ಪ್ರತಿಸ್ಪರ್ಧಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿರುವ ಟೊಯೊಟಾ ಅರ್ಬನ್ ಕ್ರೂಸರ್ ರಿವ್ಯೂ ವಿಡಿಯೋ..

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಉತ್ತಮ ಬೇಡಿಕೆ ಕಾಯ್ದುಕೊಂಡಿರುವ ಟೊಯೊಟಾ ಅರ್ಬನ್ ಕ್ರೂಸರ್ ಕಾರು ಪ್ರತಿಸ್ಪರ್ಧಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿದ್ದು, ಹೊಸ ಕಾರು ಹಲವಾರು ವಿಶೇಷತೆಗಳೊಂದಿಗೆ ಗ್ರಾಹಕರ ನೆಚ್ಚಿನ ಕಾರು ಮಾದರಿಯಾಗಿ ಹೊರಹೊಮ್ಮುತ್ತಿದೆ.

ಟೊಯೊಟಾ ಅರ್ಬನ್ ಕ್ರೂಸರ್ ಕಾರು ಮಾದರಿಯು ಮಾರುತಿ ಸುಜುಕಿ ವಿಟಾರಾ ಬ್ರೆಝಾ ಆಧರಿಸಿದ ಬ್ರ್ಯಾಂಡ್‌ನ ಮೊದಲ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾಗಿದೆ. ಮಾರುತಿ ಸುಜುಕಿ ಜೊತೆಗಿನ ಸಹಭಾಗಿತ್ವ ಯೋಜನೆ ಅಡಿಯಲ್ಲಿ ಟೊಯೊಟಾ ಕಂಪನಿಯು ಪರಿಚಯಿಸಿರುವ ಎರಡನೇ ರೀಬ್ಯಾಡ್ಜ್ ಕಾರು ಮಾದರಿ ಇದಾಗಿದ್ದು, ಬಿಡುಗಡೆಯ ನಂತರ ಹಲವಾರು ಹೊಸ ಬದಲಾವಣೆಗಳೊಂದಿಗೆ ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.

ಹೊಸ ರೀಬ್ಯಾಡ್ಜ್ ಕಂಪ್ಯಾಕ್ಟ್ ಎಸ್‌ಯುವಿಯು ಮೂಲ ಕಾರು ಮಾದರಿಗಿಂತಲೂ ಹೇಗೆಲ್ಲಾ ವಿಭಿನ್ನವಾಗಿದೆ ಎನ್ನುವುದು ತಿಳಿಯಲು ನಾವು ಇತ್ತೀಚೆಗೆ ನಾವು ವಿವಿಧ ಹಂತದಲ್ಲಿ ಹೊಸ ಕಾರನ್ನು ಚಾಲನೆ ಮಾಡಿದೆವು. ಹೊಸ ಅರ್ಬನ್ ಕ್ರೂಸರ್ ಆಯ್ಕೆಗೆ ಪೂರಕವಾದ ಅಂಶಗಳ ಬಗೆಗೆ ಮೇಲಿನ ವಿಡಿಯೋದಲ್ಲಿ ಸಂಪೂರ್ಣ ಮಾಹಿತಿ ಹಂಚಿಕೊಂಡಿದ್ದೇವೆ.

ರೀಬ್ಯಾಡ್ಜ್ ಆವೃತ್ತಿಯಾಗಿ ಮಾರಾಟವಾಗುತ್ತಿರುಪ ಅರ್ಬನ್ ಕ್ರೂಸರ್ ಮಾದರಿಯು ಮೂಲ ಮಾದರಿಗಿಂತಲೂ ವಿನೂತನ ಫೀಚರ್ಸ್ ಹೊಂದಿದ್ದು, ಮಿಡ್, ಹೈ ಮತ್ತು ಪ್ರೀಮಿಯಂ ಎಂಬ ಮೂರು ರೂಪಾಂತರ ಹೊಂದಿದೆ.

ಹೊಸ ಕಾರಿನಲ್ಲಿ ಬಿಎಸ್-6 ಪ್ರೇರಿತ ಕೆ-ಸೀರಿಸ್ 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ 103-ಬಿಎಚ್‌ಪಿ ಮತ್ತು 138-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ. ಪೆಟ್ರೋಲ್ ಎಂಜಿನ್ ಮಾದರಿಯು ಆರಂಭಿಕ ಆವೃತ್ತಿಗಳಲ್ಲಿ 5-ಸ್ಪೀಡ್ ಮ್ಯಾನುವಲ್ ಮತ್ತು ಹೈ ಎಂಡ್ ಮಾದರಿಗಳಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

Most Read Articles

Kannada
Read more on ಟೊಯೊಟಾ toyota
English summary
Toyota urban cruiser kannada review video performance features details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X