ಕಾರುಗಳ ರಿ ಸೇಲ್ ವ್ಯಾಲ್ಯು ಹೆಚ್ಚಿಸಲು ನೆರವಾಗುವ ಸಂಗತಿಗಳಿವು

ಸದ್ಯ ಬಳಸುತ್ತಿರುವ ಕಾರುಗಳನ್ನು ಮರು ಮಾರಾಟ ಮಾಡಬೇಕು ಎಂದು ಕೊಳ್ಳುವವರು ಮುಂದೊಂದು ದಿನ ಆ ಕಾರಿಗೆ ಒಳ್ಳೆಯ ರಿ ಸೇಲ್ ವ್ಯಾಲ್ಯು ಎಂದು ಬಯಸುತ್ತಾರೆ. ಆದರೆ ವಾಸ್ತವಕ್ಕೆ ಬಂದಾಗ ಎಲ್ಲಾ ಉಲ್ಟಾ ಆಗುತ್ತದೆ. ಹಳೆ ಕಾರು ಖರೀದಿಸುವವರು ಆ ಕಾರುಗಳನ್ನು ನಿರೀಕ್ಷೆಗಿಂತ ಕಡಿಮೆ ಬೆಲೆಗೆ ಕೇಳುತ್ತಾರೆ. ಇದಕ್ಕೆ ಪ್ರಮುಖ ಕಾರಣ ಕಾರುಗಳನ್ನು ಸರಿಯಾಗಿ ನಿರ್ವಹಿಸದೇ ಇರುವುದು.

ಕಾರುಗಳ ರಿ ಸೇಲ್ ವ್ಯಾಲ್ಯು ಹೆಚ್ಚಿಸುವ ಸಂಗತಿಗಳಿವು

ಕೆಲವು ವಿಧಾನಗಳ ಮೂಲಕ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಉತ್ತಮವಾಗಿ ನಿರ್ವಹಿಸಬಹುದು. ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡಿದಾಗ ಉತ್ತಮ ಲಾಭ ಗಳಿಸಲು ಏನು ಮಾಡಬೇಕು. ಕಾರುಗಳನ್ನು ಉತ್ತಮವಾಗಿ ನಿರ್ವಹಿಸುವ ಐದು ವಿಧಾನಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಕಾರುಗಳ ರಿ ಸೇಲ್ ವ್ಯಾಲ್ಯು ಹೆಚ್ಚಿಸುವ ಸಂಗತಿಗಳಿವು

ಸೆರಾಮಿಕ್ / ಟೆಫ್ಲಾನ್

ಸೆಕೆಂಡ್ ಹ್ಯಾಂಡ್ ವಾಹನವನ್ನು ಖರೀದಿಸುವವರು ವಾಹನದ ಎಂಜಿನ್ ಜೊತೆಗೆ ಅದರ ನೋಟಕ್ಕೆ ಹೆಚ್ಚು ಗಮನ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ಎಂಜಿನ್‌ಗೆ ಆದ್ಯತೆ ನೀಡುವಂತೆ ವಾಹನದ ಹೊರಭಾಗಕ್ಕೂ ಹೆಚ್ಚಿನ ಆದ್ಯತೆ ನೀಡುವುದು ಒಳ್ಳೆಯದು. ಸೆರಾಮಿಕ್ ಅಥವಾ ಟೆಫ್ಲಾನ್ ಅಥವಾ ಪಿಪಿಎಫ್ ಗಳು ಕಾರುಗಳ ಹೊರ ಭಾಗವನ್ನು ಯಾವಾಗಲೂ ಹೊಸದರಂತೆ ಕಾಣಲು ನೆರವಾಗುತ್ತವೆ.

