ಭಾರತದಲ್ಲಿ ಆಗ್ಯಾ ಕಾರಿನ ವಿನ್ಯಾಸದ ಪೇಟೆಂಟ್ ನೋಂದಾಯಿಸಿದ ಟೊಯೊಟಾ

ಜಪಾನ್ ಮೂಲದ ಜನಪ್ರಿಯ ವಾಹನ ತಯಾರಕ ಕಂಪನಿಯಾದ ಟೊಯೊಟಾ ಭಾರತೀಯ ಮಾರುಕಟ್ಟೆಯಲ್ಲಿ ಆಗ್ಯಾ ಕಾರಿನ ವಿನ್ಯಾಸದ ಪೇಟೆಂಟ್ ಅನ್ನು ಪಡೆದಿದೆ. ಇಂಡೋನೇಷ್ಯಾದಲ್ಲಿ ಒಂದು ವರ್ಷದ ಹಿಂದೆ ಟೊಯೊಟಾ ಕಂಪನಿಯು ಆಗ್ಯಾ ಫೇಸ್‌ಲಿಫ್ಟೆಡ್ ಮಾದರಿಯನ್ನು ಪರಿಚಯಿಸಲಾಗಿತ್ತು.

ಭಾರತದಲ್ಲಿ ಆಗ್ಯಾ ಕಾರಿನ ವಿನ್ಯಾಸದ ಪೇಟೆಂಟ್ ನೋಂದಾಯಿಸಿದ ಟೊಯೊಟಾ

ಟೊಯೊಟಾದ ಅಂಗಸಂಸ್ಥೆ ಡೈಹತ್ಸು 2012ರಿಂದ ಇಂಡೋನೇಷ್ಯಾದಲ್ಲಿ ಐಲಾ ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ ಅನ್ನು ಮಾರಾಟ ಮಾಡುತ್ತಿತ್ತು, ನಂತರ ಟೊಯೊಟಾ ಇದನ್ನು ಆಗ್ಯಾ ಮಾದರಿಯಾಗಿ ಪುನರ್ ರಚಿಸಿದರು. ಭಾರತದಲ್ಲಿ ಪೇಟೆಂಟ್ ಪಡೆದ ಟೊಯೊಟಾ ಆಗ್ಯಾ ಕಾರಿನ ಚಿತ್ರದಲ್ಲಿ ಮುಂಭಾಗದ ಗ್ರಿಲ್, ತ್ರಿಕೋ ಆಕಾರದ ಫಾಗ್ ಲ್ಯಾಂಪ್, ನಯವಾದ ಹೆಡ್‌ಲ್ಯಾಂಪ್‌ಗಳು, ಅಲಾಯ್ ವ್ಹೀಲ್ ಗಳು ಮತ್ತು ಕಾಂಪ್ಯಾಕ್ಟ್ ಮಾದರಿಯ ಪ್ರೊಫೈಲ್‌ನಿಂದ ಕೂಡಿದೆ.

ಭಾರತದಲ್ಲಿ ಆಗ್ಯಾ ಕಾರಿನ ವಿನ್ಯಾಸದ ಪೇಟೆಂಟ್ ನೋಂದಾಯಿಸಿದ ಟೊಯೊಟಾ

ಇಂಡೋನೇಷ್ಯಾದಲ್ಲಿ ಒಂದು ವರ್ಷದ ಹಿಂದೆ ಪರಿಚಯಿಸಲಾದ ಫೇಸ್‌ಲಿಫ್ಟೆಡ್ ಟೊಯೋಟಾ ಆಗ್ಯಾ ಕಾರನ್ನು 1.0 ಜಿ, 1.2 ಜಿ ಮತ್ತು 1.2 ಜಿ ಟಿಆರ್ಡಿ ಸೇರಿದಂತೆ ಅನೇಕ ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಭಾರತದಲ್ಲಿ ಆಗ್ಯಾ ಕಾರಿನ ವಿನ್ಯಾಸದ ಪೇಟೆಂಟ್ ನೋಂದಾಯಿಸಿದ ಟೊಯೊಟಾ

ಇದರ 1.0 ಜಿ ರೂಪಾಂತರದಲ್ಲಿ 1.0-ಲೀಟರ್ ಮೂರು ಸಿಲಿಂಡರ್ ವಿವಿಟಿ-ಐ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 6,000 ಆರ್‌ಪಿಎಂನಲ್ಲಿ 67 ಬಿಹೆಚ್‍ಪಿ ಪವರ್ ಮತ್ತು 4,400 ಆರ್‌ಪಿಎಂನಲ್ಲಿ 89 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಆಗ್ಯಾ ಕಾರಿನ ವಿನ್ಯಾಸದ ಪೇಟೆಂಟ್ ನೋಂದಾಯಿಸಿದ ಟೊಯೊಟಾ

