ ಹೋಲಿಸಿದರೆ ಯುವ ಆಸೀಸ್ ಇನ್ನೂ ಪ್ರೈಮರಿ ಶಾಲೆಯಲ್ಲಿದೆ'
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಟಾಟಾ ಸಫಾರಿ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಹೊಸ ಗ್ರಾವಿಟಾಸ್ ಎಸ್‍ಯುವಿ
ಟಾಟಾ ಮೋಟಾರ್ಸ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ 7-ಸೀಟರ್ ಎಸ್‍ಯುವಿಗಾಗಿ ಐಕಾನಿಕ್ 'ಸಫಾರಿ' ಹೆಸರನ್ನು ಇಡಲಿದೆ. ಟಾಟಾ ಮೊದಲ ಬಾರಿಗೆ ಈ 7-ಸೀಟರ್ ಎಸ್‍ಯುವಿಯನ್ನು ದೆಹಲಿಯಲ್ಲಿ ನಡೆದ 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿತು.

ಆರಂಭದಲ್ಲಿ 7-ಸೀಟರ್ ಎಸ್‍ಯುವಿಯನ್ನು ಗ್ರಾವಿಟಾಸ್ ಎಂದು ಕರೆಯಲಾಗುತ್ತಿತ್ತು. ಆದರೆ ಎಸ್‌ಯುವಿಗೆ ಸಫಾರಿ ಎಂದು ಹೆಸರಿಸಲು ಕಂಪನಿ ನಿರ್ಧರಿಸಿದೆ. ಕಂಪನಿಯು ಈ ತಿಂಗಳ ಅಂತ್ಯದಲ್ಲಿ ಸಫಾರಿ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಿದೆ. ಈ ಹೊಸ ಎಸ್‍ಯುವಿಯು ಭಾರತದಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಆದರೆ ಈ ಹೊಸ ಎಸ್‍ಯುವಿಗೆ ಐಕಾನಿಕ್ ಆದ ಸಫಾರಿ ಹೆಸರನ್ನು ನೀಡವ ಮೂಲಕ ಕುತೂಹಲವನ್ನು ಮೂಡಿಸಿದೆ.

ಕಂಪನಿಯ ಪ್ರಕಾರ, ಭಾರತದಲ್ಲಿ ಟಾಟಾ ಸಫಾರಿ ಲೈಫ್ ಸ್ಟೈಲ್ ಎಸ್‍ಯುವಿಯಾಗಿರಲಿದೆ ಮತ್ತು ಈ ವಿಭಾಗದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಬಹುದು. ಸಫಾರಿ ಭಾರತದಲ್ಲಿ ಎರಡು ದಶಕಗಳವರೆಗೆ ಮಾರಾಟವಾದ ಎಸ್‍ಯುವಿಯಾಗಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಇದೀಗ ಹೊಸ ರೂಪಾತಾಳಿ ಮತ್ತೆ ಈ ಐಕಾನಿಕ್ ಸಫಾರಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಗ್ರಾಹಕರ ಗಮನಸೆಳೆಯಲು ಸಫಾರಿ ಎಸ್‍ಯುವಿಯ ಟ್ಯಾಗ್ ಲೈನ್ ‘ರಿಕ್ಲೈಮ್ ದೇರ್ ಲೈಫ್' ತರಲು ಕಂಪನಿಯು ಸಜ್ಜಾಗಿದೆ. ಹೊಸ ಸಫಾರಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿರುತ್ತದೆ.