ಕಾರುಗಳ ರಿ ಸೇಲ್ ವ್ಯಾಲ್ಯು ಹೆಚ್ಚಿಸುವ ಸಂಗತಿಗಳಿವು

ಇವುಗಳು ಕಾರುಗಳಿಗೆ ಹೊಸ ಹೊಳಪು ನೀಡುವುದರ ಜೊತೆಗೆ ಕಾರುಗಳನ್ನು ಹೊಸದರಂತೆ ಕಾಣುವಂತೆ ಮಾಡುತ್ತವೆ. ಇವುಗಳು ಕಾರುಗಳನ್ನು ಸಣ್ಣ ಸಣ್ಣ ಗೀರುಗಳು ಹಾಗೂ ಧೂಳಿನಿಂದ ರಕ್ಷಿಸುತ್ತವೆ. ನಿರ್ದಿಷ್ಟವಾಗಿ ಹೇಳುವುದಾದರೆ ಇವು ಸುಡುವ ಬಿಸಿಲಿನಲ್ಲಿಯೂ ವಾಹನದ ಹೊಳಪನ್ನು ರಕ್ಷಿಸುತ್ತವೆ. ಕಾರುಗಳನ್ನು ಹೆಚ್ಚು ಬಾಳಿಕೆ ಬರುವ ಮಾಡುವ ಇವುಗಳ ಬೆಲೆಯೂ ಕಡಿಮೆ ಎಂಬುದು ಗಮನಾರ್ಹ.

ಕಾರುಗಳ ರಿ ಸೇಲ್ ವ್ಯಾಲ್ಯು ಹೆಚ್ಚಿಸುವ ಸಂಗತಿಗಳಿವು

ಹೆಚ್ಚು ಕಾರ್ಯಕ್ಷಮತೆಯ ಎಸಿ:

ಕಾರಿನ ಕ್ಯಾಬಿನ್ ತಂಪಾಗಿರಿಸುವಲ್ಲಿ ಎಸಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಎಸಿ, ಕಾರಿನ ಪ್ರಮುಖ ಫೀಚರ್ ಗಳಲ್ಲಿ ಒಂದು. ಆದ್ದರಿಂದ ಅವುಗಳ ನಿರ್ವಹಣೆಗೆ ಹೆಚ್ಚು ಗಮನ ಕೊಡುವುದು ಒಳ್ಳೆಯದು. ಇದರಿಂದ ಉತ್ತಮ ಕಾರ್ಯಕ್ಷಮತೆಯನ್ನು ಪಡೆಯಬಹುದು. ಈ ಮೂಲಕ ಕಾರ್ ಅನ್ನು ಮರು ಮಾರಾಟ ಮಾಡಿದಾಗ ಯೋಗ್ಯವಾದ ಬೆಲೆಯನ್ನು ಪಡೆಯಬಹುದು.

ಕಾರುಗಳ ರಿ ಸೇಲ್ ವ್ಯಾಲ್ಯು ಹೆಚ್ಚಿಸುವ ಸಂಗತಿಗಳಿವು

ಟಯರ್ ಹಾಗೂ ವ್ಹೀಲ್ ಗಳು:

ಮರು ಮಾರಾಟ ಮೌಲ್ಯವು ಟಯರ್ ಹಾಗೂ ವ್ಹೀಲ್ ಮೇಲೆ ಕೇಂದ್ರೀಕೃತವಾಗಿರುತ್ತದೆ. ಹೆಚ್ಚು ದುಬಾರಿ ಎಂದು ಪರಿಗಣಿಸಲಾಗುವ ವಾಹನದ ಬಿಡಿ ಭಾಗಗಳಲ್ಲಿ ಟಯರ್ ಹಾಗೂ ವ್ಹೀಲ್ ಗಳು ಸೇರಿವೆ. ಇವುಗಳಲ್ಲಿ ಯಾವುದಾದರೂ ಒಂದು ಬಿಡಿ ಭಾಗವು ದೋಷಪೂರಿತ ಅಥವಾ ದುರ್ಬಲವಾಗಿದ್ದರೆ, ಮರು ಮಾರಾಟ ಸಮಯದಲ್ಲಿ ವಾಹನದ ಮೌಲ್ಯ ಕಡಿಮೆಯಾಗಲು ಕಾರಣವಾಗುತ್ತದೆ.

