ಬಿಡುಗಡೆಗಾಗಿ ಭಾರತದಲ್ಲಿ ಟೆಸ್ಟಿಂಗ್ ನಡೆಸಿದ ಟೊಯೊಟಾ ಜನಪ್ರಿಯ ರಾವ್4 ಹೈಬ್ರಿಡ್ ಎಸ್‌ಯುವಿ

ಜಪಾನ್ ಕಾರು ಉತ್ಪಾದನಾ ಕಂಪನಿಯಾದ ಟೊಯೊಟಾ ತನ್ನ ಜನಪ್ರಿಯ ಎಸ್‌ಯುವಿ ಕಾರು ಮಾದರಿಯಾದ ರಾವ್4 ಹೈಬ್ರಿಡ್ ಕಾರು ಮಾದರಿಯನ್ನು ಭಾರತದಲ್ಲೂ ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಹೊಸ ಕಾರು 2021ರ ಮಧ್ಯಂತರದಲ್ಲಿ ಖರೀದಿಗೆ ಲಭ್ಯವಾಗುವ ಸಾಧ್ಯತೆಗಳಿವೆ.

ಬಿಡುಗಡೆಗಾಗಿ ಭಾರತದಲ್ಲಿ ಟೆಸ್ಟಿಂಗ್ ನಡೆಸಿದ ಟೊಯೊಟಾ ಜನಪ್ರಿಯ ರಾವ್4 ಹೈಬ್ರಿಡ್ ಎಸ್‌ಯುವಿ

ಭಾರತದಲ್ಲಿ ಮಧ್ಯಮ ಗಾತ್ರದ ಎಸ್‌ಯುವಿ ಆವೃತ್ತಿಗಳಲ್ಲಿ ಹೈಬ್ರಿಡ್ ಪವರ್‌ಟ್ರೈನ್ ಕಾರುಗಳ ಮಾರಾಟವು ಹೆಚ್ಚುತ್ತಿದ್ದು, ಟೊಯೊಟಾ ಕಂಪನಿಯು ಜಾಗತಿಕ ಮಾರುಕಟ್ಟೆಗಳಲ್ಲಿ ಭಾರೀ ಬೇಡಿಕೆ ಹೊಂದಿರುವ ರಾವ್4 ಎಸ್‌ಯುವಿ ಮಾದರಿಯನ್ನು ಭಾರತದಲ್ಲೂ ಬಿಡುಗಡೆಗಾಗಿ ಮಾರುಕಟ್ಟೆ ಅಧ್ಯಯನ ನಡೆಸಿದೆ. ಮಾರುಕಟ್ಟೆ ಅಧ್ಯಯನದಲ್ಲಿ ಹೈಬ್ರಿಡ್ ಕಾರು ಮಾದರಿಗಳಿಗೆ ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದ್ದು, ಹೊಸ ಆಮದು ನೀತಿ ಅಡಿ ರಾವ್4 ಕಾರು ಮಾದರಿಯನ್ನು ಮಾರಾಟ ಮಾಡಲು ನಿರ್ಧರಿಸಿದೆ.

ಬಿಡುಗಡೆಗಾಗಿ ಭಾರತದಲ್ಲಿ ಟೆಸ್ಟಿಂಗ್ ನಡೆಸಿದ ಟೊಯೊಟಾ ಜನಪ್ರಿಯ ರಾವ್4 ಹೈಬ್ರಿಡ್ ಎಸ್‌ಯುವಿ

ಹೊಸ ಕಾರು ಬಿಡುಗಡೆಗಾಗಿ ಈಗಾಗಲೇ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಸಹ ಕೈಗೊಂಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಹೊಸ ಆಮದು ನೀತಿಯು ವಿದೇಶಿ ಆಟೋ ಕಂಪನಿಗಳಿಗೆ ವರವಾಗಿ ಪರಿಣಮಿಸಿದೆ.

