ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿ ಶುರುವಾಗಿದ್ದು ಹೀಗೆ...

ಮಹೀಂದ್ರಾ ಅಂಡ್ ಮಹೀಂದ್ರಾ (Mahindra and Mahindra)ಭಾರತದ ಪ್ರಮುಖ ಕಾರು ತಯಾರಕ ಕಂಪನಿಗಳಲ್ಲಿ ಒಂದಾಗಿದೆ. ಕಂಪನಿಯು ಹಲವಾರು ದಶಕಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ವಹಿವಾಟು ನಡೆಸುತ್ತಿದೆ. ಕಂಪನಿಯು ದೇಶದಲ್ಲಿ, ವಾಹನ ಉದ್ಯಮದಲ್ಲಿ ಮಾತ್ರವಲ್ಲದೇ ಹಲವಾರು ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದೆ. ಕಂಪನಿಯು ಭಾರತದಲ್ಲಿ ವಾಹನ ಉದ್ಯಮದಲ್ಲಿರುವ ಜನಪ್ರಿಯ ಕಂಪನಿಗಳಲ್ಲಿ ಒಂದಾಗಿದೆ.

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿ ಶುರುವಾಗಿದ್ದು ಹೀಗೆ...

ಮಹೀಂದ್ರಾ ಕಂಪನಿಯ XUV 300, XUV 500, Thar ಹಾಗೂ ಕೆಲವು ತಿಂಗಳ ಹಿಂದಷ್ಟೇ ಬಿಡುಗಡೆಯಾದ XUV 700 ಸೇರಿದಂತೆ ಹಲವು ಕಾರುಗಳು ಭಾರತದಲ್ಲಿಜನಪ್ರಿಯತೆಯನ್ನು ಪಡೆದಿವೆ. ಮಹೀಂದ್ರಾ ಎಂದಾಕ್ಷಣ ಜನರಿಗೆ ಕಾರುಗಳ ಬಗ್ಗೆ ನೆನಪಾಗುತ್ತಾದೆ. ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಬಗ್ಗೆ ಅನೇಕ ಜನರಿಗೆ ತಿಳಿದಿಲ್ಲದ ಕೆಲವು ಪ್ರಮುಖ ಸಂಗತಿಗಳನ್ನು ಈ ಲೇಖನದಲ್ಲಿ ನೋಡೋಣ.

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿ ಶುರುವಾಗಿದ್ದು ಹೀಗೆ...

ಜೆ. ಸಿ ಮಹೀಂದ್ರಾ

ಮಹೀಂದ್ರಾ ಕಂಪನಿಯನ್ನು ಮೊದಲು ಲೋಹದ ವ್ಯಾಪಾರ ಕಂಪನಿಯಾಗಿ ಆರಂಭಿಸಲಾಯಿತು. ಮಹೀಂದ್ರಾ ಗ್ರೂಪ್ ಈ ಉದ್ಯಮವನ್ನು 1945 ರಲ್ಲಿ ಆರಂಭಿಸಿತು. ಮಹೀಂದ್ರಾ ಸಹೋದರರು ಹಾಗೂ ಗುಲಾಮ್ ಮೊಹಮ್ಮದ್ ಅವರ ಸಹಯೋಗದಲ್ಲಿ ಕಂಪನಿಯನ್ನು ಆರಂಭಿಸಲಾಯಿತು. ಕಂಪನಿಯ ಮೂಲ ಹೆಸರು ಮಹೀಂದ್ರಾ ಅಂಡ್ ಮೊಹಮ್ಮದ್ ಎಂದಾಗಿತ್ತು.

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿ ಶುರುವಾಗಿದ್ದು ಹೀಗೆ...

ಕೆ. ಸಿ ಮಹೀಂದ್ರಾ

1948 ರಲ್ಲಿ ಮೊಹಮ್ಮದ್ ಪಾಕಿಸ್ತಾನದ ಮೊದಲ ಪ್ರಧಾನ ಮಂತ್ರಿಯಾದರು. ಇದರಿಂದ ಮಹೀಂದ್ರಾ ಸಹೋದರರು ಮಾತ್ರ ಈ ಕಂಪನಿಯನ್ನು ಮುನ್ನೆಡುಸುವ ಪರಿಸ್ಥಿತಿ ನಿರ್ಮಾಣವಾಯಿತು. ನಂತರ ಕಂಪನಿಯನ್ನು ಮಹೀಂದ್ರಾ ಅಂಡ್ ಮಹೀಂದ್ರಾ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಯಿತು.

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿ ಶುರುವಾಗಿದ್ದು ಹೀಗೆ...