ಕಾರುಗಳ ರಿ ಸೇಲ್ ವ್ಯಾಲ್ಯು ಹೆಚ್ಚಿಸುವ ಸಂಗತಿಗಳಿವು

ಈ ಹಿನ್ನೆಲೆಯಲ್ಲಿ ಕಾಲ ಕಾಲಕ್ಕೆ ವ್ಹೀಲ್ ಬ್ಯಾಲೆನ್ಸ್ ಮಾಡಿ, ಅವುಗಳ ಜೋಡಣೆಯನ್ನು ಪರಿಶೀಲಿಸುವುದು ಉತ್ತಮ. ಕೆಲವು ಕಂಪನಿಗಳು ಇವುಗಳನ್ನು ಲೇಸರ್ ಮೂಲಕ ಪರಿಶೀಲಿಸುತ್ತವೆ. ಇವು ಕುಂದು ಕೊರತೆಗಳನ್ನು ನಿಖರವಾಗಿ ಪರಿಹರಿಸಲು ನೆರವಾಗುತ್ತವೆ. ಹೆಚ್ಚು ರಾಶ್ ಡ್ರೈವ್ ಮಾಡುವುದನ್ನು ತಪ್ಪಿಸುವುದರಿಂದಲೂ ಟಯರ್‌ಗಳ ಜೀವಿತಾವಧಿಯನ್ನು ಹೆಚ್ಚಿಸಬಹುದು. ಜೊತೆಗೆ ಸುರಕ್ಷಿತವಾಗಿ ಪ್ರಯಾಣಿಸಬಹುದು.

ಕಾರುಗಳ ರಿ ಸೇಲ್ ವ್ಯಾಲ್ಯು ಹೆಚ್ಚಿಸುವ ಸಂಗತಿಗಳಿವು

ಬ್ಯಾಟರಿ:

ವಾಹನಗಳ ಮರು ಮಾರಾಟದ ಸಮಯದಲ್ಲಿ ಬ್ಯಾಟರಿಗಳ ಕಾರ್ಯಕ್ಷಮತೆಯನ್ನು ಸಹ ಪರಿಗಣಿಸಲಾಗುತ್ತದೆ. ಬ್ಯಾಟರಿ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ವಾಹನಗಳ ಮೌಲ್ಯವನ್ನು ಕಡಿಮೆ ಮಾಡಿದ ಹಲವಾರು ಘಟನೆಗಳು ವರದಿಯಾಗಿವೆ. ಕಡಿಮೆ ಕಾರ್ಯಕ್ಷಮತೆಯ ಬ್ಯಾಟರಿಗಳಿಂದ ಕಾರುಗಳು ಯಾವಾಗ ಬೇಕಾದರೂ ಕೈ ಕೊಡಬಹುದು. ಇದರಿಂದ ಸೆಕೆಂಡ್ ಹ್ಯಾಂಡ್ ವಾಹನ ಮಾರುಕಟ್ಟೆಯಲ್ಲಿ ಬ್ಯಾಟರಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ.

ಕಾರುಗಳ ರಿ ಸೇಲ್ ವ್ಯಾಲ್ಯು ಹೆಚ್ಚಿಸುವ ಸಂಗತಿಗಳಿವು

ಈ ಹಿನ್ನೆಲೆಯಲ್ಲಿ ಕಾರು ಚಾಲನೆ ಮಾಡುವಾಗ ಬ್ಯಾಟರಿ ಹೆಚ್ಚು ಬಾಳಿಕೆ ಬರುವಂತೆ ನೋಡಿ ಕೊಳ್ಳಬೇಕು. ಹೆಚ್ಚು ದಿನ ಕಾರುಗಳನ್ನು ಒಂದೇ ಕಡೆ ನಿಲ್ಲಿಸಬೇಕಾದ ಸಂದರ್ಭ ಬಂದಾಗ ಕೆಲ ನಿಮಿಷಗಳ ಕಾಲ ಕಾರುಗಳನ್ನು ಆನ್, ಆಫ್ ಮಾಡುವ ಮೂಲಕ ಬ್ಯಾಟರಿಗಳ ಜೀವಿತಾವಧಿಯನ್ನು ಹೆಚ್ಚಿಸಬಹುದು.