ಉಳಿದ ರೂಪಾಂತರಗಳಲ್ಲಿ 2-ಲೀಟರ್ ನಾಲ್ಕು ಸಿಲಿಂಡರ್ ಡ್ಯುಯಲ್ ವಿವಿಟಿ-ಐ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 6,000 ಆರ್‌ಪಿಎಂನಲ್ಲಿ 88 ಬಿಹೆಚ್‍ಪಿ ಪವರ್ ಮತ್ತು 4,200 ಆರ್‌ಪಿಎಂನಲ್ಲಿ 108 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಭಾರತದಲ್ಲಿ ಆಗ್ಯಾ ಕಾರಿನ ವಿನ್ಯಾಸದ ಪೇಟೆಂಟ್ ನೋಂದಾಯಿಸಿದ ಟೊಯೊಟಾ

ಹೊಸ ಟೊಯೊಟಾ ಆಗ್ಯಾ ಕಾರು ಸಿಂಗಲ್-ಪೀಸ್ ಟೈಲ್‌ಗೇಟ್, ರೂಫ್ ಮೌಂಟಡ್ ಸ್ಪಾಯ್ಲರ್, ಎಲ್-ಆಕಾರದ ಗ್ರಾಫಿಕ್ಸ್‌ನೊಂದಿಗೆ ಟೈಲ್ ಲ್ಯಾಂಪ್‌ಗಳು, ಅಗ್ರೇಸಿವ್ ಬಂಪರ್ಮತ್ತು ಕ್ರೋಮ್ ಟ್ರಿಮ್ ಅನ್ನು ಪಡೆಯುತ್ತದೆ.

ಭಾರತದಲ್ಲಿ ಆಗ್ಯಾ ಕಾರಿನ ವಿನ್ಯಾಸದ ಪೇಟೆಂಟ್ ನೋಂದಾಯಿಸಿದ ಟೊಯೊಟಾ

ಇನ್ನು ಆಗ್ಯಾ ಕಾರಿನಲ್ಲಿ ಅಲಾಯ್ ವ್ಹೀಲ್ ಗಳನ್ನು ಒಳಗೊಂಡಿದೆ. ಇನ್ನು ಭಾರತದಲ್ಲಿ ಅಗ್ಯಾ ವಿನ್ಯಾಸಕ್ಕೆ ಪೇಟೆಂಟ್ ಪಡೆಯಲು ನಿಜವಾದ ಕಾರಣ ನಮಗೆ ಇನ್ನೂ ತಿಳಿದಿಲ್ಲ ಆದರೆ ಭವಿಷ್ಯದಲ್ಲಿ ಭಾರತದಲ್ಲಿ ಟೊಯೊಟಾ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸುವುದ ಭಾಗವಾಗಿರಬಹುದು.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಭಾರತದಲ್ಲಿ ಆಗ್ಯಾ ಕಾರಿನ ವಿನ್ಯಾಸದ ಪೇಟೆಂಟ್ ನೋಂದಾಯಿಸಿದ ಟೊಯೊಟಾ

ಟೊಯೊಟಾ ಆಗ್ಯಾ ಕಾರಿನ ಒಳಭಾಗದಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಆಂಕಾರೇಜ್, ಎಬಿಎಸ್ ವಿಥ್ ಇಬಿಡಿ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್ ಹೀಗೆ ಹಲವು ವೈಶಿಷ್ಟ್ಯಗಳಿವೆ.

ಭಾರತದಲ್ಲಿ ಆಗ್ಯಾ ಕಾರಿನ ವಿನ್ಯಾಸದ ಪೇಟೆಂಟ್ ನೋಂದಾಯಿಸಿದ ಟೊಯೊಟಾ

ಈ ಹ್ಯಾಚ್‌ಬ್ಯಾಕ್ ಅನ್ನು ಇಂಡೋನೇಷ್ಯಾದಲ್ಲಿ ಅನೇಕ ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಟೊಯೊಟಾ ಕಂಪನಿಯು ಮುಂಬರುವ ತಿಂಗಳುಗಳಲ್ಲಿ ರಿಬ್ಯಾಡ್ಜ್ ವರ್ಷನ್ ಎರ್ಟಿಗಾವನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿದೆ.

Most Read Articles

Kannada
Read more on ಟೊಯೊಟಾ toyota
English summary
Toyota Patents Agya Hatchback’s Design In India. Read In Kannada.
Story first published: Saturday, May 15, 2021, 21:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X