ಆನಂದ್ ಮಹೀಂದ್ರಾ

ವಾಹನ ಕ್ಷೇತ್ರಕ್ಕೆ ಕಾಲಿಟ್ಟ ಮಹೀಂದ್ರಾ

ಈ ಬದಲಾವಣೆಗಳ ನಂತರ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಅತಿ ದೊಡ್ಡ ಐತಿಹಾಸಿಕ ದಾಖಲೆಯನ್ನು ಮಾಡಿತು. ಕಂಪನಿಯು ವಾಹನ ಉದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಕಂಪನಿಯು 1954 ರಲ್ಲಿ ತನ್ನ ವಾಹನ ಉದ್ಯಮವನ್ನು ಆರಂಭಿಸಿತು. ಕಂಪನಿಯು ವಿಲ್ಲಿಸ್ ಓವರ್‌ಲ್ಯಾಂಡ್ ಕಾರ್ಪೊರೇಶನ್ ನೊಂದಿಗೆ ವಿಲೀನವಾಗುವ ಮೂಲಕ ಜೀಪ್ ಮಾದರಿಯ ವಾಹನವನ್ನು ಅಭಿವೃದ್ಧಿಪಡಿಸಿತು.

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿ ಶುರುವಾಗಿದ್ದು ಹೀಗೆ...

ಇದು ವಾಹನ ಉದ್ಯಮದಲ್ಲಿ ಕಂಪನಿಯ ಮೊದಲ ಹೆಜ್ಜೆ ಗುರುತಾಗಿದೆ. ಅಂದಿನಿಂದ ಇಂದಿನವರೆಗೂ ಕಂಪನಿಯು ವಾಹನ ಉದ್ಯಮದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. XUV 700 ಕಂಪನಿಯ ಇತ್ತೀಚಿನ ಕಾರು ಮಾದರಿಯಾಗಿದೆ. ಕಂಪನಿಯು ಮುಂಬರುವ ದಿನಗಳಲ್ಲಿ ಇನ್ನೂ ಹಲವು ಹೊಸ ವಾಹನಗಳನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸುತ್ತಿದೆ. ಇದರ ಜೊತೆಗೆ ಕಂಪನಿಯು ಮಿಲಿಟರಿ ಬಳಕೆಗಾಗಿ, ಕೃಷಿ ಕೆಲಸಕ್ಕಾಗಿ ಹಾಗೂ ವಿಮಾನ, ಹೆಲಿಕಾಪ್ಟರ್‌ಗಳ ಬಿಡಿ ಭಾಗಳನ್ನು ಉತ್ಪಾದಿಸುತ್ತದೆ. ಕಂಪನಿಯ ಕೆಲವು ವಾಹನಗಳು ಕೇಂದ್ರ ಸರ್ಕಾರದಿಂದ ಸ್ವೀಕರಿಸಲ್ಪಟ್ಟಿವೆ ಎಂಬುದು ಗಮನಾರ್ಹ.

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿ ಶುರುವಾಗಿದ್ದು ಹೀಗೆ...

CRDe ಎಂಜಿನ್ ಪರಿಚಯಿಸಿದ ಮೊದಲ ಕಂಪನಿ:

ಮಹೀಂದ್ರಾ ಕಾಮನ್ ರೈಲ್ ಡೀಸೆಲ್ ಎಂಜಿನ್ ಅಥವಾ CRDe ಎಂದು ಕರೆಯಲ್ಪಡುವ ಮೋಟಾರ್ ಅನ್ನು ಭಾರತದಲ್ಲಿ ಮೊದಲು ಪರಿಚಯಿಸಿದ ಕಂಪನಿ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಈ ಎಂಜಿನ್ ಅನ್ನು ದೇಶದಲ್ಲಿ ಮೊದಲ ಬಾರಿಗೆ 2005 ರಲ್ಲಿ ಪರಿಚಯಿಸಲಾಯಿತು. ಈ ಎಂಜಿನ್ ಅನ್ನು ಸ್ಕಾರ್ಪಿಯೋ ಕಾರಿನಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿತ್ತು. ಸ್ಕಾರ್ಪಿಯೊ ಕಾರ್ ಅನ್ನು ಭಾರತದಲ್ಲಿ ಜನಪ್ರಿಯ ವಾಹನವನ್ನಾಗಿ ಮಾಡಲು ಈ ಎಂಜಿನ್ ನೆರವಾಗಿದೆ.

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿ ಶುರುವಾಗಿದ್ದು ಹೀಗೆ...