ಬಿಡುಗಡೆಗಾಗಿ ಭಾರತದಲ್ಲಿ ಟೆಸ್ಟಿಂಗ್ ನಡೆಸಿದ ಟೊಯೊಟಾ ಜನಪ್ರಿಯ ರಾವ್4 ಹೈಬ್ರಿಡ್ ಎಸ್‌ಯುವಿ

ಟೊಯೊಟಾ ಕೂಡಾ ಹೊಸ ಆಮದು ನೀತಿ ಅಡಿ ಇದೀಗ ರಾವ್4 ಹೈಬ್ರಿಡ್ ಎಸ್‌ಯುವಿ ಮಾದರಿಯನ್ನು ಬಿಡುಗಡೆ ಮಾಡಲು ಸಿದ್ದವಾಗಿದ್ದು, ಹೊಸ ಆಮದು ನೀತಿ ಅಡಿ ವಿದೇಶಿ ಕಾರು ಉತ್ಪಾದನಾ ಕಂಪನಿಗಳು ವಾರ್ಷಿಕವಾಗಿ 2500 ಕಾರುಗಳನ್ನು ಯಾವುದೇ ಹೆಚ್ಚುವರಿ ಷರತ್ತುಗಳಿಲ್ಲದೆ ಆಮದು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಬಿಡುಗಡೆಗಾಗಿ ಭಾರತದಲ್ಲಿ ಟೆಸ್ಟಿಂಗ್ ನಡೆಸಿದ ಟೊಯೊಟಾ ಜನಪ್ರಿಯ ರಾವ್4 ಹೈಬ್ರಿಡ್ ಎಸ್‌ಯುವಿ

ಟೊಯೊಟಾ ಕೂಡಾ ಹೊಸ ಆಮದು ನೀತಿ ಅಡಿ ವಿದೇಶಿ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಹೊಂದಿರುವ ಕೆಲವು ಐಷಾರಾಮಿ ಕಾರುಗಳನ್ನು ಹೊಸ ಆಮದು ನೀತಿ ಅಡಿಯಲ್ಲಿ ಮಾರಾಟ ಮಾಡುತ್ತಿದ್ದು, ವೆಲ್‌ಫೈರ್ ಎಂಪಿವಿ ನಂತರ ಇದೀಗ ರಾವ್4 ಬಿಡುಗಡೆಯ ಸಿದ್ದತೆಯಲ್ಲಿದೆ. ಜಾಗತಿಕವಾಗಿ ಮಾರಾಟಗೊಳ್ಳುವ ಟಾಪ್10 ಕಾರು ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ರಾವ್4 ಹೈಬ್ರಿಡ್ ಎಸ್‌ಯುವಿ ಮಾದರಿಯು ಐಷಾರಾಮಿ ಫೀಚರ್ಸ್‌ನೊಂದಿಗೆ ಅತ್ಯುತ್ತಮ ಬೇಡಿಕೆ ಪಡೆದುಕೊಳ್ಳುವ ವಿಶ್ವಾಸದಲ್ಲಿದೆ.

ಬಿಡುಗಡೆಗಾಗಿ ಭಾರತದಲ್ಲಿ ಟೆಸ್ಟಿಂಗ್ ನಡೆಸಿದ ಟೊಯೊಟಾ ಜನಪ್ರಿಯ ರಾವ್4 ಹೈಬ್ರಿಡ್ ಎಸ್‌ಯುವಿ

ಭಾರತದಲ್ಲೂ ಹೊಸ ಕಾರು ಐಷಾರಾಮಿ ಕಾರುಗಳ ವಿಭಾಗದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದ್ದು, ಹೊಸ ಕಾರನ್ನು ಟೊಯೊಟಾ ಹೊಸ ಟಿಎನ್‌ಜಿಎ ಪ್ಲ್ಯಾಟ್‌ಫಾರ್ಮ್ ಅಡಿ ನಿರ್ಮಾಣಗೊಳ್ಳುತ್ತಿದೆ.

ಬಿಡುಗಡೆಗಾಗಿ ಭಾರತದಲ್ಲಿ ಟೆಸ್ಟಿಂಗ್ ನಡೆಸಿದ ಟೊಯೊಟಾ ಜನಪ್ರಿಯ ರಾವ್4 ಹೈಬ್ರಿಡ್ ಎಸ್‌ಯುವಿ

ರಾವ್4 ಕಾರು ಮಾದರಿಯಲ್ಲಿ 2.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಹೈಬ್ರಿಡ್ ತಂತ್ರಜ್ಞಾನ ಜೋಡಣೆ ಮಾಡಲಾಗಿದ್ದು, ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಇಂಧನ ಕಾರ್ಯಕ್ಷಮತೆಯಲ್ಲೂ ರಾವ್4 ಕಾರು ಮುಂಚೂಣಿಯಲ್ಲಿದೆ.