ಲ್ಯಾಂಡ್ ರೋವರ್‌ನಿಂದ ಹೆಸರಾಂತ ಡಿ8 ಪ್ಲಾಟ್‌ಫಾರ್ಮ್‌ನಿಂದ ಪಡೆದ ಒಮೆಗಾರ್ಕ್ ಪ್ಲಾಟ್‌ಫಾರ್ಮ್ ಜೊತೆಗೆ ಎಸ್‌ಯುವಿ ಇಂಪ್ಯಾಕ್ಟ್ 2.0 ವಿನ್ಯಾಸ ಶೈಲಿಯನ್ನು ಹೊಂದಿರುತ್ತದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಟಾಟಾ ಮೋಟಾರ್ಸ್‌ನ ಪ್ಯಾಸೆಂಜರ್ ವೆಹಿಕಲ್ಸ್ ಬಿಸಿನೆಸ್ ಯುನಿಟ್ ವಿಭಾಗದ ಅಧ್ಯಕ್ಷ ಶೈಲೇಶ್ ಚಂದ್ರ ಅವರು ಮಾತನಾಡಿ, ಸಫಾರಿ ಎಸ್‍ಯುವಿಯನ್ನು ಮತ್ತೆ ಪರಿಚಯಿಸಲು ನಾವು ಹೆಮ್ಮೆಪಡುತ್ತೇವೆ ಮತ್ತು ಸಂತೋಷಪಡುತ್ತೇವೆ. ಜನಪ್ರಿಯತೆ ಮತ್ತು ಜನಮನ್ನಣೆಯನ್ನು ಪಡೆದ ಬ್ರ್ಯಾಂಡ್ ಸಫಾರಿ ಆಗಿದೆ. ಭಾರತದಲ್ಲಿ ಎರಡು ದಶಕಗಳ ಬಹುಬೇಡಿಕೆಯನ್ನು ಹೊಂದಿದ್ದ ಎಸ್‍ಯುವಿ ಸಫಾರಿಯಾಗಿದೆ.

ಸಫಾರಿ ತನ್ನ ಹೊಸ ಅವತಾರದಲ್ಲಿ, ಅನನ್ಯ ಅನುಭವ ಮತ್ತು ಅಡ್ವೆಂಚರ್ ಪ್ರಿಯರನ್ನು ಸೆಳೆಯುವಂತಿರುತ್ತದೆ. ಇದರ ವಿನ್ಯಾಸ, ಕಾರ್ಯಕ್ಷಮತೆ, ಫೀಚರ್ ಗಳು ಮತ್ತು ದೀರ್ಘಕಾಲೀನ ನಿರ್ಮಾಣ ಗುಣಮಟ್ಟ ಹೊಸ ಎಸ್‍ಯುವಿಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಹೇಳಿದರು.
MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಟಾಟಾ ಸಫಾರಿ 2.0-ಲೀಟರ್, ನಾಲ್ಕು ಸಿಲಿಂಡರ್, ‘ಕ್ರಯೋಟೆಕ್' ಡೀಸೆಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 168 ಬಿಹೆಚ್‌ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಸಫಾರಿ ಎಸ್‍ಯುವಿಗಾಗಿ ಇದೇ ತಿಂಗಳಲ್ಲಿ ಬುಕ್ಕಿಂಗ್ ಅನ್ನು ಪ್ರಾರಂಭಿಸಲಿದೆ ಎಂದು ಟಾಟಾ ಖಚಿತಪಡಿಸಿದೆ. ಈ ತಿಂಗಳ ಅಂತ್ಯದಲ್ಲಿ ಈ ಹೊಸ ಟಾಟಾ ಸಫಾರಿ ಎಸ್‍ಯುವಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಈ ಹೊಸ ಟಾಟಾ ಸಫಾರಿ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲವನ್ನು ಮೂಡಿಸಬಹುದು. ಈಗಗಾಲೇ ಟಾಟಾ ಕಂಪನಿಯು ಹೊಸ ಎಸ್‍ಯುವಿಯನ್ನು ಸಫಾರಿ ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಲಿದೆ ಎಂದು ಘೋಷಿಸಿದಾಗಲೇ ಸಾಕಷ್ಟು ಕುತೂಹಲ ಮತ್ತು ಸಂಚಲನವನ್ನು ಸೃಷ್ಟಿಸಿದೆ.