ಮಹೀಂದ್ರಾ ಕಂಪನಿಯು ತನ್ನ ಆವಿಷ್ಕಾರಗಳಿಗೆ ಹೆಸರುವಾಸಿಯಾಗಿದೆ. ಕಂಪನಿಯು ಹೊಸತನವನ್ನು ನೀಡಲು ಹಿಂಜರಿಯುವುದಿಲ್ಲ. ಮಹೀಂದ್ರಾ ಕಂಪನಿಯು ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಕಂಪನಿಯು 2010 ರಲ್ಲಿ ರೇವಾ ಎಲೆಕ್ಟ್ರಿಕ್‌ನಲ್ಲಿ 55% ನಷ್ಟು ಪಾಲನ್ನು ಸ್ವಾಧೀನಪಡಿಸಿಕೊಂಡಿತು. ಇದರ ನಂತರ ಕಂಪನಿಯು ಭಾರತದಲ್ಲಿ ಅತಿ ಚಿಕ್ಕ ರೇವಾ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆ ಮಾಡಿದೆ.

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿ ಶುರುವಾಗಿದ್ದು ಹೀಗೆ...

ನಂತರದ ದಿನಗಳಲ್ಲಿ ಕಂಪನಿಯು ರೇವಾ ಎಲೆಕ್ಟ್ರಿಕ್‌ನಲ್ಲಿ ಸಂಪೂರ್ಣ ಅಂದರೆ 100% ನಷ್ಟು ಪಾಲನ್ನು ಸ್ವಾಧೀನಪಡಿಸಿಕೊಂಡಿತು. ನಂತರ ಈ ಎಲೆಕ್ಟ್ರಿಕ್ ಕಾರಿನ ಹೆಸರನ್ನು ಮಹೀಂದ್ರಾ ಎಲೆಕ್ಟ್ರಿಕ್ ಎಂದು ಬದಲಾಯಿಸಲಾಯಿತು.

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿ ಶುರುವಾಗಿದ್ದು ಹೀಗೆ...

ಮಹೀಂದ್ರಾ ಕಂಪನಿಯ ಕಾರುಗಳು ಸುರಕ್ಷತೆ ಹಾಗೂ ಅತ್ಯಾಧುನಿಕ ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿವೆ. ಕಂಪನಿಯ ಸುರಕ್ಷತೆಗೆ ಅತ್ಯುತ್ತಮ ಉದಾಹರಣೆಯೆಂದರೆ XUV 300 ಕಾರು. ಈ ಕಾರು ಗ್ಲೋಬಲ್ ಎನ್‌ಸಿಎಪಿ ಸಿಸ್ಟಂ ನಡೆಸುವ ಕ್ರಾಶ್ ಟೆಸ್ಟ್ ನಲ್ಲಿ ಸುರಕ್ಷತೆಗಾಗಿ ಐದು ಸ್ಟಾರ್ ರೇಟಿಂಗ್‌ ಪಡೆದಿದೆ. ಈ ಕಾರು ಐದು ಸಂಪೂರ್ಣ ಅಂಕಗಳನ್ನು ಪಡೆದಿದೆ. ಈ ಕಾರು ದೇಶದಲ್ಲಿ ಹೆಚ್ಚು ಮಾರಾಟವಾಗುವ ಎಸ್‌ಯುವಿಗಳಲ್ಲಿ ಒಂದಾಗಿದೆ.

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿ ಶುರುವಾಗಿದ್ದು ಹೀಗೆ...

ಕಳೆದ ತಿಂಗಳು 4,006 ಯುನಿಟ್‌ ಮಾರಾಟದೊಂದಿಗೆ ಈ ಕಾರು ದೇಶದಲ್ಲಿ ಹೆಚ್ಚು ಮಾರಾಟವಾದ ಎಸ್‌ಯುವಿಗಳಲ್ಲಿ ಏಳನೇ ಸ್ಥಾನ ಪಡೆದಿತ್ತು. ಇನ್ನು ಕಂಪನಿಯ ಇತ್ತೀಚಿನ XUV 700 ಎಸ್‌ಯುವಿಯು ಹಲವಾರು ಅತ್ಯುತ್ತಮ ತಂತ್ರಜ್ಞಾನಗಳನ್ನು ಹೊಂದಿದೆ. ಮಹೀಂದ್ರಾ ಕಂಪನಿಯು ಈ ಎಸ್‌ಯುವಿಯಲ್ಲಿ ಸ್ಮಾರ್ಟ್ ಹ್ಯಾಂಡ್ ಗ್ರಿಪ್‌ಗಳಂತಹ ಹಲವಾರು ಅತ್ಯಾಧುನಿಕ ಫೀಚರ್ ಗಳನ್ನು ನೀಡಿದೆ. ಈ ಎಸ್‌ಯುವಿಯು ಬುಕ್ಕಿಂಗ್ ಪ್ರಕ್ರಿಯೆ ಆರಂಭವಾದ ಎರಡು ದಿನಗಳಲ್ಲಿ 50,000 ಯುನಿಟ್‌ ಬುಕ್ಕಿಂಗ್ ಗಳನ್ನು ಪಡೆದಿತ್ತು.