ಕಾರುಗಳ ರಿ ಸೇಲ್ ವ್ಯಾಲ್ಯು ಹೆಚ್ಚಿಸುವ ಸಂಗತಿಗಳಿವು

ಬ್ರೇಕ್:

ಯಾವುದೇ ವಾಹನಗಳಿರಲಿ ಅವುಗಳಲ್ಲಿರುವ ಬ್ರೇಕಿಂಗ್ ಸಹ ಮುಖ್ಯವಾಗಿದೆ ಎಂಬುದನ್ನು ನೆನಪಿನಲ್ಲಿಡಿ. ಬ್ರೇಕ್ ಪ್ಯಾಡ್, ಬ್ರೇಕ್ ಡಿಸ್ಕ್ ಅಥವಾ ಬ್ರೇಕ್ ಶೂಗಳ ಮೇಲೆ ಸದಾ ನಿಗಾ ಇಡುವುದು ಒಳ್ಳೆಯದು. ಇದರಿಂದ ವಾಹನಗಳನ್ನು ಮರು ಮಾರಾಟ ಮಾಡುವಾಗ ಯೋಗ್ಯವಾದ ಬೆಲೆಯನ್ನು ಪಡೆಯಬಹುದು.

ಕಾರುಗಳ ರಿ ಸೇಲ್ ವ್ಯಾಲ್ಯು ಹೆಚ್ಚಿಸುವ ಸಂಗತಿಗಳಿವು

ಕಾರ್ ಸ್ಪಾ:

ಕಾರ್ ಸ್ಪಾಗಳು ವಾಹನಗಳನ್ನು ಮರು ಮಾರಾಟ ಮಾಡುವ ಸಂದರ್ಭದಲ್ಲಿ ಉತ್ತಮ ಬೆಲೆ ಪಡೆಯಲು ನೆರವಾಗುತ್ತವೆ. ಸ್ವಚ್ಛವಾಗಿರುವ ವಾಹನಗಳಿಗೆ ಭಾರತದಲ್ಲಿ ಯಾವಾಗಲೂ ಹೆಚ್ಚು ಬೇಡಿಕೆ ಇರುತ್ತದೆ. ಕಾರ್ ಸ್ಪಾ, ಅನಗತ್ಯ ಧೂಳು ಹಾಗೂ ಕೊಳೆಯನ್ನು ತೊಡೆದುಹಾಕಲು ನೆರವಾಗುತ್ತದೆ. ಕಾರ್ ಸ್ಪಾ ಕಾರುಗಳನ್ನು ಹೊಸದರಂತೆ ಕಾಣಲು ಹಾಗೂ ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ.

ಕಾರುಗಳ ರಿ ಸೇಲ್ ವ್ಯಾಲ್ಯು ಹೆಚ್ಚಿಸುವ ಸಂಗತಿಗಳಿವು

ಅಂದ ಹಾಗೆ ದೀರ್ಘಕಾಲದವರೆಗೆ ಕಾರುಗಳನ್ನು ಹೊಂದಿದ್ದರೆ, ಅವುಗಳ ಜೊತೆಗೆ ಮರೆಯಲಾಗದ ನೆನಪುಗಳಿರುತ್ತವೆ. ಈ ಕಾರಣಕ್ಕೆ ಬಹುತೇಕ ಜನರು ಆ ಕಾರುಗಳನ್ನು ಮಾರಾಟ ಮಾಡಲು ಇಚ್ಛಿಸುವುದಿಲ್ಲ. ಆದರೆ ಹಳೆಯ ಕಾರುಗಳಲ್ಲಿ ಕಂಡು ಬರುವ ಕೆಲವು ಲಕ್ಷಣಗಳು ಆ ಕಾರುಗಳನ್ನು ಮಾರಾಟ ಮಾಡಿ ಹೊಸ ಖರೀದಿಸುವುದು ಉತ್ತಮ ಎಂಬುದನ್ನು ಸೂಚಿಸುತ್ತವೆ. ಹಳೆಯ ಕಾರು ಅಂದಾಕ್ಷಣ ಅದು ಬಳಕೆಗೆ ಯೋಗ್ಯವಲ್ಲ ಎಂದು ತೀರ್ಮಾನಿಸಲು ಸಾಧ್ಯವಿಲ್ಲ. ಆದರೆ ಬಳಕೆಯ ಯೋಗ್ಯವಾದ ಮಾನದಂಡಗಳಿದ್ದಲ್ಲಿ ಮುಂದುವರಿಸಬಹುದು.

Most Read Articles

Kannada
English summary
Things which increases resale value of the car details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X