ಬಿಡುಗಡೆಗಾಗಿ ಭಾರತದಲ್ಲಿ ಟೆಸ್ಟಿಂಗ್ ನಡೆಸಿದ ಟೊಯೊಟಾ ಜನಪ್ರಿಯ ರಾವ್4 ಹೈಬ್ರಿಡ್ ಎಸ್‌ಯುವಿ

ಹೈಬ್ರಿಡ್ ತಂತ್ರಜ್ಞಾನವು ಆಲ್ ವೀಲ್ಹ್ ಡ್ರೈವ್ ಮೋಡ್‌ನೊಂದಿಗೆ ನಾಲ್ಕು ಚಕ್ರಗಳಿಗೂ ಸಮಾನ ಶಕ್ತಿ ಪೂರೈಕೆಯೊಂದಿಗೆ 218-ಬಿಎಚ್‌ಪಿ ಉತ್ಪಾದನಾ ಗುಣಹೊಂದಿದ್ದು, ಕ್ವಿಕ್ ಆಟೋ ಗೇರ್‌ಬಾಕ್ಸ್‌ ಪ್ರೇರಣೆ ಮೂಲಕ ಪರ್ಫಾಮೆನ್ಸ್‌ನಲ್ಲೂ ಸಾಕಷ್ಟು ಬಲಿಷ್ಠತೆ ಹೊಂದಿದೆ.

ಬಿಡುಗಡೆಗಾಗಿ ಭಾರತದಲ್ಲಿ ಟೆಸ್ಟಿಂಗ್ ನಡೆಸಿದ ಟೊಯೊಟಾ ಜನಪ್ರಿಯ ರಾವ್4 ಹೈಬ್ರಿಡ್ ಎಸ್‌ಯುವಿ

ಟೊಯೊಟಾ ಕಂಪನಿಯು ಈಗಾಗಲೇ ಹೈಬ್ರಿಡ್ ತಂತ್ರಜ್ಞಾನದಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಪ್ರಿಯಸ್ ಹೈಬ್ರಿಡ್ ಮಾದರಿಗಿಂತಲೂ ರಾವ್4 ಕಾರು ಸಾಕಷ್ಟು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಸಿದ್ದಗೊಂಡಿದೆ.

ಬಿಡುಗಡೆಗಾಗಿ ಭಾರತದಲ್ಲಿ ಟೆಸ್ಟಿಂಗ್ ನಡೆಸಿದ ಟೊಯೊಟಾ ಜನಪ್ರಿಯ ರಾವ್4 ಹೈಬ್ರಿಡ್ ಎಸ್‌ಯುವಿ

ಸದ್ಯ ಜಾಗತಿಕ ಮಾರುಕಟ್ಟೆಯಲ್ಲಿ ಐದನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮಾರಾಟಗೊಳ್ಳುತ್ತಿರುವ ರಾವ್4 ಎಸ್‌ಯುವಿ ಮಾದರಿಯು ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳಲ್ಲೇ ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದ್ದು, 4,600-ಎಂಎಂ ಉದ್ದ, 1,855-ಎಂಎಂ ಅಗಲ, 1,685-ಎಂಎಂ ಎತ್ತರ ಮತ್ತು 2,690-ಎಂಎಂ ವೀಲ್ಹ್ ಬೆಸ್ ಹೊಂದಿದೆ.

ಬಿಡುಗಡೆಗಾಗಿ ಭಾರತದಲ್ಲಿ ಟೆಸ್ಟಿಂಗ್ ನಡೆಸಿದ ಟೊಯೊಟಾ ಜನಪ್ರಿಯ ರಾವ್4 ಹೈಬ್ರಿಡ್ ಎಸ್‌ಯುವಿ

ರಾವ್4 ಎಸ್‌ಯುವಿ ಬೆಲೆ(ಅಂದಾಜು)

ಹೊಸ ರಾವ್4 ಕಾರು ಮಾದರಿಯನ್ನು ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳುವುದರಿಂದ ಹೊಸ ಕಾರು ತುಸು ದುಬಾರಿಯಾಗಿರಲಿದ್ದು, ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 49 ಲಕ್ಷದಿಂದ ರೂ. 55 ಲಕ್ಷ ಬೆಲೆ ಹೊಂದುವ ಸಾಧ್ಯತೆಗಳಿವೆ.

Article Published On: Wednesday, February 24, 2021, 8:45 [IST]
English summary
Toyota RAV4 SUV Spotted Testing In India Expected Launch This Year. Read in Kannada.
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+