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿ ಶುರುವಾಗಿದ್ದು ಹೀಗೆ...

ಇನ್ನು ಭಾರತದ ಪ್ರಮುಖ ಮಲ್ಟಿ ಬ್ರಾಂಡ್ ಪೂರ್ವ ಸ್ವಾಮ್ಯದ ಕಾರು ರಿಟೇಲ್ ಕಂಪನಿಯಾದ ಮಹೀಂದ್ರಾ ಫಸ್ಟ್ ಚಾಯ್ಸ್ ವ್ಹೀಲ್ಸ್ ಲಿಮಿಟೆಡ್ (MFCWL), ಬೆಂಗಳೂರು ನಗರದಲ್ಲಿ ಎರಡು ಹೊಸ ಮಳಿಗೆಗಳನ್ನು ತೆರೆದಿದೆ. ಕಂಪನಿಯು ತುಮಕೂರು ರಸ್ತೆಯಲ್ಲಿರುವ ಎಂಎಸ್‌ಆರ್ ಲೇಔಟ್ ಹಾಗೂ ಸರ್ಜಾಪುರ ರಸ್ತೆಯಲ್ಲಿ ಕ್ರಮವಾಗಿ ಜಿಪ್ಪಿ ಆಟೋಮಾರ್ಟ್ ಹಾಗೂ ರಿನ್ಯೂ 4 ಯು ಆಟೋಮೊಬೈಲ್ಸ್ ಎಂಬ ಎರಡು ಹೊಸ ಮಳಿಗೆಗಳನ್ನು ತೆರೆದಿದೆ.

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿ ಶುರುವಾಗಿದ್ದು ಹೀಗೆ...

ಈ ಮಳಿಗೆಗಳನ್ನು ತೆರೆಯುವುದರೊಂದಿಗೆ, Mahindra First Choice Wheels Ltd ಈಗ ಬೆಂಗಳೂರಿನಲ್ಲಿ ಉಪಯೋಗಿಸಿದ ಕಾರುಗಳನ್ನು ಖರೀದಿಸಲು ಹಾಗೂಮಾರಾಟ ಮಾಡಲು ಹೆಚ್ಚು ಸಂಪರ್ಕಗಳನ್ನು ಒದಗಿಸುತ್ತದೆ. MFCWL ರಾಜ್ಯದಲ್ಲಿ ಒಟ್ಟು 67 ಮಳಿಗೆಗಳನ್ನು ಹೊಂದಿದೆ. ಮಹೀಂದ್ರಾ ಫಸ್ಟ್ ಚಾಯ್ಸ್ ಬಳಸಿದ ಕಾರು ಮಾರುಕಟ್ಟೆ ನಾಯಕನಾಗಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಲು ಸಿದ್ಧವಾಗುತ್ತಿದೆ.

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿ ಶುರುವಾಗಿದ್ದು ಹೀಗೆ...

ಹೊಸ ಮಳಿಗೆಯ ಉದ್ಘಾಟನೆಯ ಬಗ್ಗೆ ಮಹೀಂದ್ರಾ ಫಸ್ಟ್ ಚಾಯ್ಸ್ ವೀಲ್ಸ್ ಲಿಮಿಟೆಡ್‌ನ ಸಿಇಒ ಹಾಗೂ ಎಂಡಿ ಅಶುತೋಷ್ ಪಾಂಡೆ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಹಾಗೂ ಅಕ್ಕ ಪಕ್ಕದ ಪ್ರದೇಶದಲ್ಲಿ ನಮ್ಮ ನೆಟ್‌ವರ್ಕ್ ಅನ್ನು ವಿಸ್ತರಿಸಲು ನಾವು ಸಂತೋಷಪಡುತ್ತೇವೆ. ನಮ್ಮ ಆನ್‌ಲೈನ್ ಬಳಸಿದ ಕಾರ್ ಬುಕಿಂಗ್ ಪೋರ್ಟಲ್‌ನ ಅನುಕೂಲಕ್ಕಾಗಿ ಹೊಸ ಮಳಿಗೆಗಳನ್ನು ತೆರೆಯಲಾಗಿದೆ ಎಂದು ಅವರು ಹೇಳಿದರು.

Most Read Articles

Kannada
English summary
Things behind mahindra and mahindra company operations details
Story first published: Monday, December 13, 2021, 12:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X